HOME » NEWS » State » SANDALWOOD DRUG SCANDAL AINDRITA RAY DIGANT INQUIRY HAS DONE BY CCB POLICE WHAT WILL HAPPEN NEXT TO THE STAR COUPLE

Sandalwood Drug Scandal: ಐಂದ್ರಿತಾ ರೇ-ದಿಗಂತ್ ವಿಚಾರಣೆ ಮುಕ್ತಾಯ, ಏನಾಗಲಿದೆ ತಾರಾ ಜೋಡಿಯ ಭವಿಷ್ಯ?

ನಟಿ ಐಂದ್ರಿತಾ ರೇ ಹಾಗೂ ನಟ ದಿಗಂತ್ ಇಂದು ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಈ ವೇಳೆ ಐಂದ್ರಿತಾ ರೇ ಅವರನ್ನು ಇನ್ಸ್‌ಪೆಕ್ಟರ್‌ ಅಂಜುಮಾಲಾ ವಿಚಾರಣೆ ನಡೆಸಿದ್ದರೆ, ದಿಗಂತ್ ಅವರನ್ನು ಇನ್ಸ್‌ಪೆಕ್ಟರ್‌ ಪುನೀತ್‌ ವಿಚಾರಣೆ ನಡೆಸಿದ್ದಾರೆ.

news18-kannada
Updated:September 16, 2020, 3:40 PM IST
Sandalwood Drug Scandal: ಐಂದ್ರಿತಾ ರೇ-ದಿಗಂತ್ ವಿಚಾರಣೆ ಮುಕ್ತಾಯ, ಏನಾಗಲಿದೆ ತಾರಾ ಜೋಡಿಯ ಭವಿಷ್ಯ?
ದಿಗಂತ್​ ಹಾಗೂ ಐಂದ್ರಿತಾ ರೇ
  • Share this:
ಬೆಂಗಳೂರು (ಸೆಪ್ಟೆಂಬರ್‌ 16); ಡ್ರಗ್ಸ್‌ ಪ್ರಕರಣ ಕಳೆದ ಎರಡು ಮೂರು ವಾರಗಳಿಂದ ಸಾಕಷ್ಟು ಸದ್ದು ಮಾಡುತ್ತಲೇ ಇದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಲೇ ಸಿಸಿಬಿ ಪೊಲೀಸರು ನಗರದ ಅನೇಕ ಡ್ರಗ್ಸ್‌ ಪೆಡ್ಲರ್‌ಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ಡ್ರಗ್‌ ಡೀಲರ್‌ಗಳ ಜೊತೆ ಸಂಬಂಧ ಹೊಂದಿದ್ದ ಪರಿಣಾಮ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾನಿಯನ್ನೂ ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಇವರ ಬಂಧನದ ಜೊತೆಗೆ ಡ್ರಗ್ ಮಾಫಿಯಾ ಹಾಗೂ ಸ್ಯಾಂಡಲ್‌ವುಡ್‌ ನಡುವಿನ ಸಂಬಂಧದ ಬಗ್ಗೆಯೂ ಸಾಕಷ್ಟು ಪ್ರಶ್ನೆ ಮೂಡಿದ್ದವು. ಈ ನಡುವೆ ಸ್ಯಾಂಡಲ್‌ವುಡ್‌ ತಾರಾ ಜೋಡಿ ಎನಿಸಿಕೊಂಡ ನಟಿ ಐಂದ್ರಿತಾ ರೈ ಹಾಗೂ ದಿಗಂತ್‌ಗೂ ಸಹ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಮಂಗಳವಾರ ನೊಟೀಸ್‌ ನೀಡಿದ್ದರು. ಇದರಂತೆ ಇಬ್ಬರೂ ಇಂದು ವಿಚಾರಣೆಗೆ ಹಾಜರಾಗಿ ಅಧಿಕಾರಿಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಆದರೆ, ಇವರ ಭವಿಷ್ಯವನ್ನು ಹಿರಿಯ ಅಧಿಕಾರಿಗಳು ನಿರ್ಧರಿಸಲಿದ್ದಾರೆ ಎನ್ನಲಾಗುತ್ತಿದೆ.

ಹೇಗಿತ್ತು ತಾರಾ ಜೋಡಿಯ ವಿಚಾರಣೆ?;

ನಟಿ ಐಂದ್ರಿತಾ ರೇ ಹಾಗೂ ನಟ ದಿಗಂತ್ ಇಂದು ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಈ ವೇಳೆ ಐಂದ್ರಿತಾ ರೇ ಅವರನ್ನು ಇನ್ಸ್‌ಪೆಕ್ಟರ್‌ ಅಂಜುಮಾಲಾ ವಿಚಾರಣೆ ನಡೆಸಿದ್ದರೆ, ದಿಗಂತ್ ಅವರನ್ನು ಇನ್ಸ್‌ಪೆಕ್ಟರ್‌ ಪುನೀತ್‌ ವಿಚಾರಣೆ ನಡೆಸಿದ್ದಾರೆ.

ಐಂದ್ರಿತಾ ರೇ ಅವರಿಗೆ ವಿಚಾರಣೆ ವೇಳೆ, "ಶೇಖ್ ಫಾಸಿಲ್ ಗೂ ನಿನಗೂ ಎಷ್ಟು ವರ್ಷಗಳ ಪರಿಚಯ? ಶ್ರೀಲಂಕಾ ಕೊಲೊಂಬೊದ ಕ್ಯಾಸಿನೋ ನಿನಗೆ ಯಾರು ಇನ್ ವೇಟ್ ಮಾಡಿದ್ದು..? ಕ್ಯಾಸಿನೋ ಪರವಾಗಿ ವಿಡಿಯೋ ಮಾಡಿದ್ದರ ಉದ್ದೇಶವೇನು..? ಕ್ಯಾಸಿನೋದ ಪರವಾಗಿ ವಿಡಿಯೋ ಮಾಡಲಿಕ್ಕೆ ನಿಮಗೇನಾದ್ರೂ ಸಂಭಾವನೆ ಕೊಟ್ಟಿದ್ರಾ..?" ಎಂದು ಪ್ರಶ್ನೆಗಳನ್ನು ಮಾಡಲಾಗಿದೆ.

ಈ ಪ್ರಶ್ನೆಗಳಿಗೆ ಉತ್ತರಿಸಿರುವ ಐಂದ್ರಿತಾ ರೇ, "ಫಾಸಿಲ್ ನನ್ನ ಕ್ಯಾಸಿನೋ ಗೆ ಇನ್ ವೇಟ್ ಮಾಡಿದ್ದ. ನನಗೂ ಕ್ಯಾಸಿನೋಗೆ ಹೋಗೋ ಇಷ್ಟ ಇತ್ತು ಹಾಗಾಗಿ ನಾನು ಬರ್ತೇನೆ ಎಂದಿದ್ದೆ. ಇದೇ ವೇಳೆ ಒಂದು ವಿಡಿಯೋ ಮಾಡಿ ಕಳಿಸಿ‌ ಎಂದಿದ್ದ ಹೀಗಾಗಿ ಮಾಡಿದೆ. ಆದರೆ, ಅದಕ್ಕಾಗಿ ನಾನು ಯಾವುದೇ ಸಂಭಾವನೆ ಪಡೆದಿಲ್ಲ" ಎಂದು ತಿಳಿಸಿದ್ದಾರೆ.

ಇನ್ನೂ ನಟ ದಿಗಂತ್ ಅವರಿಗೆ, "ನೀವು ಯಾವ ಯಾವ ಪಾರ್ಟಿಗಳಿಗೆ ಹೋಗಿದ್ರಿ..? ಎಷ್ಟು ದಿನಗಳಿಗೊಮ್ಮೆ ಪಾರ್ಟಿಗಳಿಗೆ ಹೋಗ್ತಾ ಇದ್ರಿ.. ನಿಮ್ಮನ್ನು ಯಾರು ಪಾರ್ಟಿಗೆ ಇನ್ವೈಟ್ ಮಾಡ್ತಾ ಇದ್ರು.? ಅಥವಾ ನೀವೆ ಸ್ವಂತ ಹಣದಲ್ಲಿ ಪಾರ್ಟಿಗಳಿಗೆ ಹೋಗ್ತಾ ಇದ್ರಾ..? ಕೊಲಂಬೊದ ಕ್ಯಾಸಿನೋದ ಪಾರ್ಟಿಯನ್ನು ಯಾರೆಲ್ಲಾ ಸೇರಿದ್ರಿ..? ಶೇಖ್ ಪೈಸೂಲ್ ನಿಮಗೆ ಪರಿಚಯ ಇದೆಯಾ..? ಅವರನ್ನ ಏನಾದ್ರೂ ಮೀಟ್ ಮಾಡಿದ್ದೀರಾ..? ಶಿವಪ್ರಕಾಶ್ ಜೊತೆ ಸಾಕಷ್ಟು ಪಾರ್ಟಿ ಗಳಲ್ಲಿ ಪೋಟೋ ತೆಗೆಸಿಕೊಂಡಿದ್ದೀರಾ‌.? ಶಿವಪ್ರಕಾಶ್ ಎಲ್ಲಿದ್ದಾರೆ ಗೊತ್ತಾ..? ಅವರು ಹೇಗೆ ನಿಮಗೆ ಪರಿಚಯ..?" ಎಂದು ಹಲವಾರು ಪ್ರಶ್ನೆಗಳನ್ನು ಮಾಡಲಾಗಿದೆ.

ಇದನ್ನೂ ಓದಿ : Indian Railways; ಸೆಪ್ಟೆಂಬರ್‌ 21 ರಿಂದ ಹೆಚ್ಚುವರಿ 40 ರೈಲುಗಳ ಸಂಚಾರಕ್ಕೆ ಸಚಿವಾಲಯ ಒಪ್ಪಿಗೆ; ಇಲ್ಲಿದೆ ಮಾರ್ಗಗಳ ಪಟ್ಟಿ!ಇದಕ್ಕೆ ಸ್ಪಷ್ಟ ಉತ್ತರ ನೀಡಿರುವ ನಟ ದಿಗಂತ್, "ನಾವು ಪಾರ್ಟಿಗಳಿಗೆ ಹೋಗ್ತಾ ಇದ್ದದ್ದು ನಿಜ. ಕೆಲವರು ನಮ್ಮನ್ನ ಪಾರ್ಟಿಗೆ ಆಹ್ವಾನ ಮಾಡ್ತಾ ಇದ್ರು ನಮಗೆ ಇಷ್ಟ ಇದ್ರೆ ನಾವು ಹೋಗ್ತಾ ಇದ್ವಿ. ಆದರೆ, ಈ ಪಾರ್ಟಿಗಳಲ್ಲಿ ಡ್ರಗ್ಸ್‌ ಸೇವನೆ ಮಾಡುತ್ತಿದ್ದ ಬಗ್ಗೆ ನಮಗೆ ಗೊತ್ತಿಲ್ಲ. ನಾವೂ ಸಹ ಯಾವುದೇ ಡ್ರಗ್ಸ್‌ ಸೇವನೆ ಮಾಡುತ್ತಿರಲಿಲ್ಲ" ಎಂದು ಉತ್ತರ ನೀಡಿದ್ದಾರೆ ಎನ್ನಲಾಗುತ್ತಿದೆ.

ವಿಚಾರಣೆ ವೇಳೆ ಐಂದ್ರಿತಾ ರೇ ಮತ್ತು ದಿಗಂತ್ ಸರಾಗವಾಗಿ ಯಾವುದೇ ಅಳುಕಿಲ್ಲದೆ ಉತ್ತರ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಇಬ್ಬರ ಮೊಬೈಲ್‌ಗಳನ್ನೂ ಸಹ ಪೊಲೀಸರು ಪರಿಶೀಲನೆಗೆ ಒಳಪಡಿಸಿದ್ದಾರೆ. ಹೀಗಾಗಿ ವಿಚಾರಣೆ ಮುಗಿಸಿದ ತಕ್ಷಣ ಇಬ್ಬರನ್ನೂ ಬಿಟ್ಟು ಕಳಿಸಲಾಗಿದೆ. ಮತ್ತೆ ಯಾವುದೇ ಸಂದರ್ಭದಲ್ಲಿ ವಿಚಾರಣೆಗೆ ಕರೆದರೂ ಸಹ ಬರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ. ಆದರೂ ಇವರ ಭವಿಷ್ಯ ಮುಂದೆ ಏನಾಗಲಿದೆ ಎಂಬುದು ಅಧಿಕಾರಿಗಳ ತೀರ್ಮಾನದ ಮೇಲೆ ನಿಂತಿದೆ ಎನ್ನಲಾಗುತ್ತಿದೆ.
Published by: MAshok Kumar
First published: September 16, 2020, 3:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories