News18 India World Cup 2019

ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಉಗ್ರ ಪ್ರತಿಭಟನೆ... ರಮೇಶ್ ಜಾರಕಿಹೊಳಿ ಬೆಂಬಲಿಗರಿಂದ ಅದ್ಧೂರಿ ಸ್ವಾಗತ...!

news18
Updated:June 7, 2018, 8:01 PM IST
ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಉಗ್ರ ಪ್ರತಿಭಟನೆ... ರಮೇಶ್ ಜಾರಕಿಹೊಳಿ ಬೆಂಬಲಿಗರಿಂದ ಅದ್ಧೂರಿ ಸ್ವಾಗತ...!
news18
Updated: June 7, 2018, 8:01 PM IST
- ಚಂದ್ರಕಾಂತ್ ಸುಗಂಧಿ, ನ್ಯೂಸ 18ಕನ್ನಡ 

ಬೆಳಗಾವಿ (ಜೂನ್ .07) :  ಸಮ್ಮಿಶ್ರ ಸರ್ಕಾರದ ಮೊದಲ ಸಂಪುಟ ವಿಸ್ತರಣೆ ನಂತರ ಇದೀಗ ತೀವ್ರ ಅಸಮಾಧನ ಹೊರ ಬೀಳಲು ಆರಂಭಿಸಿದೆ. ಪ್ರಮುಖವಾಗಿ ಬೆಳಗಾವಿ ಜಿಲ್ಲೆಯ ಸಚಿವರ ಆಕಾಂಕ್ಷಿಗಳ ಪೈಕಿ ರಮೇಶ ಜಾರಕಿಹೊಳಿ ನಿನ್ನೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಸತೀಶ ಜಾರಕಿಹೊಳಿ ಅಸಮಾಧಾನಗೊಂಡಿದ್ದಾರೆ. ಒಂದೆಡೆ ರಮೇಶ ಜಾರಕಿಹೊಳಿಗೆ ಆಪ್ತರಲ್ಲಿ ಸಂತಸ ಮನೆ ಮಾಡಿದ್ರೆ. ಇತ್ತ ಸತೀಶ ಜಾರಕಿಹೊಳಿ ಅಭಿಮಾನಿಗಳು ಬೀದಿಗೆ ಇಳಿದು ಧರಣಿ ಆರಂಭಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ರಮೇಶ ಜಾರಕಿಹೊಳಿಗೆ ಭವ್ಯ ಸ್ವಾಗತ...!

ನಿನ್ನೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಇಂದು ಮೊದಲ ಭಾರಿಗೆ ಬೆಳಗಾವಿಗೆ ಆಮಿಸಿದ ರಮೇಶ ಜಾರಕಿಹೊಳಿಗೆ ಭವ್ಯ ಸ್ವಾಗತ ನೀಡಲಾಯಿತು. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನೂರಾರು ಅಭಿಮಾನಿಗಳು ಹೂಗುಚ್ಛ ನೀಡಿದ ರಮೇಶ ಜಾರಕಿಹೊಳಿಗೆ ಶುಭಕೋರಿದರು.

ಬೆಳಗಾವಿಯಿಂದ ನೇರವಾಗಿ ಗೋಕಾಕ್ ತೆರಳಿದ ರಮೇಶ ಜಾರಕಿಹೊಳಿಗೆ ಗೋಕಾಕ್ ನಗರದ ಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ಲಕ್ಷ್ಮೀ ದೇವಿ ಹೆಸರಲ್ಲಿಯೇ ರಮೇಶ ಜಾರಕಿಹೊಳಿ ಪ್ರಮಾಣ ವಚನ ಸ್ವೀಕರಿಸಿದರು.

ಇನ್ನೂ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ರಮೇಶ ಜಾರಕಿಹೊಳಿ,ರಾಜ್ಯದ ಜನರ ನಿರೀಕ್ಷೆಯಂತೆ ಸಮ್ಮಿಶ್ರ ಸರ್ಕಾರ ಕೆಲಸ ಮಾಡಲಿದೆ. ಶಾಸಕ ಸತೀಶ್ ಜಾರಕಿಹೊಳಿ ಅಸಮಾಧಾನ ವಿಚಾರ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಧಿಕಾರ ಬೇಕು. ಆದರೇ ಕೆಲ ಸಂದರ್ಭದಲ್ಲಿ ತ್ಯಾಗ ಮನೋಭಾವ ಇರಬೇಕು. ಯಾರಾದರೂ ಮಧ್ಯಸ್ಥಿಕೆ ವಹಿಸಿದರೆ ನಾನು ಸತೀಶ ಜಾರಕಿಹೊಳಿಗೆ ಸಚಿವ ಸ್ಥಾನ ಬಿಟ್ಟುಕೊಡಲು ಸಿದ್ಧ ಎಂದರು.
Loading...

ಸತೀಶ್ ಜಾರಕಿಹೊಳಿಗೆ ಮನವೊಲಿಸಲು ಅವರೇನು ಸಣ್ಣ ಹುಡುಗನಲ್ಲ ಎಂದು ವ್ಯಂಗವಾಡಿದರು. ಇನ್ನೂ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ರಾಜೀನಾಮೆ ವದಂತಿ ಕೇವಲ ಊಹಾಪೋಹ ಎಂದು ಸಚಿವ ರಮೇಶ ಜಾರಕಿಹೊಳಿ ಸ್ಪಷ್ಟ ಪಡಿಸಿದರು.

ಸತೀಶ ಬೆಂಬಲಿಗರಿಂದ ಬಸ್ಸಿಗೆ ಕಲ್ಲು, ಕಾಂಗ್ರೆಸ್ ಬ್ಯಾನರ್ ಹರಿದು ಆಕ್ರೋಶ...!

ಸಚಿವ ಸಂಪುಟದಲ್ಲಿ ಸ್ಥಾನ ಕೈತಪ್ಪಿದ್ದರಿಂದ ಶಾಸಕ ಸತೀಶ್ ಜಾರಕಿಹೊಳಿ ತೀವ್ರ ಅಸಮಾಧನಗೊಂಡಿದ್ದಾರೆ. ನಿನ್ನೆಯಿಂದಲೇ ಬೆಂಗಳೂರಿನಲ್ಲಿ ಅತೃಪ್ತರ ಜತೆಗೆ ನಿರಂತವಾಗಿ ಹಲವು ಸಭೆಯಲ್ಲಿ ನಿರತರಾಗಿದ್ದಾರೆ. ಇತ್ತ ಸತೀಶ್ ಬೆಂಬಲಿಗರು ಬೀದಿಗೆ ಇಳಿದು ಪ್ರತಿಭಟನೆ ಆರಂಭಿಸಿದ್ದಾರೆ.

ಇಂದು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಮಾನವ ಬಂಧುತ್ವ ವೇದಿಕೆ ನೂರಾರು ಕಾರ್ಯಕರ್ತರು ಟೈಯರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾ ಕಾಂಗ್ರೆಸ್ ಕಚೇರಿಯ ಬ್ಯಾನರ್, ಹೂವಿನ ಕುಂಡ ಒಡೆದು ತಮ್ಮ ಆಕ್ರೋಶ ಹಾಕಿದರು.
ಇನ್ನೂ ಸಂಜೆ ವೇಳೆಗೆ ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ಕಾರ್ಯಕರ್ತರು ಚನ್ನಮ್ಮ ವೃತ್ತದಲ್ಲಿ ಧರಣಿ ನಡೆಸಿದರು.

ಈ ವೇಳೆ ಕೆಲ ಕಾರ್ಯಕರ್ತರು ನಗರ ಸಾರಿಗೆ ಬಸ್ ಮೇಲೆ ಕಲ್ಲು ತೂರಾಟ ನಡೆಸಿದರು. ಏಕಾಏಕಿ ಕಲ್ಲು ತೂರಾಟದಿಂದ ಬಸ್ ನಲ್ಲಿದ್ದ ಪ್ರಯಾಣಿಕರು ಕಕ್ಕಾಬಿಕ್ಕಿಯಾಗಿ ಓಡಿ ಹೋದರು. ಇನ್ನೂ ಯುವ ವೇದಿಕೆ ಮುಖಂಡ ವಿಜಯ ಸೇರಿ ಅನೇಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ  ಠಾಣೆಗೆ ಕರೆದುಕೊಂಡು  ಹೋದರು.

 
First published:June 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...