Sandalwood Drugs Case: ಆರೋಪಿಗಳ ಮಾಹಿತಿ ಸೋರಿಕೆ ಆರೋಪ; ಎಸಿಪಿ, ಹೆಡ್​ಕಾನ್ಸ್​ಟೇಬಲ್​ ಅಮಾನತು

ಡ್ರಗ್ಸ್​ ಪ್ರಕರಣದ ಪ್ರಮುಖ ಆರೋಪಿಯಾಗಿರುವ ವಿರೇನ್​​ ಖನ್ನಾ ಕುರಿತ ಮಾಹಿತಿಯನ್ನು ಇವರು ಅವರ ಸಹಚರರಿಗೆ ನೀಡುತ್ತಿದ್ದರು. ಆರೋಪಿಗಳ ಮೊಬೈಲ್​ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರೂ ರಾತ್ರಿ ಸಮಯದಲ್ಲಿ  ಅವರಿಗೆ ಮೊಬೈಲ್ ಕೊಟ್ಟಿದ್ದರು.  ಮಾಹಿತಿ ಸೋರಿಕೆ ಮಾಡಲು ಆರೋಪಿ ಜೊತೆಗೆ ಎಸಿಪಿ ಡೀಲ್ ಕುದುರಿಸಿದರು.

news18-kannada
Updated:September 23, 2020, 6:50 PM IST
Sandalwood Drugs Case: ಆರೋಪಿಗಳ ಮಾಹಿತಿ ಸೋರಿಕೆ ಆರೋಪ; ಎಸಿಪಿ, ಹೆಡ್​ಕಾನ್ಸ್​ಟೇಬಲ್​ ಅಮಾನತು
ವಿಧಾನಸೌಧ
  • Share this:
ಬೆಂಗಳೂರು (ಸೆ.23): ಮಾದಕ ದ್ರವ್ಯ ಪ್ರಕರಣದಲ್ಲಿ ನಟ-ನಟಿಯರು ಹೊಂದಿರುವ ನಂಟಿನ ಕುರಿತು ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಕೇಳಿ ಬರುತ್ತಿರುವ ಎಲ್ಲಾರಿಗೂ ಸಮನ್ಸ್​ ನೀಡಲಾಗುತ್ತಿದೆ. ಯಾವುದೇ ಒತ್ತಡಕ್ಕೂ ಒಳಗಾಗದಂತೆ ಪ್ರಕರಣ ನಡೆಸಲು ರಾಜ್ಯ ಸರ್ಕಾರ ಕೂಡ ನಿರ್ದೇಶಿಸಿದೆ. ಈ ಮೂಲಕ ಈ ದಂಧೆಯನ್ನು ನಿಯಂತ್ರಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಯಿ ಕೂಡ ತಿಳಿಸಿದ್ದರು. ಈ ಹಿನ್ನಲೆ ಪ್ರಕರಣವನ್ನು ಸಿಸಿಬಿ ಪೊಲೀಸರು ಗಂಭೀರವಾಗಿ ಪರಿಗಣಿಸಿ, ತನಿಖೆ ಮುಂದುವರೆಸಿದೆ. ಈ ನಡುವೆ ಪೊಲೀಸ್​ ಇಲಾಖೆ ಅಧಿಕಾರಿಯಿಂದಲೇ ಆರೋಪಿಗಳಿಗೆ ಮಾಹಿತಿ ಸೋರಿಕೆಯಾಗುತ್ತಿರುವ ಘಟನೆ ಕೂಡ ನಡೆದಿದೆ. ಪ್ರಕರಣದ ಆರೋಪಿ ಸಹಚರರೊಂದಿಗೆ  ಸಿಸಿಬಿ ಎಸಿಪಿ ಮುದವಿ ಹಾಗೂ ಹೆಡ್​ ಕಾನ್ಸ್​ಟೇಬಲ್​ ಮಲ್ಲಿಕಾರ್ಜುನ ಅವರು ತನಿಖೆಯ ಗೌಪ್ಯ ಮಾಹಿತಿ ಸೋರಿಕೆ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನಲೆ ಅವರಿಬ್ಬರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. 

ಡ್ರಗ್ಸ್​ ಪ್ರಕರಣದ ಪ್ರಮುಖ ಆರೋಪಿಯಾಗಿರುವ ವಿರೇನ್​​ ಖನ್ನಾ ಕುರಿತ ಮಾಹಿತಿಯನ್ನು ಇವರು ಅವರ ಸಹಚರರಿಗೆ ನೀಡುತ್ತಿದ್ದರು. ಆರೋಪಿಗಳ ಮೊಬೈಲ್​ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರೂ ರಾತ್ರಿ ಸಮಯದಲ್ಲಿ  ಅವರಿಗೆ ಮೊಬೈಲ್ ಕೊಟ್ಟಿದ್ದರು.  ಮಾಹಿತಿ ಸೋರಿಕೆ ಮಾಡಲು ಆರೋಪಿ ಜೊತೆಗೆ ಎಸಿಪಿ ಡೀಲ್ ಕುದುರಿಸಿದರು.

ಡ್ರಗ್ಸ್ ಪ್ರಕರಣದ ತನಿಖೆಯಲ್ಲಿ ಎಸಿಪಿ ಪಾತ್ರ ಇಲ್ಲದೆ ಇದ್ದರೂ ಆರೋಪಿ ಜೊತೆ ಸಂಪರ್ಕ ಮುಧವಿ ಸಂಪರ್ಕ ಹೊಂದಿದ್ದರು. ಈ ಮಾಹಿತಿ ತಿಳಿದ ಬಳಿಕ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಂಟಿ ಪೊಲೀಸ್​ ಆಯುಕ್ತರು ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದರು. ಈ ವರದಿ ಬಳಿಕ ರಾಜ್ಯ ಸರ್ಕಾರ ಈ ಆದೇಶ ನೀಡಿದೆ.

ಇಂದು ಮತ್ತೆ ಸಿಸಿಬಿ ಮುಂದೆ ಹಾಜರಾದ ದಿಗಂತ್​

ಡ್ರಗ್​ ಪೆಡ್ಲರ್​ಗಳೊಂದಿಗೆ ಸಂಬಂಧ ಹೊಂದಿದ ವಿಚಾರ ಕುರಿತು ಈಗಾಗಲೇ ವಿಚಾರಣೆಗೆ ಒಳಪಟ್ಟಿದ್ದ ನಟ ದಿಂಗತ್​ರನ್ನು ಇಂದು ಮತ್ತೆ ತನಿಖೆಗೆ ಒಳಪಡಿಸಲಾಗಿದೆ. ಇಂದು ಮತ್ತೆ ಸಿಸಿಬಿ ಪೊಲೀಸರ ಮುಂದೆ ಹಾಜರಾದ ದಿಗಂತ್​ ರಿಂದ ಪೊಲೀಸರು​ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಈ ಹಿಂದೆ ಐಂದ್ರಿತಾ ಜೊತೆ ಆಕೆಯ ಗಂಡ ದಿಗಂತ್​ ಅವರನ್ನು ವಿಚಾರಣೆ ನಡೆಸಲಾಗಿತ್ತು. ಅವಶ್ಯಕತೆ ಬಿದ್ದಲ್ಲಿ ಮತ್ತೊಮ್ಮೆ ವಿಚಾರಣೆಗೆ ಬರುವುದಾಗಿ ಕೂಡ ದಿಗಂತ್​ ತಿಳಿಸಿದ್ದರು. ಈ ಹಿನ್ನಲೆ ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ದಿಗಂತ್​ ಒಬ್ಬರನ್ನೇ ಕರೆಯಿಸಿ ಮಾಹಿತಿ ಪಡೆಯಲಾಗಿದೆ.
Published by: Seema R
First published: September 23, 2020, 6:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading