ಬೆಂಗಳೂರು: ಇಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಮತದಾನ ನಡೆಯಲಿದೆ. ನಿನ್ನೆಯಿಂದಲೇ ಮತದಾರರು ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ಸುದೀಪ್, ತಾರಾ, ಶಿವರಾಜ್ಕುಮಾರ್, ಶೃತಿ, ಪ್ರೇಮ್, ವಿಜಯ ರಾಘವೇಂದ್ರ, ಹರ್ಷಿಕಾ ಪೂಣಚ್ಚ, ಭುವನ್ ಪೊಣ್ಣನ್ನ, ದೀಪಿಕಾ ದಾಸ್ ಸೇರಿದಂತೆ ಹಲವು ಕಲಾವಿದರು ಚುನಾವಣಾ ಪ್ರಚಾರದಲ್ಲಿಯೂ ಭಾಗಿಯಾಗಿದ್ದರು. ರಾಜಧಾನಿ ಬೆಂಗಳೂರಿನಲ್ಲಿ (Bengaluru) ಬಹುತೇಕ ಚಂದನವನದ ತಾರೆಯರು (Sandalwood Celebrities) ವಾಸವಾಗಿದ್ದಾರೆ. ಪ್ರತಿ ಬಾರಿಯಂತೆ ಇಂದು ಸಹ ಸ್ಟಾರ್ಗಳು ಸಹ ವೋಟ್ (Vote) ಹಾಕಲಿದ್ದಾರೆ. ನಟ-ನಟಿಯರು ಯಾವ ಮತಗಟ್ಟೆಯಲ್ಲಿ ಮತ ಹಾಕಲಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.
ಯಾರು ಎಲ್ಲಿ ಮತದಾನ?
ಅಶ್ವಿನಿ ಪುನೀತ್ರಾಜ್ಕುಮಾರ್, ರಾಘವೇಂದ್ರ ರಾಜಕುಮಾರ್-ಸದಾಶಿವ ನಗರ, ರಾಧಿಕಾ ಪಂಡಿತ್-ದೇವಯ್ಯ ಪಾರ್ಕ್, ರಕ್ಷಿತಾ, ಪ್ರೇಮ್-ಚಂದ್ರಾಲೇಔಟ್, ಸುಧಾರಾಣಿ, ಅನಂತ್ನಾಗ್, ಬಿ ಸರೋಜಾ ದೇವಿ, ಜಗ್ಗೇಶ್-ಮಲ್ಲೇಶ್ವರಂ, ಯಶ್, ಪೂಜಾ ಗಾಂಧಿ ಸೃಜನ್ ಲೋಕೇಶ್, ಶಿವರಾಜ್ಕುಮಾರ-ಬ್ಯಾಟರಾಯನಪುರ
ದುನಿಯಾ ವಿಜಯ್-ಕತ್ರಿಗುಪ್ಪೆ, ಸುದೀಪ್-ಪುಟ್ಟೇನಹಳ್ಳಿ, ರವಿಚಂದ್ರನ್, ಅಜಯ್ ರಾವ್-ರಾಜಾಜಿನಗರ, ಧ್ರುವ ಸರ್ಜಾ-ತ್ಯಾಗರಾಜನಗರ, ಅಮೂಲ್ಯ, ರಚಿತಾ ರಾಮ್, ವಶಿಷ್ಠ ಸಿಂಹ, ಹರಿಪ್ರಿಯಾ ನೆನಪಿರಲಿ ಪ್ರೇಮ್, ಕಾರುಣ್ಯ ರಾಮ್-ಆರ್ ಆರ್ ನಗರ, ಯೋಗರಾಜ್ ಭಟ್- ಗಿರಿನಗರ
ಇದನ್ನೂ ಓದಿ: Kannada Films: ರಾಜಕೀಯವನ್ನು ಅದ್ಭತವಾಗಿ ತೆರೆಮೇಲೆ ತೋರಿಸಿದ ಕನ್ನಡ ಸಿನಿಮಾಗಳಿವು
ಮೇಘನಾ ಸರ್ಜಾ, ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್ ಮತ್ತು ತಾರಾ-ಜೆಪಿ ನಗರ, ಹರ್ಷಿಕಾ ಪೂಣಚ್ಚ-ಕೆಆರ್ ಪುರಂ, ದ್ವಾರಕೀಶ್-ಬೊಮ್ಮನಹಳ್ಳಿ, ಚಂದನ್ ಶೆಟ್ಟಿ, ಸಾಧು ಕೋಕಿಲ- ನಾಗರಭಾವಿ, ರಮೇಶ್ ಅರವಿಂದ್-ಪದ್ಮನಾಭನಗರ, ಮಾಲಾಶ್ರೀ-ಶಿವಾಜಿನಗರ, ಪ್ರಶಾಂತ್ ನೀಲ್. ಶ್ರೀಮುರಳಿ-ವಸಂತ ನಗರ, ಅರ್ಜುನ್ ಜನ್ಯ- ಹೆಬ್ಬಾಳ, ಭಾರತಿ, ಅನಿರುದ್ಧ-ಜಯನಗರ, ಶೃತಿ ಹೊಸಕೆರೆಹಳ್ಳಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ