Drug Mafia: ನಾನು ಚಿತ್ರರಂಗದಲ್ಲಿದ್ದಾಗ ಈ ರೀತಿಯ ಡ್ರಗ್ಸ್ ದಂಧೆ ಇರಲಿಲ್ಲ; ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯೆ
Sandalwood Drug Scandal: ನಾನು ಸುಮಾರು 20 ವರ್ಷಗಳು ಸಿನಿಮಾ ರಂಗದಲ್ಲಿದ್ದೆ. ಆಗ ಇಂತಹ ಘಟನೆಗಳು ನಡೆದಿರಲಿಲ್ಲ. ಸಿನಿಮಾದವರು ಸೆಲೆಬ್ರಿಟಿಗಳಾದ ಕಾರಣ ಜಾಸ್ತಿ ಪ್ರಚಾರ ಸಿಗುತ್ತಿದೆ. ನಾವೆಲ್ಲ ಗಾಜಿನ ಮನೆಯಲ್ಲಿರುವವರು. ನಮ್ಮನ್ನು ಇಡೀ ಜಗತ್ತು ನೋಡುತ್ತದೆ ಎಂದು ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಮೈಸೂರು (ಸೆ. 8): ಸ್ಯಾಂಡಲ್ವುಡ್ನಲ್ಲಿ ಡ್ರಗ್ ಮಾಫಿಯಾ ಆರೋಪ ಕೇಳಿಬಂದಿದೆ. ಈಗಾಗಲೇ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾಣಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಅನೇಕ ನಟ-ನಟಿಯರು, ನಿರ್ಮಾಪಕ, ನಿರ್ದೇಶಕರ ಕುಟುಂಬಸ್ಥರ ಮೇಲೂ ಡ್ರಗ್ಸ್ ದಂಧೆಯ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಬಿ.ಸಿ. ಪಾಟೀಲ್, ನಾನು 20 ವರ್ಷಗಳ ಕಾಲ ಸಿನಿಮಾ ರಂಗದಲ್ಲಿದ್ದೆ. ಆಗ ನಾನು ಈ ರೀತಿಯ ಡ್ರಗ್ಸ್ ಮಾಫಿಯಾ ಬಗ್ಗೆ ಕೇಳಿರಲಿಲ್ಲ. ಈ ದಂಧೆಯಲ್ಲಿ ಸಿನಿಮಾ ನಟರು, ರಾಜಕಾರಣಿಗಳ ಮಕ್ಕಳು ಯಾರೇ ಭಾಗಿಯಾಗಿದ್ದರೂ ತಪ್ಪು. ಇಂತಹ ದುಶ್ಚಟಗಳಲ್ಲಿ ಭಾಗಿಯಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ನಾನು ಸುಮಾರು 20 ವರ್ಷಗಳು ಸಿನಿಮಾ ರಂಗದಲ್ಲಿದ್ದೆ. ಆಗ ಇಂತಹ ಘಟನೆಗಳು ನಡೆದಿರಲಿಲ್ಲ. ಈಗ ಡ್ರಗ್ಸ್ ಎಂಬುದು ಸಿನಿಮಾರಂಗಕ್ಕೆ ಬಂದಿರೋದು ದುರಾದೃಷ್ಟಕರ. ಸಿನಿಮಾದವರು ಸೆಲೆಬ್ರಿಟಿಗಳು ಆದ ಕಾರಣ ಜಾಸ್ತಿ ಪ್ರಚಾರ ಸಿಗುತ್ತಿದೆ. ನಾವೆಲ್ಲ ಗಾಜಿನ ಮನೆಯಲ್ಲಿರುವವರು. ನಮ್ಮನ್ನು ಇಡೀ ಜಗತ್ತು ನೋಡುತ್ತದೆ. ಸಿನಿಮಾ ನಟರಿಗೆ ಅಭಿಮಾನಿಗಳಿರುತ್ತಾರೆ. ಅವರ ಏನೇ ಮಾಡಿದರೂ ಅದನ್ನು ಅನುಸರಿಸುತ್ತಾರೆ. ಸಿನಿಮಾದವರೇ ಈ ರೀತಿ ಮಾಡಿದರೆ ಅದು ಅಭಿಮಾನಿಗಳ ಮೇಲೆ ಪರಿಣಾಮ ಬೀರುತ್ತದೆ. ಸಿನಿಮಾರಂಗ ಸಮಾಜಕ್ಕೆ ಮಾದರಿಯಾಗಬೇಕೇ ಹೊರತು ಅವಮಾನವಾಗಬಾರದು ಎಂದು ಮೈಸೂರಿನಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪೊಲೀಸರು ಬೃಹತ್ ಡ್ರಗ್ಸ್ ಜಾಲವೊಂದನ್ನು ಸೆರೆಹಿಡಿದಿದ್ದರು. ಅವರ ವಿಚಾರಣೆ ವೇಳೆ ಸ್ಯಾಂಡಲ್ವುಡ್ನ ನಟ-ನಟಿಯರಿಗೂ ತಾವು ಡ್ರಗ್ಸ್ ಪೂರೈಕೆ ಮಾಡುತ್ತಿದ್ದುದಾಗಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ್ದ ಸಿಸಿಬಿ ಪೊಲೀಸರು ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿಯನ್ನು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಇನ್ನೂ ಹಲವು ನಟ-ನಟಿಯರ ಹೆಸರೂ ಡ್ರಗ್ಸ್ ಮಾಫಿಯಾದಲ್ಲಿ ಕೇಳಿಬಂದಿದೆ. ಅನೇಕ ಉದ್ಯಮಿಗಳು, ನಿರ್ಮಾಪಕರ ಮಕ್ಕಳ ಹೆಸರು ಕೂಡ ಈ ಪ್ರಕರಣದಲ್ಲಿ ಕೇಳಿಬಂದಿದೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ