Sandalwood Drug Case: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಟಿಯರ ಹೈಡ್ರಾಮ: ಸಂಜನಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ನ್ಯಾಯಾಲಯ..!

ನಟಿ ಸಂಜನಾಗೆ  ನಿತ್ಯ ಮಾಂಸಾಹಾರವೇ ಬೇಕಂತೆ. ಮನೆಯಲ್ಲಿ ನಿತ್ಯ ಚಿಕನ್ ತಿನ್ನುತ್ತಿದ್ದರಂತೆ. ದಯವಿಟ್ಟು ಊಟಕ್ಕೆ ಚಿಕನ್​ ಕೊಡಿ ಎಂದು ಸಂಜನಾ ಹಠ ಹಿಡಿದಿದ್ದಾರಂತೆ. ಜೈಲಿನಲ್ಲಿ ನಿತ್ಯ ಮಾಂಸಾಹಾರ ಕೊಡುವುದಿಲ್ಲ. ಕೇವಲ ಶುಕ್ರವಾರ ಮಾತ್ರ ಕೊಡಲಾಗುತ್ತದೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರಂತೆ.  ಈ ಬಗ್ಗೆ ಜೈಲಿನ ಸಿಬ್ಬಂದಿಗಳಿಂದ ಮಾಹಿತಿ ಲಭ್ಯವಾಗಿದೆ.

news18-kannada
Updated:September 18, 2020, 1:04 PM IST
Sandalwood Drug Case: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಟಿಯರ ಹೈಡ್ರಾಮ: ಸಂಜನಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ನ್ಯಾಯಾಲಯ..!
ರಾಗಿಣಿ ಹಾಗೂ ಸಂಜನಾ
  • Share this:
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟಿಮಣಿಯರ ಹೈಡ್ರಾಮ ಇನ್ನೂ ತಪ್ಪಿಲ್ಲ. ನಟಿಯರಾದ ಸಂಜನಾ ಮತ್ತು ರಾಗಿಣಿ ಅವರ ವರ್ತನೆಯಿಂದ ಎರಡೇ ದಿನಕ್ಕೆ ಜೈಲಿನಲ್ಲಿ ಅಧಿಕಾರಿಗಳು ಬೇಸತ್ತಿದ್ದಾರೆ. ಈ ನಡುವೆ ಮಲಗೋಕೆ ಮಂಚ‌ ಬೇಕೆಂದು ಚಿಕ್ಕ ಮಗುವಿಂತೆ ಹಠ ಹಿಡಿದಿದ್ದ ನಟಿ ರಾಗಿಣಿ, ಮಂಚ‌ ಬೇಕು ಇಲ್ದಿದ್ರೆ ನಿದ್ದೆ ಬರೋದಿಲ್ಲ ಎಂದು ಮೂರು ಗಂಟೆ ಕಣ್ಣೀರು ಹಾಕಿದ್ದಾರಂತೆ. ಎಷ್ಟೇ ಕಣ್ಣೀರು ಹಾಕಿದ್ರೂ ಜೈಲಿನ ನಿಯಮ ಪಾಲಿಸಲೇಬೇಕೆಂದು ಜೈಲಧಿಕಾರಿಗಳು ಸೂಚಿಸಿದ್ದಾರಂತೆ.ಅಷ್ಟೇಅಲ್ಲ, ಮೊದಲ ದಿನ ಜೈಲಿನ ಊಟ ತಿಂದರೆ ವಾಂತಿ ಬರುತ್ತೆ ಎಂದು ಊಟ ಬಿಟ್ಟಿದ್ದರಂತೆ ರಾಗಿಣಿ. ಸಂಜೆವರೆಗೂ ಹಾಗೇ ಖಾಲಿ ಹೊಟ್ಟೆಯಲ್ಲಿದ್ದ ಇದ್ದ ರಾಗಿಣಿಗೆ ಯಾರೂ ಸಮಾಧಾನ ಮಾಡಲಿಲ್ಲವಂತೆ. ಕೊನೆಗೆ ಅನಿವಾರ್ಯವಾಗಿ ವಿಧಿಯಿಲ್ಲದೆ ಜೈಲಿನಲ್ಲಿ ಕೊಟ್ಟಿದ್ದ ಊಟವನ್ನೇ ತಿಂದಿದ್ದಾರಂತೆ ರಾಗಿಣಿ. ರಾಗಿಣಿಯ ಕತೆ ಹೀಗಾದರೆ, ಸಂಜನಾರ ಕತೆ ಬೇರೆಯದ್ದೇ ಆಗಿದೆಯಂತೆ. 

ನಟಿ ಸಂಜನಾಗೆ  ನಿತ್ಯ ಮಾಂಸಾಹಾರವೇ ಬೇಕಂತೆ. ಮನೆಯಲ್ಲಿ ನಿತ್ಯ ಚಿಕನ್ ತಿನ್ನುತ್ತಿದ್ದರಂತೆ. ದಯವಿಟ್ಟು ಊಟಕ್ಕೆ ಚಿಕನ್​ ಕೊಡಿ ಎಂದು ಸಂಜನಾ ಹಠ ಹಿಡಿದಿದ್ದಾರಂತೆ. ಜೈಲಿನಲ್ಲಿ ನಿತ್ಯ ಮಾಂಸಾಹಾರ ಕೊಡುವುದಿಲ್ಲ. ಕೇವಲ ಶುಕ್ರವಾರ ಮಾತ್ರ ಕೊಡಲಾಗುತ್ತದೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರಂತೆ.  ಈ ಬಗ್ಗೆ ಜೈಲಿನ ಸಿಬ್ಬಂದಿಯಿಂದ ಮಾಹಿತಿ ಲಭ್ಯವಾಗಿದೆ.

Actress Ragini Dwivedi, Sanjjana Galrani Police Custody Ends Today on Sandalwood Drug Case
ರಾಗಿಣಿ ಹಾಗೂ ಸಂಜನಾ


ನಟಿ ಸಂಜನಾ ಅವರಿಗೆ ಅಸ್ತಮಾ ಮತ್ತು ಬೆನ್ನು ನೋವಿನ‌ ಸಮಸ್ಯೆ ಇದೆಯಂತೆ. ಅದಕ್ಕೆ ಜೈಲಿನ ಅಧಿಕಾರಿಗಳ ಬಳಿ ಚಿಕಿತ್ಸೆಗಾಗಿ ಮನವಿ ಮಾಡಿದ್ದರಂತೆ‌ ಸಂಜನಾ‌. ಬಳಿಕ ಜೈಲಿನ ವೈದ್ಯರಿಂದಲೇ ನಟಿಗೆ ಚಿಕಿತ್ಸೆ‌ ಕೊಡಿಸಲಾಗಿದೆಯಂತೆ. ಜೈಲಿನ ಸಿಬ್ಬಂದಿ ಬಳಿ ಈ ಇಬ್ಬರು ನಟಿಯರು ಕಣ್ಣೀರು ಹಾಕಿದ್ದು, ಟಾರ್ಗೆಟ್ ಮಾಡಿ ನಮ್ಮನ್ನ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಸಿನಿಮಾದಲ್ಲಿ ಅಭಿಯನ ಮಾಡ್ತಿದ್ವಿ, ಈಗ ನಮ್ಮ ನಿಜ ಜೀವನದಲ್ಲೇ ಹೀಗೆಲ್ಲ ನಡೆದಿದೆ. ದೊಡ್ಡವರನ್ನ‌ ಬಿಟ್ಟು ನಮ್ಮನ್ನ ಟಾರ್ಗೆಟ್ ಮಾಡಿ ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರಂತೆ ನಟಿಯರು. ಕಷ್ಟಪಟ್ಟು ಸಿನಿ ರಂಗದಲ್ಲಿ ಬೆಳೆದೆವು. ಈಗ ಎಲ್ಲ ಹೋಯ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ವಿಷ್ಣುವರ್ಧನ್​ ಹುಟ್ಟುಹಬ್ಬ: ಸಾಮಾಜಿಕ ಜಾಲತಾಣದ ಡಿಪಿ ಬದಲಿಸಿದ ಸೆಲೆಬ್ರಿಟಿಗಳು..!

ಇನ್ನು ಸಂಜನಾ ಹಾಗೂ ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿದಾಗ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇಡಲಾಗಿತ್ತು. ಆಗ ಇಬ್ಬರೂ ನಟಿಯರೂ ಒಂದೇ ಕೋಣೆಯಲ್ಲಿ ಒಟ್ಟಿಗೆ ಇರಲು ಒಪ್ಪಿರಲಿಲ್ಲ. ಪೊಲೀಸರು ಬೇರೆ ದಾರಿ ಇಲ್ಲದೆ, ಮೂವರು ಮಹಿಳಾ ಸಿಬ್ಬಂದಿ ಜೊತೆ ನಟಿಯರು ಇರಲು ವ್ಯವಸ್ಥೆ ಮಾಡಿದ್ದರು. ಆದರೆ ಈಗ ಜೈಲಿನಲ್ಲಿ ಒಂದೇ ಕೊಠಡಿಯಲ್ಲಿ ರಾಗಿಣಿ ಹಾಗೂ ಸಂಜನಾ ಇದ್ದಾರೆ. ಅಲ್ಲದೆ ಚೆನ್ನಾಗಿ ಮಾತನಾಡುತ್ತಾ ಇದ್ದಾರಂತೆ.

ಸಂಜನಾ ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆಸ್ಯಾಂಡಲ್​ವುಡ್ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜನಾ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ. ಎನ್ ಡಿ ಪಿಎಸ್ ವಿಶೇಷ ಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು, ಸಿಸಿಬಿ ಪೊಲೀಸರಿಗೆ ಕೋರ್ಟ್ ನೋಟಿಸ್​ ನೀಡಿದೆ. ಸಂಜನಾ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನಾಳೆ ಅಂದರೆ, ಸೆ.19ಕ್ಕೆ ಮುಂದೂಡಿದ ನ್ಯಾಯಾಲಯ, ಆಕ್ಷೇಪಣೆ ಸಲ್ಲಿಕೆ ಮಾಡಲು ಸಿಸಿಬಿಗೆ ಆದೇಶಿಸಿದೆ. ನಾಳೆ ನಟಿ ರಾಗಿಣಿ ಅವರ ಜಾಮೀನು ಅರ್ಜಿ ವಿಚಾರಣೆ ಸಹ ನಡೆದಯಲಿದೆ. ಈ ಇಬ್ಬರೂ ನಟಿಯರ ಜಾಮೀನು ಅರ್ಜಿ ವಿಚಾರಣೆ ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆಯಲಿದೆ ಎನ್ನಲಾಗುತ್ತಿದೆ.
Published by: Anitha E
First published: September 18, 2020, 1:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading