HOME » NEWS » State » SANJAY RAUT ASKS MES TO WAIT TILL SC ORDER IS OUT RH

ಬೆಳಗಾವಿ ಗಡಿ ವಿವಾದ; ಸುಪ್ರೀಂಕೋರ್ಟ್ ತೀರ್ಪು ಬರುವವರೆಗೂ ಕಾಯುವಂತೆ ಎಂಇಎಸ್ ನಾಯಕರಿಗೆ ಸಂಜಯ್ ರಾವತ್ ಸೂಚನೆ

ಕರ್ನಾಟಕ ಮಹಾರಾಷ್ಟ್ರ ಗಡಿವಿವಾದದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪಿಗೆ ಬದ್ಧ. ಗಡಿವಿವಾದದ ಬಗ್ಗೆ ಹೇಳಿಕೆ ನೀಡದಂತೆ ಶಿವಸೇನೆ ನಾಯಕರಿಗೆ ಸಿಎಂ ಉದ್ಧವ್ ಠಾಕ್ರೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವುದೇ ಈ ಬದಲಾವಣೆಗೆ ಕಾರಣ.  

HR Ramesh | news18-kannada
Updated:January 19, 2020, 7:44 AM IST
ಬೆಳಗಾವಿ ಗಡಿ ವಿವಾದ; ಸುಪ್ರೀಂಕೋರ್ಟ್ ತೀರ್ಪು ಬರುವವರೆಗೂ ಕಾಯುವಂತೆ ಎಂಇಎಸ್ ನಾಯಕರಿಗೆ ಸಂಜಯ್ ರಾವತ್ ಸೂಚನೆ
ಸಂಜಯ್​ ರಾವತ್
  • Share this:
ಬೆಳಗಾವಿ: ಬೆಳಗಾವಿ ಗಡಿ ವಿವಾದ ಸಂಬಂಧ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಗಡಿ ವಿವಾದ ಸುಪ್ರೀಂಕೋರ್ಟ್​ನಲ್ಲಿದ್ದು, ನ್ಯಾಯಾಲಯದಿಂದ ತೀರ್ಪು ಬರುವವರೆಗೂ ಕಾಯುವಂತೆ ಹಾಗೂ ಯಾವುದೇ ರಾಜ್ಯ ವಿರೋಧಿ ಹೇಳಿಕೆ ನೀಡದಂತೆ ಎಂಇಎಸ್​ ಮುಖಂಡರಿಗೆ ಶಿವಸೇನೆ ವಕ್ತಾರ ಹಾಗೂ ರಾಜ್ಯಸಭೆ ಸದಸ್ಯ ಸಂಜಯ್ ರಾವತ್ ಸೂಚನೆ ನೀಡಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಎಂಇಎಸ್ ಶಿವಸೇನೆ ಒಂದಲ್ಲ ಒಂದು ಖ್ಯಾತೆ ತೆಗೆದು ಗಡಿ ವಿವಾದವನ್ನ ಕೆದಕುತ್ತಲ್ಲೇ ಇತ್ತು. ಕಳೆದ ಎರಡು ದಿನಗಳ ಹಿಂದೆ ಎಂಇಎಸ್ ಆಯೋಜಿಸಿದ ಹುತಾತ್ಮ ದಿನಾಚರಣೆಗೆ ಅನುಮತಿ ಇಲ್ಲದಿದ್ದರೂ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಂದ್ರ ಪಾಟೀಲ್ ಆಗಮಿಸಿ ಮತ್ತೆ ಗಡಿ ಖ್ಯಾತೆ ತೆಗೆಯಲು ಮುಂದಾಗಿದ್ದರು. ರಾಜೇಂದ್ರ ಪಾಟೀಲರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಶಿವಸೇನೆ ವಕ್ತಾರ ಸಂಜಯ್ ರಾವತ್ "ನಾನು ಬೆಳಗಾವಿಗೆ ಬರುತ್ತೇನೆ. ಎನ್ ಮಾಡ್ತಿರಿ ಮಾಡಿ," ಎನ್ನುವ ಮೂಲಕ ಪೊಲೀಸರಿಗೆ ಸವಾಲು ಹಾಕಿದ್ದರು. ಅದರಂತೆ ಶನಿವಾರ  ಎಂಇಎಸ್ ಆಯೋಜಿಸಿದ್ದ ಗ್ರಂಥಾಲಯದ ವಾರ್ಷಿಕ ಕಾರ್ಯಕ್ರಮಕ್ಕೆ ರಾವತ್ ಬೆಳಗಾವಿ ಆಗಮಿಸಿದ್ದರು. ಆದರೆ, ಹಾಗೆ ಘರ್ಜಿಸಿ ಬೆಳಗಾವಿಗೆ ಬಂದ ರಾವತ್ ಅವರ ವರ್ತನೆಯಲ್ಲಿ ಭಾರೀ ಬದಲಾಗಿತ್ತು. ಸದಾ ಕನ್ನಡಿಗರು ಗಡಿ ವಿಚಾರದಲ್ಲಿ ಕೆಣಕಿ ಮಾತನಾಡುತ್ತಿದ್ದ ಶಿವಸೇನೆ ತನ್ನ ರಾಗವನ್ನೇ ಬದಲಿಸಿದೆ. ಕರ್ನಾಟಕ ಮಹಾರಾಷ್ಟ್ರ ಗಡಿವಿವಾದದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪಿಗೆ ಬದ್ಧ. ಗಡಿವಿವಾದದ ಬಗ್ಗೆ ಹೇಳಿಕೆ ನೀಡದಂತೆ ಶಿವಸೇನೆ ನಾಯಕರಿಗೆ ಸಿಎಂ ಉದ್ಧವ್ ಠಾಕ್ರೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವುದೇ ಈ ಬದಲಾವಣೆಗೆ ಕಾರಣ.

ಇನ್ನು ಬೆಳಗಾವಿಯಲ್ಲಿ ಎಂಇಎಸ್ ಆಯೋಜಿಸಿದ್ದ ಗ್ರಂಥಾಲಯದ ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾವತ್ ಸಂವಾದ ನಡೆಸಿದರು. ಇದೇ ವೇಳೆ ಎಂಇಎಸ್ ಮುಖಂಡರಿಗೆ ಕಿವಿ ಮಾತನ್ನು ಹೇಳಿದರು. ನ್ಯಾಯಾಲಯ ತೀರ್ಪು ಬರುವವರೆಗೆ ರಾಜ್ಯದಲ್ಲಿ ಜಗಳ ಮಾಡದೆ ಸುಮ್ಮನಿರಬೇಕು ನಿಮ್ಮ ಜಗಳ ಏನಿದ್ದರೂ ಕಾನೂನಿನ ಚೌಕಟ್ಟಿನಲ್ಲಿ ಇರಬೇಕು. ನಿಮ್ಮ ಜೊತೆ ನಾವಿದ್ದೇವೆ ಎಂದಿದ್ದಾರೆ.

ಇದನ್ನು ಓದಿ: ಗಡಿ ವಿವಾದ: ಬೆಳಗಾವಿಗೆ ಶರದ್​​ ಪವಾರ್​​​, ಸಂಜಯ್​​ ರಾವತ್​​ ಕರೆಸಿ ಸಮಾವೇಶ ನಡೆಸಲು ಮುಂದಾದ ಎಂಇಎಸ್​​​

ಒಟ್ಟಿನಲ್ಲಿ ಸದಾ ಒಂದಿಲ್ಲೊಂದು ವಿಚಾರದಲ್ಲಿ ಗಡಿ ವಿವಾದ ಕೆದಕಿ ಪುಂಡತನ ಮೆರೆಯುತ್ತಿದ್ದ ಎಂಇಎಸ್ ಮುಖಂಡರಿಗೆ ರಾಜ್ಯದ ವಿಚಾರದಲ್ಲಿ ಯಾವುದೇ ತಗಾದೆ ತೆಗೆಯದಂತೆ ಸಂಜಯ್ ರಾವತ್ ಎಚ್ಚರಿಕೆ ನೀಡಿರುವುದರಿಂದ ಎಲ್ಲರೂ ತೆಪ್ಪಗಾಗಿದ್ದಾರೆ.

ವರದಿ: ಲೋಹಿತ್ ಶಿರೋಳ
First published: January 19, 2020, 7:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories