HOME » NEWS » State » SANDALWOOD DRUG SCANDAL RAGINI DWIVEDI AND SANJJANAA GALRANI BAIL PLEA REJECTED BY NDPS COURT IN DRUG CASE GNR

ಸ್ಯಾಂಡಲ್​​ವುಡ್​​ ಡ್ರಗ್ಸ್ ಕೇಸ್​​​: ನಟಿ ರಾಗಿಣಿ, ಸಂಜನಾ ಜಾಮೀನು ಅರ್ಜಿ ವಜಾ, ಜೈಲೇ ಗತಿ

ಡ್ರಗ್ಸ್ ಕೇಸ್​​ ಸಂಬಂಧ ವಾದ-ಪ್ರತಿವಾದ ಆಲಿಸಿದ ಎನ್​ಡಿಪಿಎಸ್ ನ್ಯಾಯಾಲಯ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಪ್ರಕಟಿಸಿದೆ.

news18-kannada
Updated:September 28, 2020, 4:55 PM IST
ಸ್ಯಾಂಡಲ್​​ವುಡ್​​ ಡ್ರಗ್ಸ್ ಕೇಸ್​​​: ನಟಿ ರಾಗಿಣಿ, ಸಂಜನಾ ಜಾಮೀನು ಅರ್ಜಿ ವಜಾ, ಜೈಲೇ ಗತಿ
ರಾಗಿಣಿ ಹಾಗೂ ಸಂಜನಾ
  • Share this:
ಬೆಂಗಳೂರು(ಸೆ.28): ಸ್ಯಾಂಡಲ್​​ವುಡ್​​​ ಡ್ರಗ್ಸ್​ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಿತು. ಕೇಸ್​​ ಸಂಬಂಧ ವಾದ-ಪ್ರತಿವಾದ ಆಲಿಸಿದ ಎನ್​ಡಿಪಿಎಸ್ ನ್ಯಾಯಾಲಯ ರಾಗಿಣಿ ಮತ್ತು ಸಂಜನಾ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಪ್ರಕಟಿಸಿದೆ. ಹೀಗಾಗಿ ಇಂದಾದರೂ ಇಬ್ಬರು ನಟಿಯರಿಗೆ ಜಾಮೀನು ಸಿಗುತ್ತೇ ಎಂಬ ನಂಬಿಕೆ ಹುಸಿಯಾಗಿದೆ. ಆದ್ದರಿಂದ ಇನ್ನೊಂದಷ್ಟು ಪರಪ್ಪನ ಅಗ್ರಹಾರ ಜೈಲೇ ಗತಿಯಾಗಿದೆ. ವಿಶೇಷ ಕೋರ್ಟ್ ನ್ಯಾ. ಜಿ ಎಂ ಶೀನಪ್ಪನವರು ಈ ಆದೇಶ ಹೊರಡಿಸಿದ್ದಾರೆ. ಸಿಸಿಬಿ ತನಿಖೆ ಇನ್ನು ಪ್ರಾಥಮಿಕ ಹಂತದಲ್ಲಿದೆ. ಈ ಹಂತದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ಧಾರೆ.

ಇನ್ನು, ರಾಗಿಣಿ ಮತ್ತು ಸಂಜನಾ ಜೊತೆಗೆ ರಾಹುಲ್ ಥಾನ್ಸೆ, ವಿರೇಂದ್ರ ಖನ್ನಾ, ರವಿಶಂಕರ್ ಕೂಡ ಜಾಮೀನು ಕೋರಿ ಕೋರ್ಟ್​ ಮೊರೆ ಮೆಟ್ಟಿಲೇರಿದ್ದರು. ಇಬ್ಬರು ನಟಿಯರೊಂದಿಗೆ ಈ ಮೇಲಿನವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬಳಿಕ ಕೋರ್ಟ್ ತನ್ನ ಅಂತಿಮ ತೀರ್ಪು ನೀಡಿದೆ. ಎಲ್ಲರ ಅರ್ಜಿ ವಿಚಾರಣೆಯನ್ನು ಇನ್ನೊಂದು ಮೂರು ನಾಲ್ಕು ದಿನಕ್ಕೆ ಮುಂದೂಡಿದೆ.

ಹಾಗೆಯೇ ಇದುವರೆಗೂ ತಲೆಮರೆಸಿಕೊಂಡಿರುವ ಪ್ರಕರಣದ A1 ಆರೋಪಿ ಶಿವಪ್ರಕಾಶ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಲಾಯಿತು. ಮತ್ತೊಬ್ಬ ಆರೋಪಿ ವಿನಯ್ ಕುಮಾರ್ ಜಾಮೀನು ಅರ್ಜಿಯೂ ವಜಾಗೊಳಿಸಲಾಯಿತು.
ರವಿಶಂಕರ್, ಪ್ರಶಾಂತ್ ರಂಕ, ಅಭಿಸ್ವಾಮಿ, ವೈಭವ್ ಜೈನ್ ಮತ್ತು ಪ್ರಶಾಂತ್ ರಾಜು ಜಾಮೀನು ಅರ್ಜಿ ವಿಚಾರಣೆ ಸೆ.30ಕ್ಕೆ ಮುಂದೂಡಲಾಗಿದೆ. ವಿರೇನ್ ಖನ್ನ ಜಾಮೀನು ಅರ್ಜಿ ವಿಚಾರಣೆ ಅ.1ಕ್ಕೆ ಮುಂದೂಡಲಾಗಿದೆ.
Published by: Ganesh Nachikethu
First published: September 28, 2020, 4:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories