Santhosh Suicide Case: ಕೆ.ಎಸ್​ ಈಶ್ವರಪ್ಪ ತಲೆದಂಡ ಬಹುತೇಕ ಫಿಕ್ಸ್!? ಕಾಂಗ್ರೆಸ್​ಗೆ ಸಿಕ್ಕಿದೆ ಪ್ರಬಲ ಅಸ್ತ್ರ

ಸಂತೋಷ್ ಪಾಟೀಲ್ ಆತ್ಮಹತ್ಯೆ ಬೆನ್ನಲ್ಲಿಯೇ ಪ್ರತಿಪಕ್ಷ ಕಾಂಗ್ರೆಸ್ ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರದ ವಿರುದ್ಧ ಮುಗಿಬಿದ್ದಿದೆ.  ಈಶ್ವರಪ್ಪ ಅವರ ರಾಜೀನಾಮೆಯನ್ನು ಕೂಡಲೇ ಪಡೆಯಬೇಕು ಮತ್ತು ಅವರನ್ನು ಸಂಪುಟದಿಂದ ಕಿತ್ತೆಸೆಯಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.

ಸಚಿವ ಈಶ್ವರಪ್ಪ

ಸಚಿವ ಈಶ್ವರಪ್ಪ

  • Share this:
ನನ್ನ ಸಾವಿಗೆ ಗ್ರಾಮೀಣ ಸಚಿವ ಕೆ.ಎಸ್​ ಈಶ್ವರಪ್ಪ (K. Eshwarappa) ಅವರೇ ಕಾರಣ ಎಂದು ಡೆತ್​ ನೋಟ್ (Death Note)​ ಬರೆದಿಟ್ಟು ಗುತ್ತಿಗೆದಾರ ಸಂತೋಷ್​ ಆತ್ಮಹತ್ಯೆಗೆ ಶರಣಾಗಿದ್ಧಾರೆ. ಇದು ಸಚಿವ ಕೆ.ಎಸ್​ ಈಶ್ವರಪ್ಪ ಅವರಿಗೆ ಸಂಕಷ್ಟ ತಂದಿಟ್ಟಿದೆ. ಇನ್ನು 2-3 ತಿಂಗಳಿಂದ ರಾಜ್ಯದಲ್ಲಿ ಒಂದೊಂದೆ ವಿವಾದ ಹುಟ್ಟುತ್ತಿದ್ದು, ಬಿಜೆಪಿ ಸರ್ಕಾರಕ್ಕೆ (BJP Government) ದೊಡ್ಡ ತಲೆನೋವಾಗಿತ್ತು. ವಿವಾದಗಳಿಗೆಲ್ಲಾ ಪ್ರತಿಕ್ರಿಯಿಸದೇ ಮೌನವಾಗಿದ್ದ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ವಿರುದ್ಧ ಕಾಂಗ್ರೆಸ್​ (Congress) ಕೆಂಡಕಾರಿತ್ತು. ಇದೀಗ ಸಂತೋಷ್ ಸಾವು, ಈಶ್ವರಪ್ಪ ಮೇಲಿನ ಗಂಭೀರ ಆರೋಪ, ಸಿಎಂ ಬೊಮ್ಮಾಯಿ  ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಈಶ್ವರಪ್ಪ ಅವರು ರಾಜೀನಾಮೆ ಕೊಡಲೇಬೇಕೆಂದು ಕಾಂಗ್ರೆಸ್​ನವರು ಪಟ್ಟು ಹಿಡಿದಿದ್ದಾರೆ

ಸಂಪುಟದಿಂದ ಔಟ್​ ಆಗ್ತಾರಾ ಈಶ್ವರಪ್ಪ?

ಚುನಾವಣೆ ಸಿದ್ದತೆಯ ಮೂಡ್​ನಲ್ಲಿದ್ದ ಬಿಜೆಪಿ ನಾಯಕರಿಗೆ ದೊಡ್ಡ ಶಾಕ್ ಆಗಿದೆ. ಈಶ್ವರಪ್ಪ ವಿರುದ್ದ ಕೇಳಿ ಬಂದಿರೋ ಆರೋಪ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ.  ಚುನಾವಣೆ ಸಿದ್ದತೆಯ ಪ್ರವಾಸದಲ್ಲಿದ್ದ ನಾಯಕರಿಗೆ ಈಗ ಈಶ್ವರಪ್ಪ ಕೇಸ್ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸಿಎಂ ಬಸವರಾಜ್ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರಗೆ ನುಂಗಲಾರದ ತುತ್ತಾಗಿದೆ. ಕಾಂಗ್ರೆಸ್ ನಾಯಕರ ಆಗ್ರಹದಂತೆ ಈಶ್ವರಪ್ಪ ರನ್ನು ಸಂಪುಟದಿಂದ ವಜಾ ಮಾಡ್ತಾರಾ ಸಿಎಂ ಬಸವರಾಜ್ ಬೊಮ್ಮಾಯಿ ಅನ್ನೋ ಪ್ರಶ್ನೆ ಮೂಡಿದ್ದು, ಮುಂದಿನ ನಡೆ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಕಾಂಗ್ರೆಸ್​ಗೆ ಸಿಕ್ಕಿದೆ ಪ್ರಬಲ ಅಸ್ತ್ರ

ಪಂಚ ರಾಜ್ಯಗಳ ಚುನಾವಣೆಯ ಸೋಲಿನ ಆಘಾತದಲ್ಲಿದ್ದ ಕಾಂಗ್ರೆಸ್ ಗೆ ಬಿಜೆಪಿ ಮೇಲಿನ 40 ಪರ್ಸೆಂಟ್ ಕಮಿಷನ್​ ಆರೋಪ ಅಸ್ತ್ರವಾಗಲಿದೆ. ಅಲ್ಲದೇ ಬಿಜೆಪಿ ಸರ್ಕಾರದ ವಿರುದ್ದವೂ ಕಾಂಗ್ರೆಸ್​ಗೆ ಇಲ್ಲಿವರೆಗೂ ಯಾವುದೇ ಗಂಭೀರ ವಿಷಯ ಸಿಕ್ಕಿರಲಿಲ್ಲ. ಇದೀಗ ಕಾಂಗ್ರಸ್​ಗೆ ಈಶ್ವರಪ್ಪ ಮೇಲಿನ ಸಂತೋಷ ಆತ್ಮಹತ್ಯೆ ಕೇಸ್, ಹಾಗೂ ಸಿಕ್ಕಿದ ಈಶ್ವರಪ್ಪ ವಿರುದ್ಧ ಲಂಚ ಪ್ರಕರಣದ ಪ್ರಬಲ ಅಸ್ತ್ರವಾಗಲಿದೆ. ಇದೇ ವಿಷಯವನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಹೋರಾಟಕ್ಕೂ ಕಾಂಗ್ರೆಸ್​ ತಯಾರಿ ನಡೆಸಿದೆ. ತಯಾರಿ.

ಇದನ್ನು ಓದಿ: ನನ್ನ ಸಾವಿಗೆ ಸಚಿವ KS Eshwarappa ಕಾರಣ: ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಆತ್ಮಹತ್ಯೆಗೆ ಶರಣು

ಸಚಿವ ಕೆ.ಎಸ್. ಈಶ್ವರಪ್ಪ ತಲೆದಂಡ ಫಿಕ್ಸ್​!?

ಇದರಿಂದ ಶೀಘ್ರದಲ್ಲಿಯೇ ಸಚಿವ ಕೆ.ಎಸ್. ಈಶ್ವರಪ್ಪ ತಲೆದಂಡ ಆಗುವುದು ಬಹುತೇಕ ಖಚಿತವಾಗಿದೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಬೆನ್ನಲ್ಲಿಯೇ ಪ್ರತಿಪಕ್ಷ ಕಾಂಗ್ರೆಸ್ ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರದ ವಿರುದ್ಧ ಮುಗಿಬಿದ್ದಿದೆ.  ಈಶ್ವರಪ್ಪ ಅವರ ರಾಜೀನಾಮೆಯನ್ನು ಕೂಡಲೇ ಪಡೆಯಬೇಕು ಮತ್ತು ಅವರನ್ನು ಸಂಪುಟದಿಂದ ಕಿತ್ತೆಸೆಯಬೇಕು ಹಾಗೂ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಆಗ್ರಹಿಸಿದ್ದಾರೆ.

ಚುನಾವಣಾ ವರ್ಷವಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಬಿಜೆಪಿ ಕಾರ್ಯಕರ್ತನೂ ಅಹ ಆಗಿದ್ದರಿಂದ ಇದು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಇದನ್ನು ಓದಿ: ಡೆತ್​ನೋಟ್​ಗಿಂತ ಸಾಕ್ಷಿ ಬೇಕಾ? ಕೂಡಲೇ KS Eshwarappaರನ್ನು ಬಂಧಿಸಿ; ಕಾಂಗ್ರೆಸ್​ ಆಗ್ರಹ

‘ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ನಂತರ ಕ್ರಮ’

ಉಡುಪಿಯ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಸಮೀಪದ ಶಾಂಭವಿ ಲಾಡ್ಜ್‌ನಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿ ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಂತೋಷ್ ಆತ್ಮಹತ್ಯೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಕೆ.ಎಸ್.​​ ಈಶ್ವರಪ್ಪ ಕಾರಣ ಎಂದು ಉಲ್ಲೇಖಿಸಿದ ಸಂದೇಶವನ್ನು ಎಲ್ಲೆಡೆ ಕಳುಹಿಸಿದ್ದಾರೆ. ಆದರೆ ಈ ಕುರಿತು ಸೂಕ್ತ ತನಿಖೆ ನಡೆಸಲಾಗುವುದು ಎಂದು ಹೇಳಿದರು.
Published by:Pavana HS
First published: