ಮಂಡ್ಯ ಜಿಲ್ಲೆಯ ಪಾಂಡವಪುರ ಮತ್ತು ಶ್ರೀರಂಗಪಟ್ಟಣದಲ್ಲಿ ಸಂಕೀರ್ತನೆ ಯಾತ್ರೆ (Sankirtane Yatre) ಹಿನ್ನೆಲೆ ಇಂದು ಬೆಳಗ್ಗೆಯಿಂದಲೇ ಹನುಮ ಮಲಾಧಾರಿಗಳು (Hanum maladhari) ಭಜನೆ ಆರಂಭಿಸಿದ್ದಾರೆ. ಇಂದು ಬೆಳಗ್ಗೆ 10 ಗಂಟೆಯ ನಂತರ ಸಂಕೀರ್ತನ ಯಾತ್ರೆಗೆ ಚಾಲನೆ ಸಿಗಲಿದೆ. ಸಾವಿರಾರು ಹನುಮ ಭಕ್ತರನ್ನು ಒಳಗೊಂಡ ಸಂಕೀರ್ತನೆ ಯಾತ್ರೆ ಶ್ರೀರಂಗಪಟ್ಟಣ (Srirangaptna) ಮುಖ್ಯ ಬೀದಿಗಳಲ್ಲಿ ಸಾಗಲಿದೆ. ಮಾರ್ಗ ಮಧ್ಯೆ ಜಾಮಿಯಾ ಮಸೀದಿ (Jamia Mosque) ಮುಂಭಾಗ ತೆರಳುವ ಹಿನ್ನೆಲೆ ಶ್ರೀರಂಗಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೆಲ ತಿಂಗಳ ಹಿಂದೆ ಜಾಮಿಯಾ ಮಸೀದಿ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಕೇಸರಿ ಬಾವುಟ ಹಿಡಿದ ಹನುಮಮಾಲಾಧಾರಿಗಳು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಜಾಮಿಯಾ ಮಸೀದಿಯ ಮುಂಭಾಗದ ರಸ್ತೆಯಲ್ಲಿ ಬೈಕ್ ಜಾಥಾ ನಡೆಸುತ್ತಿದ್ದಾರೆ.
ಗಂಜಾಂನ ನಿಮಿಷಾಂಭಾ ದೇವಾಲಯದಿಂದ ಶ್ರೀರಂಗನಾಥ ದೇವಾಲಯದವರೆಗೆ ಯಾತ್ರೆ ನಡೆಯಲಿದೆ. ಶ್ರೀರಂಗಪಟ್ಟಣದ ಮೂಡಲ ಬಾಗಿಲು ಆಂಜನೇಯಸ್ವಾಮಿ ಪುನರ್ ಪ್ರತಿಷ್ಠಾಪನೆಗಾಗಿ ಹನುಮ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ ನಡೆಯುತ್ತಿದೆ.
ಜಾಮೀಯ ಮಸೀದಿ ಬಳಿ ರಾರಾಜಿಸಿದ ಸಾವರ್ಕರ್ ಫೋಟೋ
ಸಂಕೀರ್ತನೆ ಯಾತ್ರೆ ಹಿನ್ನೆಲೆ ಶ್ರೀರಂಗಪಟ್ಟಣ ಕೇಸರಿಮಯವಾಗಿದೆ. ಹಿಂದುಪರ ಸಂಘಟನೆಗಳು ಜಾಮಿಯಾ ಮಸೀದಿ ಬಳಿ ವೀರ ಸಾವರ್ಕರ್ ಫೋಟೋ ಅಳವಡಿಕೆ ಮಾಡಲಾಗಿದೆ. ಕೇಸರಿ ಬಾವುಟ, ಫ್ಲೆಕ್ಸ್ಗಳನ್ನು ಸಹ ಹಾಕಲಾಗಿದೆ.
ನಿಮಿಷಾಂಬ ದೇವಸ್ಥಾನದ ಬಳಿಯಿಂದ ಆರಂಭವಾಗುವ ಯಾತ್ರೆ ಪೇಟೆ ಮಾರ್ಗವಾಗಿ ಜಾಮಿಯಾ ಮಸೀದಿ ಸುತ್ತ ಮೆರವಣಿಗೆ ನಡೆಯಲಿದೆ. ಈ ಹಿನ್ನೆಲೆ ಮುನ್ನೆಚ್ಚರಿಕೆಕ್ರಮವಾಗಿ ಮಸೀದಿಯ ಸುತ್ತಲೂ ಬ್ಯಾರಿಕೇಡ್ ಹಾಕಲಾಗಿದ್ದು, ಒಂದು ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.
ಸಿಸಿಟಿವಿ ಅಳವಡಿಕೆ
ಶ್ರೀರಂಗಪಟ್ಟಣದ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: HD Kumaraswamy ಪ್ರಧಾನಮಂತ್ರಿ ಆಗೋ ಸಾಧ್ಯತೆ, ಡಿಸೆಂಬರ್ 18ರ ನಂತರ ಬಿಗ್ ಸರ್ಪ್ರೈಸ್: CM Ibrahim
ಏನಿದು ವಿವಾದ?
ಕಾಳಿ ಮಠದ ರಿಷಿ ಕುಮಾರ ಸ್ವಾಮಿಗಳು ಹನುಮ ಮಂದಿರವಿದ್ದ ಜಾಗದಲ್ಲಿಯೇ ಜಾಮಿಯಾ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ. ಶ್ರೀರಂಗಪಟ್ಟಣದ ಮಸೀದಿಯನ್ನು ಹನುಮ ದೇವಸ್ಥಾನದ ಜಾಗದಲ್ಲಿ ನಿರ್ಮಿಸಲಾಗಿದ್ದು, ಮಸೀದಿಗೆ ದಾರಿ ಮಾಡಿಕೊಡಲು ಮಂದಿರವನ್ನು ನೆಲಸಮಗೊಳಿಸಲಾಗಿದೆ. 1784ರಲ್ಲಿ ದೇಗುಲ ಕೆಡವಿ ಅಲ್ಲಿ ಮಸೀದಿಯನ್ನು ನಿರ್ಮಿಸಲಾಯಿತು ಎಂದು ಅವರು ಆರೋಪಿಸಿದ್ದಾರೆ.
ಜಾಮಿಯಾ ಮಸೀದಿ ಹೇಗಿದೆ?
ಎರಡು ಅಂತಸ್ತಿನ ಈ ಮಸೀದಿಯು ಅಪರೂಪದ ಬಿಳಿಯ ಬಣ್ಣದ ಗುಮ್ಮಟವನ್ನು ಹೊಂದಿದೆ. ಜೊತೆಗೆ ಪ್ರಬಲ ಗೋಪುರಗಳನ್ನು ಹಾಗೂ ಎರಡು ಮಿನಾರ್ ಗಳನ್ನು ಹೊಂದಿದೆ. ಅಲ್ಲದೆ ಈ ಮಸೀದಿಯು 97 ವರ್ಷಗಳಷ್ಟು ಹಳೆಯದಾದೆಂದು ಹೇಳಲಾಗುವ ಟ್ರಿಕ್ ಟಾಕಿಂಗ್ ಗಡಿಯಾರವನ್ನು ಹೊಂದಿದೆ. ಇದು ಇಂದಿಗೂ ಸುಸ್ಥಿತಿಯಲ್ಲಿದ್ದು, ವೇಳೆ ತೋರಿಸುತ್ತದೆ.
ಜಾಮಿಯಾ ಮಸೀದಿ ಕುರಿತು ವಿವಾದವಾಗಿದ್ದೇಕೆ?
ಟಿಪ್ಪು ಸುಲ್ತಾನ್ ಈ ಮಸೀದಿ ಕಟ್ಟಿಸಿದ್ದು ಅಂತ ಇತಿಹಾಸ ಪುಸ್ತಕದಲ್ಲಿ ಹೇಳಲಾಗಿದೆ. ಆದರೆ ಇದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಅಸಲಿಗೆ ಇದು ಮೊದಲು ಹನುಮಾನ್ ಮಂದಿರವಾಗಿದ್ದು, ಅದನ್ನು ಟಿಪ್ಪು ಸುಲ್ತಾನ್ ಮಸೀದಿಯನ್ನಾಗಿ ಬದಲಾಯಿಸಿದ ಎನ್ನುವ ಗಂಭೀರ ಆರೋಪ ಮಾಡಲಾಗಿದೆ.
ಇದನ್ನೂ ಓದಿ: SR Vishwanath: ಬಿಜೆಪಿ ಶಾಸಕರ ವಿಚಾರಕ್ಕೆ ಕಾರ್ಯಕರ್ತೆಯರ ಜಡೆ ಜಗಳ; ದೂರು ದಾಖಲು
ಪೂಜೆಗೆ ಅವಕಾಶ ನೀಡುವಂತೆ ಹಿಂದೂ ಸಂಘಟನೆ ಪಟ್ಟು
ಈ ಹಿನ್ನೆಲೆಯಲ್ಲಿ ಸ್ಥಳೀಯ ಹಿಂದೂ ಸಂಘಟನೆಗಳು ಈ ಮಸೀದಿಯಲ್ಲಿ ಆಂಜನೇಯ ಮೂರ್ತಿಯ ಪೂಜೆ ಮಾಡಲು ಅನುಮತಿ ಕೋರಿದ್ದರು. ಪುರಾತತ್ವ ಇಲಾಖೆ ಐತಿಹಾಸಿಕ ತತ್ವಗಳ ಅಭ್ಯಾಸ ನಡೆಸಿ ಈ ಪ್ರಕರಣದ ಅನ್ವೇಷಣೆ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಇದೇ ಕಾರಣಕ್ಕೆ ಇಂದು ಶ್ರೀರಂಗಪಟ್ಟಣ ಚಲೋ ಹಮ್ಮಿಕೊಳ್ಳಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ