ದರ್ಶನ್​ ಸೇರಿ ಹಲವು ಪ್ರಭಾವಿಗಳಿಂದ ರಾಜಕಾಲುವೆ ಒತ್ತುವರಿ; ಕೈಕಟ್ಟಿ ಕೂತ ಬಿಬಿಎಂಪಿ

ಬಿಬಿಎಂಪಿ, ಕಂದಾಯ ಇಲಾಖೆ ವರದಿಗಳಲ್ಲಿ ಒತ್ತುವರಿ ದೃಢಪಟ್ಟಿತ್ತು. ಸರ್ಕಾರಕ್ಕೂ ವರದಿ ರವಾನೆಯಾದಾಗ ಜಾಗ ವಶಕ್ಕೆ ಸೂಚನೆ ನೀಡಿತ್ತು. ದಕ್ಷಿಣ ವಿಭಾಗದ ಎಸಿ ಸಲ್ಲಿಸಿದ್ದ ವರದಿ ಪ್ರಶ್ನಿಸಿ ಈ ಪ್ರಭಾವಿಗಳು ಸ್ಟೇ ತಂದಿದ್ದರು ದರ್ಶನ್ ಸೇರಿ ಹಲವು ಪ್ರಭಾವಿಗಳಿಂದ ರಾಜಕಾಲುವೆ ಜಾಗ ಒತ್ತುವರಿ; ಕೈಕಟ್ಟಿ ಕುಳಿತ ಬಿಬಿಎಂಪಿ

Rajesh Duggumane | news18
Updated:August 14, 2019, 9:10 AM IST
ದರ್ಶನ್​ ಸೇರಿ ಹಲವು ಪ್ರಭಾವಿಗಳಿಂದ ರಾಜಕಾಲುವೆ ಒತ್ತುವರಿ; ಕೈಕಟ್ಟಿ ಕೂತ ಬಿಬಿಎಂಪಿ
ನಟ ದರ್ಶನ್
  • News18
  • Last Updated: August 14, 2019, 9:10 AM IST
  • Share this:
ಬೆಂಗಳೂರು (ಆ.14): ರಾಜಕಾಲುವೆ ಒತ್ತುವರಿ ವಿಚಾರ ಭಾರೀ 2016ರಲ್ಲಿ ಸುದ್ದಿಯಾಗಿತ್ತು. ಸ್ಯಾಂಡಲ್ವುಡ್ ಸ್ಟಾರ್ ದರ್ಶನ್, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಸೇರಿ ಸಾಕಷ್ಟು ಪ್ರಭಾವಿಗಳು ಈ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿತ್ತು. ಆದರೆ, ಈ ಬಗ್ಗೆ ಬಿಬಿಎಂಪಿ ಮೌನ ವಹಿಸಿ ಕುಳಿತಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ರಾಜಕಾಲುವೆ ಇದ್ದ 7.31 ಜಾಗವನ್ನು ಐಡಿಯಲ್ಸ್ ಹೋಮ್ಸ್ನವರು ಒತ್ತುವರಿ ಮಾಡಿಕೊಂಡಿದ್ದರು. ಒತ್ತುವರಿಯಾದ 22 ಗುಂಟೆ ಶ್ಯಾಮನೂರು ಶಿವಶಂಕ್ರಪ್ಪರ ಎಸ್.ಎಸ್. ಆಸ್ಪತ್ರೆ ಹಾಗೂ 2 ಗುಂಟೆ ಜಾಗ ದರ್ಶನ್ ಹೆಸರಿನಲ್ಲಿದೆ. ಅಂತೆಯೇ 69 ಒತ್ತುವರಿದಾರರಿಗೆ ಜಿಲ್ಲಾಡಳಿತ ನೋಟಿಸ್ ನೀಡಿತ್ತು.

ಬಿಬಿಎಂಪಿ, ಕಂದಾಯ ಇಲಾಖೆ ವರದಿಗಳಲ್ಲಿ ಒತ್ತುವರಿ ದೃಢಪಟ್ಟಿತ್ತು. ಸರ್ಕಾರಕ್ಕೂ ವರದಿ ರವಾನೆಯಾದಾಗ ಜಾಗ ವಶಕ್ಕೆ ಸೂಚನೆ ನೀಡಿತ್ತು. ದಕ್ಷಿಣ ವಿಭಾಗದ ಎಸಿ ಸಲ್ಲಿಸಿದ್ದ ವರದಿ ಪ್ರಶ್ನಿಸಿ ಈ ಪ್ರಭಾವಿಗಳು ಸ್ಟೇ ತಂದಿದ್ದರು. 2016ರಲ್ಲೇ ಈ ಬೆಳವಣಿಗೆಗಳು ನಡೆದಿತ್ತಾದರೂ, ಈ ಸ್ಟೇ ತೆರವಿಗೆ ಪ್ರಯತ್ನಗಳೇ ನಡೆದಿಲ್ಲ.

ಇದನ್ನೂ ಓದಿ: ಕಿಚ್ಚ ಸುದೀಪ್ ಖಾರವಾಗಿ ಬರೆದ ಟ್ವೀಟ್ ಯಾವ ಸ್ಟಾರ್ ನಟನಿಗೆ ಗೊತ್ತಾ..?

ಕೋರ್ಟ್ ನೀಡಿದ ತಡೆ ಪ್ರಶ್ನಿಸಲು ತಾಲೂಕು ಹಾಗೂ ಜಿಲ್ಲಾಡಳಿತಕ್ಕೆ ವ್ಯಾಪಕ ಅವಕಾಶ ಇದೆ. ಆದರೆ ಈವರೆಗೂ ಸ್ಟೇ ವೆಕೇಟ್ ಮಾಡಲು ಜಿಲ್ಲಾಡಳಿತ ಅರ್ಜಿಯನ್ನೇ ಸಲ್ಲಿಸಿಲ್ಲ. ತೆರವು ಕಾರ್ಯಾಚರಣೆ ವಿಚಾರ ಬಂದಾಗ ಸ್ಟೇ ಇದೆ ಎನ್ನುವ ಸಬೂಬು ನೀಡಿ ಅಧಿಕಾರಿಗಳು ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದಾರೆ. 3 ವರ್ಷಗಳಾದ್ರೂ ಸ್ಟೇ ಪ್ರಶ್ನಿಸಿ ಮೇಲ್ಮನವಿ ಅರ್ಜಿ ಏಕೆ ಸಲ್ಲಿಕೆಯಾಗಿಲ್ಲ ಎನ್ನುವ ವಿಚಾರ ಸಾಕಷ್ಟು ಅನುಮಾನ ಸೃಷ್ಟಿಸಿದೆ.

(ವರದಿ: ಥಾಮಸ್ ಪುಷ್ಪರಾಜ್)

First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ