ಬೆಳಗಾವಿ (ಡಿ.09): ವಿಧಾನಸಭೆ ಚುನಾವಣೆಯಲ್ಲಿ (Assembly Election) ಹತ್ತಿರವಾಗ್ತಿದ್ದು, ಮುಂದಿನ ಬಾರಿ ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಕಾಂಗ್ರೆಸ್ ನಾನಾ ರಣತಂತ್ರ ರೂಪಿಸ್ತಿದೆ. ಗುಜರಾತ್ ಬಿಜೆಪಿ (BJP Gujarat) ಮಾದರಿಯಲ್ಲೇ ಕಾಂಗ್ರೆಸ್ನಲ್ಲೂ ಟಿಕೆಟ್ (Congress Ticket) ನೀಡ್ಬೇಕು ಎನ್ನುವ ಕೂಗು ಪಕ್ಷದ ವಲಯದಲ್ಲೇ ಕೇಳಿ ಬರ್ತಿದೆ. ಪಕ್ಷದಲ್ಲಿ ಹಿರಿಯರ ಬದಲು ಯುವಕರಿಗೆ ಅಥವಾ ಹೊಸಬರಿಗೆ ಟಿಕೆಟ್ ಸಿಗಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ಹೊಸಬರಿಗೆ ಅವಕಾಶ ನೀಡ್ಬೇಕು
ಹೊಸಬರಿಗೆ ಅವಕಾಶ ನೀಡುವ ಮಾಡೆಲ್ ಕರ್ನಾಟಕಕ್ಕೆ ಮಾದರಿಯಾಗಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಪಕ್ಷದಿಂದ ಅತಿ ಹೆಚ್ಚು ಬಾರಿ ಗೆದ್ದವರು ಅಥವಾ ವಯಸ್ಸಿನಲ್ಲಿ ಹಿರಿಯರು ಎನ್ನುವ ಕಾರಣಕ್ಕೆ ಟಿಕೆಟ್ ನೀಡದೆ ಹೊಸಬರಿಗೆ ಅವಕಾಶ ನೀಡಬೇಕು ಎಂದು ಸತೀಶ್ ಜಾರಕಿಹೊಳಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಗುಜರಾತ್ ಚುನಾವಣೆ ಫಲಿತಾಂಶದ ಬಗ್ಗೆ ಮಾತಾಡಿದ ಅವರು, ಗುಜರಾತ್ನಲ್ಲಿ ಬಿಜೆಪಿಯು ಹೊಸಬರಿಗೆ ಅವಕಾಶ ನೀಡಿದ ಮಾದರಿಯನ್ನು ಕಾಂಗ್ರೆಸ್ ಪಕ್ಷದಲ್ಲೂ ಅಳವಡಿಸಿಕೊಳ್ಳೋದು ಉತ್ತಮ ಎಂದಿದ್ದಾರೆ.
ಅಭ್ಯರ್ಥಿಗಳ ಆಯ್ಕೆಯಲ್ಲೂ ಆಗಲಿ ಬದಲಾವಣೆ
ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲೂ ಬದಲಾವಣೆ ಆಗಬೇಕಿದೆ. ಹಲವು ಬಾರಿ ಗೆದ್ದವರಿಗೆ ಟಿಕೆಟ್ ನೀಡುವ ಬಗ್ಗೆ ಮರು ಚಿಂತನೆ ಆಗಬೇಕು. 8 ಬಾರಿ ಗೆದ್ದಿದ್ದಾರೆ ಎಂದು 9ನೇ ಬಾರಿಯೂ ಅವರಿಗೆ ಟಿಕೆಟ್ ಕೊಡುತ್ತೇವೆ ಎನ್ನುವ ನಿಲುವು ಬದಲಾಗ್ಬೇಕು ಎಂದು ಸತೀಶ್ ಜಾರಕಿಹೊಳಿ ಎಂದ್ರು.
ಹಿರಿಯರನ್ನು ಪರಿಷತ್ಗೆ ಕಳುಹಿಸಿ
ಹಲವು ಬಾರಿ ಗೆದ್ದಿದ್ದಾರೆ ಎನ್ನುವ ಕಾರಣಕ್ಕೆ ಅವಕಾಶ ಬೇಡ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಅತಿ ಹೆಚ್ಚು ಬಾರಿ ಗೆದ್ದವರು ಅಥವಾ ಹಿರಿಯರನ್ನು ಪರಿಷತ್ಗೆ ಕಳುಹಿಸಿಕೊಡಿ. ಹೊಸಬರಿಗೆ ವಿಧಾನಸಭೆ ಚುನಾವಣೆಗೆ ಅವಕಾಶ ನೀಡಬೇಕು. ಇದನ್ನು ಪಕ್ಷದ ವೇದಿಕೆಯಲ್ಲೂ ಹೇಳಿದ್ದೇನೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಸ್ಟ್ರ್ಯಾಟಜಿ ಮಾಡದೇ ನಾವು ಗೆಲ್ಲೋಕಾಗಲ್ಲ
ಸರಿಯಾದ ಸ್ಟ್ರ್ಯಾಟಜಿ ಮಾಡದೇ ನಾವು ಗೆಲ್ಲೋಕಾಗಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಗುಜರಾತ್ನಲ್ಲಿ ಮೂರು ಬಾರಿ ಸತತವಾಗಿ 30-40 ಜನರ ಟಿಕೆಟ್ ಚೇಂಜ್ ಮಾಡ್ತಾರೆ. ಸೋಲುತ್ತಾರೆ ಅಂತ ಗೊತ್ತಿದ್ರೂ ಅನಿವಾರ್ಯವಾಗಿ ಟಿಕೆಟ್ ಕೊಡ್ತೇವಿ. ಸೀನಿಯರ್ ಎನ್ನುವ ಕಾರಣಕ್ಕೆ ಟಿಕೆಟ್ ಕೊಡೋದೇ ಹೆಚ್ಚಾಗಿದೆ ಎಂದು ಹೇಳಿದ್ರು.
ಇಡೀ ರಾಜ್ಯಕ್ಕೆ ಬದಲಾವಣೆ ಅವಶ್ಯಕತೆ ಇದೆ
ಟಿಕೆಟ್ ಕೊಡುವ ಅಭ್ಯರ್ಥಿ ಗೆದ್ದೆ ಗೆಲ್ಲುತ್ತಾರೆ ಎನ್ನುವುದಾದ್ರೆ ಕೊಡಿ. ಕೆಲವೊಮ್ಮೆ ಗೆಲ್ಲೋದಿಲ್ಲ ಅನ್ನೋದು ಗೊತ್ತಿದ್ರು ಕೊಡ್ತಾರೆ. ಜಾತಿ ಯುಗ ಈಗ ಮುಗಿದ ಅಧ್ಯಾಯ, ಜನ ಕೆಲಸ ಮಾಡುವುದನ್ನು ನೋಡ್ತಾರೆ. ನಮ್ಮಲ್ಲಿ ಇಡೀ ರಾಜ್ಯಕ್ಕೆ ಬದಲಾವಣೆ ಅವಶ್ಯಕತೆ ಇದೆ ಎನ್ನುವುದು ನನ್ನ ಅನಿಸಿಕೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
20 ಸೀಟ್ ಹೆಚ್ಚು ಗೆಲ್ಲಬಹುದು
ಕೆಲವೊಂದು ಬದಲಾವಣೆ ಮಾಡಿಕೊಳ್ಳುವುದ್ರಿಂದ 20 ಸೀಟ್ ಹೆಚ್ಚು ಗೆಲ್ಲಬಹುದು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಜನ ಎದುರು ನೋಡ್ತಿದ್ದಾರೆ. ಬಿಜೆಪಿ ಸಿದ್ದರಾಮಯ್ಯ ಕಾಲದ ಸಾಕಷ್ಟು ಯೋಜನೆ ಸ್ಥಗಿತ ಮಾಡಿದ್ದು ಜನರಿಗೆ ಗೊತ್ತಿದೆ ಎಂದು ಸತೀಶ್ ಅವರು ಬಿಜೆಪಿ ವಿರುದ್ಧವೂ ಕಿಡಿಕಾರಿದ್ರು.
ತಮ್ಮ ತಮ್ಮ ಮಕ್ಕಳಿಗೆ ಟಿಕೆಟ್ ನೀಡುವಂತೆ ಹಲವು ನಾಯಕರ ಅರ್ಜಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಕುಟುಂಬ ರಾಜಕಾರಣದಲ್ಲಿ ಗೆಲ್ಲುವ ಕೆಪ್ಯಾಸಿಟಿ ಇದ್ರೇ ಕೊಡಬಹುದು. ಅವರು ಗೆಲ್ತಾರೆ ಅಂದ್ರೇ ಒಂದೇ ಕುಟುಂಬಕ್ಕೆ ಎರಡು ಮೂರು ಟಿಕೆಟ್ ಕೊಡಬಹುದು ಎಂದ್ರು. 2023ರಲ್ಲಿ ದಲಿತ ಸಿಎಂ ಆಗಬೇಕಾ ಎಂಬ ಪ್ರಶ್ನೆಗೆ ಮಾತಾಡಿದ ಅವ್ರು, ದಲಿತ ಸಿಎಂ ಆಗಬೇಕು ಎಂಬುದು ಗುರಿಯಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಅಷ್ಟೇ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ