ಉತ್ತರಿ ಬಿಸಿಲಿಗೆ ಮೈಯೊಡ್ಡಿದ ಪಿತಾಂಬರ: ಮನೆಯಂಗಳದಲ್ಲಿ ಬಗೆ ಬಗೆಯ ರೇಷ್ಮೆ ಸೀರೆಗಳ ಅಬ್ಬರ..!

news18
Updated:September 25, 2018, 1:23 PM IST
ಉತ್ತರಿ ಬಿಸಿಲಿಗೆ ಮೈಯೊಡ್ಡಿದ ಪಿತಾಂಬರ: ಮನೆಯಂಗಳದಲ್ಲಿ ಬಗೆ ಬಗೆಯ ರೇಷ್ಮೆ ಸೀರೆಗಳ ಅಬ್ಬರ..!
  • Advertorial
  • Last Updated: September 25, 2018, 1:23 PM IST
  • Share this:
- ಸಂತೋಷ್ ಕೊಣ್ಣೂರ, ನ್ಯೂಸ್ 18 ಕನ್ನಡ

ಗದಗ ( ಸೆ. 25) :  ಬಿಸಿಲು ಅಂದ್ರೆ ಎಂಥವರು ಉಸ್​ ಅಂತಾ.. ಸಾಕಪ್ಪಾ ಅಂತಾರೆ. ಅದ್ರಲ್ಲೂ ಉತ್ತರ ಕರ್ನಾಟಕದ ಕಡೆಯ ಉತ್ತರಿ ಬಿಸಿಲು ಅಂದ್ರೆ ಕೇಳಬೇಕಾ..? ಆದ್ರೆ ಈ ಜಿಲ್ಲೆಯಲ್ಲಿ ಮಾತ್ರ ಲಕ್ಷಾಂತರ ಬೆಲೆ ಬಾಳುವ ಪೀತಾಂಬರ ಮಿಶ್ರಿತ ಸೀರೆಗಳು ಅಂಗಳಕ್ಕೆ ಬಂದಿವೆ. ಗದಗ-ಬೆಟಗೇರಿ ನಗರದಲ್ಲಿ ಉತ್ತರಿ ಬಿಸಿಲು ಆರಂಭವಾಗುತ್ತಿದ್ದಂತೆ ಲಕ್ಷಾಂತರ ಬೆಲೆ ಬಾಳುವ ಪಿತಾಂಬರ ಮಿಶ್ರಿತ ರೇಷ್ಮೆ ಸೀರೆ, ಬಟ್ಟೆ ಬರೆಗಳನ್ನು ಒಣಗಿಸುತ್ತಾರೆ.

ರೇಷ್ಮೆ ಬಟ್ಟೆಗಳನ್ನು ಸಾಮಾನ್ಯವಾಗಿ ನೀರಿನಲ್ಲಿ ತೊಳೆಯುವುದಿಲ್ಲ. ಹೀಗಾಗಿ ಅಂಥಹ ಬಟ್ಟೆಗಳನ್ನು ವರ್ಷಗಟ್ಟಲೇ ಮಡಚಿ ಇಟ್ಟಿರುತ್ತಾರೆ. ಉತ್ತರಿ ಬಿಸಿಲಿಗೆ ಬಟ್ಟೆ ಒಣಗಿಸಿದ್ರೆ ಬಟ್ಟೆಗಳನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಹೊಳಪೂ ಹೆಚ್ಚುತ್ತದೆ, ವಾಸನೆಯೂ ಹೋಗುತ್ತದೆ

ಶುಭ ಸಮಾರಂಭ, ಹಬ್ಬ-ಹರಿದಿನಗಳಲ್ಲಿ ಆಗೊಂದು ಇಗೊಂದು ತೆಗೆದುಕೊಂಡ ಪಿತಾಂಬಗಳನ್ನ ಉತ್ತರಿ ಬಿಸಲಿಗೆ ಒಣಗಿಸುವ ನೆಪದಲ್ಲಿ ಒಮ್ಮೆಲೆ ಹೊರತೆಗೆದಾಗ ಎಲ್ಲವನ್ನು ನೋಡಿ ಸಖತ್ ಖುಷಿ ಪಡ್ತಾರೆ. ಬಗೆ ಬಗೆಯ ರೇಷ್ಮೆ ಸೀರೆಗಳನ್ನ ನೋಡಿ ಸಂತೋಷವಾಗುತ್ತೆ ಅಂತಿದ್ದಾರೆ ಗದುಗಿನ ಮಹಿಳಾ ಮಣಿಗಳು

ಉತ್ತರಿ ಬಿಸಿಲಿಗೆ ಉಂಟು ವೈಜ್ಞಾನಿಕ ನಂಟು..!

ಈ ಉತ್ತರಿ ಬಿಸಿಲಿಗೆ ವೈಜ್ಞಾನಿಕ ಕಾರಣವೂ ಇದೆ. ಮುಂಗಾರು ಮತ್ತು ಹಿಂಗಾರು ಮಧ್ಯ ಭಾಗದಲ್ಲಿ ಬರುವ ಈ ಉತ್ತರಿ ಮಳೆ ಹಾಗೂ ಬಿಸಿಲು ತುಂಬಾ ಪ್ರಯೋಜನಕಾರಿಯಾದದ್ದು. ಅಲ್ಟ್ರಾ ರೇಗ್ ಕಿರಣಗಳು ಈ ಬಿಸಿಲಿನಲ್ಲಿ ಅಡಕವಾಗಿರುತ್ತವೆ. ಹಾಗಾಗಿ ಬಟ್ಟೆಗಳಿಗೆ ಹೆಚ್ಚಿನ ಪ್ರಕರತೆ ಬರುತ್ತೆ, ಸುರಕ್ಷಿತವಾಗಿದ್ದು, ಹೊಳಪು ಹೆಚ್ಚುತ್ತವೆ.

ಯಾವುದೇ ಗೆದ್ದಲು, ನುಶಿ ಸೇರಿದಂತೆ ಇತರೆ ಕ್ರಿಮಿಕಿಟ ಹುಳುಗಳಿಂದ ಹಾಳಾಗುವುದಿಲ್ಲ ಎಂಬ ವೈಜ್ಞಾನಿಕ ಕಾರಣವೂ ಇದೆ. ಕ್ರೀಮಿನಾಶಕ ಶಕ್ತಿ ಹೊಂದಿರುವ ಕಿರಣಗಳು ಈ ಬಿಸಿನಲ್ಲಿದೆ. ಹೀಗಾಗಿ 15 ದಿನಗಳ ಅವಧಿಯ ಈ ಉತ್ತರಿ ಮಳೆ ಹಾಗೂ ಬಿಸಿಲು ರೈತರು ಹಾಗೂ ಪಿತಾಂಬರವುಳ್ಳವರ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ ಅಂತಿದ್ದಾರೆ ಹಿರಿಯ ನಾಗರಿಕರು.ಬಹುತೇಕರ ಮನೆಯ ಪೆಟ್ಟಿಗೆ ಸೇರಿದ್ದ ಕಲರ್ ಕಲರ್ ಪಿತಾಂಬರ, ರೇಷ್ಮೇ ಸೀರೆಯಂತ ಲಕ್ಷಾಂತರ ಬೆಲೆ ಬಾಳುವ ಬಟ್ಟೆಗಳನ್ನು ಮನೆಯಂಗಳದಲ್ಲಿ ಹಾಕಿ ಒಣಗಿಸುತ್ತಿದ್ದಾರೆ. ಉತ್ತರಿ ಕೇವಲ ರೈತನ ಬೆಳೆಗಷ್ಟೆ ಅಲ್ಲದೇ ಬೆಲೆಬಾಳುವ ಬಟ್ಟೆ ಖರೀದಿಸಿದವರಿಗೂ ಬಿಸಿಲ ಪ್ರಖರತೆ ಪ್ರಾಮುಖ್ಯತೆ ಪಡೆದಿದೆ. ಹೀಗಾಗಿ ಬಹುತೇಕರ ಮನೆಯಂಗಳಗಳು ಬೆಲೆಬಾಳುವ ಬಟ್ಟೆಗಳಿಂದ ಅಲಂಕೃತವಾಗಿರೋ ದೃಷ್ಯಗಳು ಸಾಮಾನ್ಯವಾಗಿವೆ.

 
First published:September 25, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ