ಬಿಜೆಪಿಯಿಂದ ಮೊಟ್ಟ ಮೊದಲ ಹಲಾಲ್ ಆದ ವ್ಯಕ್ತಿ ಕೆ.ಎಸ್.ಈಶ್ವರಪ್ಪ (KS Eshwarappa) ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ವ್ಯಂಗ್ಯ ಮಾಡಿದ್ದಾರೆ. ಹಲಾಲ್ (Halal) ಆಗಲು ಇನ್ನು ಬಹಳಷ್ಟು ಜನರ ಸರದಿ ಬರಲಿದೆ ಎಂದು ಭವಿಷ್ಯ ನುಡಿದರು. ಕೋವಿಡ್ (COVID 19) ಸಂದರ್ಭದಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ (Corruption) ಆಗಿದೆ. ಇನ್ನೂ ಅನೇಕ ಸಚಿವರು (Ministers) ಭ್ರಷ್ಟಾಚಾರಕ್ಕೆ ಬಲಿ ಆಗಲಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಶೇ.40 ಕಮಿಷನ್ (Commission) ಇದೆ. ಕೇವಲ ರಾಜೀನಾಮೆ ಅಲ್ಲ, ಬಂಧನ ಆಗೋವರೆಗೆ ಹೋರಾಟ ನಡೆಯಲಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ (Contractor Santosh Patil) ಆತ್ಮಹತ್ಯೆ ಈಶ್ವರಪ್ಪ ಅವರೇ ಕಾರಣ ಎಂದು ಸತೀಶ್ ಜಾರಕಿಹೊಳಿ ಆರೋಪಿಸಿದರು.
ಹೊಸಪೇಟೆಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಈಶ್ವರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದಾರೆ, ಕಾಂಗ್ರೆಸ್ ಗೆ ಪ್ರತಿಭಟನೆ ಮಾಡುವ ನೈತಿಕ ಹಕ್ಕಿಲ್ಲ.ಅವರ ಅನೇಕರು ಬೇಲ್ ಮೇಲಿದ್ದಾರೆ. ಅರ್ಕಾವತಿಯಲ್ಲಿ ರೀಡೂ ಮೂಲಕ ಅಕ್ರಮ ಮಾಡಿರೋರು ಕಾಂಗ್ರೆಸ್ ನವರು. ರೀಡೂ ಕೇಸ್ ನ ತನಿಖೆ ನಡೆದರೆ ಹಲವರು ಜೈಲಿಗೆ ಹೋಗ್ತಾರೆ ಎಂದು ವಾಗ್ದಾಳಿ ನಡೆಸಿದರು.
ಡಿಕೆಶಿಗೆ ಅಣ್ಣಾ ಹಜಾರೆ ಚಾರ್ಮ್ ಇದೆ
ಡಿಕೆ ಶಿವಕುಮಾರ್ ಪ್ರಾಮಾಣಿಕ ವ್ಯಕ್ತಿ. ಡಿಕೆಶಿಗೆ ಅಣ್ಣಾ ಹಜಾರೆ ಚಾರ್ಮ್ ಇದೆ. ಯಾವುದೇ ಭ್ರಷ್ಟಾಚಾರದ ಆರೋಪ ಅವರ ಮೇಲಿಲ್ಲ ಅವರಂಥ ಪ್ರಾಮಾಣಿಕ ವ್ಯಕ್ತಿ ಎಲ್ಲಾದ್ರೂ ಸಿಕ್ತಾರಾ ಎಂದು ವ್ಯಂಗ್ಯವಾಗಿ ಸಿ.ಟಿ.ರವಿ ತಿರುಗೇಟು ನೀಡಿದರು.
ಇದನ್ನೂ ಓದಿ: Bhaskar Rao: ನಾಳೆ ನನ್ನ ವಿರುದ್ಧ ರೇಡ್, ಪ್ರಕರಣ ದಾಖಲಾದ್ರೆ ಎದುರಿಸಲು ಸಿದ್ಧನಿದ್ದೇನೆ: ಭಾಸ್ಕರ್ ರಾವ್
ಸಂತೋಷ್ ಆತ್ಮಹತ್ಯೆ ಬಗ್ಗೆ ಹಲವು ಅನುಮಾನಗಳಿವೆ. ಅವರು ಸಾಯೋಕು ಮುನ್ನ ಡೆತ್ ನೋಟ್ ಬರೆದಿದ್ರಾ ಅಥವಾ ಸತ್ತ ಮೇಲೆ ಡೆತ್ ನೋಟ್ ಬರೆದರಾ? ಯಾಕೆಂದರೆ ಸಾಯೋಕೆ ಮುನ್ನ ಡೆತ್ ನೋಟ್ ಬರೆಯೋರು, ಕೈನಲ್ಲಿ ಡೆತ್ ನೋಟ್ ಬರೀತಾರೆ. ಆ ಮೇಲೆ ಅದಕ್ಕೆ ಸಹಿ ಕೂಡ ಹಾಕ್ತಾರೆ. ಆದರೆ ಇದರಲ್ಲಿ ವಾಟ್ಸಾಪ್ ನಿಂದ ಸಂದೇಶ ಬಂದಿದೆ. ಹೀಗಾಗಿ ಇದರ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ ಎಂದರು.
ಇದರಲ್ಲಿ ಮಹಾನ್ ನಾಯಕನ ಕೈವಾಡ ಇದೆಯಾ ಅಥವಾ ಬೇರೆ ಏನಾದರೂ ಇದೆಯಾ, ಎಂಬುದರ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಹೇಳಿದರು..
ಡಿ ಕೆ ಶಿವಕುಮಾರ್ ಹೇಳಿಕೆ
ಸಿಎಂ ಗೆ ನೀರಾವರಿ ಇಲಾಖೆ ಗುತ್ತಿಗೆದಾರರು ದೂರು ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಸಣ್ಣ ಸಣ್ಣ ಗುತ್ತಿಗೆದಾರರನ್ನ ಮುಗಿಸುವ ಕೆಲಸ ಮಾಡಿದ್ದಾರೆ. ಸಣ್ಣ ಸಣ್ಣ ಅವರಿಂದ ಕಮಿಷನ್ ಪಡೆಯೋಕೆ ಆಗೋಲ್ಲ ಅಂತಾ ದೊಡ್ಡವರಿಗೆ ಕೊಡ್ತಾ ಇದಾರೆ. ಸಣ್ಣ ಗುತ್ತಿಗೆದಾರರು ಪರ ಇರುತ್ತೇವೆ ಎಂದರು.
ನಾನು ವೀರಶೈವ ಲಿಂಗಾಯತ ಧರ್ಮ ಪ್ರಸ್ತಾಪ ಮಾಡಿದ್ದೆ ಅದಕ್ಕೆ ಅವರು ಮೆಚ್ಚಿದರು. ಯಾವ ಧರ್ಮ ಕೂಡ ಒಡೆಯಬಾರದು ಎಂಬುದು ನನ್ನ ನಂಬಿಕೆ. ವೀರಶೈವ ಧರ್ಮದಲ್ಲಿ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶವಿದೆ. ವೀರಶೈವ ಧರ್ಮದ ವಿಚಾರವಾಗಿ ನನ್ನ ಮಾತುಗಳನ್ನ ಶ್ರೀಗಳು ಮೆಚ್ಚಿ ಕ್ಕೆ ನಮ್ಮಮನೆಗೆ ಬಂದಿದ್ದರು ಎಂದು ಹೇಳಿದರು.
ಹರ್ಷ ಕೊಲೆ ಬಳಿಕ ಷಡ್ಯಂತ್ರ ಮಾಡಿದ್ದಾರೆ. ಕೆಲವರು ಏನೇನೋ ಮಾಡಬೇಕು ಅಂತಾ ಪ್ಲಾನ್ ಮಾಡಿದ್ದಾರೆ. ಒಂದು ಟ್ರಸ್ಟ್ ಇದೆ ಅದರಲ್ಲಿ ದೊಡ್ಡದೊಡ್ಡವರು ಇದ್ದಾರೆ. ಬೇಕಾದ ವಸ್ತುಗಳನ್ನ ಸಂಗ್ರಹ ಮಾಡಿದ್ದರು. ಆದರೆ ಶಿವಮೊಗ್ಗ ಪೊಲೀಸರು ಬುದ್ದಿವಂತರಿದ್ದಾರೆ. ಅವರಿಗೆ ಅಭಿನಂದಿಸ್ತೇನೆ. ಪೋಲಿಸರು ಅವರನ್ನ ಬಂಧಿಸಿಲ್ಲ ಅಂದಿದ್ರೆ ರಾಜ್ಯದಲ್ಲಿ ಅಶಾಂತಿ ಸೃಷ್ಠಿ ಮಾಡುವ ಹುನ್ನಾರ ಇತ್ತು ಎಂದು ಸ್ಪೋಟಕ ಮಾಹಿತಿ ಬಿಚ್ಚಿಟ್ಟರು.
ಇದನ್ನೂ ಓದಿ: Santosh Patil Case: ಲಕ್ಷ್ಮಿ ಹೆಬ್ಬಾಳ್ಕರ್ ಹಳೆ ಹೇಳಿಕೆ ವೈರಲ್; ಹೇಳಿಕೆಗೆ ಶಾಸಕರು ಹೇಳಿದ್ದೇನು?
ರವಿ ಅಣ್ಣ ಏನೋ ಮಾತಾಡಿದ್ದಾರೆ. ಅವರು ಬಹಳ ದೊಡ್ಡವರಿದ್ದಾರೆ. ಅವರು ಆಫೀಸರ್ ಗೆ ಹೆದರಿಸಿ ಬೆದರಿಸಿರುವ ವಿಚಾರಗಳಿವೆ. ಮುಂದೆ ಎಲ್ಲಾ ಆಚೆ ಬರುತ್ತದೆ. ಅವರು ಪಾಪಾ.. ಫ್ಯಾಮಿಲಿಗೆ ಮಾತನಾಡಿರೋದು ಫೋನ್ ಕಾಲ್ ಮಾಡಿದ್ದು ಎಲ್ಲವೂ ಇದೆ. ಮುಂದೆ ತನಿಖೆಯಿಂದ ಆಚೆ ಬರುತ್ತೆ. ಯಾವ ಫ್ಯಾಮಿಲಿ, ಯಾವ ಪ್ರಕರಣ ಅಂತ ಹೇಳದೇ ಸಿ.ಟಿ.ರವಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ