HOME » NEWS » State » SANDALWOOD DRUG SCANDAL DIGANTH RECEIVED NOTICE FROM CCB POLICE FOR SECOND TIME AE

Diganth: ಸ್ಯಾಂಡಲ್​ವುಡ್​ ಡ್ರಗ್ಸ್​​ ಪ್ರಕರಣ: ನಟ ದಿಗಂತ್​ಗೆ ಎರಡನೇ ಸಲ ನೋಟಿಸ್​..!

Sandalwood Drug Scandal: ದಿಗಂತ್​ ಈ ಹಿಂದೆ ಮೊದಲ ಸಲ ವಿಚಾರಣೆಗೆ ಹಾಜರಾಗಿದ್ದಾಗ ಯಾವುದೇ ಆತಂಕವಿಲ್ಲದಂತೆ ಕಾಣಿಸಿಕೊಂಡಿದ್ದರು. ಆದರೆ ವಿಚಾರಣೆ ನಡೆದ ಮರುದಿನ ಇದ್ದ ಸಿನಿಮಾದ ಚಿತ್ರೀಕರಣಕ್ಕೆ ಗೈರಾದರು. ಈಗ ಮತ್ತೆ ದಿಗಂತ್​ ಅವರಿಗೆ ನೋಟಿಸ್​ ನೀಡಲಾಗಿದ್ದು, ಈ ಸಲ ಅವರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

Anitha E | news18-kannada
Updated:September 23, 2020, 11:17 AM IST
Diganth: ಸ್ಯಾಂಡಲ್​ವುಡ್​ ಡ್ರಗ್ಸ್​​ ಪ್ರಕರಣ: ನಟ ದಿಗಂತ್​ಗೆ ಎರಡನೇ ಸಲ ನೋಟಿಸ್​..!
ದಿಗಂತ್
  • Share this:
ಮಾದಕ ವಸ್ತು ಪ್ರಕರಣಕ್ಕೆ ಸಬಂಧಿಸಿದಂತೆ ಈಗಾಗಲೇ ಸ್ಟಾರ್​ ದಂಪತಿ ಐಂದ್ರಿತಾ ರೇ ಹಾಗೂ ದಿಗಂತ್​ ಅವರಿಗೆ ನೋಟಿಸ್​ ನೀಡಿ, ವಿಚಾರಣೆ ನಡೆಸಿದ್ದಾರೆ ಸಿಸಿಬಿ ಪೊಲೀಸರು. ಈ ಪ್ರಕರಣದಲ್ಲಿ ಒಮ್ಮೆ ವಿಚಾರಣೆಗೆ ಹಾಜರಾಗಿದ್ದ ಸೆಲೆಬ್ರಿಟಿ ದಂಪತಿಗಳಲ್ಲಿ ಒಬ್ಬರಿಗೆ ಮತ್ತೆ ನೋಟಿಸ್​ ನೀಡಲಾಗಿದೆ. ಹೌದು, ನಟ ದಿಗಂತ್​ಗೆ ಎರಡನೇ ಬಾರಿಗೆ ಸಿಸಿಬಿ ನೋಟೀಸ್ ನೀಡಿದೆ. ಈ ಹಿಂದೆ ನಡೆಸಿದ ವಿಚಾರಣೆಯಲ್ಲಿ ದಿಗಂತ್​ ನೀಡಿರುವ ಹೇಳಿಕೆ ಆಧಾರದ ಮೇಲೆ ಮತ್ತೆ ಅವರಿಗೆ ನೋಟಿಸ್​ ನೀಡಲಾಗಿದ್ದು, ತನಿಖೆ ಮುಂದುವರೆಸುತ್ತಿದ್ದಾರೆ ಅಧಿಕಾರಿಗಳು.  ದಿಗಂತ್ ನೀಡಿದ್ದ ಮಾಹಿತಿ ಮೇರೆಗೆ ಡ್ರಗ್​ ಪೆಡ್ಲರ್​ಗಳ ವಿಚಾರಣೆಯೂ ನಡೆದಿತ್ತು. ಹಲವು ಕಡೆ ತೆರಳಿ ಸಿಸಿಬಿ ಪೊಲೀಸರು ತನಿಖೆ ನಡೆಸಿದ್ದರು. ಜೊತೆಗೆ ದಿಗಂತ್​  ಹಾಗೂ ಐಂದ್ರಿತಾ ಅವರ ಮೊಬೈಲ್​ನಲ್ಲಿದ್ದ ಮಾಹಿತಿಯನ್ನೂ ಕಲೆ ಹಾಕಿದ್ದರು. ಈ  ಎಲ್ಲ ಮಾಹಿತಿ ಆಧಾರದ ಮೇಲೆ ಈಗ ಮತ್ತೆ ದಿಗಂತ್​ ಅವರನ್ನು ವಿಚಾರಣೆಗೆ ಕರೆಯಲಾಗಿದೆ ಎನ್ನಲಾಗುತ್ತಿದೆ. 

ದಿಗಂತ್​ ಈ ಹಿಂದೆ ಮೊದಲ ಸಲ ವಿಚಾರಣೆಗೆ ಹಾಜರಾಗಿದ್ದಾಗ ಯಾವುದೇ ಆತಂಕವಿಲ್ಲದಂತೆ ಕಾಣಿಸಿಕೊಂಡಿದ್ದರು. ಆದರೆ ವಿಚಾರಣೆ ನಡೆದ ಮರುದಿನ ಇದ್ದ ಸಿನಿಮಾದ ಚಿತ್ರೀಕರಣಕ್ಕೆ ಗೈರಾದರು. ಈಗ ಮತ್ತೆ ದಿಗಂತ್​ ಅವರಿಗೆ ನೋಟಿಸ್​ ನೀಡಲಾಗಿದ್ದು, ಈ ಸಲ ಅವರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Diganth Manchale, Aindrita Ray, Sandalwod, Drug Mafia, Ragini, Shivakumar, Drug Mafia in Sandalwood CCB police issued notice , Diganth and Aindrita RayDrug Mafia in Sandalwood CCB police issued notice to Diganth and Aindrita Ray
ದಿಗಂತ್​ - ರಾಗಿಣಿ


ಈ ಹಿಂದೆ ದಿಗಂತ್​ ಒಂದು ವೇಳೆ ತಪ್ಪು ಮಾಹಿತಿ ನೀಡಿದ್ದು ಅಥವಾ ತಮ್ಮ ಮೊಬೈಲ್​ನಲ್ಲಿದ್ದ ಸಾಕ್ಷ್ಯ ನಾಶ ಮಾಡಿದ್ದರೆ ದಿಗಂತ್​ಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಸಿಸಿಬಿ ಪೊಲೀಸರು ಇನ್ನೂ ಸಾಕಷ್ಟು ಮಂದಿಯನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು, ಅವರಲ್ಲಿ ಯಾರಾದರೂ ದಿಗಂತ್ ವಿರುದ್ದ ಹೇಳಿಕೆ ನೀಡಿರಬಹುದು ಎಂದು ಅಂದಾಜಿಸಲಾಗುತ್ತಿದೆ.  ಸದ್ಯಕ್ಕೆ, ಕೇವಲ ವಿಚಾರಣೆ ಇದೆ ಬನ್ನಿ ಎಂದಷ್ಟೆ ದಿಗಂತ್​ಗೆ ಸೂಚಿಸಿದ್ದಾರೆ ಸಿಸಿಬಿ ಅಧಿಕಾರಿಗಳು. ಹೀಗಾಗಿಯೇ ತೀವ್ರ ಕುತೂಹಲ ಮೂಡಿಸಿದೆ ದಿಗಂತ್ ಅವರ ಎರಡನೇ ಬಾರಿಯ ವಿಚಾರಣೆ.

ಇದನ್ನೂ ಓದಿ: Shwetha Srivatsav: ಮಗಳಿಗೆ ಬಿಸಿ ಬಿಸಿ ರಾಗಿ ಮುದ್ದೆಯ ರುಚಿ ತೋರಿಸಿದ ನಟಿ ಶ್ವೇತಾ ಶ್ರೀವಾತ್ಸವ್​..!​

ಇನ್ನು ಈ ಪ್ರಕರಣಕ್ಕೆ ತಿರುವು ನೀಡುವ ಮಾಹಿತಿ ನೀಡಿದ್ದ ಆರೋಪಿ ರವಿಶಂಕರ್ ಅವರ ಮಾಜಿ ಪತ್ನಿಗೂ ಪೊಲೀಸರು ನೋಟಿಸ್​ ನೀಡಿದ್ದಾರೆ. ರವಿಶಂಕರ್​ ಅವರ ಪತ್ನಿ ಅರ್ಚನಾ ನಾಯ್ಕ್​ ವಿಚಾರಣೆ ಸಹ ನಡೆಯಲಿದೆ. ಈ ವೇಳೆ ಅವರೇನಾದರೂ ರಾಗಿಣಿ ಕುರಿತಂತೆ ಹೆಚ್ಚಿನ ಮಾಹಿತಿ ನೀಡಿದ್ದಲ್ಲಿ, ರಾಗಿಣಿ ಅವರ ಜೊತೆಗೆ ದಿಂಗತ್​ ಹಾಗೂ ಐಂದ್ರಿತಾ ಅವರಿಗೂ ಕಷ್ಟ ಎದುರಾಗಲಿದೆ. ಕಾರಣ ಐಂದ್ರಿತಾ ಹಾಗೂ ದಿಗಂತ್​ ರಾಗಿಣಿ ಜೊತೆ ಸಾಕಷ್ಟು ಪಾರ್ಟಿಗಳಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಈಗಾಗಲೇ ಸಾಕ್ಷ್ಯಗಳು ಸಿಕ್ಕಿವೆಯಂತೆ.

aindrita drugs
ಅರ್ಬಾಜ್ ಖಾನ್, ಶೇಖ್ ಫಾಜಿಲ್ ಜೊತೆಗೆ ನಟಿ ಐಂದ್ರಿತಾ.
ದಿಗಂತ್​ ಹಾಗೂ ಐಂದ್ರಿತಾ ಹೊರದೇಶದಲ್ಲಿ ನಡೆದಿರುವ ಸಾಕಷ್ಟು ಪಾರ್ಟಿಗಳಿಗೆ ಜೊತೆಯಲ್ಲಿ ಹೋಗಿದ್ದಾಗಿಯೂ ಕೆಲವೊಂದು ಸಾಕ್ಷ್ಯಗಳು ಸಿಸಿಬಿ ಪೊಲೀಸರಿಗೆ ಸಿಕ್ಕಿದೆಯಂತೆ. ‌ಇದರ ಜೊತಗೆ, ಈಗಾಗಲೇ ಬಂಧನವಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ‌ ಸಹ ಇವರ ಬಗ್ಗೆ ಬಾಯಿಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಎಲ್ಲರೂ ಸಾಕಷ್ಟು ಪಾರ್ಟಿಗಳಿಗೆ ಜೊತೆಯಲ್ಲಿಯೇ ಹೊಗುತ್ತುದ್ದೆವು ಎಂದು ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

ದಿಗಂತ್​ ಸಿನಿಮಾ ವಿಷಯಕ್ಕೆ ಬಂದರೆ ಗಾಳಿಪಟ 2, ಮಾರಿಗೋಲ್ಡ್​ ಹಾಗೂ ಹುಟ್ಟುಹಬ್ಬದ ಶುಭಾಷಯಗಳು ಚಿತ್ರೀಕರಣದ ಹಂತದಲ್ಲಿವೆ. ಇತ್ತೀಚೆಗಷ್ಟೆ ಮಾರಿಗೋಲ್ಡ್​ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಸೆ. 18ರಂದು ದಿಗಂತ್​ ಅದಕ್ಕೆ ಗೈರಾಗಿದ್ದರು. ಈ ಚಿತ್ರವನ್ನು ರಾಘವೇಂದ್ರ ನಾಯಕ್​ ನಿರ್ದೇಶಿಸುತ್ತಿದ್ದು, ಲಾಕ್​ಡೌನ್​ಗೂ ಮೊದಲು ಸಿನಿಮಾದ ಚಿತ್ರೀಕರಣ ಕೊಂಚ ಮುಗಿದಿದೆ.
Published by: Anitha E
First published: September 23, 2020, 11:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading