ಇನ್ನೂ ಶಮನವಾಗದ ಜಾರಕಿಹೊಳಿ ಸಿಟ್ಟು; ರಾಹುಲ್​ ಮಾತಿಗೂ ಇಲ್ಲ ಕಿಮ್ಮತ್ತು

news18
Updated:September 21, 2018, 5:59 PM IST
ಇನ್ನೂ ಶಮನವಾಗದ ಜಾರಕಿಹೊಳಿ ಸಿಟ್ಟು; ರಾಹುಲ್​ ಮಾತಿಗೂ ಇಲ್ಲ ಕಿಮ್ಮತ್ತು
  • Advertorial
  • Last Updated: September 21, 2018, 5:59 PM IST
  • Share this:
ರಮೇಶ್​ ಹಿರೇಜಂಬೂರು, ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.21): ರಾಜ್ಯ ರಾಜಕೀಯದಲ್ಲಿ 20 ದಿನಗಳ ಕಾಲ ಅಲ್ಲೋಲ ಕಲ್ಲೋಲ ಜಾರಕಿಹೊಳಿ ಸಹೋದರರು ಸೃಷ್ಟಿಸಿದರು. ಅವರ ಕೋಪ ಶಮನಕ್ಕೆ ವೇಣುಗೋಪಾಲ್​, ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿದಂತೆ ಅನೇಕರು ಹರಸಾಹಸ ನಡೆಸಿದರು. ಆದರೆ,  ಅವರ ಸಿಟ್ಟು ಮಾತ್ರ ಶಮನವದಂತೆ ಕಂಡಿಲ್ಲ.

ಜಾರಕಿಹೊಳಿ ಕೋಪ ತಣ್ಣಗಾಗಿಸಲು ಸ್ವತಃ ರಾಹುಲ್​ ಗಾಂಧಿ ಸತೀಶ್​ ಜಾರಕಿಹೊಳಿ ಅವರಿಗೆ ಕರೆ ಮಾಡಿ ಚರ್ಚೆ ನಡೆಸಲು ಆಹ್ವಾನ ನೀಡಿದರೂ, ಆದರೆ ಸತೀಶ್​ ಮಾತ್ರ ದೆಹಲಿಗೆ ಹೋಗುತ್ತೇನೆ ಎಂದು ಬಾಯಿ ಮಾತಿನಲ್ಲಿ ಹೇಳದರೆ ವಿನಾಃ ಅಲ್ಲಿಗೆ ಹೋಗಲಿಲ್ಲ. ಈ ಮೂಲಕ ಹೈಕಮಾಂಡ್​ಗೆ ತಾವು ತಮ್ಮ ಪಟ್ಟನ್ನು ಸಡಿಲಿಸಿಲ್ಲ ಎಂದು ಪರೋಕ್ಷವಾಗಿ ಸೂಚನೆಯನ್ನು ನೀಡಿದರು

ಜಾರಕಿಹೊಳಿ ಜೊತೆ ಚರ್ಚೆ ನಡೆಸಲು ಮೂರು ಬಾರಿ ಕರೆ ಮಾಡಿದ ರಾಹುಲ್​ಗೆ ಸತೀಶ್​ ನೀಡಿದ ಒಂದು ಷರತ್​ ತನ್ನನ್ನು ಡಿಸಿಎಂ ಮಾಡಬೇಕು ಎಂದು. ಈಗಾಗಲೇ ಯಾವುದೇ ಸಚಿವ ಸ್ಥಾನ ನೀಡದ ಹಿನ್ನಲೆ ಅತೃಪ್ತಿಗೊಂಡಿರು ಸತೀಶ್​ ತಮಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲೇ ಬೇಕು ಎಂದು ಕಾಂಗ್ರೆಸ್​ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದರು.

ಈಗಾಗಲೇ ಜಿ ಪರಮೇಶ್ವರ್​ ಡಿಸಿಎಂ ಸ್ಥಾನದಲ್ಲಿದ್ದು, ಈ ಸ್ಥಾನ ನೀಡಲು ಸಾಧ್ಯವಿಲ್ಲ. ಮೊದಲು ಸಚಿವ ಸಂಪುಟ ವಿಸ್ತರಣೆ ಆಗಲಿ ಎಂದು ಮನವೊಲಿಸಿದರೂ ಇದಕ್ಕೆ ಜಾರಕಿಹೊಳಿ ಮಾತ್ರ ಒಪ್ಪಿಗೆ ನೀಡಿಲ್ಲ ಎಂಬ ಸುಳಿವು ಲಭ್ಯವಾಗಿದೆ. ಇನ್ನು ಈ ಕುರಿತು ರಾಹುಲ್​ ಗಾಂಧಿ ಕೂಡ ಭಿನ್ನ ರಾಗವಾಡಿದ ಹಿನ್ನಲೆ ಅವರು ದೆಹಲಿಗೆ ತೆರಳಿರಲಿಲ್ಲ.

ನನ್ನನ್ನು ಡಿಸಿಎಂ ಮಾಡಿದರೆ ಮಾತ್ರ ಸೈಲೆಂಟಾಗುತ್ತಾನೆ ಎಂದು ಜಾರಕಿಹೊಳಿ  ಷರತ್ತು ಇಟ್ಟಿದ್ದ  ಬೇಡಿಕೆ ಕೇಳಿಯೇ  ರಾಹುಲ್ ಗಾಂಧಿ ಸುಸ್ತಾದರು. ಅಲ್ಲದೇ ರಾಹುಲ್​ ಈ ಬೇಡಿಕೆಯನ್ನು ನಿರಾಕಿರಿಸಿದರು ಇದರಿಂದ ಕಾಂಗ್ರೆಸ್​ ಅಧ್ಯಕ್ಷರ ವಿರುದ್ಧವೇ ಮುನಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸತೀಶ್​ ಜಾರಕಿಹೊಳಿ ಸದ್ಯಕ್ಕೆ ಸುಮ್ಮನಾದಂತೆ ಕಂಡರೂ ಮುಂದೆ ಈ ಬೇಡಿಕೆ ಮತ್ತೆ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗುವ ಲಕ್ಷಣಗಳನ್ನು ಅಲ್ಲಗಳೆಯುವಂತೆ ಇಲ್ಲ.
First published:September 21, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ