Bengaluru: ಸ್ಯಾಂಡಲ್​ವುಡ್​ ಯುವ ನಟನ ಬರ್ಬರ ಹತ್ಯೆ

ದುಷ್ಕರ್ಮಿಗಳು ಸತೀಶ್​ ಮನೆಯಲ್ಲೇ ಅತನಿಗೆ ಚಾಕು ಇರಿದು ಕೊಲೆ ಮಾಡಿದ್ದಾರೆ. ಸತೀಶ್ ವಜ್ರ, ಕನ್ನಡದ ಲಗೋರಿ ಎಂಬ ಸಿನಿಮಾದಲ್ಲಿ ನಟಿಸಿದ್ರು. ಕೊಲೆಯಾದ ಸ್ಥಳಕ್ಕೆ ಆರ್.ಆರ್.ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. 

ನಟ ಸತೀಶ್​

ನಟ ಸತೀಶ್​

  • Share this:
ಬೆಂಗಳೂರು (ಜೂ 18): ಸ್ಯಾಂಡಲ್‌ವುಡ್ ಯುವ ನಟನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ (Murder)  ಮಾಡಲಾಗಿದೆ. ಬೆಂಗಳೂರಿನ ಆರ್.ಆರ್ ನಗರ (RR Nagar) ಠಾಣಾ ವ್ಯಾಪ್ತಿಯ ಪಟ್ಟಣಗೆರೆಯಲ್ಲಿ ಈ ಘಟನೆ ನಡೆದಿದ್ದು, ನಟ ಸತೀಶ್ ವಜ್ರ (Sathish Vajra) ಕೊಲೆಯಾದ ದುರ್ದೈವಿಯಾಗಿದ್ದು, ದುಷ್ಕರ್ಮಿಗಳು ಸತೀಶ್​ ಮನೆಯಲ್ಲೇ ಅತನಿಗೆ ಚಾಕು ಇರಿದು ಕೊಲೆ ಮಾಡಿದ್ದಾರೆ. ಸತೀಶ್ ವಜ್ರ, ಕನ್ನಡದ ಲಗೋರಿ ಎಂಬ ಸಿನಿಮಾದಲ್ಲಿ ನಟಿಸಿದ್ರು. ಕೊಲೆಯಾದ ಸ್ಥಳಕ್ಕೆ ಆರ್.ಆರ್.ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಮೂರು ತಿಂಗಳ ಹಿಂದೆಯಷ್ಟೇ ಸತೀಶ್ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರು. ಎನ್ನಲಾಗಿದ್ದು, ಇಂದು ಸತೀಶ್‌ರನ್ನು ಇರಿದು ಕೊಲೆ ಮಾಡಲಾಗಿದೆ. ಪತ್ನಿ ಆತ್ಮಹತ್ಯೆಗೆ ಸತೀಶ್‌ ಕಾರಣ ಎಂದು ಬಾಮೈದುನನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.



ಮನೆಯೊಳಗೆ ನುಗ್ಗಿ ಸತೀಶ್​ ಕೊಲೆ

ಸತೀಶ್​ ನಿನ್ನೆ ರಾತ್ರಿ ತಡವಾಗಿ ಮನೆಗೆ ಬಂದಿದ್ದ,  ಬೆಳಿಗ್ಗೆ ಮನೆ ಮುಂಭಾಗದ ಆವರಣ ಕ್ಲೀನ್ ಮಾಡುವಾಗ ರಕ್ತದ ಕಲೆ ನೋಡಿದ್ದ ಮನೆ ಮಾಲೀಕ, ಸಿಸಿ ಕ್ಯಾಮೆರಾ ಚೆಕ್ ಮಾಡಿದಾಗ 12:30ರ ಸುಮಾರಿಗೆ ಇಬ್ಬರು ಅಪರಿಚಿತರು ಒಳ ಹೋಗಿರೋದು ಪತ್ತೆಯಾಗಿದೆ. ಸತೀಶ್ ಬೈಕ್​ನನ್ನು ಸಹ ಹಂತಕರೇ ತೆಗೆದುಕೊಂಡು ಹೋಗಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ‌ ನೀಡಿದ್ದ ಮನೆ ಮಾಲೀಕ ಹೇಮಂತ್, ಸದ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸ್ತಿದ್ದಾರೆ.

ಡೋರ್​ ಮುಂದೆ ರಕ್ತ ಕಂಡು ಶಾಕ್​

ಇನ್ನು ಈ ಬಗ್ಗೆ ನ್ಯೂಸ್​ 18 ಕನ್ನಡ ಜೊತೆ ಮಾತಾಡಿದ ಮನೆ ಮಾಲೀಕ ಹೇಮಂತ್ ಕುಮಾರ್, ನನಗೆ ಬೆಳಗ್ಗೆ 8.30 ಗಂಟೆ ಸುಮಾರಿಗೆ ವಿಚಾರ ಗೊತ್ತಾಯ್ತು. ಬೆಳಗ್ಗೆ ನಮ್ಮ ಮನೆಯವ್ರು ಮನೆ ಕ್ಲೀನ್​ ಮಾಡೋಕೆ ಬರ್ತಾರೆ. ಡೋರ್ ಹತ್ರ ಬ್ಲಡ್ ಇರೋದ್ ನೋಡಿ ಭಯ ಬಿದ್ದು ನಂಗೆ ಕಾಲ್ ಮಾಡಿದ್ರು. ನಾನು ಬಂದು ಡೋರ್ ಓಪನ್ ಮಾಡೋಕ್ ನೋಡ್ದೆ. ಒಳಗಡೆ ನೆಲದ ತುಂಬಾ ರಕ್ತ ಹರಡಿತ್ತು. ಆಮೇಲೆ ನಾನು ಭಯ ಬಿದ್ದು ಪೊಲೀಸರಿಗೆ ಕಾಲ್ ಮಾಡ್ದೆ. ಸತೀಶ್ ಎಲ್ರೂ ಜೊತೆ ಚೆನ್ನಾಗಿಯೇ ಇದ್ರು.

ಇದನ್ನೂ ಓದಿ: BS Yediyurappa: ಶಿಥಿಲಾವಸ್ಥೆ ತಲುಪಿದ ಬಿ ಎಸ್ ಯಡಿಯೂರಪ್ಪ ಓದಿದ ಶಾಲೆ

ಮಗು ವಿಚಾರವಾಗಿ ಪತ್ನಿ ಮನೆಯವರೊಂದಿಗೆ ಜಗಳ

ರಾತ್ರಿ ಸತೀಶ್​ ತಡವಾಗಿ ಬರ್ತಿದ್ರು. ಸಿನಿಮಾ ಕೆಲ್ಸ ಅದು ಇದು ಅಂತಾ ತಡವಾಗಿ ಬರ್ತಿದ್ರು. ನಿನ್ನೆ ರಾತ್ರಿ 10 ರಿಂದ 10.30ರ ಸುಮಾರಿಗೆ ಬಂದ್ರು. ಎಂಟು ತಿಂಗಳಿಂದ ಅವ್ರ ಪತ್ನಿ ಸಾವನ್ನಪ್ಪಿದ್ರು. ಹರ್ಟ್ ಪ್ರಾಬ್ಲಮ್ ಅಂತಾ ಸತ್ತಿದ್ರು. ಇಬ್ರಿಗೂ ಒಂದ್ ಮಗು ಇದೆ. ಮಗು ಯಾರ ಬಳಿ ಇಟ್ಟುಕೊಳೋದು ಏನು ಅಂತಾ ಆಗಾಗ ಮಾತು-ಕತೆ ಆಗ್ತಿತ್ತು. ಮಗು ಸದ್ಯ ಸತೀಶ್ ಪತ್ನಿ ತವರು ಮನೇಲಿ ಇದೆ.

ಪರಿಚಯಸ್ಥರಿಂದ ಕೊಲೆ ಶಂಕೆ

ಯಾರೋ ಪರಿಚಯ ಇರೋರೆ ಬಂದು ಕೊಲೆ ಮಾಡಿದ್ದಾರೆ ಎಂದು ಮನೆ ಮಾಲೀಕ ಹೇಮಂತ್​ ಕುಮಾರ್​ಅನುಮಾನ ವ್ಯಕ್ತಪಡಿಸಿದ್ದಾರೆ. ಡೋರ್ ಹೊಡೆಯೋದು ಏನೂ ಮಾಡಿಲ್ಲ. ನಂಬಿಸಿ ಈತರ ಮಾಡಿ ಹೋಗಿದ್ದಾರೆ ಎಂದು ಮನೆ ಮಾಲೀಕ ಹೇಮಂತ್ ಹೇಳಿಕೆ.

ಇದನ್ನೂ ಓದಿ: Climate Change: ಮಂಡ್ಯ ರೈತರು ಹಾಗೂ ಬೆಂಗಳೂರು ಬಾಣಸಿಗರ ಮೋಡಿ; ‘ಅಡುಗೆ ಮನೆಯ ಕಪಾಟಿನಲ್ಲಿದೆ ದೇಶದ ಭವಿಷ್ಯ‘

ಬಾಮೈದುನನೇ ಕೊಲೆ ಮಾಡಿರುವ ಶಂಕೆ

ಮಂಡ್ಯ ಜಿಲ್ಲೆಯ ಮದ್ದೂರು ಮೂಲದ ಸತೀಶ್ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮೂರು ತಿಂಗಳ ಹಿಂದೆಯಷ್ಟೇ ಸತೀಶ್ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರು. ಎನ್ನಲಾಗಿದ್ದು, ಇಂದು ಸತೀಶ್‌ರನ್ನು ಇರಿದು ಕೊಲೆ ಮಾಡಲಾಗಿದೆ. ಪತ್ನಿ ಆತ್ಮಹತ್ಯೆಗೆ
ಸತೀಶ್‌ ಕಾರಣ ಎಂದು ಬಾಮೈದುನನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
Published by:Pavana HS
First published: