ಮಳೆ ಸಂತ್ರಸ್ತರ ನೆರವಿಗೆ ಮನವಿ ಮಾಡಿದ ಚಂದನವನದ ನಟ-ನಟಿಯರು..!

news18
Updated:August 17, 2018, 7:27 PM IST
ಮಳೆ ಸಂತ್ರಸ್ತರ ನೆರವಿಗೆ ಮನವಿ ಮಾಡಿದ ಚಂದನವನದ ನಟ-ನಟಿಯರು..!
news18
Updated: August 17, 2018, 7:27 PM IST
ನ್ಯೂಸ್​ 18 ಕನ್ನಡ 

ಮಲೆನಾಡು, ಕರಾವಳಿಯ ಭಾಗದಲ್ಲಿ ಆಗುತ್ತಿರುವ ಮಳೆಯ ಅಬ್ಬರಕ್ಕೆ ಜನರು ತತ್ತರಿಸಿದ್ದು, ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಕೊಡಗು, ಚಿಕ್ಕಮಗಳೂರಿನಲ್ಲಿ ಮಳೆಯಿಂದಾಗಿ ರಸ್ತೆಗಳು, ಬೆಟ್ಟ ಗುಡ್ಡ, ಮನೆಗಳು ಕುಸಿಯುತ್ತಿವೆ. ರಸ್ತೆಗಳು ಜಲಾವೃತ್ತಗೊಂಡು ಜನರು ಸಂಚಾರ ಸಂಪರ್ಕ ಕಳೆದುಕೊಂಡಿದ್ದಾರೆ.

ಕೊಡಗು, ಚಿಕ್ಕಮಗಳೂರಿನ ಹಲವು ಪ್ರದೇಶಗಳು ದ್ವೀಪವಾಗಿ ಮಾರ್ಪಟ್ಟಿದ್ದು, ತುಂಗಾ, ಭದ್ರಾ, ಕಾವೇರಿ, ಕಪಿಲ ನದಿಗಳು ಉಕ್ಕಿ ಹರಿಯುತ್ತಿವೆ. ಕಬಿನಿ ಜಲಾಶಯದಿಂದ ಹೆಚ್ಚು ನೀರು ಹರಿಸುತ್ತಿರುವ ಹಿನ್ನಲೆ ಹಳೇ ಮೈಸೂರು ಭಾಗದ ಜನರು ಪ್ರವಾಹದಲ್ಲಿ ಸಿಲುಕಿದ್ದಾರೆ. ದಾವಣಗೆರೆ, ಬಳ್ಳಾರಿಯ ಕಂಪ್ಲಿಯಲ್ಲಿಯೂ ನದಿಗಳು ಉಕ್ಕಿ ಹರಿಯುತ್ತಿದ್ದು, ಅಲ್ಲಿನ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ.

ಒಟ್ಟಾರೆ ರಾಜ್ಯದ ಐದು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಆಗುತ್ತಿರುವ ಅವಾಂತರದಿಂದಾಗಿ ಜನರು ಪರದಾಡುತ್ತಿದ್ದು, ಅವರಿಗೆ ಕೈಲಾದಷ್ಟು ಸಹಾಯ ಮಾಡುವಂತೆ ಚಂದನವನದ ತಾರೆಯರು ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡುತ್ತಿದ್ದಾರೆ.

ದೊಡ್ಮನೆ ದೊಡ್ಡ ಮಗ ಶಿವಣ್ಣ, ಸುದೀಪ್​, ಪ್ರಿಯಾ ಸುದೀಪ್​, ದರ್ಶನ್​, ರಶ್ಮಿಕಾ ಮಂದಣ್ಣ, ನಿರ್ದೇಶಕ ರಿಶಭ್​ ಶೆಟ್ಟಿ ಸೇರಿದಂತೆ ಹಲವಾರು ಮಂದಿ ತಾರೆಯರು ಮಳೆಯಿಂದ ತೊಂದರೆ ಎದುರಿಸುತ್ತಿರುವವರಿಗೆ ಸಹಾಯ ಮಾಡುವಂತೆ ಕೋರಿದ್ದಾರೆ.
 

Kodagu floods: helpline numbers Please please share 

And pray for the victims
🙏🙏🙏🙏🙏 pic.twitter.com/VvYTne32yD


— Rishab Shetty (@shetty_rishab) August 17, 2018


Rishab Shetty on Twitter
“Kodagu floods: helpline numbers Please please share And pray for the victims 🙏🙏🙏🙏🙏”
twitter.comFirst published:August 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ