Ragini Dwivedi: ರಾಗಿಣಿ ದ್ವಿವೇದಿಗೆ ಜೈಲಿನ ವೈದ್ಯರಿಂದಲೇ ಬೆನ್ನು ನೋವಿಗೆ ಚಿಕಿತ್ಸೆ

ರಾಗಿಣಿ ಯಾರೊಂದಿಗೂ ಅಷ್ಟಾಗಿ ಮಾತಾಡ್ತಿಲ್ಲ. ಮೌನವಾಗಿದ್ದಾರೆ ಎನ್ನಲಾಗಿದೆ. ಸದ್ಯ ಕಾರಾಗೃಹ ಪಂಜರದ ಗಿಣಿಯಾಗಿರೋ ರಾಗಿಣಿ ಘಟನೆಯಿಂದ ಪರಿತಪ್ಪಿಸ್ತಿದ್ದಾರೆ.

news18-kannada
Updated:September 15, 2020, 9:00 PM IST
Ragini Dwivedi: ರಾಗಿಣಿ ದ್ವಿವೇದಿಗೆ ಜೈಲಿನ ವೈದ್ಯರಿಂದಲೇ ಬೆನ್ನು ನೋವಿಗೆ ಚಿಕಿತ್ಸೆ
ನಟಿ ರಾಗಿಣಿ
  • Share this:
ಬೆಂಗಳೂರು(ಸೆ.15): ಸ್ಯಾಂಡಲ್​​ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತಳಾದ ನಟಿ ರಾಗಿಣಿ‌ ಪರಪ್ಪನ‌ ಅಗ್ರಹಾರ ಕಾರಾಗೃಹದಲ್ಲಿ ಕಳೆದಿದ್ದಾರೆ. ಈ‌ ನಡುವೆ ರಾಗಿಣಿ ಪೂರ್ತಿ ಡಲ್ ಆಗಿದ್ದಾರೆ ಎನ್ನಲಾಗಿದೆ. ಜೈಲಿನ ಕೆಳಮಹಡಿಯ ಎರಡನೇ ಕೊಠಡಿಯೊಳಗಿರೋ ರಾಗಿಣಿ ಕಣ್ಣೀರು ಹಾಕ್ತಿದ್ದಾರೆ. ರಾತ್ರಿ ಜೈಲಿಗೆ ಹೋಗುವಾಗ ಸಿಬ್ಬಂದಿಗೆ ವ್ಯಾನ್​​​ನಲ್ಲೇ ಪ್ರಶ್ನಿಸಿದ್ದ ರಾಗಿಣಿ, ಆಸ್ಪತ್ರೆಗೆ ಕರೆದೊಯ್ತೀವಿ ಎಂದು ನನಗೆ ಹೇಳಿದ್ರು.ಈಗ ಎಲ್ಲಿಗೆ ಕರೆದುಕೊಂಡು  ಹೋಗ್ತಿರೋದು ಎಂದಿದ್ದಾರೆ. ಕಾರಾಗೃಹಕ್ಕೆ ನಿಮ್ಮನ್ನ ಕರೆದೊಯ್ಯಲಾಗ್ತಿದೆ ಎಂದೊಡನೆ ಕೊನೆಗೆ ಏನೂ ಮಾತಾಡದೆ ಸೈಲೆಂಟ್ ಆಗಿದ್ದಾರೆ. ಈ ನಡುವೆ ಕಾರಾಗೃಹದ ಅಧಿಕಾರಿಗಳ ಬಳಿ ರಾತ್ರಿ ಮನವಿ ಮಾಡಿದ್ದ ನಟಿ, ನನಗೆ ತೀವ್ರ ಬೆನ್ನು ನೋವಿನ ಸಮಸ್ಯೆಯಿದೆ. ವೈದ್ಯರನ್ನ ಕರೆಸಿ ಎಂದಿದ್ದಾರೆ.

ರಾಗಿಣಿ ಜೈಲಾಧಿಕಾರಿಗಳ ಬಳಿಯೂ ಕಣ್ಣೀರು ಹಾಕಿದ್ದಾರೆ. ಇನ್ನು ಇಂದು ಬೆಳಗ್ಗೆ 11.30ರ ಸುಮಾರಿಗೆ ಕಾರಾಗೃಹ ವೈದ್ಯರಿಂದ ನಟಿ ರಾಗಿಣಿ ತಪಾಸಣೆ ನಡೆದಿದೆ. ಜೈಲಿನ ಡಾಕ್ಟರ್ ಉಮಾ ಎಂಬುವರಿಂದ ನಟಿ ರಾಗಿಣಿಗೆ ಚಿಕಿತ್ಸೆ ನೀಡಿದ್ದಾರೆ. ಸದ್ಯ ನಟಿ ರಾಗಿಣಿಗೆ ರೆಸ್ಟ್ ಮಾಡಲು ಸೂಚಿಸಲಾಗಿದೆ. ಬೆಳಗ್ಗೆ ಚಿತ್ರನ್ನ ನೀಡಿದ್ದ ತಿಂಡಿಯನ್ನ ತಿಂದಿದ್ದ ನಟಿ ರಾಗಿಣಿಗೆ ಮಧ್ಯಾಹ್ನ ಚಪಾತಿ ಮತ್ತು ದಾಲ್ ಕೊಟ್ಟಿದ್ದಾರೆ. ಎಂದಿಗಿಂತ ನಟಿ ರಾಗಿಣಿ ಜೈಲಿನಲ್ಲಿಂದು ಬೇಸರದ ಮನಸ್ಥಿತಿಯಲ್ಲಿದ್ದು, ಬೆನ್ನು ನೋವಿಗೆ ಜೈಲು ವೈದ್ಯರಿಂದಲೇ ಚಿಕಿತ್ಸೆ ಕೊಡಲಾಗಿದೆ.

ಇನ್ನು ಬ್ಯಾರರ್​​ನಲ್ಲಿರೋ ರಾಗಿಣಿ ಯಾರೊಂದಿಗೂ ಅಷ್ಟಾಗಿ ಮಾತಾಡ್ತಿಲ್ಲ. ಮೌನವಾಗಿದ್ದಾರೆ ಎನ್ನಲಾಗಿದೆ. ಸದ್ಯ ಕಾರಾಗೃಹ ಪಂಜರದ ಗಿಣಿಯಾಗಿರೋ ರಾಗಿಣಿ ಘಟನೆಯಿಂದ ಪರಿತಪ್ಪಿಸ್ತಿದ್ದಾರೆ.
Published by: Ganesh Nachikethu
First published: September 15, 2020, 8:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading