ನಮ್ಮ ಸಮೀಕ್ಷೆ ಪ್ರಕಾರ ನಾವು ಸೋಲುವುದಿಲ್ಲ; ಸತೀಶ್​ ಜಾರಕಿಹೊಳಿ ವಿಶ್ವಾಸ

ಚುನಾವಣೆ ಬಳಿಕ ಜೆಡಿಎಸ್​-ಕಾಂಗ್ರೆಸ್​ ಹೊಂದಾಣಿಕೆ ಅಸಾಧ್ಯ. ನಾವು ನಮ್ಮ ಅಸ್ತಿತ್ವದ ಹೋರಾಟಕ್ಕಾಗಿ ಏಕಾಂಗಿಯಾಗಿ ಸ್ಪರ್ಧಿಸಿದ್ದೇವೆ

Seema.R | news18-kannada
Updated:December 7, 2019, 1:48 PM IST
ನಮ್ಮ ಸಮೀಕ್ಷೆ ಪ್ರಕಾರ ನಾವು ಸೋಲುವುದಿಲ್ಲ; ಸತೀಶ್​ ಜಾರಕಿಹೊಳಿ ವಿಶ್ವಾಸ
ಮಾಜಿ ಸಚಿವ ಸತೀಶ್ ಜಾರಕಿಹೊಳಿ
  • Share this:
ಬೆಳಗಾವಿ (ಡಿ.07): ಉಪಚುನಾವಣೆ ಪೂರ್ವ ಫಲಿತಾಂಶದ  ಸಮೀಕ್ಷೆಯಲ್ಲಿ ಬಿಜೆಪಿಗೆ ಮುನ್ನಡೆ ತೋರಿಸಿದ್ದಾರೆ. ಆದರೆ ನಮ್ಮ ಸರ್ವೇ ಪ್ರಕಾರ ನಾವು ಸೋಲುವುದಿಲ್ಲ ಎಂಬ ಮಾಹಿತಿ ಇದೆ. ಇನ್ನೆರಡು ದಿನ ಕಾದು ನೋಡೋಣ ಮತದಾರರ ಪ್ರೀತಿ ಹೇಗಿದೆ ಎಂದು ಕಾಂಗ್ರೆಸ್​ ನಾಯಕ ಸತೀಶ್​ ಜಾರಕಿಹೊಳಿ ತಿಳಿಸಿದ್ದಾರೆ. 

ಫಲಿತಾಂಶದ ಕುರಿತು ಮಾತನಾಡಿದ ಅವರು, ಸಮೀಕ್ಷೆಗಳು ಕೆಲವೊಮ್ಮೆ ಬೇರೆಯಾಗಬಹುದು. ಗೋಕಾಕಲ್ಲಿ ಬಿಜೆಪಿ- ಕಾಂಗ್ರೆಸ್​​ ಸಮಬಲದ ಹೋರಾಟ ಇದೆ. ಈ  ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರುವುದು ಕಡಿಮೆ ಎಂದರು.

ಖರ್ಗೆ, ಪರಮೇಶ್ವರ್​ ಪ್ರಚಾರಕ್ಕೆ ಬಾರದ ವಿಚಾರ ಕುರಿತು ಪ್ರತಿಕ್ರಿಯಸಿದ ಅವರು, ಮಹಾರಾಷ್ಟ್ರದಲ್ಲಿ ಯಾರೂ ಪ್ರಚಾರ ಮಾಡಿರಲಿಲ್ಲ. ರಾಹುಲ್ ಗಾಂಧಿ 3 ಸಲ ಬಂದರೂ 42 ಸೀಟ್ ಗೆದ್ದಿದೆ. ಅದೇ ರೀತಿ ಇಲ್ಲಿಯೂ ಆಗಲಿದೆ ಎಂದು ಭವಿಷ್ಯ ನುಡಿದರು.

ಪರಮೇಶ್ವರ್​​ ಐಟಿ ದಾಳಿ ವಿಚಾರದಲ್ಲಿ ಬ್ಯುಸಿಯಿದ್ದಾರೆ. ಖರ್ಗೆ ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಿ ನಿರತರಿದ್ದರು. ಹಾಗಾಗಿ ಅವರು ಚುನಾವಣೆಗೆ ಬರಲು ಅಸಾಧ್ಯವಾಯಿತು ಎಂದು ಸಮಾಜಾಯಿಸಿ ನೀಡಿದರು.

ಇದನ್ನು ಓದಿ: ಫಲಿತಾಂಶಕ್ಕೆ ಇನ್ನೇರಡೇ ದಿನ ಬಾಕಿ: ಅನರ್ಹ ಶಾಸಕರಲ್ಲಿ ಹೆಚ್ಚಿದ ಆತಂಕ; ಎಂಟಿಬಿ ಬಳಿಕ ಸಿಎಂ ಭೇಟಿಯಾದ ಗೋಪಾಲಯ್ಯ

ಚುನಾವಣೆ ಬಳಿಕ ಜೆಡಿಎಸ್​-ಕಾಂಗ್ರೆಸ್​ ಹೊಂದಾಣಿಕೆ ಅಸಾಧ್ಯ. ನಾವು ನಮ್ಮ ಅಸ್ತಿತ್ವದ ಹೋರಾಟಕ್ಕಾಗಿ ಏಕಾಂಗಿಯಾಗಿ ಸ್ಪರ್ಧಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
First published: December 7, 2019, 1:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading