ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಕೆ.ಎಸ್.ಮಂಜುನಾಥ ಅಲಿಯಾಸ್ ಸ್ಯಾಂಟ್ರೋ ರವಿ (Santro Ravi Arrest) ಕೊನೆಗೂ ಪೊಲೀಸ್ (Mysuru Police) ಬಲೆಗೆ ಬಿದ್ದಿದ್ದಾನೆ. ಕಳೆದ 11 ದಿನಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ದೂರದ ಗುಜರಾತ್ನ ವಡೋದರಾದಲ್ಲಿ (Gujarat Vadodara) ಮೈಸೂರು ಪೊಲೀಸರು ಬಂಧಿಸಿದ್ದಾರೆ. ಪತ್ನಿ ದೂರು ನೀಡಿದ ಬಳಿಕ ಎಸ್ಕೇಪ್ ಆಗಿದ್ದ ರವಿಯ ಫೋನ್ ಮೈಸೂರಿನಲ್ಲಿ ಸ್ವಿಚ್ ಆಫ್ ಆಗಿತ್ತು. ಕಳೆದ 3ನೇ ತಾರೀಖಿನವರೆಗೂ ಸ್ಯಾಂಟ್ರೋ ರವಿ ಬೆಂಗಳೂರಲ್ಲೇ ಇದ್ದ. ಗಾಂಧಿನಗರ ಬಳಿ ಖಾಸಗಿ ಹೋಟೆಲ್ನಲ್ಲಿ ರೂಂ ಮಾಡಿಕೊಂಡಿದ್ದ. ನಂತರ ಖಾಸಗಿ ಬಸ್ ಮೂಲಕ ಕೇರಳಕ್ಕೆ (Kerala) ಪ್ರಯಾಣಿಸಿದ್ದ. ಕೇರಳದಿಂದ ಗುಜರಾತ್ಗೆ ವಿಮಾನ ಹತ್ತಿದ್ದ. ಆದರೂ ಕೆಲ ಆಪ್ತರ ಜೊತೆ ಸ್ಯಾಂಟ್ರೋ ರವಿ ಸಂಪರ್ಕದಲ್ಲಿದ್ದ. ಮೊಬೈಲ್ ಆನ್ ಮಾಡ್ತಿರಲಿಲ್ಲ. ಎಟಿಎಂ ಕಾರ್ಡ್ ಬಳಸುತ್ತಿರಲಿಲ್ಲ. ಆನ್ಲೈನ್ ಪೇಮೆಂಟ್ ಮಾಡದೆ ಎಲ್ಲರನ್ನೂ ರವಿ ಯಾಮಾರಿಸಿದ್ದ. ಆದರೆ, ಆಪ್ತರನ್ನ ಸಂಪರ್ಕಿಸಿ ರವಿ ಸೆರೆಯಾಗಿದ್ದಾನೆ.
ಕಾಂಗ್ರೆಸ್ ಸರಣಿ ಟ್ವೀಟ್
ಸ್ಯಾಂಟ್ರೋ ರವಿ ಬಂಧನ ಬೆನ್ನಲ್ಲೇ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ. ದೇಶದ ಈಗಿನ ಎಲ್ಲಾ ವಂಚಕರಿಗೂ ಗುಜರಾತ್ ನಂಟು ಇರುವುದೇಕೆ? ಇದೆಲ್ಲವೂ "ಗುಜರಾತ್ ಮಾಡೆಲ್" ಪ್ರಭಾವವೇ? ಗೃಹಸಚಿವ ಹೋಗಿದ್ದಕ್ಕೂ, ರವಿ ಬಂಧನಕ್ಕೂ ಕಾಕತಾಳೀಯನಾ? ರವಿ ಗೃಹಸಚಿವರೊಂದಿಗೆ ಅಲ್ಲಿಗೆ ಹೋಗಿದ್ದನೇ?
ಇದನ್ನೂ ಓದಿ: Santro Ravi Arrest: ಕೊನೆಗೂ ಖಾಕಿ ಬಲೆಗೆ ಬಿದ್ದ ಸ್ಯಾಂಟ್ರೋ ರವಿ! ಗುಜರಾತ್ನಲ್ಲಿ ಆರೋಪಿ ಅರೆಸ್ಟ್
'@JnanendraAraga ಅವರೇ,
◆ಗುಜರಾತಿನಲ್ಲಿ ಸ್ಯಾಂಟ್ರೋ ರವಿ ನಿಮ್ಮ ಮದ್ಯೆ ನಡೆದ ಡೀಲಿಂಗ್ ಏನು?
◆ವರ್ಗಾವಣೆ ದಂಧೆಯ ಸಾಕ್ಷ್ಯಗಳನ್ನು ಮುಚ್ಚಿಡಲು ಒಪ್ಪಂದ ಮಾಡಿಕೊಂಡಿರಾ?
◆ಆತನ ಬಳಿ ಇದ್ದ ಹಲವು ಸಚಿವರ ಸಿಡಿಗಳನ್ನ ವಶಪಡಿಸಿಕೊಳ್ಳಲು ಹೋಗಿದ್ರಾ?
◆ಅಥವಾ ಹೈಕಮಾಂಡ್ಗೆ ಭೇಟಿ ಮಾಡಿಸಿ ಆತನಿಗೆ ಉನ್ನತ ಹುದ್ದೆ ಕೊಡಿಸಲು ಹೋಗಿದ್ರಾ?
— Karnataka Congress (@INCKarnataka) January 13, 2023
ಗುಜರಾತ್ ಗೆ ನಿನ್ನೆ ಪ್ರವಾಸ ಕೈಗೊಂಡಿದ್ದ ವೇಳೆ, ಪೊಲೀಸ್ ಹೆಡ್ ಕ್ವಾರ್ಟರ್ಸ್ ಗೆ ಭೇಟಿ ನೀಡಲಾಗಿತ್ತು. ಅಲ್ಲಿನ ಡಿಜಿ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಕ್ಷಣ.@BSBommai pic.twitter.com/SPaxghxdfn
— Araga Jnanendra (@JnanendraAraga) January 13, 2023
ಅಂದಹಾಗೇ, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಗುಜರಾತ್ಗೆ ಹೋಗಿದ್ದು ರಾಜ್ಯದಲ್ಲಿ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆಗೆ ಸಂಬಂಧಪಟ್ಟಂತೆ ಸಭೆ ನಡೆಸಲು. ಗುಜರಾತ್ನಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಉಪ ಕುಲಪತಿ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು.
ಇದನ್ನೂ ಓದಿ: PM Modi: 'ಮೋದಿ ಮನುಷ್ಯ ಅಲ್ರಿ ದೇವರು; ಅದಕ್ಕೆ ಹಾರ ಹಾಕಲು ಹೋಗಿದ್ದೆ'- ಕೇಳಿದ್ರಾ 12ರ ಬಾಲಕನ ಮಾತು?
ವಿಧಿ ವಿಜ್ಞಾನ ವಿವಿ ಸ್ಥಾಪನೆಯ ಒಪ್ಪಂದಕ್ಕೆ ಸಹಿ ಹಾಕಿ ವಾಪಸ್ ಆಗಿದ್ದರು. ಹೋಗಿದ್ದು ಜನವರಿ 10ಕ್ಕೆ, ಆದರೂ ಬಂದಿದ್ದು ಇವತ್ತಾ ಅಥವಾ ನಿನ್ನೆನೇ ಬಂದಿದ್ರಾ ಅನ್ನೋದು ಗೃಹಸಚಿವರ ಟ್ವೀಟ್ ಮತ್ತು ಅವರ ಹೇಳಿಕೆಗಳೇ ಗೊಂದಲ ಸೃಷ್ಟಿಸಿದೆ. ಬಹುಶಃ ಲೇಟಾಗಿ ಟ್ವೀಟ್ ಮಾಡಿದ್ರಾ? ಅಥವಾ ತಪ್ಪಾಗಿ ಇಂದು ಅಂತ ಹಾಕಿದ್ದಾರ ಅನ್ನೋದನ್ನ ವಿರೋಧ ಪಕ್ಷದವರ ಆರೋಪಕ್ಕೆ ಗೃಹಸಚಿವರೇ ಸ್ಪಷ್ಟನೆ ನೀಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ