ಗೋಕಾಕ್​​ನಲ್ಲಿ ಮೂವರು ಜಾರಕಿಹೊಳಿ ಸಹೋದರರ ಪೈಪೋಟಿ?: ರಮೇಶ್​​ ವಿರುದ್ಧ ಲಖನ್​​ ಜತೆಗೆ ಸತೀಶ್​ ನಾಮಪತ್ರ ಸಲ್ಲಿಕೆ

ಅನರ್ಹರನ್ನು ಸೋಲಿಸಲೇಬೇಕು ಎನ್ನುವ ಹಠಕ್ಕೆ ಬಿದ್ದಿರುವ ಮಾಜಿ ಮುಖ್ಯಮಂತ್ರಿಗಳಾದ ಎಚ್​ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ರಣತಂತ್ರ ರೂಪಿಸುತ್ತಿದ್ದಾರೆ. ಶಾಸಕರು ರೆಬೆಲ್​ ಆಗಲು ಮೂಲ ಕಾರಣ ಎಂದು ಹೇಳಲಾಗುತ್ತಿರುವ ರಮೇಶ್ ಜಾರಕಿಹೊಳಿಯನ್ನು ಸೋಲಿಸಿಯೇ ತೀರುತ್ತೇವೆ ಎಂದು ಶಪಥ ಮಾಡಿದ್ದಾರೆ.

news18
Updated:November 19, 2019, 11:15 AM IST
ಗೋಕಾಕ್​​ನಲ್ಲಿ ಮೂವರು ಜಾರಕಿಹೊಳಿ ಸಹೋದರರ ಪೈಪೋಟಿ?: ರಮೇಶ್​​ ವಿರುದ್ಧ ಲಖನ್​​ ಜತೆಗೆ ಸತೀಶ್​ ನಾಮಪತ್ರ ಸಲ್ಲಿಕೆ
ಅನರ್ಹರನ್ನು ಸೋಲಿಸಲೇಬೇಕು ಎನ್ನುವ ಹಠಕ್ಕೆ ಬಿದ್ದಿರುವ ಮಾಜಿ ಮುಖ್ಯಮಂತ್ರಿಗಳಾದ ಎಚ್​ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ರಣತಂತ್ರ ರೂಪಿಸುತ್ತಿದ್ದಾರೆ. ಶಾಸಕರು ರೆಬೆಲ್​ ಆಗಲು ಮೂಲ ಕಾರಣ ಎಂದು ಹೇಳಲಾಗುತ್ತಿರುವ ರಮೇಶ್ ಜಾರಕಿಹೊಳಿಯನ್ನು ಸೋಲಿಸಿಯೇ ತೀರುತ್ತೇವೆ ಎಂದು ಶಪಥ ಮಾಡಿದ್ದಾರೆ.
  • News18
  • Last Updated: November 19, 2019, 11:15 AM IST
  • Share this:
ಬೆಂಗಳೂರು(ನ.19): ಗೋಕಾಕ್‌ ಕ್ಷೇತ್ರದ ವಿಧಾನಸಭಾ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಅನರ್ಹ ಶಾಸಕ ರಮೇಶ್​ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ಧಾರೆ. ಕಾಂಗ್ರೆಸ್​​ ತೊರೆದು ಬಿಜೆಪಿ ಸೇರಿದ್ದ ರಮೇಶ್​​ ವಿರುದ್ಧ ಸಮರ ಸಾರಲು ಕಾಂಗ್ರೆಸ್​ನಿಂದ ಈಗಾಗಲೇ ಲಖನ್​​ ಜಾರಕಿಹೊಳಿ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ಇದರೊಂದಿಗೆ ಗೋಕಾಕ್​​ ಕ್ಷೇತ್ರದಿಂದ ಕಾಂಗ್ರೆಸ್​​ ಶಾಸಕ ಸತೀಶ್​​ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದರೀಗ ಲಖನ್​​ ಜತೆಗೆ ಸತೀಶ್​​ ಯಾಕೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂಬುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಒಂದು ವೇಳೆ ಲಖನ್ ರಮೇಶ್​​ ಜಾರಕಿಹೊಳಿ ವಿರುದ್ಧದ ಸ್ಪರ್ಧೆಯಿಂದ ​​​​​​ ಹಿಂದೆ ಸರಿಯುವ ಸಾಧ್ಯತೆಯಿದ್ದರೆ ನಾನೇ ಚುನಾವಣೆಗೆ ನಿಲ್ಲುತ್ತೇನೆ ಎಂದು ಸತೀಶ್​​ ನಿರ್ಣಯಿಸಿದ್ದಾರೆ ಎಂಬ ಮಾತುಗಳ ಕೇಳಿ ಬರುತ್ತಿವೆ. ಹಾಗಾಗಿಯೇ ಸತೀಶ್​ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂದೇಳಲಾಗುತ್ತಿದೆ.

ಕಾಂಗ್ರೆಸ್​  ಅಭ್ಯರ್ಥಿಯಾಗಿ ಲಖನ್​​ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಸಹೋದರ ರಮೇಶ್‌ ಜಾರಕಿಹೊಳಿ ವಿರುದ್ಧ ಸಮರ ಸಾರಲು ಮುಂದಾಗಿದ್ದಾರೆ. ಇದರ ಜತೆಗೆ ಸತೀಶ್​​ ಜಾರಕಿಹೊಳಿಯೂ ಉಮೇದುವಾರಿಕೆ ಸಲ್ಲಿಸಿದ್ದು, ಇದರ ಹಿಂದೆ ಬೇರೆಯದ್ದೇ ಲೆಕ್ಕಚಾರವಿದೆ ಎಂಬ ಚರ್ಚೆಯೂ ನಡೆಯುತ್ತಿದೆ.

ಇನ್ನೂ ಲಖನ್​​ ಜತೆಗೆ ನೀವ್ಯಾಕೆ ನಾಮಪತ್ರ ಸಲ್ಲಿಸಿದ್ದೀರಿ? ಎಂಬ ಮಾಧ್ಯಮದವರ ಪ್ರಶ್ನೆಗೆ ಸತೀಶ್​​ ಜಾರಕಿಹೊಳಿ ಉತ್ತರಿಸಿದ್ದಾರೆ. ನಾನು ಲಖನ್​​​ ಜಾರಕಿಹೊಳಿಗೆ ಬೆಂಬಲ ನೀಡುವ ಸಲುವಾಗಿ ಡಮ್ಮಿ ನಾಮಪತ್ರ ನೀಡಿದ್ದೇನೆ. ಇದೊಂದು ಡಮ್ಮಿ ನಾಮಪತ್ರ. ಹೀಗೆ ಹಲವರು ಅಭ್ಯರ್ಥಿಗಳಿ ನೈತಿಕ ಬೆಂಬಲ ನೀಡಲು ಡಮ್ಮಿ ನಾಮಪತ್ರ ಸಲ್ಲಿಸುತ್ತಾರೆ. ಕಾಂಗ್ರೆಸ್​​ ಲಖಕ್​​ಗೆ ಈಗಾಗಲೇ ಬಿ ಫಾರಂ ನೀಡಿದೆ ಎಂದರು.

ಇದನ್ನೂ ಓದಿ: ‘ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಭಾರತದ ಅಕ್ರಮ ಆದೇಶ ತಿರಸ್ಕರಿಸಿ‘: ಯುಎನ್​​​ಗೆ ಪಾಕ್​​ ಪತ್ರ

ಬೆಳಗಾವಿಯ ಗೋಕಾಕ್​​ನಲ್ಲಿ ಈಗಾಗಲೇ ಬಿಜೆಪಿ ಅಭ್ಯರ್ಥಿಯಾಗಿ ರಮೇಶ್​​ ಜಾರಕಿಹೊಳಿಸಿ ನಾಮಪತ್ರ ಸಲ್ಲಿಸಿದ್ದಾರೆ. ಇತ್ತ ಕಾಂಗ್ರೆಸ್​ನಿಂದ ಲಖನ್​​ ಕಣಕ್ಕಿಳಿಸಿದರೆ, ಅತ್ತ ಜೆಡಿಎಸ್​​ನಿಂದ ಅಶೋಕ್ ಪೂಜಾರಿ ಕಣಕ್ಕೆ ಇಳಿಯುತ್ತಿದ್ದಾರೆ. ಮೂಲತಃ ಬಿಜೆಪಿ ಆಗಿರುವ ಇವರು ಗೋಕಾಕ್​ ಕ್ಷೇತ್ರದ ಟಿಕೆಟ್​ ಆಕಾಂಕ್ಷಿ ಆಗಿದ್ದರು. ಬಿಜೆಪಿಯಲ್ಲಿ ಅನರ್ಹ ರಮೇಶ್​ ಜಾರಕಿಹೊಳಿಗೆ ಟಿಕೆಟ್​ ನೀಡಿದ ಕಾರಣ, ಕಾಂಗ್ರೆಸ್​​ನಿಂದ ಟಿಕೆಟ್​ ಸಿಗಬಹುದು ಅಂದುಕೊಂಡಿದ್ದರು. ಆದರೆ, ಕಾಂಗ್ರೆಸ್​ ಲಖನ್​ ಜಾರಕಿಹೊಳಿಗೆ ಮಣೆ ಹಾಕಿತ್ತು. ಹೀಗಾಗಿ ಅಶೋಕ್​ರನ್ನು ಜೆಡಿಎಸ್​ನಿಂದ ಕಣಕ್ಕಿಳಿಸಿದ್ಧಾರೆ ಕುಮಾರಸ್ವಾಮಿ.

ಇದನ್ನೂ ಓದಿ: ಸಿಎಂಗೆ ತಲೆನೋವಾದ ಬಂಡಾಯ; ನಾಯಕರ ಮನವೊಲಿಸಲು ಬಿಎಸ್​ವೈ ಮಾಸ್ಟರ್ ಪ್ಲಾನ್

ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಬೀಳಿಸಲು ಕಾರಣವಾದ ಅನರ್ಹ ಶಾಸಕರಲ್ಲಿ ಬಹುತೇಕರು ಉಪಚುನಾವಣಾ ಕಣದಲ್ಲಿದ್ದಾರೆ. ಅನರ್ಹರನ್ನು ಸೋಲಿಸಲೇಬೇಕು ಎನ್ನುವ ಹಠಕ್ಕೆ ಬಿದ್ದಿರುವ ಮಾಜಿ ಮುಖ್ಯಮಂತ್ರಿಗಳಾದ ಎಚ್​ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ರಣತಂತ್ರ ರೂಪಿಸುತ್ತಿದ್ದಾರೆ. ಶಾಸಕರು ರೆಬೆಲ್​ ಆಗಲು ಮೂಲ ಕಾರಣ ಎಂದು ಹೇಳಲಾಗುತ್ತಿರುವ ರಮೇಶ್ ಜಾರಕಿಹೊಳಿಯನ್ನು ಸೋಲಿಸಿಯೇ ತೀರುತ್ತೇವೆ ಎಂದು ಶಪಥ ಮಾಡಿದ್ದಾರೆ.-----------
First published: November 19, 2019, 10:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading