Sandalwood Drug Case: ಮಾದಕ ವಸ್ತು ಪ್ರಕರಣ: ಸ್ಟಾರ್​ ದಂಪತಿ ದಿಗಂತ್​-ಐಂದ್ರಿತಾ ವಿಚಾರಣೆ

ದಿಗಂತ್​ ಹಾಗೂ ಐಂದ್ರಿತಾ ಹೊರದೇಶದಲ್ಲಿ ನಡೆದಿರುವ ಸಾಕಷ್ಟು ಪಾರ್ಟಿಗಳಿಗೆ ಜೊತೆಯಲ್ಲಿ ಹೋಗಿದ್ದಾಗಿಯೂ ಕೆಲವೊಂದು ಸಾಕ್ಷ್ಯಗಳು ಸಿಸಿಬಿ ಪೊಲೀಸರಿಗೆ ಸಿಕ್ಕಿದೆಯಂತೆ. ‌ಇದರ ಜೊತಗೆ, ಈಗಾಗಲೇ ಬಂಧನವಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ‌ ಸಹ ಇವರ ಬಗ್ಗೆ ಬಾಯಿಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಎಲ್ಲರೂ ಸಾಕಷ್ಟು ಪಾರ್ಟಿಗಳಿಗೆ ಜೊತೆಯಲ್ಲಿಯೇ ಹೊಗುತ್ತುದ್ದೆವು ಎಂದು ಮಾಹಿತಿ ನೀಡಿದ್ದಾರಂತೆ.

ದಿಗಂತ್​ ಹಾಗೂ ಐಂದ್ರಿತಾ ರೇ

ದಿಗಂತ್​ ಹಾಗೂ ಐಂದ್ರಿತಾ ರೇ

  • Share this:
ನಟ ದಿಗಂತ್ ಹಾಗೂ ಐದ್ರಿತಾ ರೇ ಅವರು ಇಂದು ಬೆಳಿಗ್ಗೆ 11ಕ್ಕೆ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕಿದೆ. ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲು ಈ ಸ್ಟಾರ್ ದಂಪತಿಗೆ ನಿನ್ನೆಯೇ ನೋಟಿಸ್​ ನೀಡಲಾಗಿದೆ. ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ದಿಗಂತ್ ಹಾಗೂ ಐದ್ರಿತಾ ರೈ ವಿಚಾರಣೆ ನಡೆಯಲಿದೆ. ದಿಗಂತ್​ ಹಾಗೂ ಐಂದ್ರಿತಾ ಅವರಿಗೆ ಮಾದಕ ವಸ್ತು ಪ್ರಕರಣದಲ್ಲಿ ಸದ್ಯ ತಲೆಮರೆಸಿಕೊಂಡಿರುವ ಆರೋಪಿ ಶೇಕ್ ಪಾಜಿಲ್​ ಅವರೊಂದಿಗೆ ಸಂಬಂಧ ಇದೆ ಎನ್ನಲಾಗುತ್ತಿದ್ದು, ಅದರ ಬಗ್ಗೆಯೇ ವಿಚಾರಣೆ ನಡೆಲಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಸ್ಟಾರ್​ ದಂಪತಿ ಇಂದು ವಿಚಾರಣೆ ಹಾಜರಾಗುತ್ತಾರಾ, ಅಥವಾ ಏನಾದರೂ ನೆಪವೊಡ್ಡಿ ಗೈರಾಗುತ್ತಾರಾ ಅನ್ನೋ ಅನುಮಾನ ಸಾಕಷ್ಟು ಮಂದಿಯನ್ನ ಕಾಡುತ್ತಿದೆ. ಇನ್ನು ಐಂದ್ರಿತಾ ಈಗಾಗಲೇ ಆರೋಪಿ ಶೇಖ್​ ಪಾಜಿಲ್​ ಆಯೋಜಿತ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದು, ಅದರ ಫೋಟೋಗಳೂ ಪೊಲೀಸರ ಕೈ ಸೇರಿವೆ. 

ಕೊಲ.ಬೊದ ಕಸಿನೊ ಪಾರ್ಟಿಗಳಿಗೆ ಗ್ರಾಹಕರನ್ನು ಸೆಳೆಯಲು ವಿಡಿಯೋ ಮಾಡಿದ್ದ ಐದ್ರಿತಾ ರೇ, ಶೇಕ್ ಪಾಸಿಲ್ ಅವರು ನನ್ನ ಆಹ್ವಾನಿಸಿದ್ದಾರೆ. ನೀವೂ ಬನ್ನಿ ಅಂತ ಹೇಳಿರುವ ವಿಡಿಯೋ ವೈರಲ್​ ಆಗಿತ್ತು.

ದಿಗಂತ್​ ಹಾಗೂ ಐಂದ್ರಿತಾ ಹೊರದೇಶದಲ್ಲಿ ನಡೆದಿರುವ ಸಾಕಷ್ಟು ಪಾರ್ಟಿಗಳಿಗೆ ಜೊತೆಯಲ್ಲಿ ಹೋಗಿದ್ದಾಗಿಯೂ ಕೆಲವೊಂದು ಸಾಕ್ಷ್ಯಗಳು ಸಿಸಿಬಿ ಪೊಲೀಸರಿಗೆ ಸಿಕ್ಕಿದೆಯಂತೆ. ‌ಇದರ ಜೊತಗೆ, ಈಗಾಗಲೇ ಬಂಧನವಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ‌ ಸಹ ಇವರ ಬಗ್ಗೆ ಬಾಯಿಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಎಲ್ಲರೂ ಸಾಕಷ್ಟು ಪಾರ್ಟಿಗಳಿಗೆ ಜೊತೆಯಲ್ಲಿಯೇ ಹೊಗುತ್ತುದ್ದೆವು ಎಂದು ಮಾಹಿತಿ ನೀಡಿದ್ದಾರಂತೆ.

ಕಾಟನ್ ಪೇಟೆ ಠಾಣೆಯಲ್ಲಿ ದಾಖಲಾದ ಎಫ್ ಐ ಆರ್ ನಲ್ಲಿ ಪ್ರಮುಖ ಆರೋಪಿಯಾಗಿರುವ ಶಿವಪ್ರಕಾಶ್ ಜೊತೆ ಸಹ ಐದ್ರಿತಾ ರೈ ಸಾಕಷ್ಟು ಪೋಟೋಗಳು ತೆಗೆಸಿಕೊಂಡಿದ್ದು, ಅವುಗಳು ಸಹ ಸಿಸಿಬಿ ಪೊಲೀಸರಿಗೆ ಸಿಕ್ಕಿದೆ. ಅವುಗಳ ಬಗ್ಗೆಯೂ ಇಂದು ವಿಚಾರಣೆ ನಡೆಯಲಿದೆ. ಒಂದು ಕಡೆ ವಿಡಿಯೋ ಬಗ್ಗೆ, ಮತ್ತೊಂದು ಕಡೆ ಶೇಕ್ ಪಾಸಿಲ್ ಕುರಿತಾಗಿ ದಂಪತಿಯ ವಿಚಾರಣೆ ಮಾಡಲಿದ್ದು ರಾಗಿಣಿ ಹಾಗೂ ಸಂಜನಾ ಬಗ್ಗೆಯೂ ವಿಚಾರಣೆ ವೇಳೆ ಪ್ರಶ್ನೆ ಕೇಳುವ ಸಾಧ್ಯತೆ ಇದೆ.
Published by:Anitha E
First published: