ಯಾವುದೇ ಭಾಷೆಯಲ್ಲಿ (Language) ಒಂದು ಅಕ್ಷರ (Spelling) ಅತ್ತಿತ್ತವಾದರೂ ಪದಗಳ, ವಾಕ್ಯದ ಅಷ್ಟೇ ಯಾಕೆ ಸಂದರ್ಭ, ಪರಿಸ್ಥಿತಿಯ ಅರ್ಥವೇ ಬದಲಾಗಿ ಹೋಗುತ್ತದೆ. ಹೆಸರುಗಳನ್ನು ಬರೆಯುವಾಗಲೂ ಸಹ ಇಂತಹ ಹಲವಾರು ತಪ್ಪುಗಳು (Wrong) ನಡೆದು ಹೋಗ ಬಿಡುತ್ತವೆ. ಕೆಲವು ತಪ್ಪುಗಳು ಮೊದಲೇ ಗೊತ್ತಾಗುವ ಮೂಲಕ ನಡೆಯಬೇಕಾದ ಅನಾಹುತ ತಪ್ಪಿ ಹೋಗುತ್ತದೆ, ಇನ್ನೊಮ್ಮೆ ಈ ಸಣ್ಣ ತಪ್ಪುಗಳು ಅರಿವಿಗೆ ಬಾರದೆ ಇನ್ನಿಲ್ಲದ ಗೊಂದಲ (Confusing) ಸೃಷ್ಟಿಸಿ ಬಿಡುತ್ತವೆ. ಆಗಲೇ ಹೇಳಿದಂತೆ ಈ ಹೆಸರುಗಳಿನ ಅಕ್ಷರ ದೋಷ ಸಹ ಗೊಂದಲ ಸೃಷ್ಟಿಸಿಬಿಡುತ್ತದೆ ಎನ್ನುವುದಕ್ಕೆ ಸರ್ಕಾರ್ ಎಂಬ ಉಪನಾಮ ಹೊಂದಿರುವವರ ಪ್ರಕರಣ ಸಾಕ್ಷಿಯಾಗಿದೆ.
1971 ರಲ್ಲಿ ಅಂದಿನ ಪೂರ್ವ ಪಾಕಿಸ್ತಾನದಿಂದ ಪಲಾಯಾನ ಮಾಡಿದ ಸಾವಿರಾರು ಹಿಂದೂಗಳನ್ನು ಕರ್ನಾಟಕ ಸೇರಿದಂತೆ ಏಳು ರಾಜ್ಯಗಳ ನಿರಾಶ್ರಿತರ ಶಿಬಿರಗಳಲ್ಲಿ ಇರಿಸಲಾಗಿತ್ತು. ಮತ್ತು ಅವರಿಗೆ ಹೊಸ ಜೀವನ ಆರಂಭಿಸಲು ಪ್ರತಿ ಕುಟುಂಬಕ್ಕೆ ಐದು ಎಕರೆ ಭೂಮಿಯನ್ನು ಸಹ ನೀಡಲಾಗಿತ್ತು. ಹೀಗೆ ರಾಜ್ಯದಲ್ಲೂ ರಾಯಚೂರು ಸಿಂಧನೂರು ತಾಲೂಕಿನ ನಾಲ್ಕು ಪುನರ್ವಸತಿ ಶಿಬಿರಗಳಲ್ಲಿ ಸರ್ಕಾರ್ ಎಂಬ ಉಪನಾಮ ಹೊಂದಿರುವ ನಿರಾಶ್ರಿತ ಹಿಂದೂಗಳು ವಾಸಿಸುತ್ತಿದ್ದಾರೆ. ಮತ್ತು ಇವರಿಗೆ ಇಲ್ಲಿ ಐದು ಎಕರೆ ಭೂಮಿಯನ್ನು ನೀಡಲಾಗಿದೆ.
ಅಕ್ಷರದ ತಪ್ಪಿನ ಎಡವಟ್ಟು
ಕಂದಾಯ ಇಲಾಖೆ ಇತ್ತೀಚೆಗೆ ನಡೆಸಿದ ಒಂದು ಸರ್ವೇಯಲ್ಲಿ ಈ ಸರ್ಕಾರ್ ಉಪನಾಮ ಹೊಂದಿರುವ ಮೂರು ಪುನರ್ವಸತಿ ಶಿಬಿರಗಳಲ್ಲಿ ನೆಲೆಸಿರುವ ಇತರ 726 ಜನರ ಹಿಡುವಳಿ ಹಕ್ಕುಗಳು, ಹಿಡುವಳಿ ಮತ್ತು ಬೆಳೆಗಳ ದಾಖಲೆಗಳಲ್ಲಿ ಇವರ ಆಸ್ತಿಯನ್ನು ಸರ್ಕಾರ್ ಎಂದು ಉಲ್ಲೇಖಿಸುವ ಬದಲು ಸರ್ಕಾರಿ ಎಂದು ಉಲ್ಲೇಖಿಸಿದೆ ಮತ್ತು ಇದು ಸರ್ಕಾರಕ್ಕೆ ಸೇರಿದ ಆಸ್ತಿ ಎಂದು ನಮೂದಿಸಲಾಗಿದೆ. ಸದ್ಯ ಇಲಾಖೆಯ ಈ ಎಡವಟ್ಟು ಅಲ್ಲಿನ ರೈತರನ್ನು ಸಂಕಷ್ಟಕ್ಕೆ ದೂಡಿದೆ.
ಇದನ್ನೂ ಓದಿ: MBBS: ಉಕ್ರೇನ್‌ನಿಂದ ಭಾರತಕ್ಕೆ ಬಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ 1 ಬಾರಿ ಪರೀಕ್ಷೆ ಬರೆಯಲು ಅವಕಾಶ!
ವಿಭೂತಿ ಸರ್ಕಾರ್ ಆಸ್ತಿ ಈಗ ಸರ್ಕಾರದ ಪಾಲು
65 ವರ್ಷ ವಯಸ್ಸಿನ ರೈತ ವಿಭೂತಿ ಸರ್ಕಾರ್ ಕೂಡ ತಮ್ಮ ಹೆಸರಿನ ಅಕ್ಷರ ಬದಲಾವಣೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ್ ಎಂಬ ಸರ್‌ನೇಮ್ ಹೊಂದಿರುವ ಇವರ ಆಸ್ತಿಯು ಈಗ ಸರ್ಕಾರದ ಪಾಲಾಗಿದೆ. ಜೋಳದ ಬೆಳೆಗೆ ವಿಮಾ ಹಕ್ಕು ಪಡೆಯಲು ಹೋದಾಗ ಅರ್ಜಿ ತಿರಸ್ಕೃತಗೊಂಡಿದೆ. ಯಾಕೆ ಎಂದು ವಿಚಾರಿಸಿದ ನಂತರ ವಿಭೂತಿ ಸರ್ಕಾರ್ ಅವರಿಗೆ ತಮ್ಮ ಭೂಮಿಯನ್ನು ಸರ್ಕಾರಿ ಭೂಮಿ ಎಂದು ಗುರುತಿಸಲಾಗಿದೆ ಎಂದು ತಿಳಿದಬರುತ್ತದೆ..
ನಂತರ ಕೂಡಲೇ ವಿಷಯವನ್ನು ನಿರಾಶ್ರಿತರ ಪ್ರತಿನಿಧಿ ಪ್ರಸೇನ್ ರಪ್ತಾನ ಅವರಿಗೆ ವಿಭೂತಿ ತಿಳಿಸುತ್ತಾರೆ.
ಸಿಂಧನೂರು ತಾಲೂಕಿನ ಆರ್‌ಎಚ್2, ಆರ್‌ಎಚ್3, ಆರ್‌ಎಚ್4 ಮತ್ತು ಆರ್‌ಎಚ್5 ಎಂಬ ನಾಲ್ಕು ಪುನರ್ವಸತಿ ಶಿಬಿರಗಳಲ್ಲಿ ನೆಲೆಸಿರುವ 22,000ಕ್ಕೂ ಹೆಚ್ಚು ನಿರಾಶ್ರಿತರ ಪ್ರತಿನಿಧಿಯಾಗಿ ಪ್ರಸೇನ್ ರಪ್ತಾನ ಕಾರ್ಯ ನಿರ್ವಹಿಸುತ್ತಿದ್ದಾರೆ. ರಪ್ತಾನ ಕೂಡ ಕಳೆದ ಡಿಸೆಂಬರ್‌ನಲ್ಲಿ ವಿಭೂತಿ ಅವರ ಸಂಕಷ್ಟವನ್ನು ಮತ್ತು ‘ತಾಂತ್ರಿಕ ಸಮಸ್ಯೆ’ ಕುರಿತು ರಾಯಚೂರು ಡಿಸಿಗೆ ಪತ್ರ ಬರೆದಿದ್ದರು. ಇದನ್ನು ಒಂದು ತಿಂಗಳ ಹಿಂದೆ ಲಿಂಗಸೂಗೂರು ಸಹಾಯಕ ಆಯುಕ್ತರು ಡಿಸಿಗೆ ಪತ್ರಿಕಾಗೋಷ್ಠಿಯಲ್ಲಿ ವಿಷಯ ಮುಟ್ಟಿಸಿದ್ದಾರೆ.
ಇಲಾಖೆಯ ತಪ್ಪಿಗೆ ಕಂಗಾಲಾದ ರೈತರು
ಇಲಾಖೆಯ ಎಡವಟ್ಟಿಗೆ ಈಗ ಆರ್‌ಎಚ್ 2, 3 ಮತ್ತು 4 ರನ ಎಲ್ಲಾ ರೈತರು ತುತ್ತಾಗಿದ್ದಾರೆ. "ನಮ್ಮದಲ್ಲದ ತಪ್ಪಿಗಾಗಿ ನಾವು ಈ ವಿಚಿತ್ರ ಸಮಸ್ಯೆಯನ್ನು ಎದುರಿಸಬೇಕಾಗಿದೆ" ಎಂದು ಉಪನಾಮದಿಂದ ಸಂಕಷ್ಟಕ್ಕೀಡಾದ ಪಂಕಜ್ ಸರ್ಕಾರ್ ಬೇಸರ ವ್ಯಕ್ತಪಡಿಸಿದ್ದಾರೆ. ತಹಸೀಲ್ದಾರ್ ಜತೆ ಮಾತನಾಡಿದ್ದೇವೆ, ಆದರೆ ಅವರು ಸಾಫ್ಟ್‌ವೇರ್ ಸಮಸ್ಯೆ ಇದ್ದು, ಬೆಂಗಳೂರಿನಲ್ಲಿ ಸರಿಪಡಿಸಬೇಕು ಎಂದ ಹೇಳಿದ್ದಾರೆ. ಸರ್ಕಾರ ಸೃಷ್ಟಿಸಿರುವ ಸಮಸ್ಯೆ ಬಗೆಹರಿಸಲು ನಾವು ಹಣ ಖರ್ಚು ಮಾಡಿಕೊಂಡು ಬೆಂಗಳೂರಿಗೆ ಹೋಗಬೇಕಿದೆ ಎಂದು ಸರ್ಕಾರವನ್ನು ದೂಷಿಸಿದರು.
ಸಿಂಧನೂರು ತಹಸೀಲ್ದಾರ್ ಅರುಣ್, ಈ ಸಮಸ್ಯೆಯನ್ನು ಈಗಾಗಲೇ ಭೂಮಿ ಪೋರ್ಟಲ್‌ನಲ್ಲಿ ಸರ್ವೆ ಸೆಟ್ಲ್‌ಮೆಂಟ್ ಮತ್ತು ಭೂ ದಾಖಲೆಗಳ ಇಲಾಖೆಗೆ ಬದಲಾವಣೆ ಮಾಡುವಂತೆ ಡಿಸಿ ಗಮನಕ್ಕೆ ತಂದಿದ್ದಾರೆ. ಸಿಂಧನೂರು ತಹಸೀಲ್ದಾರ್ ಅರುಣ್ ಮಾತನಾಡಿ, ಭೂಮಿ ಪೋರ್ಟಲ್‌ನಲ್ಲಿ ಶುಲ್ಕ ಪಾವತಿಸಲು ಈಗಾಗಲೇ ಭೂಮಾಪನ ಮತ್ತು ಭೂದಾಖಲೆ ಇಲಾಖೆಯ ಗಮನಕ್ಕೆ ತಂದಿದ್ದಾರೆ ಎಂದು ಹೇಳಿದ್ದಾರೆ,
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ