ಹಿಟ್ಲರ್​ ಜೊತೆಗೆ ಮೋದಿ ಫೋಟೋ ಟ್ವೀಟ್​ ಮಾಡಿ, ಮತ್ತೆ ಪ್ರಧಾನಿ ಕಾಲೆಳೆದ ರಮ್ಯಾ; ನಟ ಬುಲೆಟ್ ಪ್ರಕಾಶ್ ಸೇರಿ ಹಲವರ ಆಕ್ರೋಶ

ಮೊದಲಿನಿಂದಲೂ ನಟಿ ರಮ್ಯಾ ಪ್ರಧಾನಿ ಮೋದಿಯವರ ಬಗ್ಗೆ ಟ್ವಿಟ್ಟರ್​​​ನಲ್ಲಿ ಏನಾದರೂ ಪೋಸ್ಟ್​​ ಮಾಡುವ ಮೂಲಕ ಸಾರ್ವಜನಿಕರ ಟೀಕೆಗೆ ಗುರಿಯಾಗುವುದು ವಾಡಿಕೆ. ಇಂದು ಕೂಡ ಅದೇ ರೀತಿ ​ ಸರ್ವಾಧಿಕಾರಿ ಹಿಟ್ಲರ್​​ ಜತೆಗೆ ಪ್ರಧಾನಿ ಮೋದಿಯವರನ್ನು ಹೋಲಿಕೆ ಮಾಡಿ ಪೋಸ್ಟ್​ವೊಂದನ್ನು ಹಾಕಿ ಸುದ್ದಿಯಲ್ಲಿದ್ದಾರೆ.

 ನಟಿ ರಮ್ಯಾ ಹಾಗೂ ಹಾಸ್ಯ ನಟ ಬುಲೆಟ್​​ ಪ್ರಕಾಶ್

ನಟಿ ರಮ್ಯಾ ಹಾಗೂ ಹಾಸ್ಯ ನಟ ಬುಲೆಟ್​​ ಪ್ರಕಾಶ್

  • News18
  • Last Updated :
  • Share this:
ಬೆಂಗಳೂರು (ಏ.29) : ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​​-ಬಿಜೆಪಿ ಪರಸ್ಪರ ಟೀಕೆಗಳಲ್ಲಿ ಮುಳುಗುವುದು ಸರ್ವೇ ಸಾಮಾನ್ಯ. ಬಿಜೆಪಿಗರಂತೆ ಕಾಂಗ್ರೆಸ್ಸಿಗರು ಕೂಡ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​​ಡಿಎ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ತುದಿಗಾಲಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್​ ಸೋಷಿಯಲ್​​ ಮೀಡಿಯಾ ನಿರ್ವಹಿಸುತ್ತಿರುವ ಮಾಜಿ ಸಂಸದೆ ರಮ್ಯಾ ಅವರಂತೂ ಭಾರೀ ಸಕ್ರಿಯರಾಗಿದ್ದಾರೆ. ಆಗಾಗ್ಗೆ ಪ್ರಧಾನಿಯನ್ನು ಅವರು ಕಾಲೆಳೆಯುತ್ತಲೇ ಇರುತ್ತಾರೆ. ಇದೀಗ ಕೂಡ ರಮ್ಯಾ ಪ್ರಧಾನಿಯನ್ನು ಹಿಟ್ಲರ್​ಗೆ ಹೋಲಿಸುವಂತಹ ಫೋಟೋವೊಂದನ್ನು ಟ್ವೀಟ್ ಮಾಡಿ, ಬಿಜೆಪಿ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮೊದಲಿನಿಂದಲೂ ನಟಿ ರಮ್ಯಾ ಪ್ರಧಾನಿ ಮೋದಿಯವರ ಬಗ್ಗೆ ಟ್ವಿಟ್ಟರ್​​​ನಲ್ಲಿ ಏನಾದರೂ ಪೋಸ್ಟ್​​ ಮಾಡುವ ಮೂಲಕ ಸಾರ್ವಜನಿಕರ ಟೀಕೆಗೆ ಗುರಿಯಾಗುವುದು ವಾಡಿಕೆ. ಇಂದು ಕೂಡ ಅದೇ ರೀತಿ ​ ಸರ್ವಾಧಿಕಾರಿ ಹಿಟ್ಲರ್​​ ಜತೆಗೆ ಪ್ರಧಾನಿ ಮೋದಿಯವರನ್ನು ಹೋಲಿಕೆ ಮಾಡಿ ಪೋಸ್ಟ್​ವೊಂದನ್ನು ಹಾಕಿ ಸುದ್ದಿಯಲ್ಲಿದ್ದಾರೆ. ಟ್ವಿಟ್ಟರ್​​ನಲ್ಲಿ ಪ್ರಧಾನಿ ಮೋದಿ ಮತ್ತು ಹಿಟ್ಲರ್​​​​ ಮಗುವೊಂದರ ಕಿವಿ ಹಿಂಡುತ್ತಿರುವ ಚಿತ್ರದ ಕೊಲಾಜ್​ ಅನ್ನು  ಹಂಚಿಕೊಂಡು, ನಿಮ್ಮ ತಲೆಯಲ್ಲಿ ಯಾವ ಆಲೋಚನೆ ಬರುತ್ತಿದೆ ಎಂದು ಪ್ರಶ್ನಿಸಿದ್ದಾರೆ.


ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಹಾಸ್ಯ ನಟ ಬುಲೆಟ್ ಪ್ರಕಾಶ್​,​ ರಮ್ಯ ಮೇಡಮ್ (ಪದ್ಮಾವತಿ) ಈ ಮಗುವಿನ ವಯಸ್ಸಿನಲ್ಲಿ ನಿಮ್ಮ ತಂದೆಯವರು ನಿಮ್ಮ ಕಿವಿ ಹಿಂಡಿದ್ದರೆ ನೀವು ಹೀಗೆ ಆಗುತ್ತಿರಲಿಲ್ಲ.ನೀವು ಎರಡು ಚುನಾವಣೆಗಳಲ್ಲಿ ನಿಮ್ಮ ಹಕ್ಕು ಅಂದರೆ ಮತ ಚಲಾಯಿಸದವರು ನಿಮಗೆ ವಿಶ್ವನಾಯಕ ನರೇಂದ್ರ ಮೋದಿಯವರ ಬಗ್ಗೆ ಮಾತಾಡೋಕ್ಕೆ ಯಾವುದೇ ನೈತಿಕತೆ ಇಲ್ಲ. ನಾಳೆ ವೀಡಿಯೋ ಮೂಲಕ ಉತ್ತರ ಕೊಡುತ್ತಿನಿ ಎಂದು ಟ್ವೀಟ್ ಮಾಡಿ ಎಚ್ಚರಿಕೆ ನೀಡಿದ್ದಾರೆ.

 

ಎಲ್ಲರು ತಿಂದದ್ದು ಕರಗ ಬೇಕು ಅಂದ್ರೆ ಕೆಲಸ ಮಾಡುತ್ತಾರೆ ಈ ವೋಟ್ ಹಾಕೋದೇ ಇರುವ ಮಹಾನ್ ರಾಜಕಾರಣಿ ಮೋದಿ ಗೆ ಏನಾದರು ಕೆಟ್ಟದಾಗಿ ಟ್ವಿಟ್ ಮಾಡಿ ತಿಂದದ್ದು ಅರಗಿಸಿ ಕೊಳ್ಳುತ್ತಾಳೆ .ನಮ್ಮ ಮೋದಿ ವಿರೋಧಿಗಳಿಗೂ ಈ ರೀತಿ ಸಹಾಯ ಮಾಡುತ್ತಾರೆ

— Chowkidar Pranesh Kulkarani (@Namonemore) April 29, 2019

ಇದನ್ನೂ ಓದಿ :  ಪ್ರಧಾನಿ ಮೋದಿಯನ್ನು 'ಕಳ್ಳ' ಎಂದ ರಮ್ಯಾ ವಿರುದ್ಧ 'ದೇಶದ್ರೋಹ' ಪ್ರಕರಣ ದಾಖಲು

ನಟಿ ರಮ್ಯಾ  ಟ್ವೀಟ್​​​ಗೆ ಜಾಲತಾಣದಲ್ಲಿ ಹಲವರು ಕಾಲೆಳೆದ್ದಾರೆ. ನಿನ್ನ ಯೋಗ್ಯತೆಗೆ ಬಂದು ಒಂದು ವೋಟ್ ಹಾಕಲಿಲ್ಲ. ಜನಗಳ ಮುಂದೆ ಬರಲು ತಾಕತ್ತು ಇಲ್ಲ. ರೋಗ ಬಂದಿದೆ ಅಂತ ಸುಳ್ಳು ಹೇಳಿ ಅಂಬರೀಷ್ ಅವರನ್ನು ನೋಡಲು ಬರದೆ ದುಬೈ ಗೆ ಹೋಗ್ತೀಯಾ. ನೀನು ಪ್ರಧಾನಿ ನರೇಂದ್ರ ಮೋದಿ ಅವರ ಎಡಗಾಲಿನ ಕಿರು ಬೆರಳಿನ ಧೂಳಿಗೂ ಸಮ ಇಲ್ಲ ಎಂದು  ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

First published: