HOME » NEWS » State » SANJJANAA GALRANI GETS BAIL FROM KARNATAKA HIGH COURT IN SANDALWOOD DRUG CASE AE

Sanjjanaa Galrani: ಜೈಲು ಹಕ್ಕಿಯಾಗಿದ್ದ ಸಂಜನಾ ಗಲ್ರಾನಿಗೆ ಕೊನೆಗೂ ಸಿಕ್ತು ಷರತ್ತುಬದ್ಧ ಜಾಮೀನು..!

Sandalwood Drug Case: ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ಸಂಜನಾ ಗಲ್ರಾನಿ ಅವರಿಗೆ ಹೈಕೋರ್ಟ್​ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ಮೂರು ಲಕ್ಷದ ವೈಯಕ್ತಿಕ ಬಾಂಡ್ ಜೊತೆಗೆ ತಿಂಗಳಲ್ಲಿ ಎರಡು ಬಾರಿ ತನಿಖಾಧಿಕಾರಿ ಎದುರು ಸಂಜನಾ ಹಾಜರಾಗಿ ತನಿಖೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಲಾಗಿದೆ.

Anitha E | news18-kannada
Updated:December 11, 2020, 4:15 PM IST
Sanjjanaa Galrani: ಜೈಲು ಹಕ್ಕಿಯಾಗಿದ್ದ ಸಂಜನಾ ಗಲ್ರಾನಿಗೆ ಕೊನೆಗೂ ಸಿಕ್ತು ಷರತ್ತುಬದ್ಧ ಜಾಮೀನು..!
ಸಂಜನಾ ಗಲ್ರಾನಿ
  • Share this:
ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ಸಂಜನಾ ಗಲ್ರಾನಿ ಅವರಿಗೆ ಹೈಕೋರ್ಟ್​ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ಮೂರು ಲಕ್ಷದ ವೈಯಕ್ತಿಕ ಬಾಂಡ್ ಜೊತೆಗೆ ತಿಂಗಳಲ್ಲಿ ಎರಡು ಬಾರಿ ತನಿಖಾಧಿಕಾರಿ ಎದುರು ಸಂಜನಾ ಹಾಜರಾಗಿ ತನಿಖೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಲಾಗಿದೆ. 84 ದಿನಗಳ ಕಾಲ ಜೈಲಿನಲ್ಲಿ ಕಳೆದ ನಂತರ ಸಂಜನಾ ಅವರಿಗೆ ಈಗ ಜಾಮೀನು ಸಿಕ್ಕಿದೆ. ಜೈಲಿನಲ್ಲಿರುವ ಸಂಜನಾ ಅವರಿಗೆ ಆರೋಗ್ಯ ಸರಿಯಲ್ಲದ ಕಾರಣದಿಂದಾಗಿ ಜಾಮೀನು ನೀಡಬೇಕೆಂದು ಕೆಲವೇ ದಿನಗಳ ಹಿಂದೆಯಷ್ಟೆ ನಟಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ, ಸಂಜನಾ ಅವರ ಆರೋಗ್ಯ ತಪಾಸಣೆಗೆ ಅನುಮತಿ ನೀಡಿ, ಅದರ ವರದಿಯನ್ನು ಡಿ.10ರ ಒಳಗೆ ಸಲ್ಲಿಸುವಂತೆ ಸೂಚನೆ ನೀಡಿತ್ತು. ಅದರಂತೆ ಸಂಜನಾ ಅವರನ್ನು ನಗರದ ವಾನಿ ವಿಲಾಸ್​ ಆಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆ ಮಾಡಿಸಲಾಗಿತ್ತು. 

ನಟಿ ಸಂಜನಾ ಇಂದು ಸಂಜೆಯೇ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಅನಾರೋಗ್ಯದಿಂದ ಬಳಲುತ್ತಿರುವ ಸಂಜನಾ ಅವರನ್ನು ತಪಾಸಣೆ ಮಾಡಿ ವೈದ್ಯರು ನೀಡಿದ್ದ ವರದಿಯ ಆಧಾರದ ಮೇಲೆ ಹೈಕೋರ್ಟ್​ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಇಂದು ಸಂಜೆಯೇ ಆದೇಶ ಜೈಲಾಧಿಕಾರಿಗಳ ಕೈ ಸೇರಿದರೆ, ಸಂಜನಾ ಜೈಲಿನಿಂದ ರಿಲೀಸ್ ಆಗುವ ಸಾಧ್ಯತೆ ಇದೆ.

actress ragini sanjanas hair sample returned to Bangalore untested from hyderabad, CCB Police caught big fish in Sandalwood Drugs Case
ರಾಗಿಣಿ ಹಾಗೂ ಸಂಜನಾ


ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಗಿಣಿ ಅವರನ್ನು ಬಂಧಿಸಿದ ನಂತರ ಸಂಜನಾ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಸೆ. 9ರಂದು ಸಿಸಿಬಿ ಪೊಲೀಸರು ಸಂಜನಾ ಅವರನ್ನು ಬಂಧಿಸಿ, ಸೆ. 16ರಂದು ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು.

ಇದನ್ನೂ ಓದಿ: ಸ್ಯಾಂಡಲ್​ವುಡ್​ ಮಾದಕ ವಸ್ತು ಪ್ರಕರಣ: ಸಂಜನಾ-ರಾಗಿಣಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ

ಪರಪ್ಪನ ಅಗ್ರಹಾರ ಸೇರುತ್ತಿದ್ದಂತೆಯೇ ಸಂಜನಾ ಹಾಗೂ ರಾಗಿಣಿ, ಜೈಲಿನಲ್ಲಿ ಕೊಡುತ್ತಿದ್ದ ಊಟ ಮಾಡದೆ, ಚಿಕನ್​ ಬೇಕೆಂದು ಪಟ್ಟು ಹಿಡಿದು ಜೈಲಾಧಿಕಾರಿಗಳಿಗೆ ತಲೆನೋವಾಗಿದ್ದರು. ಪರಪ್ಪನ ಅಗ್ರಹಾರ ಸೇರಿದ ನಂತರ ಸಂಜನಾ, ರಾಗಿಣಿ ಹಾಗೂ ಇತರೆ ಆರೋಪಿಗಳು ಕೆಳ ನ್ಯಾಯಾಲಯ ಹಾಗೂ ಹೈಕೋರ್ಟ್​ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಎರಡೂ ಕಡೆ ಜಾಮೀನು ಅರ್ಜಿ ವಜಾಗೊಂಡಿತ್ತು.
Published by: Anitha E
First published: December 11, 2020, 3:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories