news18-kannada Updated:September 14, 2020, 1:19 PM IST
ರಾಗಿಣಿ ದ್ವಿವೇದಿ
ಬೆಂಗಳೂರು (ಸೆ. 14): ಸ್ಯಾಂಡಲ್ವುಡ್ ಡ್ರಗ್ಸ್ ದಂಧೆಯ ಆರೋಪದಲ್ಲಿ ಸಿಸಿಬಿ ವಶದಲ್ಲಿದ್ದ ನಟಿ ರಾಗಿಣಿ ದ್ವಿವೇದಿ ಸೇರಿದಂತೆ 5 ಆರೋಪಿಗಳ ಜಾಮೀನು ಅರ್ಜಿಯನ್ನು ಮುಂದೂಡಲಾಗಿದೆ. ಡ್ರಗ್ಸ್ ದಂಧೆಯಲ್ಲಿ ನಟಿ ರಾಗಿಣಿ ದ್ವಿವೇದಿ ಹೆಸರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಆಕೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ ನಟಿ ಸಂಜನಾ ಕೂಡ ಅರೆಸ್ಟ್ ಆಗಿದ್ದರು. ರಾಗಿಣಿ, ಸಂಜನಾ ಸೇರಿದಂತೆ ಆರು ಆರೋಪಿಗಳ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದ್ದು, ಇಂದೇ ಜಾಮೀನು ಅರ್ಜಿ ವಿಚಾರಣೆಯೂ ಇತ್ತು. ಸಂಜನಾ ಗಲ್ರಾನಿಯನ್ನು ಹೊರತುಪಡಿಸಿ ಉಳಿದ ಐವರು ಆರೋಪಿಗಳೂ ಜಾಮೀನು ಅರ್ಜಿ ಸಲ್ಲಿಸಿದ್ದರು. ಅವರೆಲ್ಲರ ಜಾಮೀನು ಅರ್ಜಿ ವಿಚಾರಣೆಯನ್ನು ಸೆ. 16ಕ್ಕೆ ಮುಂದೂಡಲಾಗಿದೆ.
ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿ, ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ರಾಗಿಣಿ, ಸಂಜನಾ, ರಾಹುಲ್, ವಿರೇನ್ ಖನ್ನಾ, ರವಿಶಂಕರ್ ಹಾಗೂ ಲೂಯಿ ಪೆಪ್ಪರ್ ಕಸ್ಟಡಿ ಇಂದು ಅಂತ್ಯವಾಗಲಿದೆ. ಮಧ್ಯಾಹ್ನದ ಬಳಿಕ ಎಲ್ಲಾ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು. ವಿಡಿಯೋ ಕಾನ್ಫರೆನ್ಸ್ನಲ್ಲಿ ಸಿಸಿಎಚ್ 33 ನ್ಯಾಯಾಧೀಶರ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಗುವುದು. ಬಹುತೇಕ ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಕೇಳೋದು ಅನುಮಾನ ಎನ್ನಲಾಗಿದೆ.
ಇದನ್ನೂ ಓದಿ: Sandalwood Drug Scandal: ಸ್ಯಾಂಡಲ್ವುಡ್ ಡ್ರಗ್ ಕೇಸ್; ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಭವಿಷ್ಯ ಇಂದು ನಿರ್ಧಾರ
ಇಂದು ಮಧ್ಯಾಹ್ನದ ಬಳಿಕ ರಾಗಿಣಿ, ಸಂಜನಾ ಸೇರಿದಂತೆ ಎಲ್ಲ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು. ಒಟ್ಟು 11 ದಿನಗಳ ತನಿಖೆಯಲ್ಲಿ ರಾಗಿಣಿ ಯಾವುದೇ ಮಾಹಿತಿಯನ್ನು ಬಾಯಿ ಬಿಟ್ಟಿಲ್ಲ. ನಟಿ ರಾಗಿಣಿ ಇಷ್ಟು ದಿನವಾದರೂ ಯಾವ ವಿಷಯವನ್ನೂ ಬಾಯಿಬಿಟ್ಟಿಲ್ಲ. ನಟಿ ರಾಗಿಣಿಯನ್ನು ವಿಚಾರಣೆ ಮಾಡೋದು ತನಿಖಾಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಏನೇ ಪ್ರಶ್ನೆ ಮಾಡಿದರೂ ನನಗೇನೂ ಗೊತ್ತಿಲ್ಲ, ಮರೆತಿದ್ದೇನೆ ಎಂದು ರಾಗಿಣಿ ಹೇಳುತ್ತಿದ್ದಾರೆ ಎನ್ನಲಾಗಿದೆ. ಡಿಲೀಟ್ ಆಗಿರುವ ಸಂದೇಶಗಳನ್ನು ಮುಂದಿಟ್ಟುಕೊಂಡು ವಿಚಾರಣೆ ಮಾಡಿದರೂ ರಾಗಿಣಿ ತನಿಖೆಗೆ ಸರಿಯಾಗಿ ಸಹಕಾರ ನೀಡುತ್ತಿಲ್ಲ.
ನಟಿಯರಾದ ರಾಗಿಣಿ ಮತ್ತು ಸಂಜನಾ ಅವರನ್ನು ಮಡಿವಾಳದ ಇಂಟರಾಗೇಷನ್ ಸೆಲ್ಗೆ ಕರೆದೊಯ್ಯಲಿದ್ದಾರೆ. ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ವಿಚಾರಣೆ ನಡೆಸಿ, ಮಧ್ಯಾಹ್ನದ ಬಳಿಕ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು.
Published by:
Sushma Chakre
First published:
September 14, 2020, 12:31 PM IST