Sandalwood Drug Scandal: ಸಂಜನಾಗೆ ಸೆ.30ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ; ಕೋರ್ಟ್​ನಲ್ಲಿ ಕಣ್ಣೀರಿಟ್ಟ ನಟಿ

Sanjjanaa Galrani: ವಿಚಾರಣೆ ವೇಳೆ ನಟಿ ಸಂಜನಾ ಕಣ್ಣೀರು ಹಾಕಿರುವ ಘಟನೆ ಕೂಡ ನಡೆದಿದೆ. ನನ್ನ ಕಂಪನಿಯಲ್ಲಿ ನೂರಾರು ಉದ್ಯೋಗಿಗಳು ಕೆಲಸ ಮಾಡುತ್ತಿದ್ದು, ನಾನು ಜೈಲಿನಲ್ಲಿದ್ದರೆ, ಅವರು ಬೀದಿಗೆ ಬರುತ್ತಾರೆ. ತಮ್ಮನ್ನು ಬಿಡುಗಡೆ ಮಾಡಿ ಎಂದು ಕೇಳಿಕೊಂಡರು

news18-kannada
Updated:September 18, 2020, 6:18 PM IST
Sandalwood Drug Scandal: ಸಂಜನಾಗೆ ಸೆ.30ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ; ಕೋರ್ಟ್​ನಲ್ಲಿ ಕಣ್ಣೀರಿಟ್ಟ ನಟಿ
ಸಂಜನಾ ಗಲ್ರಾನಿ.
  • Share this:
Sandalwood Drug Scandal | ಡ್ರಗ್ಸ್​ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿ ಅವರ ನ್ಯಾಯಾಂಗ ಬಂಧನವನ್ನು ಸೆ.30ರವರೆಗೆ ವಿಸ್ತರಿಸಿ ನ್ಯಾಯಾಲಯ ಆದೇಶ ನೀಡಿದೆ. ಈ ಹಿಂದೆ ಸೆ.18ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿ ಆದೇಶ ನೀಡಲಾಗಿತ್ತು. ಇಂದು ನ್ಯಾಯಾಂಗ ಬಂಧನ ಮುಕ್ತಾಯವಾದ ಹಿನ್ನಲೆ ಅವರನ್ನು ಮತ್ತೆ ಎನ್​ಡಿಪಿಎಸ್​ ಕೋರ್ಟ್​ ಮುಂದೆ ಹಾಜರು ಪಡಿಸಲಾಗಿತ್ತು. ಈ ವೇಳೆ ವಿಡಿಯೋ ಕಾನ್ಫೆರನ್ಸ್​ ಮೂಲಕ ಅವರ ವಿಚಾರಣೆ ನಡೆಸಿದ ನ್ಯಾಯಾಧೀಶರು ಈ ತಿಂಗಳು ಅಂತ್ಯದವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದ್ದಾರೆ. ವಿಚಾರಣೆ ವೇಳೆ ನಟಿ ಸಂಜನಾ ಕಣ್ಣೀರು ಹಾಕಿರುವ ಘಟನೆ ಕೂಡ ನಡೆದಿದೆ. ನನ್ನ ಕಂಪನಿಯಲ್ಲಿ ನೂರಾರು ಉದ್ಯೋಗಿಗಳು ಕೆಲಸ ಮಾಡುತ್ತಿದ್ದು, ನಾನು ಜೈಲಿನಲ್ಲಿದ್ದರೆ, ಅವರು ಬೀದಿಗೆ ಬರುತ್ತಾರೆ. ತಮ್ಮನ್ನು ಬಿಡುಗಡೆ ಮಾಡಿ ಎಂದು ಕೇಳಿಕೊಂಡರು. ಅಲ್ಲದೇ ನನಗೆ ಪ್ರತಿದಿನ ರಕ್ತದೊತ್ತಡ ಹೆಚ್ಚಾಗುತ್ತಿದ್ದು, ಬಂಧನದಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ತನಗೆ ಜಾಮೀನು ಸಿಗುತ್ತದೊ, ಇಲ್ಲವೋ ಎಂದು ನ್ಯಾಯಾಧೀಶರನ್ನೇ ಸಂಜನಾ ಕೇಳಿದ್ದಾರೆ. ಈ ವೇಳೆ ಅವರಿಗೆ ಉತ್ತರಿಸಿದ  ನ್ಯಾಯಾಧೀಶರು, ನಿಮ್ಮ ಪರ ವಕೀಲರು ಹೇಳಿಕೆಗಳನ್ನು ದಾಖಲಿಸಿ ಅರ್ಜಿ ಸಲ್ಲಿಸಿದ್ದಾರೆ. ಇಂದು ವಿಚಾರಣೆ ನಡೆಸಿ ನಾಳೆ ಆಕ್ಷೇಪಣೆಗೆ ಹೋಗಲಿದೆ. ಬಳಿಕ ಜಾಮೀನು ಅರ್ಜಿ ತೀರ್ಮಾನ ಮಾಡುತ್ತೇವೆ. ಅಲ್ಲಿವರೆಗೆ ಜೈಲಿನಲ್ಲಿಯೇ ಆರಾಮವಾಗಿ ಇರಿ ಎಂದು ಸಲಹೆ ನೀಡಿದರು
Published by: Seema R
First published: September 18, 2020, 5:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading