ಹಿಟ್ಲರ್-ಮೋದಿ ಫೋಟೋ ವಿವಾದ: ನಟಿ ರಮ್ಯಾಗೆ ತಿರುಗೇಟು ನೀಡಿದ ನವರಸ ನಾಯಕ ಜಗ್ಗೇಶ್​​

ಸಹೋದರ ದಾರಿ ತಪ್ಪಿದ ಮಕ್ಕಳ ತಿದ್ದಬಹುದು. ಆದರೆ  ದಾರಿ ತಪ್ಪಲೆ ಹುಟ್ಟಿದ ಮಕ್ಕಳ ತಿದ್ದಬಾರದು. ಕಾರಣ ದಾರಿ ತಪ್ಪಲು ಹುಟ್ಟಿದ ಮಕ್ಕಳ ಇತಿಹಾಸ ಯಕ್ಷಪ್ರಶ್ನೆ. ಯತಃ ಜನನ ತಥಃ ಜೀವನ ಅನುಕಂಪವಿರಲಿ. ಅಂಥ ಮಕ್ಕಳಿಗೆ ಕಾರಣ ಮಾನಸಿಕ ವಿಕಲಚೇತರು ಅಂಥ ಮಕ್ಕಳು ಇಂತ ಮಕ್ಕಳನ್ನು ನೋಡಿ ಸಂತೋಷಪಡುವ ಒಂದು ವರ್ಗವಿದೆ ಎಂದು ವ್ಯಂಗ್ಯಭರಿತವಾಗಿ ಟ್ವೀಟ್​ ಮಾಡಿದ್ದಾರೆ.

 ರಮ್ಯಾ ಹಾಗೂ ಜಗ್ಗೇಶ್

ರಮ್ಯಾ ಹಾಗೂ ಜಗ್ಗೇಶ್

  • News18
  • Last Updated :
  • Share this:
ಬೆಂಗಳೂರು(ಏ. 30): ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​​-ಬಿಜೆಪಿ ಪರಸ್ಪರ ಟೀಕೆಗಳಲ್ಲಿ ಮುಳುಗುವುದು ಸರ್ವೇ ಸಾಮಾನ್ಯ. ಬಿಜೆಪಿಗರಂತೆ ಕಾಂಗ್ರೆಸ್ಸಿಗರು ಕೂಡ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​​ಡಿಎ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ತುದಿಗಾಲಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್​ ಸೋಷಿಯಲ್​​ ಮೀಡಿಯಾ ನಿರ್ವಹಿಸುತ್ತಿರುವ ಮಾಜಿ ಸಂಸದೆ ರಮ್ಯಾ ಅವರಂತೂ ಭಾರೀ ಸಕ್ರಿಯರಾಗಿದ್ದಾರೆ. ಆಗಾಗ್ಗೆ ಪ್ರಧಾನಿಯನ್ನು ಅವರು ಕಾಲೆಳೆಯುತ್ತಲೇ ಇರುತ್ತಾರೆ. ಇದೀಗ ಕೂಡ ರಮ್ಯಾ ಪ್ರಧಾನಿಯನ್ನು ಹಿಟ್ಲರ್​ಗೆ ಹೋಲಿಸುವಂತಹ ಫೋಟೋವೊಂದನ್ನು ಟ್ವೀಟ್ ಮಾಡಿ, ಬಿಜೆಪಿ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮಾಜಿ ಸಂಸದೆ ರಮ್ಯಾ ನಿನ್ನೆ ತಮ್ಮ ಟ್ವಿಟರ್​ ಖಾತೆಯಲ್ಲಿ, ಅಡಾಲ್ಫ್​ ಹಿಟ್ಲರ್​ ಹಾಗೂ ಪ್ರಧಾನಿ ಮೋದಿಯವರ ಫೋಟೋ ಕೊಲಾಜ್​ ಮಾಡಿ ಹಾಕಿದ್ದರು. ಇಬ್ಬರೂ ಮಕ್ಕಳ ಕಿವಿ ಹಿಂಡುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿ, ನಿಮಗೆ ಏನೆನ್ನಿಸುತ್ತದೆ ಹೇಳಿ ಎಂದು ಶೀರ್ಷಿಕೆ ನೀಡಿದ್ದರು. ಹಿಟ್ಲರ್ ಫೋಟೋವನ್ನು ಎಡಿಟ್ ಮಾಡಿ ತಿರುಚಲಾಗಿತ್ತು. ಅದನ್ನು ನೋಡಿದ ಹಾಸ್ಯ ನಟ ಬುಲೆಟ್​ ಪ್ರಕಾಶ್​ ತೀವ್ರವಾಗಿ ತಿರುಗೇಟು ನೀಡಿದ್ದರು. ರಮ್ಯ ಮೇಡಂ, ನೀವು ಚಿಕ್ಕವರಿದ್ದಾಗ ನಿಮ್ಮ ತಂದೆ ಕಿವಿ ಹಿಂಡಿದ್ದರೆ ಇಂದು ನೀವು ಹೀಗಾಗುತ್ತಿರಲಿಲ್ಲ, ಮತ ಹಾಕದವರಿಗೆ ಮೋದಿಯವರ ಬಗ್ಗೆ ಮಾತನಾಡುವ ಹಕ್ಕು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ : ಹಿಟ್ಲರ್​ ಜೊತೆಗೆ ಮೋದಿ ಫೋಟೋ ಟ್ವೀಟ್​ ಮಾಡಿ, ಮತ್ತೆ ಪ್ರಧಾನಿ ಕಾಲೆಳೆದ ರಮ್ಯಾ; ನಟ ಬುಲೆಟ್ ಪ್ರಕಾಶ್ ಸೇರಿ ಹಲವರ ಆಕ್ರೋಶ

ಈಗ ನಟ ನವರಸ ನಾಯಕ  ಜಗ್ಗೇಶ್​ ಕೂಡ ತಮ್ಮದೇ ಶೈಲಿಯಲ್ಲಿ ರಮ್ಯಾಗೆ ತಿರುಗೇಟು ನೀಡಿದ್ದಾರೆ. ಬುಲೆಟ್​ ಪ್ರಕಾಶ್​ ಅವರ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿ, ನಟಿ ರಮ್ಯಾ ಅವರನ್ನು ವ್ಯಂಗ್ಯವಾಡಿದ್ದಾರೆ ಎನ್ನಲಾಗಿದೆ.

ಸಹೋದರ ದಾರಿ ತಪ್ಪಿದ ಮಕ್ಕಳ ತಿದ್ದಬಹುದು. ಆದರೆ  ದಾರಿ ತಪ್ಪಲೆ ಹುಟ್ಟಿದ ಮಕ್ಕಳ ತಿದ್ದಬಾರದು. ಕಾರಣ ದಾರಿ ತಪ್ಪಲು ಹುಟ್ಟಿದ ಮಕ್ಕಳ ಇತಿಹಾಸ ಯಕ್ಷಪ್ರಶ್ನೆ. ಯತಃ ಜನನ ತಥಃ ಜೀವನ ಅನುಕಂಪವಿರಲಿ. ಅಂಥ ಮಕ್ಕಳಿಗೆ ಕಾರಣ ಮಾನಸಿಕ ವಿಕಲಚೇತರು ಅಂಥ ಮಕ್ಕಳು ಇಂತ ಮಕ್ಕಳನ್ನು ನೋಡಿ ಸಂತೋಷಪಡುವ ಒಂದು ವರ್ಗವಿದೆ ಎಂದು ವ್ಯಂಗ್ಯಭರಿತವಾಗಿ ಟ್ವೀಟ್​ ಮಾಡಿದ್ದಾರೆ.

First published: