HOME » NEWS » State » SANDALWOOD DRUG CASE HOW OSSI BECOME DRUG SUPPLY EXPERT SNVS

ಡ್ರಗ್ಸ್ ಸಪ್ಲೈ ಕಾರ್ಯದಲ್ಲಿ ಗುರುವನ್ನೇ ಮೀರಿಸಿದ್ದ ನೈಜೀರಿಯನ್ ಪ್ರಜೆ ಒಸ್ಸಿ

Sandalwood Drug Case - ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳಿಗೆ ಡ್ರಗ್ಸ್ ಮಾರುತ್ತಿದ್ದ ನೈಜೀರಿಯನ್ ಪ್ರಜೆ ಒಸ್ಸಿ, ಲೂಮ್ ಪೆಪ್ಪರ್ ಸಂಪರ್ಕಕ್ಕೆ ಬಂದ ಬಳಿಕ ಸೆಲಬ್ರಿಟಿಗಳು ಹಾಗೂ ಸಿರಿವಂತರಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ. ಈ ಕಾರ್ಯದಲ್ಲಿ ಪೆಪ್ಪರ್​ನನ್ನೇ ಮೀರಿಸಿದ್ದ ಒಸ್ಸಿ.

news18-kannada
Updated:September 29, 2020, 12:54 PM IST
ಡ್ರಗ್ಸ್ ಸಪ್ಲೈ ಕಾರ್ಯದಲ್ಲಿ ಗುರುವನ್ನೇ ಮೀರಿಸಿದ್ದ ನೈಜೀರಿಯನ್ ಪ್ರಜೆ ಒಸ್ಸಿ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಸೆ. 29): ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ಬಳಕೆ ಪ್ರಕರಣದ ತನಿಖೆಯನ್ನ‌‌ ಸಿಸಿಬಿ‌ ಚುರುಕುಗೊಳಿಸಿದೆ. ಪ್ರಕರಣ ಸಂಬಂಧ ಮತ್ತಿಬ್ಬರನ್ನು ವಶಕ್ಕೆ‌ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ನಟಿ ಸಂಜನಾ ಗಲ್ರಾನಿ ಅವರ ಆಪ್ತ ಎಂದು ಹೇಳಲಾಗುತ್ತಿರುವ ಜೋಯೇಬ್ ಹಾಗೂ ಆನಂದ್ ಎಂಬುವರನ್ನು ಸಿಸಿಬಿ ವಿಚಾರಣೆಗೊಳಪಡಿಸಿದೆ ಎನ್ನಲಾಗಿದೆ. ಡ್ರಗ್ಸ್‌ ಡೀಲಿಂಗ್ ಆರೋಪ ಹೊತ್ತಿರುವ ಜೊಯೇಬ್‌ ನಟಿ ಸಂಜನಾಗೆ ಮಾದಕ ವಸ್ತು ಸರಬರಾಜು‌‌ ಮಾಡುತ್ತಿದ್ದನಂತೆ. ದೂಪನಹಳ್ಳಿ ಬಳಿ ಬಸ್ ‌ನಿಲ್ದಾಣದಲ್ಲಿ ಡ್ರಗ್ಸ್ ರಿಸೀವ್ ಮಾಡಿಕೊಂಡು ತದನಂತರ ನಟಿಯ ಮನೆಗೆ ತಲುಪಿಸುತ್ತಿದ್ದ‌.

ಇನ್ನು, ಸಬ್ ಪೆಡ್ಲರ್ ಆಗಿ ಲೂಮ್ ಪೆಪ್ಪರ್ ಹೇಳಿದ ಸ್ಥಳಕ್ಕೆ ಡ್ರಗ್ಸ್ ಸಪ್ಲೈ ಮಾಡ್ತಿದ್ದ ನೈಜೀರಿಯನ್ ಪ್ರಜೆ ಒಸ್ಸಿ ಫಿಲಿಪ್ಸ್ ಸಾಮಾನ್ಯನಲ್ಲ. ಲೂಮ್ ಪೆಪ್ಪರ್ ಸಾಂಬಾ ಸಂಪರ್ಕದಲ್ಲಿದ್ದ ಬಂಧಿತ ಆರೋಪಿಗಳು ಹಾಗು ಸೆಲಬ್ರೆಟಿಸ್​ಗೆ ಈತ ಹೆಚ್ಚು ಪರಿಚಿತನಾಗಿದ್ದ. ಮೊದಮೊದಲು ಈತ ಕೆಆರ್ ಪುರಂ ಭಾಗದ ಸುತ್ತಮುತ್ತ ಸ್ಟೂಡೆಂಟ್ಸ್ ಮತ್ತು ಟೆಕ್ಕಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದನೆನ್ನಲಾಗಿದೆ.

ಇದನ್ನೂ ಓದಿ: Sanjjanaa Galrani: ಸ್ಯಾಂಡಲ್​ವುಡ್​ ಮಾದಕ ವಸ್ತು ಪ್ರಕರಣ: ಸಂಜನಾ ಗಲ್ರಾನಿ ಆಪ್ತ ಸಿಸಿಬಿ ಬಲೆಗೆ

ಕೋಕೇನ್, ಎಂಡಿಎಂಎ, ಎಕ್ಸ್​ಟೆಸಿ ಮಾದಕ ಮಾತ್ರೆಗಳನ್ನ ಸರಬರಾಜು ಮಾಡುತ್ತಿದ್ದ ನೈಜೀರಿಯನ್ ಗ್ಯಾಂಗ್​ನ ಸದಸ್ಯರಲ್ಲೊಬ್ಬನಾಗಿದ್ದ ಒಸ್ಸಿ ಫಿಲಿಪ್ಸ್, ಪಬ್​ವೊಂದ್ರಲ್ಲಿ ಡ್ರಗ್ಸ್ ಸಪ್ಲೈ ಮಾಡುವ ವೇಳೆ ಲೂಮ್ ಪೆಪ್ಪರ್ ಪರಿಚಯವಾಗ್ತಾನೆ. ಲೂಮ್ ಪೆಪ್ಪರ್ ಆಪ್ತನಾದ ಬಳಿಕ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳನ್ನ ಬಿಟ್ಟು ಉದ್ಯಮಿ ಮಕ್ಕಳು ಹಾಗೂ ಸೆಲಬ್ರೆಟಿಸ್​ಗೆ ಡ್ರಗ್ಸ್ ಸರಬರಾಜು ಮಾಡಲು ಮುಂದಾಗುತ್ತಾನೆ. ಲೂಮ್ ಪೆಪ್ಪರ್ ಹೇಳಿದ ಸ್ಥಳಕ್ಕೆ ಹೋಗಿ ಸಪ್ಲೈ ಮಾಡಿ ಬರುತ್ತಿರುತ್ತಾನೆ. ಕೊನೆಗೆ ಹಣವನ್ನು ಲೂಮ್ ಪೆಪ್ಪರ್ ಬಳಿಯೇ ಪಡೆಯುತ್ತಿದ್ದ. ಲೂಮ್ ಪೆಪ್ಪರ್​ಗಿಂತ ಡ್ರಗ್ಸ್ ಸಪ್ಲೈ ಮಾಡೋದ್ರಲ್ಲಿ ಹೆಚ್ಚು ನಿಪುಣನಾಗಿದ್ದ. ವಿಸಾ ಪಾಸ್ ಪೋರ್ಟ್ ಅವಧಿ ಮುಗಿದಿದ್ರೂ ಕೊತ್ತನೂರಿನ ಬಳಿ ಅಕ್ರಮವಾಗಿ ವಾಸವಾಗಿದ್ದು, ಬಂದ ಹಣದಲ್ಲಿ ಯುವತಿಯರೊಂದಿಗೆ ಮೋಜು ಮಸ್ತಿ ಮಾಡುತ್ತಿದ್ದನೆನ್ನಲಾಗಿದೆ.

ಇದನ್ನೂ ಓದಿ: ರೋಹಿಣಿ ಸಿಂಧೂರಿಗಾಗಿ ಕನ್ನಡಿಗನಿಗೆ ಅವಮಾನ; ಡಿಸಿ ಶರತ್ ವರ್ಗಾವಣೆಗೆ ಸಾ.ರಾ. ಮಹೇಶ್ ಆಕ್ರೋಶ

ಇದೇ ವೇಳೆ, ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕ ಇಟ್ಟುಕೊಂಡು ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಸಂಗೀತಾ ಎಂಬ ಯುವತಿಯನ್ನೂ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಕೆ ಹಿಂದೆ ಮಾಜಿ ಅಂಡರ್​ವರ್ಲ್ಡ್ ಡಾನ್ ಹಾಗೂ ಸಮಾಜ ಸೇವಕರೆನಿಸಿದ್ದ ಮುತ್ತಪ್ಪ ರೈ ಜೊತೆಗೂ ಸಂಪರ್ಕ ಇತ್ತೆಂಬ ಮಾತು ಕೇಳಿಬರುತ್ತಿದೆ. ಚಾಮರಾಜಪೇಟೆಯ ಸಿಸಿಬಿ ಕಚೇರಿಯಲ್ಲಿ ಈಕೆಯ ವಿಚಾರಣೆ ನಡೆಯುತ್ತಿದೆ.

ಇನ್ನು, ನಿನ್ನೆ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾಣಿ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದು ಪರಪ್ಪನ ಅಗ್ರಹಾರ ಜೈಲಿನಲ್ಲೇ ಮುಂದುವರಿದ್ದಾರೆ.ವರದಿ: ಗಂಗಾಧರ್ ವಾಗಟ

ಇದನ್ನೂ ಓದಿ: ದೆವ್ವ ಬಿಡಿಸುವುದಾಗಿ ನಂಬಿಸಿ 3 ವರ್ಷದ ಬಾಲಕಿಯನ್ನು ಕೊಂದ ಚಿತ್ರದುರ್ಗದ ಪೂಜಾರಿ
Published by: Vijayasarthy SN
First published: September 29, 2020, 12:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories