ಮೈಸೂರು: ಮೊನ್ನೆ ಪೊಲೀಸರ (Mysuru Police) ಬಲೆಗೆ ಸಿಕ್ಕಿಬಿದ್ದು ಅಂದರ್ ಆಗಿದ್ದ ಕಿರಾತಕ ಸ್ಯಾಂಟ್ರೋ ರವಿ ಅಲಿಯಾಸ್ ಕೆಎಸ್ ಮಂಜುನಾಥ್ (Santro Ravi) ಜೈಲು ಸೇರಿದ್ದು, ಜೈಲಿಗೆ ಹೋಗೋ ಮುನ್ನ ಎಲ್ಲರ ಜಾತಕ ಬಿಚ್ಚಿಡ್ತೀನಿ ಅಂತ ಪೊಲೀಸರಿಗೆ ಆವಾಜ್ ಹಾಕಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಹೌದು, ಹೆಣ್ಣುಮಕ್ಕಳ ಪಾಲಿನ ದುಶ್ಯಾಸನ (Human Trafficking), ರಾಜಕಾರಣಿಗಳ ಪಾಲಿನ ಬ್ರೋಕರ್ (Political Connections), ಅಧಿಕಾರಿಗಳ ಪಾಲಿಗೆ ಮಧ್ಯವರ್ತಿ, 2005ರಿಂದಲೂ ಕಳ್ಳತನ, ದರೋಡೆ, ಬೆದರಿಕೆ, ಅತ್ಯಾಚಾರ (Escort Services), ಸೇರಿ ಹಲವು ಪ್ರಕರಣಗಳ ಆರೋಪಿ ಸ್ಯಾಂಟ್ರೋ ರವಿ ಜೈಲುಪಾಲಾಗಿದ್ದಾನೆ. ಮೈಸೂರು ಜೆಎಂಎಫ್ಸಿ ಕೋರ್ಟ್ ಸ್ಯಾಂಟ್ರೋ ರವಿಯನ್ನ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
‘ಎಲ್ಲರ ಜಾತಕ ನನ್ನತ್ರ ಇದೆ ಏನ್ ಮಾಡ್ಬೇಕು ಗೊತ್ತಿದೆ’
ಗುಜರಾತ್ನ ಅಹ್ಮದಾಬಾದ್ನಲ್ಲಿ ಬಂಧಿಸಿ ಕರೆತಂದ್ಮೇಲೆ ಮೈಸೂರಲ್ಲಿ ರವಿಗೆ ಫುಲ್ ಡ್ರಿಲ್ ನಡೀತು. ವಿಚಾರಣೆ ಎದುರಿಸ್ತಿರೋ ಬ್ರೋಕರ್ ರವಿ ಖಾಕಿಗೆ ಆವಾಜ್ ಹಾಕಿದ್ದಾನೆ. ಪೊಲೀಸರು ಬ್ರೋಕರ್ ರವಿ ಎನ್ಕ್ವೇರಿಗೆ ಹೋದಾಗ ‘ಎಲ್ಲರ ಜಾತಕ ನನ್ನತ್ರ ಇದೆ ಏನ್ ಮಾಡ್ಬೇಕು ಗೊತ್ತಿದೆ ಅಂತ ಜೋರು ಮಾಡಿದ್ದಾನೆ.
ಸಿಕ್ಕೇಬಿಡ್ತಾ ಸ್ಯಾಂಟ್ರೋ ರವಿಯ ಆ 2 ಫೋನ್ಗಳು?
ಪೊಲೀಸ್ ಮೂಲಗಳ ಪ್ರಕಾರ ಸ್ಯಾಂಟ್ರೋ ರವಿಯ 2 ಫೋನ್ಗಳು ಸಿಕ್ಕಿವೆ. ಯಾಱರ ಜೊತೆ ಸಂಪರ್ಕದಲ್ಲಿದ್ದ. ಯಾವ್ಯಾವ ಮಂತ್ರಿಗಳು, ಶಾಸಕರು, ಅಧಿಕಾರಿಗಳು, ಹಾಲಿ ಮಾಜಿಗಳಿಗೆ ಹೆಣ್ಣು ಮಕ್ಕಳನ್ನು ಸಪ್ಲೈ ಮಾಡಿದ್ದ ಪ್ರತಿಯೊಂದು ಸಾಕ್ಷಿಗಳಿದ್ದ 3 ಫೋನ್ಗಳನ್ನ ಸೀಜ್ ಮಾಡಿದ್ದಾರೆ. ಫೋನ್ನಲ್ಲಿರೋ ಡೇಟಾ ಫೋಟೋ, ವಿಡಿಯೋಗಳೆಲ್ಲಾ ಡಿಲೀಟ್ ಆಗಿದ್ದು ರಿಕವರಿ ಮಾಡೋಕೆ FSLಗೆ ರವಾನಿಸಿದ್ದಾರೆ.
ರಾಯಚೂರಲ್ಲಿ ಸ್ಯಾಂಟ್ರೋ ವಕೀಲ ಸಿಕ್ಕಿಬಿದ್ದ
ರಾಯಚೂರಲ್ಲಿ ಸ್ಯಾಂಟ್ರೋ ವಕೀಲ ಸಿಕ್ಕಿಬಿದ್ದಿದ್ದ, ಮಂತ್ರಾಲಯಕ್ಕೆ ಬಂದಿದ್ದಾಗ ಚೇತನ್ನನ್ನ ಬಂಧಿಸಿದ್ದರು. ರಾಯಚೂರು SP ನಿಖಿಲ್ ಟೀಂನಿಂದ ವಿಚಾರಣೆ ನಡೆಸಿದಾಗ ಗುಜರಾತ್ನಲ್ಲಿರೋ ಬಗ್ಗೆ ಚೇತನ್ಬಾಯ್ಬಿಟ್ಟಿದ್ದ. ತಕ್ಷಣ ಎಡಿಜಿಪಿಗೆ SP ನಿಖಿಲ್ ಮಾಹಿತಿ ಕೊಟ್ರು. ಆಗ ರಾಮನಗರ ಎಸ್ಪಿ ಸಂತೋಷ್ಬಾಬು ಎಂಟ್ರಿಯಾಗಿದ್ದರು.
ಅಹ್ಮದಾಬಾದ್ ಡಿಸಿಪಿ ಚೈತನ್ಯ ಮಾಂಡಲಿಕ್ ಸಂಪರ್ಕಿಸಿದ್ದರು. 2011ರ ಬ್ಯಾಚ್ನಲ್ಲಿದ್ದ ಸಂತೋಷ್ ಆಪ್ತ ಚೈತನ್ಯರಿಗೆ ಎಲ್ಲಾ ಮಾಹಿತಿ ಕಳುಹಿಸಿದ್ದರು. ಆಗ ಡಿಸಿಪಿ ಚೈತನ್ಯ ಅಹ್ಮದಾಬಾದ್ನಲ್ಲಿ ಮಫ್ತಿಯಲ್ಲಿ ಕ್ರೈಂ ಬ್ರಾಂಚ್ ಕಳಿಸಿ ಹುಡುಕಾಡಿದಾಗ ರವಿ ಸಿಕ್ಕಿಬಿದ್ದ. ಸ್ಯಾಂಟ್ರೋ ರವಿ ಕಣ್ಣು ನೋಡಿ ಗುರುತು ಇವನೇ ಅವನು ಅಂತ ಸಂತೋಷ್ಬಾಬು ಗುರುತು ಹಿಡಿದರಂತೆ.
ಸಕ್ಕರೆ ಕಾಯಿಲೆಯಿಂದ ಸ್ಯಾಂಟ್ರೋ ರವಿ ನರಳಾಟ
ಸ್ಯಾಂಟ್ರೋ ರವಿ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗ್ತಿದ್ದ. ಪೊಲೀಸರಿಗೆ ಅನುಮಾನ ಬಂದು ವಿಚಾರಣೆ ಮಾಡಿದರು. ಆಗ ನನಗೆ ಶುಗರ್ ಇದೆ ಅಂದಿದ್ದಾನೆ. ವೈದ್ಯರನ್ನ ಕರೆಸಿ ಚೆಕ್ ಮಾಡ್ದಾಗ ಹೈಶುಗರ್ ಇರೋದು ಗೊತ್ತಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: Lovers: ಪ್ರೇಯಸಿಯನ್ನೇ ಕೊಂದು ಆತ್ಮಹತ್ಯೆ ಮಾಡಿಕೊಂಡನಾ ಪ್ರಿಯತಮ? ಪ್ರೇಮಿಗಳ ಸಾವಿನ ಸುತ್ತ ಅನುಮಾನದ ಹುತ್ತ
ಸ್ಯಾಂಟ್ರೋ ರವಿ ಸದ್ಯಕ್ಕೆ ಜೈಲುಪಾಲಾಗಿದ್ದಾನೆ. ಶುಗರ್ನಿಂದ ನರಳಾಡ್ತಿರೋ ಕಿರಾತಕನಿಗೆ ಸದ್ಯಕ್ಕೆ ವಿಶ್ರಾಂತಿ. ಇಂದು ಪೊಲೀಸರು ಸಂಕ್ರಾಂತಿ ಹಬ್ಬ ಮಾಡಲಿದ್ದು, ಯಾವ್ಯಾವ ರಾಜಕಾರಣಿಗಳು, ಅಧಿಕಾರಿಗಳ ಬಣ್ಣ ಬಯಲಾಗುತ್ತೋ ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ