Satish Jarkiholi: ಬೆಳಗಾವಿ ಲೋಕಸಭೆ ಉಪ ಚುನಾವಣೆ: ಸತೀಶ್ ಜಾರಕಿಹೊಳಿ‌ ಸ್ಪರ್ಧೆಗೆ ಬೆಂಬಲಿಗರ ವಿರೋಧ

ಟಿಕೆಟ್ ಗಾಗಿ ಅಭಿಮಾನಿಗಳು ಅಭಿಯಾನ ಲಾಬಿ ನಡೆಸಿದರೆ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಮಾತ್ರ ಟಿಕೆಟ್ ನೀಡಬೇಡಿ ಎಂದು ಅಭಿಯಾನವನ್ನು ಶುರು ಮಾಡಿದ್ದಾರೆ.

ಮಾಜಿ ಸಚಿವ ಸತೀಶ್ ಜಾರಕಿಹೊಳಿ.

ಮಾಜಿ ಸಚಿವ ಸತೀಶ್ ಜಾರಕಿಹೊಳಿ.

  • Share this:
ಚಿಕ್ಕೋಡಿ  (ಮಾ. 23): ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆದರೆ, ಇನ್ನು ಚುನಾವಣಾ ಕಣಕ್ಕೆ ಇದುವರೆಗೂ ಯಾವುದೇ ಅಭ್ಯರ್ಥಿಯ ಹೆಸರು ಅಂತಿಮಗೊಂಡಿಲ್ಲ. ಈಗಾಗಲೇ ಟಿಕೆಟ್ ಆಕಾಂಕ್ಷಿಗಳು   ಲಾಬಿ ನಡೆಸಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ  ಸತೀಶ್ ಜಾರಕಿಹೊಳಿ ಹೆಸರು ಕೇಳಿ ಬಂದಿದೆ. ಆದರೆ ಸತೀಶ್ ಬೆಂಬಲಿಗರು ಸತೀಶ್ ಜಾರಕಿಹೊಳಿಗೆ ಟಿಕೆಟ್ ನೀಡದಂತೆ ಪ್ರತಿಭಟನೆ ಹಾಗೂ ಅಭಿಯಾನವನ್ನ ಶುರು ಮಾಡಿದ್ದಾರೆ. ಅಚ್ಚರಿಯಾದರೂ ನಿಜ.  ಟಿಕೆಟ್ ಗಾಗಿ ಅಭಿಮಾನಿಗಳು ಅಭಿಯಾನ ಲಾಬಿ ನಡೆಸಿದರೆ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಮಾತ್ರ ಟಿಕೆಟ್ ನೀಡಬೇಡಿ ಎಂದು ಅಭಿಯಾನವನ್ನು ಶುರು ಮಾಡಿದ್ದಾರೆ.

ಬೆಳಗಾವಿ ಲೋಕಸಭಾ ಈಗಾಗಲೆ ಬಿಜೆಪಿಯ ಭದ್ರ ಕೋಟೆಯಾಗಿದೆ ಕಳೆದ 20 ವರ್ಷಗಳಿಂದಲೂ ಬಿಜೆಪಿ ತೆಕ್ಕೆಯಲ್ಲಿದ್ದ ಈ ಕ್ಷೇತ್ರವನ್ನ ಯಾವುದೇ ಕಾರಣಕ್ಕೂ ಬಿಟ್ಟು ಕೊಡಬಾರದು ಎಂದು ಬಿಜೆಪಿ ರಣತಂತ್ರ ಹೆಣೆದಿದ್ದು ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದೆ. ಇದರ ಬೆನ್ನಲೆ ಕ್ಷೇತ್ರವನ್ನ ಮರಳಿ ಪಡಯಲೆಬೇಕು ಎನ್ನುವ ಉದ್ದೇಶದಿಂದ ಕಾಂಗ್ರೆಸ್ ಕೂಡ ಪ್ರತಿತಂತ್ರ ಮಾಡಿದ್ದು ಪ್ರಬಲ ಅಭ್ಯರ್ಥಿ ಕಣಕ್ಕೆ ಇಳಿಸುವ ನಿಟ್ಟಿನಲ್ಲಿ ಸತೀಶ್ ಜಾರಕಿಹೊಳಿಯವರನ್ನೇ ಅಖಾಡಕ್ಕೆ ಇಳಿಸಲು ಯೋಜನೆ ರೂಪಿಸಿದೆ.  ಇದುವರೆಗೂ ಅಧಿಕೃತವಾಗಿ ಟಿಕೇಟ್ ಘೋಷಣೆ ಮಾಡಿಲ್ಲ ಆದರೂ ಬಹುತೇಕ ಸತೀಶ್ ಕಣಕ್ಕೆ ಇಳಿಯುವುದು ಖತಚಿ ಎಂದು ಹೇಳಲಾಗುತ್ತಿದೆ.

ಇದಕ್ಕೆ ಸತೀಶ್ ಜಾರಕಿಹೋಳಿ ಬೆಂಬಲಿಗರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ. ಸತೀಶ್ ಜಾರಕಿಹೊಳಿ‌ ಲೋಕಸಭೆಗೆ ಸ್ಪರ್ಧಿಸದಂತೆ ಅಭಿಮಾನಿಗಳು ಒತ್ತಾಯ ಹಾಕಿದ್ದಾರೆ. ಸತೀಶ್ ಗೆ ಒತ್ತಾಯದ ಮೂಲಕ ಟಿಕೆಟ್ ನೀಡಿ ಕೇಂದ್ರಕ್ಕೆ ಕಳಿಸಲು ಒಳಸಂಚು ನಡೆಸಲಾಗುತ್ತಿದೆ. 'ಕೇಂದ್ರಕ್ಕೆ‌ ಕಳುಹಿಸಿ ರಾಜ್ಯದಲ್ಲಿರುವ ಹಿಡಿತ ಬುಡಮೇಲು ಮಾಡಲು ಒಳಸಂಚು ರೂಪಿಸಲಾಗುತ್ತಿದೆ. ಸತೀಶ್ ಜಾರಕಿಹೊಳಿಯವರನ್ನು ಮುಂದಿನ ದಿನಗಳಲ್ಲಿ ಸಿಎಂ ಆಗಿ ನೋಡುವ ಆಸೆಯಿದೆ. ಪ್ರಕಾಶ ಹುಕ್ಕೇರಿಯಂತ ಪ್ರಭಾವಿ ರಾಜಕಾರಣಿ ಇದ್ದರೂ ಅವರ ಹೆಸರು ಸೂಚಿಸಿಲ್ಲ. ಸತೀಶ್ ಸಿಎಂ ರೇಸ್‌ನಲ್ಲಿ ಇರುವುದರಿಂದ ರಾಜ್ಯದಲ್ಲಿರುವ ಹಿಡಿತ ಮೂಲೆಗುಂಪು ಮಾಡಲು ಯತ್ನ ಮಾಡಲಾಗುತ್ತಿದೆ. ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸತೀಶ್ ಜಾರಕಿಹೊಳಿ‌ ಅಭಿಮಾನಿಗಳಿಂದ ಪೋಸ್ಟ್ ಹಾಕಿ ಟಿಕೆಟ್ ನೀಡದಂತೆ ಅಭಿಯಾನ ಶುರು ಮಾಡಿದ್ದಾರೆ.

ಇದನ್ನು ಓದಿ; ಕೊರೋನಾ ಲಸಿಕೆ ಪಡೆದ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ

ಸ್ವ ಕ್ಷೇತ್ರದಲ್ಲಿ ಪ್ರತಿಭಟನೆ

ಇನ್ನು ಕಾಂಗ್ರೆಸ್ ನಿಂದ ಶಾಸಕ ಸತೀಶ ಜಾರಕಿಹೊಳಿ ಟಿಕೆಟ್ ಬಹುತೇಕ ಅಂತಿಮಆಗಿದೆ ಎಂಬ ವಿಷಯ ತಿಳಿದ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಬೆಳಗಾವಿ ಜಿಲ್ಲೆಯ ಯಮಕಣಮರಡಿ ಕ್ಷೇತ್ರದ ಗೋಟುರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ದ ಕಾರ್ಯಕರ್ತರು ಅಸಮಧಾನ ಹೊರ ಹಾಕಿದ್ದಾರೆ. ಮುಂದಿನ ಸಿಎಂ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರನ್ನ ಸೈಡ್ ಲೈನ್ ಮಾಡುವ ಹುನ್ನಾರ ನಡೆದಿದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆದ ಪರಿಸ್ಥಿತಿ ಸತೀಶ್​ ಜಾರಕಿಹೊಳಿ ಅವರಿಗೆ ಬರಬಹುದು. ರಾಜ್ಯ ನಾಯಕರ ಹುನ್ನಾರದಿಂದ ದಲಿತ ನಾಯಕ ಸತೀಶ ಜಾರಕಿಹೊಳಿ ಅವರನ್ನ ಸೈಡ್ ಲೈನ್ ಮಾಡುವ ವ್ಯವಸ್ಥೆ ನಡೆಯುತ್ತಿದೆ. ಸತೀಶ್ ಅವರು ಯಮಕನಮರಡಿ ಶಾಸಕರಾಗಿಯೇ ಮುಂದುವರೆಯುವಂತೆ ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.

ಒಟ್ಟಿನಲ್ಲಿ ಟಿಕೆಟ್ ನೀಡದಂತೆ ಅಭಿಮಾನಿಗಳ ಪಟ್ಟು ಒಂದೆಡೆಯಾದ್ರೆ ಇನ್ನೊಂದೆಡೆ ಸತೀಶ್ ಜಾರಕಿಹೊಳಿ ಕೂಡ ಒಲ್ಲದ ಮನಸ್ಸಿನಿಂದಲೆ ಹೈ ಕಮಾಂಡ್ ಸೂಚನೆಯಂತೆ ನಿರ್ಧಾರ ಮಾಡುವುದಾಗಿ ಹೇಳಿದ್ದಾರೆ. ಲಿಂಗಾಯತ ಮತದಾರರೆ ಪ್ರಾಬಲ್ಯ ಹೊಂದಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಲಿಂಗಾಯತ ಅಭ್ಯರ್ಥಿಯನ್ನೆ ಘೋಷಣೆ ಮಾಡಿದ್ರೆ ಒಳ್ಳೆಯದು ಎನ್ನುವ ಸಲಹೆಯನ್ನು ಸತೀಶ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿ ಘೋಷಣೆ ಆಗಲಿದ್ದು ಯಾರ ಹೆಸರು ಬರಲಿದೆ ಎಂದು ಕುತೂಹಲ ಕೆರಳಿಸಿದೆ.
Published by:Seema R
First published: