ಬೆಂಗಳೂರು (ನ.3): ಸ್ಯಾಂಡಲ್ವುಡ್ ಡ್ರಗ್ಸ್ ಜಾಲ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗರ್ಲಾನಿ ಜಾಮೀನಿನ ಅರ್ಜಿ ಕುರಿತು ಇಂದು ಉಚ್ಛ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ. ಕಳೆದ ಎರಡು ತಿಂಗಳಿನಿಂದ ಪರಪ್ಪನ ಅಗ್ರಹಾರ ಸೇರಿರುವ ನಟಿಯರಿಬ್ಬರು ಸಲ್ಲಿಸಿದ್ದ ಜಾಮೀನು ಅರ್ಜಿ ಕುರಿತು ನ್ಯಾಯಾಲಯ ವಾದ-ಪ್ರತಿವಾದ ಆಲಿಸಿದೆ. ಈ ತೀರ್ಪು ಕಾಯ್ದಿರಿಸಿದ್ದು, ಇಂದು ತೀರ್ಮಾನ ಪ್ರಕಟಿಸಲಿದೆ. ಮಧ್ಯಾಹ್ನ 2.30ಕ್ಕೆ ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರನ್ನೊಳಗೊಂಡ ಏಕಸದಸ್ಯ ನ್ಯಾಯಪೀಠ ತೀರ್ಪು ನೀಡಲಿದೆ. ಈ ತೀರ್ಪಿನ ಮೇಲೆ ನಟಿಯರಿಬ್ಬರಿಗೆ ಜಾಮೀನಾ, ಜೈಲಾ ಎಂಬುದು ನಿರ್ಧರವಾಗಲಿದೆ.
ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ರಾಗಿಣಿ, ಸಂಜನಾ ಹಾಗೂ ಇನ್ನಿತರೆ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಎನ್ಡಿಪಿಎಸ್ ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ಈ ಹಿನ್ನಲೆ ನಟಿಯರಿಬ್ಬರು ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗಳ ವಿಚಾರಣೆ ನಡೆಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಈ ಮಧ್ಯೆ ಸಿಸಿಬಿ ನಟಿ ಮಣಿಯರಿಗೆ ಜಾಮೀನು ನೀಡದಂತೆ ಜಾಮೀನು ನೀಡದಂತೆ ಮನವಿ ಮಾಡಿತ್ತು.
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ವಾಸನೆ ಪ್ರಾರಂಭದಲ್ಲಿಯೇ ನಟಿಯರಾದ ರಾಗಿಣಿ ಮತ್ತು ಸಂಜನಾ ಮೂಗಿಗೆ ಬಡಿದಿತ್ತು. ಇದರ ಬಗ್ಗೆ ಸುಳಿವು ಪಡೆದಿದ್ದ ಸಿಸಿಬಿ ನಶೆ ನಂಟು ಅಧಾರದ ಮೇಲೆ ಇಬ್ಬರು ನಟಿಯರನ್ನು ಒಂದು ವಾರಗಳ ಕಾಲ ತೀವ್ರ ವಿಚಾರಣೆ ನಡೆಸಿತ್ತು. ಮಾತ್ರವಲ್ಲದೆ ಹಲವು ಪರೀಕ್ಷೆಗಳನ್ನು ನಡೆಸಿ ಸುಸ್ತು ಹೊಡೆಸಿದ್ದರು. ಅದಾಗಲೇ ಇಬ್ಬರು ನಟಿಯರಿಗೆ ಡ್ರಗ್ ನಶೆ ಇಳಿದು ಗಿರಕಿ ಹೊಡೆಯುವಂತಾಗಿತ್ತು. ಇನ್ನೇನು ಸಿಸಿಬಿ ವಿಚಾರಣೆ ಮುಗಿಯಿತು, ಸಿಸಿಬಿ ಕಸ್ಟಡಿ ಅಂತ್ಯವಾಗ್ತಿದಂತೆ ಜಾಮೀನು ದೊರೆಯುತ್ತದೆ ಎಂದುಕೊಂಡಿದ್ದ ನಟಿಮಣಿಯರಿಗೆ ಕೋರ್ಟ್ ಶಾಕ್ ನೀಡಿ ಪರಪ್ಪನ ಅಗ್ರಹಾರ ಜೈಲಿಗಟ್ಟಿತ್ತು. ಪರಪ್ಪನ ಆಗ್ರಹಾರದಲ್ಲಿಯೇ ದಿನಕಳೆಯುತ್ತಿರುವ ನಟಿಯರು ಇದೀಗ ಹೈ ಕೋರ್ಟ್ ತೀರ್ಪಿನ ಕಡೆಗೆ ಹೆಚ್ಚಿನ ನೀರಿಕ್ಷೆ ಇದ್ದು, ಒಂದು ವೇಳೆ ಇಲ್ಲಿ ಅವರಿಗೆ ಜಾಮೀನು ನಿರಾಕರಣೆಯಾದರೆ, ಮತ್ತೆ ಅವರ ಜೈಲುವಾಸ ಮುಂದುವರೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ