ಸೆ.24ರವರೆಗೆ ನಟಿ ಸಂಜನಾ, ರಾಗಿಣಿಗೆ ಜೈಲೇ ಗತಿ; ತನಿಖೆಗೆ ತುಪ್ಪದ ಬೆಡಗಿಯಿಂದ ಸಿಗುತ್ತಿಲ್ಲ ಸಹಕಾರ

ಲಾಕ್​​ ಡೌನ್​ ಸಂದರ್ಭದಲ್ಲಿ ನಟಿ ರಾಗಿಣಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದರು. ಎಫ್ಐಆರ್ ದಾಖಲಿಸುವ ಮುನ್ನವೇ ಅವರ ತನಿಖೆ ಮಾಡಿದ್ದಾರೆ. ರಾಗಿಣಿ ಬಂಧನದ ವೇಳೆ ಕಾನೂನು ಪ್ರಕ್ರಿಯೆಯನ್ನು ಪಾಲಿಸಿಲ್ಲ. ಮತ್ತೊಬ್ಬ ಆರೋಪಿ ಹೇಳಿಕೆ ಆಧರಿಸಿ ನನ್ನ ಕಕ್ಷಿದಾರರ ಹೆಸರು ಸೇರಿಸಿದ್ದಾರೆ. ಅವರಿಗೆ ಜಾಮೀನು ನೀಡಬೇಕು

ಸಂಜನಾ, ರಾಗಿಣಿ

ಸಂಜನಾ, ರಾಗಿಣಿ

 • Share this:
  ಬೆಂಗಳೂರು (ಸೆ.21) ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ  ಪರಪ್ಪನ ಅಗ್ರಹಾರ ಸೇರಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗುಲ್ರಾನಿ ಜಾಮೀನು ಅರ್ಜಿಯನ್ನು ನ್ಯಾಯಾಲಯ ಸೆಪ್ಟೆಂಬರ್​​ 24ಕ್ಕೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ಇನ್ನು ಮೂರು ದಿನಗಳ ಕಾಲ ನಟಿಯರಿಬ್ಬರು ಜೈಲಿನಲ್ಲಿಯೇ ಕಾಲ ಕಳೆಯಬೇಕಿದೆ. ಇಂದು ಬೆಳಿಗ್ಗೆ ರಾಗಿಣಿ ಹಾಗೂ ಸಂಜನಾ ಸೇರಿದಂತೆ 6 ಮಂದಿ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಇತ್ತು. ಅದನ್ನು ಈ ಅರ್ಜಿಯ ವಿಚಾರಣೆಯನ್ನು ಮಧ್ಯಾಹ್ನ 3ಕ್ಕೆ ಮುಂದಕ್ಕೆ ಹಾಕಲಾಗಿತ್ತು.  ಈ ಹಿಂದೆ ಅಂದರೆ ಸೆ. 18ರಂದು ಸಂಜನಾ ಅವರ ಜಾಮೀನು ಅರ್ಜಿ ವಿಚಾರಣೆ ಇತ್ತು. ಆದರೆ ಅದನ್ನು ಸೆ.19ಕ್ಕೆ ಮುಂದೂಡಲಾಗಿತ್ತು. ನಂತರ ಸೆ. 19ರಂದು ಇಬ್ಬರೂ ನಟಿಯರ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಅದನ್ನು ಇಂದಿಗೆ ಅಂದರೆ ಸೆ. 21ಕ್ಕೆ ಮುಂದೂಡಿತ್ತು. 

  ಇದೇ ವೇಳೆ ರಾಗಿಣಿ ಪರ ವಾದ ಮಂಡಿಸಿದ ಅವರ ವಕೀಲರು, ಲಾಕ್​​ ಡೌನ್​ ಸಂದರ್ಭದಲ್ಲಿ ನಟಿ ರಾಗಿಣಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದರು. ಎಫ್ಐಆರ್ ದಾಖಲಿಸುವ ಮುನ್ನವೇ ಅವರ ತನಿಖೆ ಮಾಡಿದ್ದಾರೆ. ರಾಗಿಣಿ ಬಂಧನದ ವೇಳೆ ಕಾನೂನು ಪ್ರಕ್ರಿಯೆಯನ್ನು ಪಾಲಿಸಿಲ್ಲ. ಮತ್ತೊಬ್ಬ ಆರೋಪಿ ಹೇಳಿಕೆ ಆಧರಿಸಿ ನನ್ನ ಕಕ್ಷಿದಾರರ ಹೆಸರು ಸೇರಿಸಿದ್ದಾರೆ. ಅವರಿಗೆ ಜಾಮೀನು ನೀಡಬೇಕು  ಎಂದರು.

  ಇನ್ನು ಇದಕ್ಕೆ ಪ್ರತಿಯಾಗಿ ವಾದಮಂಡಿಸಿದ ಸಿಸಿಬಿ ಪರ ವಕೀಲರು ನಟಿ ರಾಗಿಣಿ ತನಿಖೆಗೆ ಸಹಕರಿಸುತ್ತಿಲ್ಲ ಎಂದು ದೂರಿದ್ದಾರೆ. ಮೊಬೈಲ್ ನ ಪಾಸ್ ವರ್ಡ್ ನೀಡಲಿಲ್ಲ. ಟೆಕ್ನಕಲ್ ಸಹಾಯದಿಂದ ಮೊಬೈಲ್ ಓಪನ್ ಮಾಡಲಾಗಿದೆ.  ರಾಗಿಣಿ ವೈದ್ಯಕೀಯ ಪರೀಕ್ಷೆಗೂ ಸಹಕರಿಸಿಲ್ಲ.ರಾಗಿಣಿ ಜೊತೆ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳ ಸಂಪರ್ಕ ಹೊಂದಿದ್ದಾರೆ, ಅವರಿಗೆ ಜಾಮೀನು ನೀಡಿದರೆ ಅವರನ್ನು ರಾಗಿಣಿ ಎಚ್ಚರಿಸಬಹುದು  ಎಂದು ಆಪಾದಿಸಿದ್ದಾರೆ.

  ಈ ಹಿಂದೆ ಸಂಜನಾ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಿದ್ದ ನ್ಯಾಯಾಲಯ, ಸಿಸಿಬಿ ಪೊಲೀಸರಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತ್ತು. ಇನ್ನು ಇಂದು ಮಧ್ಯಾಹ್ನ 3ಕ್ಕೆ ನಡೆಯಲಿರುವ ಅರ್ಜಿ ವಿಚಾರಣೆ ವೇಳೆ, ಇದೇ ಪ್ರಕರಣದಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಭಿಯೋಜಕರಿಂದ ಆಕ್ಷೇಪಣೆ ಸಲ್ಲಿಕೆ ಸಾಧ್ಯತೆ ಇದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಾಲ್ಕು ಮಂದಿ ಆರೋಪಿಗಳ ಜಾಮೀನು ಅರ್ಜಿ ಸಹ ಇಂದೇ ವಿಚಾರಣೆಗೆ ಬರಲಿದೆ.
  Published by:Seema R
  First published: