ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ಆರೋಪಿ ವಿರೇನ್ ಖನ್ನಾಗೆ ಪಾಲಿಗ್ರಾಫ್ ಟೆಸ್ಟ್ ನಡೆಸಲು ಅಧಿಕಾರಿಗಳು ಸಿದ್ದತೆ
ಫಾಲಿಗ್ರಾಫ್ ಪರೀಕ್ಷೆಯಿಂದ ಸುಳ್ಳು ಹೇಳಿಕೆಗಳನ್ನು ಕಂಡುಹಿಡಿಯಬಹುದು. ಆದರೆ ಮಡಿವಾಳದಲ್ಲೇ ಎಫ್ ಎಸ್ ಎಲ್ ವಿಭಾಗವಿದೆ. ಆದರೆ, ಇಲ್ಲಿ ತಾಂತ್ರಿಕ ದೋಷ ಇರುವ ಕಾರಣಕ್ಕೆ ಅಧಿಕಾರಿಗಳು ಈ ಪರೀಕ್ಷೆಯನ್ನು ಗುಜರಾತ್ನಲ್ಲಿ ನಡೆಸಲು ಮುಂದಾಗಿದ್ದಾರೆ.
ಬೆಂಗಳೂರು (ಅಕ್ಟೋಬರ್ 19); ಇತ್ತೀಚೆಗೆ ಬೆಳಕಿಗೆ ಬಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಡ್ರಗ್ಸ್ ಪ್ರಕರಣ ಸ್ಯಾಂಡಲ್ವುಡ್ ಜೊತೆಗೆ ಥಳಕು ಹಾಕಿಕೊಳ್ಳುತ್ತಿದ್ದಂತೆ ಅದರ ಸ್ವರೂಪವೇ ಬದಲಾಗಿದೆ. ಈಗಾಗಲೇ ಡ್ರಗ್ಸ್ ಪೆಡ್ಲರ್ಗಳ ಜೊತೆಗೆ ನಂಟು ಹೊಂದಿದ್ದ ಆರೋಪದಲ್ಲಿ ಖ್ಯಾತ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಅವರ ಬೆನ್ನಿ ನಗರದ ಡ್ರಗ್ಸ್ ಜಾಲದ ಮೇಲೆ ಮುರಿದುಬಿದ್ದಿರುವ ಸಿಸಿಬಿ ಪೊಲೀಸರು ಈಗಾಗಲೇ ಸಾಕಷ್ಟು ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಬಿಟ್ಟುಬಂದಿದ್ದಾರೆ. ಇವರ ಪೈಕಿ ಪ್ರಮುಖ ಪೆಡ್ಲರ್ ವಿರೇನ್ ಖನ್ನ ಸಹ ಒಬ್ಬರು. ಈಗಾಗಲೇ ಪೊಲೀಸ್ ವಿಚಾರಣೆ ಎದುರಿಸುತ್ತಿರುವ ಆರೋಪಿ ವಿರೇನ್ ಖನ್ನ ಅಧಿಕಾರಿಗಳ ಬಳಿ ಸುಳ್ಳು ಹೇಳುತ್ತಿದ್ದಾರೆ ಎಂಬ ಕಾರಣದಿಂದಾಗಿ ಅದನ್ನು ಪತ್ತೆಹಚ್ಚಲು ಪೊಲೀಸರು ಅವರನ್ನು ಸುಳ್ಳುಪತ್ತೆ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಪಡ್ಲರ್ಗಳಾದ ರವಿ ಶಂಕರ್ ಮತ್ತು ಅಶ್ವಿನ್ ಬೂಗಿ ವಿಚಾರಣೆ ಬೆನ್ನಲ್ಲೇ ವಿರೇನ್ ಖನ್ನನಿಂದ ಬಾಯ್ಬಿಡಿಸಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದರು. ಆದರೆ, ಎರಡು ಬಾರಿ ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು ಸಹ ಆತ ಬಾಯಿ ಬಿಟ್ಟಿರಲಿಲ್ಲ. ಹೀಗಾಗಿ ವಿರೇನ್ ಖನ್ನಾಗೆ ಪಾಲಿಗ್ರಾಫ್ ಟೆಸ್ಟ್ ನಡೆಸಲು ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ. ಇನ್ನೆರಡು ದಿನದಲ್ಲಿ ವಿರೇನ್ ಖನ್ನನನ್ನ ಬಾಡಿವಾರೆಂಟ್ ಪಡೆದು ಗುಜರಾತ್ ಅಹಮದಾಬಾದ್ ನ ಎಫ್ ಎಸ್ ಎಲ್ ನಲ್ಲಿ ಸಿಸಿಬಿ ಅಧಿಕಾರಿಗಳು ಫಾಲಿಗ್ರಾಫ್ ಪರೀಕ್ಷೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಫಾಲಿಗ್ರಾಫ್ ಪರೀಕ್ಷೆಯಿಂದ ಸುಳ್ಳು ಹೇಳಿಕೆಗಳನ್ನು ಕಂಡುಹಿಡಿಯಬಹುದು. ಆದರೆ ಮಡಿವಾಳದಲ್ಲೇ ಎಫ್ ಎಸ್ ಎಲ್ ವಿಭಾಗವಿದೆ. ಆದರೆ, ಇಲ್ಲಿ ತಾಂತ್ರಿಕ ದೋಷ ಇರುವ ಕಾರಣಕ್ಕೆ ಅಧಿಕಾರಿಗಳು ಈ ಪರೀಕ್ಷೆಯನ್ನು ಗುಜರಾತ್ನಲ್ಲಿ ನಡೆಸಲು ಮುಂದಾಗಿದ್ದಾರೆ.
ಆರೋಪಿ ಕೊಡುವ ಹೇಳಿಕೆಗಳು ಅಸ್ಪಷ್ಟ ಮತ್ತು ಸುಳ್ಳಾಗಿದ್ದು ತನಿಖೆಗೆ ಅಗತ್ಯವಿದ್ರೆ ನ್ಯಾಯಾಲಯದ ಅನುಮತಿ ಕೇಳಬೇಕು. ಆರೋಪಿಯ ದೇಹದ ಐದು ಭಾಗದಲ್ಲಿ ವೈರ್ ಮಾದರಿಯ ವಸ್ತುವನ್ನ ಹಚ್ಚಲಾಗುತ್ತದೆ. ಸೈಕಲಾಜಿಸ್ಟ್ ಅವರೇ ಇದರ ನಿರ್ವಹಣೆ ಮಾಡುತ್ತಾರೆ. ದೇಹದ ಐದು ಭಾಗದಲ್ಲಿ ವೈರ್ ಹಚ್ಚಿದ ಬಳಿಕ ತನಿಖಾಧಿಕಾರಿಗಳು ಪ್ರಶ್ನೆಗಳನ್ನ ಕೇಳಲು ಪ್ರಾರಂಭಿಸುತ್ತಾರೆ.
ಒಂದಷ್ಟು ಕ್ಲಿಷ್ಟಕರವಾದ ಪ್ರಶ್ನೆಗಳನ್ನ ಕೇಳಲಿದ್ದು, ಆಗ ಆರೋಪಿ ಸುಳ್ಳು ಮಾಹಿತಿ ಉತ್ತರಿಸುವಾಗ ದೇಹದಲ್ಲಿ ವೇರಿಯೇಷನ್ ಕಂಡು ಬರುತ್ತೆ. ಹೀಗಾಗಿ ಯಾವುದು ಸುಳ್ಳು ಮತ್ತು ಯಾವುದು ಸತ್ಯ ಹೇಳಿಕೆ ಎಂದು ಪತ್ತೆ ಹಚ್ಚಲು ಫಾಲಿಗ್ರಾಫ್ ಪರೀಕ್ಷೆ ನಡೆಸಲಾಗುತ್ತೆ. ಪಾಲಿಗ್ರಾಪ್ ಎಂಬುದು ಸೈಕಲಾಜಿಕಲ್ ಎಕ್ಸಾಮಿನೇಷನ್ ನ ಒಂದು ಭಾಗ
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ