ಸಾಮಾನ್ಯರಿಗೊಂದು ನ್ಯಾಯ, ಸೆಲೆಬ್ರಿಟಿಗೊಂದು ನ್ಯಾಯ! ಪರಪ್ಪನ ಅಗ್ರಹಾರದಲ್ಲಿ ರಾಗಿಣಿ, ಸಂಜನಾಗೆ ರಾಜ ಮರ್ಯಾದೆ?

ಜೈಲಿನ ಬಲ್ಲ ಮೂಲಗಳ ಪ್ರಕಾರ ಕಳೆದ ಹಲವು ದಿನಗಳಿಂದ ಜೈಲಿನಲ್ಲಿರುವ ರಾಗಿಣಿ ಮತ್ತು ಸಂಜನಾ ಅಂಡ್ ಟೀಮ್ ಗೆ ಭಕ್ಷ್ಯ ಭೋಜನ ದೊರೆಯುತ್ತಿದೆ. ಜೈಲಿನ ಸಿಬ್ಬಂದಿಯೊಬ್ಬರ ಮನೆಯಲ್ಲಿ ಆಡುಗೆ ಸಿದ್ದಪಡಿಸಿ ಸಂಜನಾ, ರಾಗಿಣಿ ಮತ್ತು ಇತರರಿಗೆ ಬೆಳಗ್ಗೆ, ಮಧ್ಯಾಹ್ನ ರಾತ್ರಿ ನೀಡಲಾಗುತ್ತಿದೆ ಎನ್ನಲಾಗಿದೆ.

news18-kannada
Updated:September 19, 2020, 7:03 PM IST
ಸಾಮಾನ್ಯರಿಗೊಂದು ನ್ಯಾಯ, ಸೆಲೆಬ್ರಿಟಿಗೊಂದು ನ್ಯಾಯ! ಪರಪ್ಪನ ಅಗ್ರಹಾರದಲ್ಲಿ ರಾಗಿಣಿ, ಸಂಜನಾಗೆ ರಾಜ ಮರ್ಯಾದೆ?
ಸಂಜನಾ, ರಾಗಿಣಿ
  • Share this:
ಬೆಂಗಳೂರು(ಸೆ.19): ಪರಪ್ಪನ ಅಗ್ರಹಾರ ಜೈಲು ಅಂದ್ರೆ ಜನಸಾಮಾನ್ಯನಿಗೆ ಅದೊಂದು ಅಭೇದ್ಯ ಕೋಟೆ. ಬಡವನಿಗೆ ಕಬ್ಬಿಣದ ಕಡಲೆಯಾದರೆ ಉಳ್ಳವನಿಗೆ ಕುಂತಲ್ಲೆ ಎಲ್ಲವೂ ದೊರೆಯುವ ತಾಣ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ನಶೆ ನಂಟು ಕೇಸ್​​ ಸಂಬಂಧ ಪರಪ್ಪನ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ನಟಿ ರಾಗಿಣಿ ಮತ್ತು ಸಂಜನಾಗೆ ಜೈಲಿನಲ್ಲಿ ಸಿಕ್ತಿದ್ಯಂತೆ ತರೆಹೆವಾರಿ ಊಟ. ಜೈಲು ಅಧಿಕಾರಿಗಳ ಸೂಚನೆಯಂತೆ ಜೈಲು ಸಿಬ್ಬಂದಿ ಮನೆಯಿಂದ ಸರಬರಾಜು ಆಗುತ್ತಿದೆ ನಿತ್ಯ ಮೂರು ಹೊತ್ತು ಊಟ. ಹೌದು ಸದ್ಯ ಎಲ್ಲೆಡೆ ಕೊರೋನಾ ಹಾವಳಿ ಇರುವುದರಿಂದ ಜೈಲಿನ ಸಜಾ ಬಂಧಿ ಅಥವಾ ವಿಚಾರಣಾದೀನ ಆರೋಪಿಗಳಿಗೆ  ಹೊರಗಡೆಯಿಂದ ಊಟ ತಿಂಡಿ ಕೊಡುವುದು ನಿಷೇಧಿಸಲಾಗಿದೆ. ಆದ್ರೆ ಪ್ಯಾಕಿಂಗ್ ಮಾಡಲಾಗಿರುವ ತಿಂಡಿ ತಿನಿಸುಗಳನ್ನು ಮಾತ್ರ ಅದ್ರಲ್ಲು‌ ಮೂರು ದಿನಗಳ ಕಾಲ ಕ್ವಾರಂಟೈನ್ ಕೊಠಡಿಯಲ್ಲಿಟ್ಟು ಬಳಿಕ ಸಂಬಂಧಿಸಿದ ಜೈಲು ವಾಸಿಗೆ ಸಿಬ್ಬಂದಿ ತಲುಪಿಸುತ್ತಾರೆ. ಆದ್ರೆ ಸಂಜನಾ ಮತ್ತು ರಾಗಿಣಿ ವಿಚಾರದಲ್ಲಿ ಜೈಲಿನ ಅಧಿಕಾರಿಗಳೇ ಜೈಲಿನ ನಿಯಮಗಳನ್ನು ಗಾಳಿಗೆ ತೂರಿದ್ದಾರಾ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ.

ಜೈಲಿನ ಬಲ್ಲ ಮೂಲಗಳ ಪ್ರಕಾರ ಕಳೆದ ಹಲವು ದಿನಗಳಿಂದ ಜೈಲಿನಲ್ಲಿರುವ ರಾಗಿಣಿ ಮತ್ತು ಸಂಜನಾ ಅಂಡ್ ಟೀಮ್ ಗೆ ಭಕ್ಷ್ಯ ಭೋಜನ ದೊರೆಯುತ್ತಿದೆ. ಜೈಲಿನ ಸಿಬ್ಬಂದಿಯೊಬ್ಬರ ಮನೆಯಲ್ಲಿ ಆಡುಗೆ ಸಿದ್ದಪಡಿಸಿ ಸಂಜನಾ, ರಾಗಿಣಿ ಮತ್ತು ಇತರರಿಗೆ ಬೆಳಗ್ಗೆ, ಮಧ್ಯಾಹ್ನ ರಾತ್ರಿ  ನೀಡಲಾಗುತ್ತಿದೆ ಎನ್ನಲಾಗಿದೆ. ಅದು ಜೈಲು ಅಧಿಕಾರಿಗಳ ಸೂಚನೆ ಮೇರೆಗೆ ಅಲ್ಲಿನ ಸಿಬ್ಬಂದಿ ನಿತ್ಯ ಮನೆಯಲ್ಲಿ ಆಡುಗೆ ಮಾಡಿ ಜೈಲಿನಲ್ಲಿರುವ ಸಂಜನಾ,ರಾಗಿಣಿ ಅಂಡ್ ಗ್ಯಾಂಗ್ ಗೆ ಕಳುಹಿಸುತ್ತಿದ್ದಾರೆ ಎನ್ನಲಾಗಿದೆ.

ಹೈ ಫೈ ಲೈಪ್ ಲೀಡ್ ಮಾಡುತ್ತಿದ್ದ ನಶೆ ನಟಿಯರು ತರಹೆವಾರಿ ಸ್ಟೈಲ್​​ನಲ್ಲಿ ಮಾಡಿದ ಚಿಕನ್ ಮಟನ್ ಸೇವಿಸುತ್ತಿದ್ದವರು. ಉಪ್ಪು ಕಾರವಿಲ್ಲದೆ ಸಪ್ಪೆ ಊಟ ಮಾಡಲು ಒಲ್ಲೆ ಎಂದಿದ್ದರು. ಜೊತೆಗೆ ಮನೆ ಊಟಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಹೊರಗಡೆ ಟೈಟ್ ಸೆಕ್ಯೂರಿಟಿ ಜೊತೆಗೆ ಮಾಧ್ಯಮಗಳು ಇರುವುದರಿಂದ ಸಾಧ್ಯವಿಲ್ಲ ಎಂದಿದ್ದ ಅಧಿಕಾರಿಗಳು. ಕೊನೆಗೆ ಸಿಬ್ಬಂದಿ ಮನೆ ಊಟಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Bangalore Rain: ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಸಹಿತ ಧಾರಾಕಾರ ಮಳೆ

ಒಟ್ಟಿನಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಶಶಿಕಲಾ, ನಲಪಾಡ್, ದುನಿಯಾ ವಿಜಿ ಪ್ರಕರಣ ಸೇರಿದಂತೆ ಎಲ್ಲಾ ಸಂದರ್ಭಗಳಲ್ಲಿಯು ವಿವಿಐಪಿಗಳಿಗೆ ಐಷಾರಾಮಿ ಸೌಲಭ್ಯ ಕಲ್ಪಿಸಿಕೊಟ್ಟ ಅಪಖ್ಯಾತಿಗೆ ಒಳಗಾಗುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದೀಗ ರಾಗಿಣಿ, ಸಂಜನಾ ಪ್ರಕರಣದಲ್ಲು ಮುಂದುವರಿದಿದ್ದು, ಜೈಲಿನಲ್ಲಿ ಇನ್ನಷ್ಟು ದಿನ ಸೆಲೆಬ್ರಿಟಿಗೊಂದು ಸಾಮಾನ್ಯನಿಗೊಂದು ಕಾನೂನು ಎಂಬುದನ್ನು ಕಾದು ನೋಡಬೇಕಿದೆ.
Published by: Ganesh Nachikethu
First published: September 19, 2020, 6:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading