Sandalwood Drug Scandal: ನಟ ಲೂಸ್​ ಮಾದ ಯೋಗಿ, ಕ್ರಿಕೆಟರ್​ ಅಯ್ಯಪ್ಪ ವಿಚಾರಣೆ

ನಾನು ಯಾವುದೇ ಪಾರ್ಟಿಗೂ ಹೋಗಿಲ್ಲ. ಡ್ರಗ್ಸ್​ಗೂ ನನಗೂ ಸಂಬಂಧವಿಲ್ಲ. ಡ್ರಗ್ಸ್​ ಮಾರಾಟ ಹಾಗೂ ಖರೀದಿಯಲ್ಲಿ ನಾನು ಭಾಗಿಯಾಗಿಲ್ಲ. ಈ ದಂಧೆಗೆ ಸಂಪರ್ಕವಿಲ್ಲ- ಲೂಸ್​ ಮಾದ ಯೋಗಿ

ಲೂಸ್​ ಮಾದ ಯೋಗಿ- ಅಯ್ಯಪ್ಪ

ಲೂಸ್​ ಮಾದ ಯೋಗಿ- ಅಯ್ಯಪ್ಪ

  • Share this:
ಬೆಂಗಳೂರು (ಸೆ.21): ಸ್ಯಾಂಡಲ್​ವುಡ್​ನಲ್ಲಿ ಮಾದಕ ವಸ್ತುಗಳ ನಂಟಿನ ವಿಚಾರಣೆ ಕುರಿತು ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಬ್ಬರು ನಟ, ನಟಿ ಸೇರಿದಂತೆ ಅನೇಕರನ್ನು ವಿಚಾರಣೆಗೆ ಒಳಪಡಿಸಿದ್ದು, ಅನೇಕ ಮಾಹಿತಿ ಕಲೆ ಹಾಕುವ ಯತ್ನ ಮಾಡಿದ್ದಾರೆ. ಇದೀಗ ಹೊಸ ಬೆಳವಣಿಗೆಯಲ್ಲಿ ನಟ ಲೂಸ್​ ಮಾದ ಯೋಗಿ ಹಾಗೂ ಕ್ರಿಕೆಟರ್​ ಅಯ್ಯಪ್ಪ ಅವರ ಹೆಸರು ಕೇಳಿ ಬಂದಿದ್ದು, ಅವರನ್ನು ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ. ಡ್ರಗ್​ ಪೆಡ್ಲರ್​ಗಳು ನೀಡಿದ ಮಾಹಿತಿ ಮೇರೆಗೆ  ಅಧಿಕಾರಿಗಳು ಇವರಿಬ್ಬರ ವಿಚಾರಣೆ ನಡೆಸಿದ್ದಾರೆ. ಕೆಲದಿನಗಳ ಹಿಂದೆ (ಸೆ.19) ಇವರ ವಿಚಾರಣೆ ನಡೆಸಲಾಗಿದ್ದು,  ಈ ವೇಳೆ ಈ ದಂಧೆ ಬಗ್ಗೆ ತಮಗೆ ಏನು ಗೊತ್ತಿಲ್ಲ ಎಂಬ ಮಾಹಿತಿಯನ್ನು ಇವರು ನೀಡಿದ್ದಾರೆ ಎನ್ನಲಾಗಿದೆ ಎಂದು ನ್ಯೂಸ್​ 18 ಕನ್ನಡಕ್ಕೆ ಉನ್ನತ ಮೂಲಗಳು ಮಾಹಿತಿ ನೀಡಿದೆ.

ಇವರಿಬ್ಬರು ಜೊತೆಗೆ ಇಬ್ಬರು ಕಿರುತೆರೆ ನಟಿಯರನ್ನು ಕೂಡ ವಿಚಾರಣೆ ನಡೆಸಲಾಗಿದೆ. ಅಲ್ಲದೇ ಮತ್ತೊಮ್ಮೆ ವಿಚಾರಣೆಗಾಗಿ ನಾಳೆ ಹಾಜರಾಗುವಂತೆ ನೊಟೀಸ್​ ನೀಡಲಾಗಿದೆ ಎನ್ನಲಾಗಿದೆ.

ಅಧಿಕಾರಿಗಳ ಮುಂದೆ ಮಾಹಿತಿ ನೀಡಿರುವ ಲೂಸ್​ ಮಾದ ಯೋಗಿ, ನಾನು ಯಾವುದೇ ಪಾರ್ಟಿಗೂ ಹೋಗಿಲ್ಲ. ಡ್ರಗ್ಸ್​ಗೂ ನನಗೂ ಸಂಬಂಧವಿಲ್ಲ. ಡ್ರಗ್ಸ್​ ಮಾರಾಟ ಹಾಗೂ ಖರೀದಿಯಲ್ಲಿ ನಾನು ಭಾಗಿಯಾಗಿಲ್ಲ. ಈ ದಂಧೆಗೆ ಸಂಪರ್ಕವಿಲ್ಲ ಎಂದಿದ್ದಾರೆ

ಇನ್ನು ಈ ಪ್ರಕರಣದಲ್ಲಿ ಎ ದರ್ಜೆಯ ನಟರು ಕೂಡ ಭಾಗಿಯಾಗಿದ್ದಾರೆ ಎಂದು ಈ ಜಿಂದೆ ಉದ್ಯಮಿ ಪ್ರಶಾಂತ್​ ಸಂಬರಗಿ ಹೊಸ ಬಾಂಬ್​ ಹಾಕಿದ್ದರು. ಅದರ ಬೆನ್ನಲ್ಲೇ ಇದೀಗ ಲೂಸ್​ ಮಾದ ಯೋಗಿ ಹೆಸರು ಕೇಳಿ ಬಂದಿದೆ.

ಇದನ್ನು ಓದಿ: ಸೆ.24ರವರೆಗೆ ನಟಿ ಸಂಜನಾ, ರಾಗಿಣಿಗೆ ಜೈಲೇ ಗತಿ; ತನಿಖೆಗೆ ತುಪ್ಪದ ಬೆಡಗಿಯಿಂದ ಸಿಗುತ್ತಿಲ್ಲ ಸಹಕಾರ

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿದ್ದ ರಾಷ್ಟ್ರೀಯ ಮಟ್ಟದಲ್ಲಿ ಈವೆಂಟ್ಸ್ ನಡೆಸುತ್ತಿದ್ದ ವಿರೇನ್​ ಖನ್ನಾರನ್ನು ಮತ್ತೆ ಸಿಸಿಬಿ ವಶಕ್ಕೆ ಪಡೆದಿದೆ. ಹೆಚ್ಚಿನ ವಿಚಾರಣೇಗಾಗಿ ವಿರೇನ್​ ಖನ್ನರನ್ನು ಐದು ದಿನಗಳ ಪೊಲೀಸ್​ ಕಸ್ಟಡಿಗೆ ಒಪ್ಪಿಸಿ ಎನ್​ಡಿಪಿಎಸ್​ ನ್ಯಾಯಾಲಯ ಆದೇಶ ನೀಡಿದೆ.

ಇನ್ನು ಪ್ರಕರಣದಲ್ಲಿ   ಪರಪ್ಪನ ಅಗ್ರಹಾರ ಸೇರಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗುಲ್ರಾನಿ ಜಾಮೀನು ಅರ್ಜಿಯನ್ನು ನ್ಯಾಯಾಲಯ ಸೆಪ್ಟೆಂಬರ್​​ 24ಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ಇನ್ನು ಮೂರು ದಿನಗಳ ಕಾಲ ನಟಿಯರಿಬ್ಬರು ಜೈಲಿನಲ್ಲಿಯೇ ಕಾಲ ಕಳೆಯಬೇಕಿದೆ.
Published by:Seema R
First published: