• Home
  • »
  • News
  • »
  • state
  • »
  • CM Bommai ಕಪ್ಪು ಚುಕ್ಕೆ, ಪೊಲೀಸರಿಗೆ ಕೆಲಸ ಮಾಡಲು ಬಿಡ್ತಿಲ್ಲ: DK Shivakumar ಹೇಳಿಕೆ

CM Bommai ಕಪ್ಪು ಚುಕ್ಕೆ, ಪೊಲೀಸರಿಗೆ ಕೆಲಸ ಮಾಡಲು ಬಿಡ್ತಿಲ್ಲ: DK Shivakumar ಹೇಳಿಕೆ

ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್

ಪೊಲೀಸರಿಗೆ ಕೆಲಸ ಮಾಡುವುದಕ್ಕೆ ಬಿಡುತ್ತಿಲ್ಲ. ಮುಖ್ಯಮಂತ್ರಿ ಹುದ್ದೆಯ ಬಗ್ಗೆ ನನಗೆ ಬಹಳಷ್ಟು ಗೌರವವಿದೆ. ಆದರೆ ಸಿಎಂ ಬೊಮ್ಮಾಯಿ ಕಪ್ಪು ಚುಕ್ಕೆ. ಕೆಂಪಣ್ಣ ಕೊಟ್ಟಿದ್ದ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆದಿದ್ದರೆ ಇಂತಹ ಪರಿಸ್ಥಿತಿ ಬರ್ತಿರಲಿಲ್ಲ.

  • Share this:

ಸಚಿವ ಕೆ.ಎಸ್.ಈಶ್ವರಪ್ಪ (Minister KS Eshwarappa) ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ  (Under the Prevention of Corruption Act) ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ (Congrgess) ವಿಧಾನಸೌಧದ (Vidhana soudha) ಪೂರ್ವ ದ್ವಾರದ ಬಳಿ ನಿನ್ನೆಯಿಂದ ಪ್ರತಿಭಟನೆ ನಡೆಸುತ್ತಿದೆ. ಇಂದು ಬೆಳಗ್ಗೆ ಮಾಧ್ಯಮಗಳ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಮಾತನಾಡಿ, ನಾವು 24 ಗಂಟೆ ಧರಣಿ (Protest) ಮಾಡುತ್ತೇವೆ ಎಂದಿದ್ದೇವೆ. ಈಶ್ಚರಪ್ಪ ರಾಜೀನಾಮೆ (KS Eshwarappa Resignation) ನಮ್ಮ ಬೇಡಿಕೆ ಅಲ್ಲ. ಅವರ ಮೇಲೆ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿವೆ. 4 ಕೋಟಿ ರೂ. ಗೆ 40% ಕಮಿಷನ್ ಕೇಳಿರುವ ಆರೋಪವಿದೆ. ರಾಜೀನಾಮೆ ಕೊಡ್ತಾರೋ ಬಿಡ್ತಾರೊ ನಂಗೆ ಡೌಟಿದೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅವರ ಮೇಲೆ ಪ್ರಕರಣ ದಾಖಲಿಸಬೇಕು ಇದು ನಮ್ಮ ಪ್ರಮುಖ ಬೇಡಿಕೆ ಎಂದು ತಿಳಿಸಿದರು.


ಮುಖ್ಯಮಂತ್ರಿಗಳು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸದಂತೆ ಸೂಚಿಸಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಈಶ್ವರಪ್ಪ ತಪ್ಪು ಮಾಡಿಲ್ಲ ಎಂದಿದ್ದಾರೆ. ಹೀಗೆ ಸಿಎಂ ಹೇಳಿದ ಮೇಲೆ ಯಾವ ಪೊಲೀಸ್ ಅಧಿಕಾರಿ ತನಿಖೆ ನಡೆಸುತ್ತಾರೆ ಎಂದು ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದರು.


ಸಿಎಂ ಅವರಿಂದಲೇ ಅನ್ಯಾಯ ಆಗ್ತಿದೆ?


ಬಿಜೆಪಿ ಬಿಜೆಪಿ, ಮೋದಿ ಮೋದಿ ಎನ್ನುತ್ತಲೇ ಪ್ರಾಣ ಬಿಡಬೇಕಾದ ಪರಿಸ್ಥಿತಿ ಸಂತೋಷ್'ಗೆ ಬಂದಿದೆ. ಮಂಚದ ಕೇಸ್ ನಲ್ಲಿ ಯಾಕೆ ಎಸ್ ಐ ಟಿ ಮಾಡಿದ್ರು? ಯಾರು ನ್ಯಾಯವನ್ನು ಕೊಡಬೇಕಾಗಿತ್ತೊ? ಅಂತಹ ಸಿಎಂ ಅವರಿಂದಲೇ ಅನ್ಯಾಯ ಆಗುತ್ತಿದೆ. ಈಶ್ವರಪ್ಪ ಬಂಧಿಸಿ ಪ್ರಕರಣದ ತನಿಖೆ ನಡೆಸಬೇಕು ಎಂಬುದು ಸಂತೋಷ್ ಕುಟುಂಬದ ಬೇಡಿಕೆಯಿದೆ ಎಂದರು.


ಪೊಲೀಸರಿಗೆ ಕೆಲಸ ಮಾಡುವುದಕ್ಕೆ ಬಿಡುತ್ತಿಲ್ಲ. ಮುಖ್ಯಮಂತ್ರಿ ಹುದ್ದೆಯ ಬಗ್ಗೆ ನನಗೆ ಬಹಳಷ್ಟು ಗೌರವವಿದೆ. ಆದರೆ ಸಿಎಂ ಬೊಮ್ಮಾಯಿ ಕಪ್ಪು ಚುಕ್ಕೆ. ಕೆಂಪಣ್ಣ ಕೊಟ್ಟಿದ್ದ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆದಿದ್ದರೆ ಇಂತಹ ಪರಿಸ್ಥಿತಿ ಬರ್ತಿರಲಿಲ್ಲ.


ಇದನ್ನೂ ಓದಿ:  KS Eshwarappa ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಾಗಿ, ಬಂಧಿಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ; ಕಾಂಗ್ರೆಸ್​​


ವಿಧಾನಸೌಧದ ಗೋಡೆಗೆ ಹೊಡೆದ ಡಿಕೆಶಿ


ಕೆಲಗು ಕಡೆಗಳಲ್ಲಿ 100% ಕಮಿಷನ್ ಇದೆ. ಆ ಬಗ್ಗೆ ಮಾಜಿ ಸಚಿವರಾದ ಪ್ರಿಯಾಂಕ್ ಖರ್ಗೆ ದಾಖಲೆ ಬಿಡುಗಡೆ ಮಾಡಿದ್ದಾರೆ. ಗೋಡೆನ ಹೊಡೆಯುತ್ತಿದ್ದೇನೆ ಇದು ಕಾಸು ಕಾಸು ಕಾಸು ಅಂತಾ ಹೇಳ್ತಿದೆ ಎಂದು ವಿಧಾನಸೌಧದ ಗೋಡೆಗೆ ಹೊಡೆದು ತೋರಿಸಿದರು.


ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಾಸು ಕಾಸು ಎಂಬುದೆ ಕೇಳಿ ಬರುತ್ತಿದೆ. ಬಿಜೆಪಿ ಕಾರ್ಯಕಾರಣಿ ನಡೆಯುವಲ್ಲಿಯೂ ನಮ್ಮ ನಾಯಕರು ಪ್ರತಿಭಟನೆ ಮಾಡುತ್ತಾರೆ. ಇದೊಂದು ನಿರಂತರ ಹೋರಾಟ ಎಂದರು.


ಕೆ.ಎಸ್.ಈಶ್ವರಪ್ಪ ರಾಜೀನಾಮೆ ಘೋಷಣೆ


ತಾವು ರಾಜೀನಾಮೆ ನೀಡುವುದಿಲ್ಲ ಎಂದು ತಿಳಿಸಿದ್ದ ಈಶ್ವರಪ್ಪ ಅವರು ಕಾಂಗ್ರೆಸ್​ ನಾಯಕರ ಪ್ರತಿಭಟನೆ ಜೋರಾದ ಹಿನ್ನೆಲೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಇಂದು ಶಿವಮೊಗ್ಗೆಯಿಂದ ಬೆಂಗಳೂರಿಗೆ ತೆರಳಿ ರಾಜೀನಾಮೆ ಸಲ್ಲಿಸುತ್ತೇನೆ. ಈ ಪ್ರಕರಣದಲ್ಲಿ ತಮ್ಮ ಪಾತ್ರ ಇಲ್ಲ ಎಂದು ಪುನರ್​ಚ್ಚರಿಸಿದ್ದಾರೆ.


ಇದನ್ನೂ ಓದಿ:  Basavaraj Bommai: ದೇಶದಲ್ಲಿ ಭ್ರಷ್ಟಾಚಾರ ಹುಟ್ಟಿದ್ದೇ ಕಾಂಗ್ರೆಸ್​ನವ್ರಿಂದ, 'ಕೈ' ನಾಯಕರ ವಿರುದ್ಧ ಬಸವರಾಜ ಬೊಮ್ಮಾಯಿ ಕಿಡಿ


ಹಾಲಿ ನ್ಯಾಯಾಧೀಶರಿಂದ ತನಿಖೆ ಆಗಬೇಕು


ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸುತ್ತಿದ್ದಂತೆ ಪ್ರತಿಕ್ರಿಯಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​, ನಾವು ಕೇಳುತ್ತಿರುವುದು ಈಶ್ವರಪ್ಪ ಮೇಲೆ ಭ್ರಷ್ಟಾಚಾರ ಮೇಲೆ ಪ್ರಕರಣ ದಾಖಲಿಸಿ, ಬಂಧನಕ್ಕೆ ಆಗ್ರಹಿಸಿ ಎಂದು ಅವರ ವಿರುದ್ದ ಇನ್ನು ಭ್ರಷ್ಟಾಚಾರದ ಪ್ರಕರಣವನ್ನು ದಾಖಲಿಸಿಲ್ಲ. ಪ್ರಕರಣ ಸಂಬಂಧ ಹಾಲಿ ನ್ಯಾಯಾಧೀಶರಿಂದ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು