ಸ್ಯಾಂಡಲ್​ವುಡ್​ನ ಹಿರಿಯ ನಟ ಎಚ್.ಜಿ.ಸೋಮಶೇಖರ ರಾವ್ ಇನ್ನಿಲ್ಲ

RIP H G Somashekar Rao: 1992-93ರಲ್ಲಿ ‘ಹರಕೆಯ ಕುರಿ’ ಚಿತ್ರದ ಶ್ರೇಷ್ಠ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ರಾಜ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಲೇಖಕರಾಗಿಯೂ ಅವರು ಜನಪ್ರಿಯರಾಗಿದ್ದರು. ಅಂಕಣ ಬರಹಗಳೂ ಸೇರಿದಂತೆ ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ‘ಸೋಮಣ್ಣನ ಸ್ಟಾಕ್‌ನಿಂದ’ ಅವರ ಅನುಭವ ಕಥಾನಕ. 

ಎಚ್​.ಜಿ. ಸೋಮಶೇಖರ ರಾವ್​​

ಎಚ್​.ಜಿ. ಸೋಮಶೇಖರ ರಾವ್​​

  • Share this:
ರಂಗಭೂಮಿ, ಸಿನಿಮಾ ಹಾಗೂ ಕಿರುತೆರೆ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಹಿರಿಯ ನಟ ಎಚ್.ಜಿ.ಸೋಮಶೇಖರ ರಾವ್ ನಿಧನರಾಗಿದ್ದಾರೆ. 86 ವರ್ಷದವರಾಗಿದ್ದ ಅವರು, ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಇಂದು ಮಧ್ಯಾಹ್ನ ಅಗಲಿದ್ದಾರೆ. ಸೋಮಶೇಖರ್​ ಅವರು ಮೂಲತಃ ಚಿತ್ರದುರ್ಗದವರು. ಹವ್ಯಾಸಿ ರಂಗಭೂಮಿ ಕಲಾವಿದರಾಗಿದ್ದ ಅವರು, ಭಾರತ ಹಾಗೂ ಪಾಶ್ಚಿಮಾತ್ಯ ದೇಶಗಳ ಹತ್ತಾರು ಜನಪ್ರಿಯ ರಂಗಕೃತಿಗಳ ಕನ್ನಡ ಅವತರಣಿಕೆಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 1972ರಲ್ಲಿ ತೆರೆಕಂಡ ‘ಹೃದಯ ಸಂಗಮ’ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟವರು. ರಾಶಿ ಸಹೋದರರು ನಿರ್ದೇಶನದ ಈ ಸಿನಿಮಾದಲ್ಲಿ ರಾಜ್​ಕುಮಾರ್​ ಅವರೊಂದಿಗೆ ಮೊದಲ ಬಾರಿಗೆ  ತೆರೆ ಹಂಚಿಕೊಂಡಿದ್ದರು. ಅದೂ ಕೂಡ ವೈದ್ಯರ ಪಾತ್ರದಲ್ಲಿ ಮೊದಲ ಬಾರಿಗೆ  ಕ್ಯಾಮೆರಾ ಎದುರಿಸಿದ್ದು. ನಂತರ  1981ರಲ್ಲಿ ಟಿ.ಎಸ್​. ರಂಗ​ ನಿರ್ದೇಶನದ ಸಾವಿತ್ರಿ ಚಿತ್ರದಲ್ಲಿ ನಟಿಸಿದರು. ಇದಾದ ನಂತರ ಪ್ರೇಮ, ಕಾಮನಬಿಲ್ಲು, ನಾಳೆಗಳನ್ನು ಮಾಡುವವರು, ಆ್ಯಕ್ಸಿಡೆಂಟ್, ಸುಂದರ ಸ್ವಪ್ನಗಳು, ಮಿಥಿಲೆಯ ಸೀತೆಯರು, ಹರಕೆಯ ಕುರಿ, ತಾಯಿ ಸಾಹೇಬ ಸೇರಿದಂತೆ 50ಕ್ಕೂ ಹೆಚ್ಚು ಸಿನಿಮಾಗಳು, ಹಲವು ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಕೆನರಾ ಬ್ಯಾಂಕ್​ ಉದ್ಯೋಗಿಯಾಗಿದ್ದ ಅವರಿಗೆ ರಂಗಭೂಮಿ, ಅಭಿನಯದ ಕಡೆ ಒಲವು ಮೂಡಿತ್ತು. ಇದರಿಂದಾಗಿ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಲೇ ಹವ್ಯಾಸಿ ರಂಗಭೂಮಿ ಕಲಾವಿದರಾಗಿದ್ದರು.

H T Somashekar Rao, Sandalwood, RIP Somashekar Rao, theater Artist Somashekar Rao, ಎಚ್​.ಟಿ. ಸೋಮಶೇಖರ್ ರಾವ್​, ರಂಗಭೂಮಿ ಕಲಾವಿದ, ಸೋಮಶೇಖರ್​ ರಾವ್​, ಸ್ಯಾಂಡಲ್​ವುಡ್​ ನಟ ಸೋಮಶೇಖರ್​ ರಾವ್​
ಹರಕೆಯ ಕುರಿ ಸಿನಿಮಾದಲ್ಲಿ ದತ್ತಣ್ಣ ಹಾಗೂ ಎಚ್​.ಜಿ. ಸೋಮಶೇಖರ್​ ರಾವ್​  (PC: Pragathi Ashwatha Narayana)


ಇನ್ನು ಸಾವಿತ್ರಿ ಸಿನಿಮಾದಲ್ಲಿ ಬಹಳ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೆನರಾ ಬ್ಯಾಂಕ್‌ನಲ್ಲಿ ಉನ್ನತ ಅಧಿಕಾರಿಯಾಗಿ ಸೋಮಶೇಖರ ರಾವ್ ಕಾರ್ಯನಿರ್ವಹಿಸಿದ್ದರು. ನಿವೃತ್ತಿಯ ಬಳಿಕ ಸಂಪೂರ್ಣವಾಗಿ ಅಭಿನಯ, ಸಾಹಿತ್ಯ ಹಾಗೂ ರಂಗಭೂಮಿಯತ್ತ ಮುಖ ಮಾಡಿದ್ದರು.

H T Somashekar Rao, Sandalwood, RIP Somashekar Rao, theater Artist Somashekar Rao, ಎಚ್​.ಟಿ. ಸೋಮಶೇಖರ್ ರಾವ್​, ರಂಗಭೂಮಿ ಕಲಾವಿದ, ಸೋಮಶೇಖರ್​ ರಾವ್​, ಸ್ಯಾಂಡಲ್​ವುಡ್​ ನಟ ಸೋಮಶೇಖರ್​ ರಾವ್​
ಮಿಥಿಲೆಯ ಸೀತೆಯರು ಚಿತ್ರದಲ್ಲಿ ಶಂಕರ್ ನಾಗ್​ ಹಾಗೂ ಗೀತಾ ಜೊತೆ ಸೋಮಶೇಖರ ರಾವ್​ (PC: Pragathi Ashwatha Narayana)


H T Somashekar Rao, Sandalwood, RIP Somashekar Rao, theater Artist Somashekar Rao, ಎಚ್​.ಟಿ. ಸೋಮಶೇಖರ್ ರಾವ್​, ರಂಗಭೂಮಿ ಕಲಾವಿದ, ಸೋಮಶೇಖರ್​ ರಾವ್​, ಸ್ಯಾಂಡಲ್​ವುಡ್​ ನಟ ಸೋಮಶೇಖರ್​ ರಾವ್​
ಹೃದಯ ಸಂಗಮ ಚಿತ್ರದಲ್ಲಿ ಸೋಮಶೇರ​ ರಾವ್​ (PC: Pragathi Ashwatha Narayana)


1992-93ರಲ್ಲಿ ‘ಹರಕೆಯ ಕುರಿ’ ಚಿತ್ರದ ಶ್ರೇಷ್ಠ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ರಾಜ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಲೇಖಕರಾಗಿಯೂ ಅವರು ಜನಪ್ರಿಯರಾಗಿದ್ದರು. ಅಂಕಣ ಬರಹಗಳೂ ಸೇರಿದಂತೆ ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ‘ಸೋಮಣ್ಣನ ಸ್ಟಾಕ್‌ನಿಂದ’ ಅವರ ಅನುಭವ ಕಥಾನಕ.
Published by:Anitha E
First published: