ಹೈ ಕಮಾಂಡ್​ಗೆ ಸೆಡ್ಡು ಹೊಡೆದ ಜಾರಕಿಹೊಳಿ; ದೆಹಲಿ ಪ್ರವಾಸ ರದ್ದು

news18
Updated:September 18, 2018, 12:17 PM IST
ಹೈ ಕಮಾಂಡ್​ಗೆ ಸೆಡ್ಡು ಹೊಡೆದ ಜಾರಕಿಹೊಳಿ; ದೆಹಲಿ ಪ್ರವಾಸ ರದ್ದು
 • Advertorial
 • Last Updated: September 18, 2018, 12:17 PM IST
 • Share this:
ನ್ಯೂಸ್​ 18 ಕನ್ನಡ

ಬೆಂಗಳೂರು (ಸೆ.18): ರಾಜ್ಯ ರಾಜಕೀಯ ಕ್ಷಣಕ್ಕೆ ಒಂದು ತಿರುವು ಪಡೆಯುತ್ತಿದ್ದು, ಯಾವ ಕ್ಷಣದಲ್ಲಿ ಏನುಬೇಕಾದರೂ ಆಗುವ ಸಾಧ್ಯತೆಗಳು ಹೆಚ್ಚಿದೆ.

ಪಕ್ಷವನ್ನು ಯಾವುದೇ ಕಾರಣಕ್ಕೂ ತೊರೆಯುವುದಿಲ್ಲ ಎಂದು ಹೇಳುತ್ತ ಕಾಂಗ್ರೆಸ್​ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದ್ದ ಸತೀಶ್​ ಜಾರಕಿಹೊಳಿ ಕೊನೆಯವೇಳೆ ಯೂ ಟರ್ನ್​ ಹೊಡೆಯುವ ಸಾಧ್ಯತೆ ಹೆಚ್ಚಿದೆಯಾ ಎಂಬ ಪ್ರಶ್ನೆಯನ್ನು ಮೂಡಿಸುತ್ತಿದೆ. ಕಾರಣ ಅವರ ದೆಹಲಿ ಭೇಟಿ ರದ್ದಾಗಿರುವುದು.

ರಾಜ್ಯ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿರುವ ಜಾರಕಿಹೊಳಿ ಜೊತೆ ಮಾತುಕತೆ ನಡೆಸಲು ದೆಹಲಿಗೆ ಬರುವಂತೆ ಹೈಕಮಾಂಡ್​ ಬುಲಾವ್​ ನೀಡಿತ್ತು. ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಜೊತೆ ಇಂದು ಮುಂಜಾನೆ ಮಾತುಕತೆ ನಡೆಸಿದ್ದರು. ಈ ವೇಳೆ  ತಮ್ಮ ಬೇಡಿಕೆ ಈಡೇರಿಸ ಬೇಕು ಎಂಬ ನಿಯಮವಿಧಿಸಿ ಹೈ ಕಮಾಂಡ್​ ಭೇಟಿ ಮಾಡಲು ಸಿದ್ದವಾಗಿದ್ದರು.

ಆದರೆ ಕೊನೆಯ ಕ್ಷಣದಲ್ಲಿ ಸತೀಶ್​ ಜಾರಕಿಹೊಳಿ ಉಲ್ಟಾ ಹೊಡೆದಿದ್ದಾರೆ.  ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್​ ನಡುವೆ ನಡೆದ ಸಂಧಾನಗಳು ಯಶಸ್ವಿಯಾಗದ ಹಿನ್ನಲೆ ಅತೃಪ್ತ ಕಾಂಗ್ರೆಸ್​ ನಾಯಕರ ಬಂಡಾಯ ತಾರಕಕ್ಕೇರಿದೆ. ಈ ಹಿನ್ನಲೆ ಹೈ ಕಮಾಂಡ್​ ವಿರುದ್ಧವೇ ಸತೀಶ್​ ತಿರುಗಿಬೀಳಲು ಸಿದ್ದರಾಗಿದ್ದಾರೆ. ದೆಹಲಿಗೆ ಬರುತ್ತೇನೆಂದಿದ್ದ ಸತೀಶ್​ ಈಗ ದೆಹಲಿ ಪ್ರವಾಸವನ್ನೇ ರದ್ದು ಮಾಡಿದ್ದಾರೆ. ​

ತಮ್ಮನಿಗೆ ಸಾಥ್​ ನೀಡಲು ಮುಂದಾದ ಅಣ್ಣಾ

ಸತೀಶ್​ ದೆಹಲಿ ಪ್ರವಾಸ ರದ್ದಾಗಲು ಕಾರಣ ರಮೇಶ್​ ಜಾರಕಿಹೊಳಿ.  ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ತಮ್ಮ ರಮೇಶ್​ ಬೆಂಬಲಕ್ಕೆ ಸತೀಶ್​ ಮುಂದಾಗಿದ್ದಾರೆ.  ರಮೇಶ ಜಾರಕಿಹೊಳಿ ಅಸ್ತಿತ್ವವೇ ನನ್ನ ಅಸ್ಥಿತ್ವ ಎಂದು ಕೂಡ ಹೇಳಿದ್ದಾರೆ ಎನ್ನಲಾಗಿದೆ,ಈ ಹಿಂದೆ ಹಾವು, ಮುಂಗೂಸಿಯಂತಿದ್ದ ಸತೀಶ್​, ರಮೇಶ್ ​  ಒಂದಾಗಿದ್ದಾರೆ. ಈ ಹಿಂದೆ ಬೆಳಗಾವಿಯಲ್ಲಿ ಮಾತನಾಡಿದ ರಮೇಶ್​ ಸತೀಶ್​ಗೆ ಅವಮಾನವಾದರೆ ನಾವು ಸುಮ್ಮನಿರುವುದಿಲ್ಲ ಎಂದಿದ್ದರು. ಅಲ್ಲದೇ ಕಾಂಗ್ರೆಸ್​ ಹಿರಿಯ ನಾಯಕರಾಗಿದ್ದ ಅವರಿಗೆ ಮಂತ್ರಿ ಸ್ಥಾನ ನೀಡದ ಹಿನ್ನೆಲೆಯಲ್ಲಿ ಅಸಮಾಧಾನಕ್ಕೂ ಒಳಗಾಗಿದ್ದರು. ಈ ಹಿನ್ನಲೆ ಹಲವು ಬಾರಿ ಸತೀಶ್​ ಪರ ರಮೇಶ್​ ಬ್ಯಾಟಿಂಗ್​ ನಡೆಸಿದ್ದರು.

ಈಗ ರಮೇಶ್​ ಪರ ಸತೀಶ್​ ನಿಂತಿದ್ದು ಇದಕ್ಕಾಗಿ ದೆಹಲಿ ನಾಯಕರ ವಿರೋಧ ಕಟ್ಟಿಕೊಳ್ಳಲು ಅವರು ಮುಂದಾಗಿದ್ದಾರೆ. ಈ ಮೂಲಕ  ಸತೀಶ ಜಾರಕಿಹೊಳಿ ಬೆಂಬಲದಿಂದ  ರಮೇಶ ಜಾರಕಿಹೊಳಿ ತಂಡ ಮತ್ತಷ್ಟು ಬಲಿಷ್ಠವಾಗಲಿದೆ ಎನ್ನಲಾಗಿದೆ.
First published:September 18, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
 • India
 • World

India

 • Active Cases

  6,039

   
 • Total Confirmed

  6,761

   
 • Cured/Discharged

  515

   
 • Total DEATHS

  206

   
Data Source: Ministry of Health and Family Welfare, India
Hospitals & Testing centres

World

 • Active Cases

  1,205,178

   
 • Total Confirmed

  1,680,527

  +76,875
 • Cured/Discharged

  373,587

   
 • Total DEATHS

  101,762

  +6,070
Data Source: Johns Hopkins University, U.S. (www.jhu.edu)
Hospitals & Testing centres