ಗುಜರಾತ್: ಕರ್ನಾಟಕ ರಾಜ್ಯ ರಾಜಕೀಯದಲ್ಲಿ (Karnataka state politics) ಅಲ್ಲೋಲ ಕಲ್ಲೋಲ ಎಬ್ಬಿಸಿದ್ದ ಸ್ಯಾಂಟ್ರೋ ರವಿಯನ್ನು (Santro Ravi) ಕೊನೆಗೂ ಬಂಧಿಸಲಾಗಿದೆ. ಮೈಸೂರಿನಲ್ಲಿ (Mysuru) ಕೇಸ್ ಮೇಲೆ ಕೇಸ್ ದಾಖಲಾಗುತ್ತಿದ್ದಂತೆ ಸ್ಯಾಂಟ್ರೋ ರವಿ ರಾಜ್ಯದಿಂದಲೇ ಎಸ್ಕೇಪ್ ಆಗಿದ್ದ. ಈ ವೇಳೆ ಸ್ಯಾಂಟ್ರೋ ರವಿ ವಿದೇಶಕ್ಕೆ ಹಾರಿರಬಹುದು ಎನ್ನುವ ಬಗ್ಗೆಯೂ ಶಂಕಿಸಲಾಗಿತ್ತು. ಆದರೆ ಇದೀಗ ಸ್ಯಾಂಟ್ರೋ ರವಿಯನ್ನು ಗುಜರಾತ್ನಲ್ಲಿ (Gujarat) ಬಂಧಿಸಲಾಗಿದೆ ಅಂತ ಪೊಲೀಸ್ ಮೂಲಗಳು ತಿಳಿಸಿವೆ.
ಗುಜರಾತ್ನಲ್ಲಿ ಸ್ಯಾಂಟ್ರೋ ರವಿ ಅರೆಸ್ಟ್
ಸ್ಯಾಂಟ್ರೋ ರವಿ ಬಂಧನದ ಬಗ್ಗೆ ಡಿಜಿಪಿ ಪ್ರವೀಣ್ ಸೂದ್ ನ್ಯೂಸ್ 18 ಕನ್ನಡಕ್ಕೆ ಸ್ಪಷ್ಟನೆ ನೀಡಿದ್ದಾರೆ. ಸ್ಯಾಂಟ್ರೋ ರವಿಯನ್ನ ಬಂಧನ ಮಾಡಲಾಗಿದೆ. ಗುಜಾರಾತ್ ಅಹಮದಾಬಾದ್ನಲ್ಲಿ ಸ್ಯಾಂಟ್ರೋ ರವಿಯನ್ನು ಬಂಧಿಸಲಾಗಿದೆ. ಮೈಸೂರು ಪೊಲೀಸರು ಗುಜರಾತ್ಗೆ ತೆರಳಿದ್ದು, ಆತನನ್ನು ಬಂಧಿಸಿದ್ದಾರೆ. ಗುಜರಾತ್ನಿಂದ ಇದೀಗ ಆತನನ್ನು ಕರೆತರುವ ಪ್ರಕ್ರಿಯೆ ನಡೆಯುತ್ತಿದೆ ಅಂತ ಸ್ಪಷ್ಟನೆ ನೀಡಿದ್ದಾರೆ.
ಗುಜರಾತ್ಗೆ ಹೋಗಿದ್ದು ಹೇಗೆ ಸ್ಯಾಂಟ್ರೋ ರವಿ?
ಸ್ಯಾಂಟ್ರೋ ರವಿ ಕಳೆದ ತಿಂಗಳು 3ನೇ ತಾರೀಖಿನವರೆಗೂ ಬೆಂಗಳೂರಿನಲ್ಲೇ ಇದ್ದ. ಬೆಂಗಳೂರಿನ ಗಾಂಧಿನಗರದ ಬಳಿ ಖಾಸಗಿ ಹೋಟೆಲ್ ನಲ್ಲಿ ರೋಮ್ ಮಾಡಿಕೊಂಡು ಇದ್ದ. ನಂತರ ಖಾಸಗಿ ಬಸ್ ಮುಖಾಂತರವಾಗಿ ಕೇರಳಕ್ಕೆ ಪ್ರಯಾಣ ಬೆಳೆಸಿದ್ದ. ಬಳಿಕ ಕೇರಳದಿಂದ ಗುಜರಾತ್ಗೆ ವಿಮಾನ ಮೂಲಕ ಪ್ರಯಾಣಿಸಿದ್ದ. ಅಲ್ಲಿ ಅಹಮದಾಬಾದ್ನಲ್ಲಿ ಇದ್ದ ಎನ್ನಲಾಗಿದೆ.
ಇದನ್ನೂ ಓದಿ: Santro Ravi: ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದ! ಮಂಜುನಾಥ ಆಗಿದ್ದವ 'ಸ್ಯಾಂಟ್ರೋ ರವಿ' ಹೇಗಾದ?
ಸ್ಯಾಂಟ್ರೋ ರವಿಗಾಗಿ ಪೊಲೀಸರಿಂದ ಶೋಧ
ಕಳೆದ ಒಂದು ವಾರದಿಂದ ಸ್ಯಾಂಟ್ರೋ ರವಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದರು. ಮೈಸೂರು ಕಮೀಷನರ್ ನಾಲ್ವರು ಎಸ್ ಪಿ ಗಳ ನೇತೃತ್ವದಲ್ಲಿ ತಂಡಗಳ ರಚನೆ ಮಾಡಲಾಗಿತ್ತು. ನಾಲ್ವರು ಎಸ್ಪಿಗಳ ಜೊತೆಗೆ ಬೆಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ಕಾರ್ಯಾಚರಣೆಯಲ್ಲಿ ಸುಮಾರು 100_ಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಿದ್ದರು. ಮೈಸೂರು, ಬೆಂಗಳೂರು, ಬೆಂಗಳೂರು ಹೊರವಲಯ ಎಲ್ಲಾ ಕಡೆ ಶೋಧಿಸಲಾಗಿತ್ತು. ಆದ್ರೂ ಯಾವುದೇ ಮಾಹಿತಿ ಪೊಲೀಸರಿಗೆ ಸಿಕ್ಕಿರಲಿಲ್ಲ.
ರವಿ ಜೊತೆ ಸಂಪರ್ಕದಲ್ಲಿದ್ದವರ ಮೇಲೆ ನಿಗಾ
ಕೊನೆಗೆ ಆತನ ತೀರಾ ಹತ್ತಿರದ ಸಂಬಂಧಿಗಳ ಮೇಲೆ ನಿಗಾ ಇರಿಸಲಾಗಿತ್ತು. ಆತನ ಮೊಬೈಲ್ ನಂಬರ್ ಸಿಡಿಆರ್ ಪರಿಶೀಲನೆ ಮಾಡಿದ್ದ ಪೊಲೀಸರು, ಕಳೆದ 6 ತಿಂಗಳ ಕಾಲ್ ಡಿಟೇಲ್ಸ್ ತೆಗೆಸಿ ಪರಿಶೀಲಿಸಿದ್ದರು. ಈ ವೇಳೆ ಅದ್ರಲ್ಲಿ ಯಾರೆಲ್ಲ ಜೊತೆ ನಿರಂತರ ಸಂಪರ್ಕದಲ್ಲಿದ್ದ ಅನ್ನೋ ನಂಬರ್ ಗಳ ಪರಿಶೀಲನೆ ಮಾಡಲಾಗಿತ್ತು. ಹೀಗೆ ಹಲವಾರು ನಂಬರ್ ಗಳ ಮೇಲೆ ನಿಗಾ ಇಡಲಾಗಿತ್ತು.
ನಿನ್ನೆ ರಾತ್ರಿ ಗುಜರಾತ್ನಿಂದ ಬಂದಿತ್ತು ಫೋನ್ ಕಾಲ್!
ಈ ನಡುವೆಯೇ ಕಳೆದ ರಾತ್ರಿ ಗುಜರಾತ್ನಿಂದ ಒಂದು ಕರೆ ಬಂದಿತ್ತು. ಹೀಗಾಗಿ ಆಲೋಕ್ ಕುಮಾರ್ ನೇತೃತ್ವದಲ್ಲಿ ಪೊಲೀಸರ ತಂಡವು ಕಾರ್ಯಾಚರಣೆಗೆ ಇಳಿದಿತ್ತು. ಸ್ಯಾಂಟ್ರೋ ರವಿ ಅಹಮದಾಬಾದ್ನಲ್ಲಿ ಇದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ 2 ಪೋಲಿಸರ ತಂಡ ಗುಜರಾತ್ಗೆ ಭೇಟಿ ನೀಡಿತ್ತು. ಈ ವೇಳೆ ಗುಜರಾತ್ನ ಅಹಮದಾಬಾದ್ನಲ್ಲಿ ಖಾಸಗಿ ಹೋಟೆಲ್ನಲ್ಲಿ ರವಿ ಇದ್ದ ಎನ್ನಲಾಗಿದೆ. ಇದೀಗ ರವಿಯನ್ನು ಪೊಲೀಸರು ಬಂಧಿಸಿದ್ದಾರೆ.
ಯಾರು ಈ ಸ್ಯಾಂಟ್ರೋ ರವಿ?
ಸ್ಯಾಂಟ್ರೋ ರವಿ ಅಸಲಿ ಹೆಸರು ರವಿಯೇ ಅಲ್ಲ. ಆತನ ನಿಜವಾದ ಹೆಸರು ಮಂಜುನಾಥ್ ಕೆಎಸ್. ಸದ್ಯ 53 ವರ್ಷದ ಈ ವ್ಯಕ್ತಿ ಕರ್ನಾಟಕದ ಮಂಡ್ಯ ಮೂಲದವನು. ಅವರು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಾಗಿದ್ದು, ಅವರ ತಂದೆ ಅಬಕಾರಿ ಇಲಾಖೆಯಲ್ಲಿ ಉಪ ಅಧೀಕ್ಷಕ ಶ್ರೇಣಿಯ ಅಧಿಕಾರಿಯಾಗಿದ್ದರು. ಅಬಕಾರಿ ಇಲಾಖೆ ಇನ್ಸ್ಪೆಕ್ಟರ್ ಆಗಿದ್ದ ತಂದೆ ಶಿಸ್ತಿನಲ್ಲಿ ಬೆಳೆಸಿದ್ದರೆ, ಮಂಜುನಾಥ್ ಆಗಲೇ ದಾರಿ ತಪ್ಪಿದ್ದ ಅಂತಾರೆ ಹತ್ತಿರದಿಂದ ಬಲ್ಲವರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ