ಸಿನಿಮೀಯ ರೀತಿಯಲ್ಲಿ Kidnap: ಪೊಲೀಸರ ವಶದಲ್ಲಿ ಭರ್ಜರಿ-KGF ಸಿನಿಮಾ ಖ್ಯಾತಿಯ ಕಲಾವಿದ

ಆರೋಪಿ ಸಂಜಯ್​ ಕನ್ನಡ ಭಜರಂಗಿ, ಕೆಜಿಎಫ್​, ಭರ್ಜರಿ ಹಾಗೂ ತೆಲುಗು ಸಿನಿಮಾದಲ್ಲಿ ಸಹ ಕಲಾವಿದನಾಗಿ ನಟಿಸಿದ್ದಾನೆ. ಇನ್ನು ಸಿದ್ದೇಶ್​ ಸಿನಿಮಾಗಳಿಗೆ ಫೈನಾನ್ಸ್ ಮಾಡುತ್ತಿದ್ದ ಕಾರಣದಿಂದ ಈ ಸಹ ಕಲಾವಿದನ ಜೊತೆ ಪರಿಚಯ ಬೆಳೆಸಿಕೊಂಡಿದ್ದರಂತೆ.

ಪೊಲೀಸರ ವಶದಲ್ಲಿ ವ್ಯಕ್ತಿಯನ್ನು ಅಪಹರಿಸಿದ್ದ ಆರೋಪಿಗಳು

ಪೊಲೀಸರ ವಶದಲ್ಲಿ ವ್ಯಕ್ತಿಯನ್ನು ಅಪಹರಿಸಿದ್ದ ಆರೋಪಿಗಳು

  • Share this:
ಹಣಕ್ಕಾಗಿ ಅಪಹರಣ, ಕೊಲೆ, ದರೋಡೆ ಪ್ರಕರಣಗಳ ಕುರಿತಾಗಿ ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಕಾಣುತ್ತೇವೆ. ಅದರಲ್ಲೂ ಸಿನಿಮಾಗಳನ್ನು ನೋಡಿ ಅದರಲ್ಲಿ ಅಪರಾಧ ಮಡಲು ಪ್ಲಾನ್​ ಮಾಡಿದಂತೆಯೇ ಸಾಕಷ್ಟು ಮಂದಿ ಯೋಜನೆ ರೂಪಿಸಿ, ಕೊನೆಗೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವುದೂ ಇದೆ. ಆದರೆ ಇಲ್ಲಿ ಕೆಲವರು ಸಿನಿಮಾಗಳಲ್ಲಿ ಸಹ ಕಲಾವಿದರಾಗಿ, ಸ್ಟಂಟ್​ ಕಲಾವಿದರಾಗಿ ನಟಿಸುತ್ತಲೇ ವ್ಯಕ್ತಿಯೊಬ್ಬರನ್ನು ಕಿಡ್ನಾಪ್​ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹೌದು, ಸಿನಿಮಾ ಸ್ಟೈಲ್​ನಲ್ಲಿ ವಕೀಲರೊಬ್ಬರನ್ನು 10 ಲಕ್ಷಕ್ಕಾಗಿ ಅಪಹರಣ ಮಾಡಿದ್ದರಂತೆ ಸ್ಯಾಂಡಲ್​ವುಡ್​ನ ಕೆಲ ಸಹ ಕಲಾವಿದರು. ಈ ಘಟನೆ ನಡೆದಿರುವುದು ಬೆಂಗಳೂರಿನ ನಾಗಭಾವಿ ಬಳಿ. ಸದ್ಯ ಆರೋಪಿಗಳ ಪೊಲೀಸರ ವಶದಲ್ಲಿದ್ದಾರೆ. 

ಕಳೆದ 20ರಂದು ವಕೀಲ‌ ಅಭಯ್ ರವೀಂದ್ರ ಕುಲಕರ್ಣಿ ಎಂಬುವರನ್ನು ಬಂಧಿತ ಆರೋಪಿಗಳು ನಾಗರಭಾವಿಯ‌ ಸ್ವಾತಿ ಹೋಟೆಲ್ ಬಳಿಯಿಂದ ಅಪಹರಿಸಿದ್ದರು. ಉದ್ಯಮಿ ಜೊತೆ ಸೇರಿ ವಕೀಲರ ಮನೆಯವರಿಗೆ ಕರೆ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ವಕೀಲ‌ ಅಭಯ್ ರವೀಂದ್ರ ಕುಲಕರ್ಣಿ ಅವರು ಕಿಡ್ನಾಪ್ ಆಗಿ 12 ಗಂಟೆ ಕಳೆಯುವಷ್ಟರಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು ಇನ್ಸ್ಪೆಕ್ಟರ್ ಲೋಹಿತ್ ಹಾಗೂ ತಂಡದವರು.

Sandalwood Stunt artists kidnaped Lawyer and caught by police ae
ಪೊಲೀಸರ ವಶದಲ್ಲಿ ವ್ಯಕ್ತಿಯನ್ನು ಅಪಹರಿಸಿದ್ದ ಆರೋಪಿಗಳು. (ಕೆಂಪು ಬಣ್ಣದ ಟೀ-ಶರ್ಟ್​ ಧರಿಸಿರುವುದು ಪ್ರಮುಖ ಆರೋಪಿ ಸಿದ್ಧೇಶ್​, ಕಪ್ಪು ಬಣ್ಣದ ಟೀ-ಶರ್ಟ್​ ಧರಿಸಿ ಉದ್ದ ಗಡ್ಡ ಬಿಟ್ಟಿರುವ ವ್ಯಕ್ತಿ ಸ್ಯಾಂಡಲ್​ವುಡ್​ ಕಲಾವಿದ ಸಂಜಯ್​ )


ಅನ್ನಪೂರ್ಣೇಶ್ವರಿ ನಗರದಲ್ಲಿ ವಕೀಲರೊಬ್ಬರನ್ನು ಕಿಡ್ನಾಪ್ ಮಾಡಿ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ 9 ಮಂದಿ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಅಪಹರಣಕ್ಕೆ ಹಣಕಾಸಿನ ವ್ಯವಹಾರ ಕಾರಣ ಅನ್ನೋದು ತನಿಖೆ ವೇಳೆ ತಿಳಿದು ಬಂದಿದೆ. 9 ಆರೋಪಿಗಳ ಪೈಕಿ ಕೆಲವರು ಅನ್ಯ ರಾಜ್ಯದವರು ಇದ್ದಾರೆ ಎಂದು ಪಶ್ಚಿಮ ವಲಯದ ಡಿಸಿಪಿ ಸಂಜೀವ್ ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ: KGF Chapter 2 Release Date: ಕೆಜಿಎಫ್​ ಚಾಪ್ಟರ್​ 2 ರಿಲೀಸ್​ ಬಗ್ಗೆ ದೊಡ್ಡ ಅಪ್ಡೇಟ್ ಕೊಟ್ಟ ಪ್ರಶಾಂತ್ ನೀಲ್​..!

ಆರೋಪಿ ಸಂಜಯ್​ ಕನ್ನಡ ಭಜರಂಗಿ, ಕೆಜಿಎಫ್​, ಭರ್ಜರಿ ಹಾಗೂ ತೆಲುಗು ಸಿನಿಮಾದಲ್ಲಿ ಸಹ ಕಲಾವಿದನಾಗಿ ನಟಿಸಿದ್ದಾನೆ. ಇನ್ನು ಸಿದ್ದೇಶ್​ ಸಿನಿಮಾಗಳಿಗೆ ಫೈನಾನ್ಸ್ ಮಾಡುತ್ತಿದ್ದ ಕಾರಣದಿಂದ ಈ ಸಹ ಕಲಾವಿದರ ಜೊತೆ ಪರಿಚಯ ಬೆಳೆಸಿಕೊಂಡಿದ್ದರಂತೆ.

ವಕೀಲ ರವೀಂದ್ರ ಕುಲಕರ್ಣಿ ಅವರು ಕಾನೂನು ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಹಣ ಹೂಡಿಕೆ ಮಾಡಲು ಉದ್ಯಮಿ ಅಂದ್ರಹಳ್ಳಿಯ ಸಿದ್ದೇಶ್ ಅವರು ನಿರ್ಧರಿಸುತ್ತಾರೆ. ನಂತರ  ಹಣ ಹೂಡಿಕೆ ಕುರಿತಾಗಿ ರವೀಂದ್ರ ಕುಲಕರ್ಣಿ ಮೂಲಕ ಮಾತುಕತೆ ನಡೆಸುತ್ತಾರೆ ಉದ್ಯಮಿ ಸಿದ್ದೇಶ್​. ಆಗ ರವೀಂದ್ರ ಅವರು ಬೇಸಿಕ್​ ಚಾರ್ಜಸ್​ ಅಂತ ಸಿದ್ದೇಶ್ ಅವರ ಬಳಿಯಿಂದ 6-7ಲಕ್ಷ ಹಣ ಪಡೆದಿದ್ದರಂತೆ. ಕೊಟ್ಟ ಹಣವನ್ನು ಸಿದ್ಧೇಶ್​ ಅವರು ವಾಪಸ್ ಕೇಳಿದ್ದಾರೆ. ಆದರೆ ರವೀಂದ್ರ ಅವರು ಮಾತ್ರ ಈ ಹಣವನ್ನು ಹಿಂತಿರುಗಿಸದೇ ಇದ್ದಾಗ, ಸಿದ್ದೇಶ್ ಅವರು ಈ ಕಿಡ್ನಾಪ್​ಗೆ ಪ್ಲಾನ್ ಮಾಡಿದ್ದಾರೆ. ಅದಕ್ಕೆ ಈ ಸ್ಯಾಂಡಲ್​ವುಡ್​ನಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಂಜಯ್ ಹಾಗೂ ಇತರರು ಜೊತೆಯಾಗಿದ್ದಾರೆ.

ಇದನ್ನೂ ಓದಿ: KGF Chapter 2: ಮುಂಬೈನಲ್ಲಿ ಕಾಣಿಸಿಕೊಂಡ Yash​: ಶುರುವಾಯ್ತು ಹೊಸ ಸಿನಿಮಾ ಕುರಿತಾದ ಗುಸು ಗುಸು..!

ಸಹ ಕಲಾವಿದರಾದ ಸಂಜಯ್, ಅರುಣ್ ಹಾಗೂ ಅಶೋಕ್ ನರೇಶ್ ಅವರು ವಕೀಲ‌ ಅಭಯ್ ರವೀಂದ್ರ ಕುಲಕರ್ಣಿ ಅವರನ್ನು ಸಿನಿಮಾ‌ ಸ್ಟೈಲ್​ನಲ್ಲಿ ಎರಡು ಫಾರ್ಚ್ಯೂನರ್ ಕಾರಿನಲ್ಲಿ ಬಂದು ಅಪಹರಿಸುತ್ತಾರೆ. ವಕೀಲ ರವೀಂದ್ರ ಕುಲಕರ್ಣಿ ಅವರು ಖಾಸಗಿ ಕಂಪನಿಯ ಕಾನೂನು ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.

ವಕೀಲ ರವೀಂದ್ರ ಅವರನ್ನು ಅಪಹರಿಸಿದ ನಂತರ ಅಂದ್ರಹಳ್ಳಿಯ ಕಚೇರಿಯಲ್ಲಿ ಇಟ್ಟು,  ರವೀಂದ್ರಾ ಅವರ ಮೇಲೆ ಹಲ್ಲೆ ಮಾಡಿದ್ದಾರಂತೆ. ರವೀಂದ್ರ ಅವರ ಮನೆಯವರಿಗೆ ಕರೆ ಮಾಡಿ 10 ಲಕ್ಷ ತರುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಅಲ್ಲದೆ ರವೀಂದ್ರ ಅವರ ಮೊಬೈನ್​ನಿಂದ ಲೊಕೇಷನ್ ಕಳುಹಿಸಿ ಸಿಕ್ಕಿ ಬಿದ್ದಿದ್ದಾರೆ. ಈ ಘಟನೆ ಸಂಬಂಧ 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಅನ್ನಪೂರ್ಣೇಶ್ವಿನಗರ ಪೊಲೀಸರು.

(ಮಾಹಿತಿ: ಮಂಜುನಾಥ್ ಚಂದ್ರ​)
Published by:Anitha E
First published: