ಲಕ್ಷ್ಮೀ ಹೆಬ್ಬಾಳ್ಕರ್​​​ಗೆ ಇಡಿ ನೋಟೀಸ್​​​​​ ನೀಡಿದ್ದರ ಹಿಂದೆ ದುರುದ್ದೇಶವಿಲ್ಲ; ಸತೀಶ್​​ ಜಾರಕಿಹೊಳಿ ಹೇಗೆ ಅಂದಿದ್ದೇಕೆ?

ದೆಹಲಿಯ ವಿಶೇಷ ನ್ಯಾಯಾಲಯವು ಈಗಾಗಲೇ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ. ನಾಳೆಯವರೆಗೂ ಡಿಕೆಶಿ ಅವರು ನ್ಯಾಯಾಂಗ ಬಂಧನದಲ್ಲಿ ಮುಂದುವರಿಯಲಿದ್ದಾರೆ.

news18
Updated:September 18, 2019, 7:58 PM IST
ಲಕ್ಷ್ಮೀ ಹೆಬ್ಬಾಳ್ಕರ್​​​ಗೆ ಇಡಿ ನೋಟೀಸ್​​​​​ ನೀಡಿದ್ದರ ಹಿಂದೆ ದುರುದ್ದೇಶವಿಲ್ಲ; ಸತೀಶ್​​ ಜಾರಕಿಹೊಳಿ ಹೇಗೆ ಅಂದಿದ್ದೇಕೆ?
ಸತೀಶ್ ಜಾರಕಿಹೊಳಿ
  • News18
  • Last Updated: September 18, 2019, 7:58 PM IST
  • Share this:
ಬೆಳಗಾವಿ(ಸೆ.18): ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಜಾರಿ ನಿರ್ದೇಶನಾಲಯ ನೀಡಿದ ನೋಟಿಸ್​​ ಹಿಂದೆ ಯಾವುದೇ ರಾಜಕೀಯ ದುರುದ್ದೇಶವಿಲ್ಲಅನಿಸುತ್ತದೆ ಎಂದು ಮಾಜಿ ಸಚಿವ ಸತೀಶ್​​ ಜಾರಕಿಹೊಳಿ ಹೇಳಿದ್ದಾರೆ. 

ನಗರದಲ್ಲಿ ಸುದ್ದಿಗಾರೊಂದಿಗೆ ಮಾತಾಡಿದ ಕಾಂಗ್ರೆಸ್​​​ನ ಪ್ರಭಾವಿ ನಾಯಕ ಸತೀಶ್​​ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್​​ಗೆ ನೋಟಿಸ್​​ ನೀಡಿದರ ಹಿಂದೆ ಯಾವುದೇ ದುರುದ್ದೇಶ ಇರಲಿಕ್ಕಿಲ್ಲ. ಇಡಿ ವಿಚಾರಣೆಗೆ ಹೋದ ಮೇಲೆ ಮಾತ್ರ ಯಾಕೇ ಅವರಿಗೆ ನೋಟಿಸ್​​ ನೀಡಿದರು ಎಂದು ಗೊತ್ತಾಗಲಿದೆ ಎಂದು ತಿಳಿಸಿದ್ಧಾರೆ.

ಇನ್ನು ಸತೀಶ್​​ ಜಾರಕಿಹೊಳಿ ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಇಡಿ ನೋಟಿಸ್​​ ಜಾರಿಗೊಳಿಸಿದರ ಬಗ್ಗೆ ಹೀಗೇಕೆ ಹೇಳಿದ್ದರು ಎಂಬ ಕೂತೂಹಲ ಮೂಡಿಸಿದೆ. ನಿಜವಾಗಲೂ ಸಚಿವ ಡಿ.ಕೆ ಶಿವಕುಮಾರ್​​ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆನ್ನಲಾದ ಪ್ರಕರಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​​ ಕೈವಾಡ ಇದೆ ಎಂದು ಪರೋಕ್ಷವಾಗಿ ಹೇಳಿದ್ದಾರಾ? ಎಂಬ ಪ್ರಶ್ನೆಯೂ ಕಾಡುತ್ತಿದೆ.

ಇಡಿ ಗಾಳಕ್ಕೆ ಡಿಕೆ ಶಿವಕುಮಾರ್ ಸಿಕ್ಕಿರುವ ಹೊತ್ತಿನಲ್ಲೇ ಅವರ ಆಪ್ತರಾಗಿರುವ ಮತ್ತೊಬ್ಬ ಶಾಸಕರಿಗೆ ಇಡಿ ಸಂಕಷ್ಟ ಎದುರಾಗಿದೆ. ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಜಾರಿ ನಿರ್ದೇಶನಾಲಯ ನೋಟೀಸ್ ಕಳುಹಿಸಿದೆ ಎಂದು ನಿನ್ನೆಯೇ ನ್ಯೂಸ್​​-18 ಕನ್ನಡಕ್ಕೆ ಮಾಹಿತಿ ಸಿಕ್ಕಿತ್ತು.

ಇದನ್ನೂ ಓದಿ: ಡಿಕೆಶಿ ಆಪ್ತೆ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಮತ್ತೊಂದು ಇಡಿ ನೋಟೀಸ್?

ಡಿಕೆಶಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಈ ಹಿಂದೆಯೂ ಇಡಿ ನೋಟೀಸ್ ನೀಡಿತ್ತು. ಆದರೆ, ಅದಕ್ಕೆ ಬೆಳಗಾವಿ ಶಾಸಕಿ ಸ್ಪಂದಿಸಿರಲಿಲ್ಲ. ನಿನ್ನೆ ದಿಢೀರ್​​ ವಿಚಾರಣೆಗೆ ಹಾಜರಾಗುವಂತೆ ಮತ್ತೊಮ್ಮೆ ಇಡಿ ನೋಟೀಸ್ ಕಳುಹಿಸಿದೆ ಎಂಬುದು ಗಮನಾರ್ಹ

ದೆಹಲಿಯ ವಿಶೇಷ ನ್ಯಾಯಾಲಯವು ಈಗಾಗಲೇ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ. ನಾಳೆಯವರೆಗೂ ಡಿಕೆಶಿ ಅವರು ನ್ಯಾಯಾಂಗ ಬಂಧನದಲ್ಲಿ ಮುಂದುವರಿಯಲಿದ್ದಾರೆ.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ
------------
First published:September 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading