ಡ್ರಗ್ಸ್ ಡೀಲ್​ನಲ್ಲಿ ಅಕ್ರಮ ಹಣ ವರ್ಗಾವಣೆ ಶಂಕೆ; ಇಡಿ ಅಧಿಕಾರಿಗಳಿಂದ ರಾಗಿಣಿ, ಸಂಜನಾ ವಿಚಾರಣೆ

Sandalwood Drug Case: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿಯನ್ನು ವಿಚಾರಣೆಗೆ ಒಳಪಡಿಸಿದ ಇಡಿ ಅಧಿಕಾರಿಗಳು ವಿದೇಶದಿಂದ ಡ್ರಗ್ ತರಿಸುವ ವೇಳೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಬಗ್ಗೆ ಕೆಲವು ಮಹತ್ವದ ದಾಖಲೆಗಳನ್ನ ಸಹ ಪತ್ತೆ ಹಚ್ಚಿ ತನಿಖೆ ನಡೆಸಿದ್ದಾರೆ.

ಸಂಜನಾ, ರಾಗಿಣಿ

ಸಂಜನಾ, ರಾಗಿಣಿ

  • Share this:
ಬೆಂಗಳೂರು (ಸೆ. 30): ಸ್ಯಾಂಡಲ್​ವುಡ್ ಡ್ರಗ್ಸ್ ಡೀಲ್ ನಲ್ಲಿ ಸಿಲುಕಿರುವ ನಟಿಯರು ಮತ್ತು ಡ್ರಗ್ ಪೆಡ್ಲರ್​ಗಳಿಗೆ ಈಗ ಇಡಿ (ಜಾರಿ ನಿರ್ದೇಶನಾಲಯ)ದ ತಲೆನೋವು ಶುರುವಾಗಿದೆ‌. ಡ್ರಗ್ಸ್ ಡೀಲ್ ನಲ್ಲಿ ಅಕ್ರಮ ಹಣ ವರ್ಗಾವಣೆಯಾಗಿರೋ ಗುಮಾನಿ ಇದ್ದು ಇಡಿ ಅಧಿಕಾರಿಗಳು ನಟಿಯರನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ಡ್ರಗ್ಸ್ ಡೀಲ್ ಪ್ರಕರಣದಲ್ಲಿ ಬಂಧಿತರಾಗಿ ಸೇರಿರುವ ಸ್ಯಾಂಡಲ್ ವುಡ್ ನಟಿಯರಾದ ಸಂಜನಾ ಮತ್ತು ರಾಗಿಣಿಗೆ ಇಡಿ ಕಂಟಕ ಶುರುವಾಗಿದೆ‌. ಡ್ರಗ್ಸ್ ಡೀಲ್ ನಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿರೋ ಆರೋಪದ ಮೇಲೆ ಇಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ಕಳೆದ ಕೆಲ ದಿನಗಳ ಹಿಂದೆ ಇಬ್ಬರು ನಟಿಯರನ್ನ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿಯನ್ನು ವಿಚಾರಣೆಗೆ ಒಳಪಡಿಸಿದ ಇಡಿ ಅಧಿಕಾರಿಗಳು ವಿದೇಶದಿಂದ ಡ್ರಗ್ ತರಿಸುವ ವೇಳೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಬಗ್ಗೆ ಕೆಲವು ಮಹತ್ವದ ದಾಖಲೆಗಳನ್ನ ಸಹ ಪತ್ತೆ ಹಚ್ಚಿ ತನಿಖೆ ನಡೆಸಿದ್ದಾರೆ. ಇಬ್ಬರು ನಟಿಯರನ್ನ ವಿಚಾರಣೆ ನಡೆಸಿದ ಬಳಿಕ ಜೈಲಿನಲ್ಲಿ ಇರುವ ಡ್ರಗ್ ಪೆಡ್ಲರ್ ಗಳನ್ನು ಸಹ ಇಡಿ ಅಧಿಕಾರಿಗಳು ಡ್ರಿಲ್ ಮಾಡಿದ್ದಾರೆ.

ಇಡಿ ಅಧಿಕಾರಿಗಳ ವಿಚಾರಣೆ ವೇಳೆ ಇಬ್ಬರು ನಟಿಯರು ತಡಬಡಾಯಿಸಿದ್ದಾರೆ ಎನ್ನಲಾಗಿದೆ. ನಟಿಯರ ಆಸ್ತಿ-ಪಾಸ್ತಿ ಸಂಬಂಧ ಇಡಿ ಪ್ರಶ್ನೆ ಮಾಡುತ್ತಿದ್ದಂತೆ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಕಂಗಲಾಗಿದ್ದು 'ನಾವು ಸಿನಿಮಾ ಇಂಡಸ್ಟ್ರಿಯಲ್ಲಿ ಕಷ್ಟಪಟ್ಟು ಸಂಪಾದನೆ ಮಾಡಿದ್ದೇವೆ ಸರ್,  ಕಷ್ಟ ಪಟ್ಟು ಸಿನಿಮಾ ಮಾಡಿ ಬಂದ ಹಣದಿಂದ ಜೀವನ ನಡೆಸ್ತಿದ್ದೇವೆ' ಎಂದು ಇಡಿ ಮುಂದೆ ತಮ್ಮ ಅಳಲು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅ್ಲಲದೆ, ನಾವು ಯಾವುದೇ ಅಕ್ರಮ ಹಣ ವಹಿವಾಟು ಮಾಡಿಲ್ಲ ಎಂದು ಇಡಿ ಮುಂದೆ ಉತ್ತರ ನೀಡಿದ್ದು ಡ್ರಗ್ ಡೀಲ್ ಸಂಬಂಧ ಪ್ರಶ್ನೆಗಳಿಗೆ ಅಸ್ಪಷ್ಟ ಉತ್ತರ ನೀಡಿದ್ದಾರೆ ಎನ್ನಲಾಗಿದೆ.

ನಟಿಯರ ವಿಚಾರಣೆ ಬಳಿಕ ಜೈಲಿನಲ್ಲಿರುವ ಡ್ರಗ್ ಪೆಡ್ಲರ್ ಗಳಿಗೆ ಇಡಿ ತಂಡ ಡ್ರಿಲ್ ಮಾಡಿದ್ದಾರೆ.  ಆರೋಪಿಗಳು ವಿದೇಶದಿಂದ ಡ್ರಗ್ಸ್ ತರಿಸಿ ಮಾರಾಟ ಮಾಡಿದ್ದು, ಡ್ರಗ್ಸ್ ಸರಬರಾಜು ಮಾಡಲು ಅಕ್ರಮ ಹಣ ಹೂಡಿಕೆ  ಮತ್ತು ಹಣ ವರ್ಗಾವಣೆಯಲ್ಲಿ ಭಾಗಿಯಾಗಿರುವ ಬಗ್ಗೆ ಅನುಮಾನಗಳಿದ್ದು, ಈ ಬಗ್ಗೆ ಇಡಿ ತಂಡ ತನಿಖೆ ನಡೆಸಿದೆ. ಬಂಧಿತ ಪೆಡ್ಲರ್ ಗಳು ವಿದೇಶದಿಂದ ಎಂಡಿಎಂಎ, ಹ್ಯಾಶಿಸ್, ಎಲ್ಎಸ್ಡಿ, ಅಫೀಮ್, ಬ್ರೌನ್ ಶುಗರ್ ಖರೀದಿ ಬಗ್ಗೆ ಮಾಹಿತಿ ಕಲೆ ಹಾಕಿರುವ ಇಡಿ ಅಧಿಕಾರಿಗಳು ಹಣ ವರ್ಗಾವಣೆ ಬಗ್ಗೆಯೂ ಸಾಕ್ಷಿ ಕಲೆಹಾಕಿ ವಿಚಾರಣೆ ಕೈಗೊಂಡಿದ್ದಾರೆ. ಆರೋಪಿಗಳ ಹೇಳಿಕೆ ಮತ್ತು ಇಡಿ ಕಲೆ ಹಾಕಿರುವ ಸಾಕ್ಷಿಗಳ ಆಧಾರದ ಮೇಲೆ ತನಿಖೆ ಸಾಗಿದ್ದು, ಅಕ್ರಮ ಹಣ ವರ್ಗಾವಣೆ ಸಾಬೀತಾದಲ್ಲಿ ಯಾರಿಗೆ ಇಡಿ ಉರುಳು ಸುತ್ತಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ‌.
Published by:Sushma Chakre
First published: