ಕಾಳಿ ನದಿಯಲ್ಲಿ ಮರಳುಗಾರಿಕೆಗೆ ನಿಷೇಧ; ಜೀವ ಸಂರಕ್ಷಣಾ ವಲಯ ಎಂದು ಗುರುತಿಸಿದ ಕೇಂದ್ರ ಪರಿಸರ ಸಚಿವಾಲಯ

ಮರಳು ಉದ್ಯಮ‌ ಕಾಳಿ ನದಿಯಲ್ಲಿ ಆರಂಭವಾದರೆ ಇಲ್ಲಿನ ನೂರಾರು ಕಾರ್ಮಿಕರ ಕುಟುಂಬಗಳು ಇದಕ್ಕೆ ಅವಲಂಬಿತವಾಗಿ ಜೀವನ ಸಾಗಿಸಲಿವೆ. ಇವತ್ತು ಕಾಳಿ ನದಿಯಲ್ಲಿ ಮರಳುಗಾರಿಕೆ ಸ್ಥಗಿತವಾಗಿ ಸಾಕಷ್ಟು ಕುಟುಂಬಗಳು ಬೀದಿ ಪಾಲಾಗಿವೆ. ಕಾಳಿ ನದಿಯಲ್ಲಿ ಮರಳುಗಾರಿಕೆ ನಿಷೇಧ ಮಾಡಿ ಇವತ್ತಿಗೆ ಎರಡು ವರ್ಷವಾಗಿದ್ದರೂ, ಅದೆಷ್ಟೋ ಕುಟುಂಬಗಳು ಮರಳುಗಾರಿಗೆ ಮತ್ತೆ ಆರಂಭವಾಗುತ್ತೇನೋ ಎನ್ನುವ ಭರವಸೆಯಲ್ಲಿ  ಛಾತಕ ಪಕ್ಷಿಯಂತೆ ಕಾದುಕುಳಿತಿವೆ.

ಕಾಳಿ ನದಿ

ಕಾಳಿ ನದಿ

  • Share this:
ಕಾರವಾರ(ಸೆ.02): ಕಳೆದ ಎರಡು ವರ್ಷದಿಂದ ಕಾರವಾರ ಕಾಳಿ ನದಿಯಲ್ಲಿ ಮರಳುಗಾರಿಕೆ ನಿಷೇಧ ಹೇರಲಾಗಿದ್ದು, ಈ ವರ್ಷ ಕೂಡ ಮರಳುಗಾರಿಕೆಗೆ ನಿಷೇಧ ಮುಂದುವರೆದಿದೆ. ಇದು ಮರಳು ಉದ್ಯಮಿಗಳಲ್ಲಿ ಭಾರೀ ನಿರಾಸೆ ಮೂಡಿಸಿದ್ದು, ಅಭಿವೃದ್ದಿ ಕಾರ್ಯಕ್ಕೆ ಭಾರೀ ಹಿನ್ನಡೆ ಆಗಲಿದೆ ಎಂಬ ಆತಂಕ ಕೂಡಾ ಎದುರಾಗಿದೆ. ಕಾರವಾರದಲ್ಲಿ ಹರಿಯುವ ಕಾಳಿ ನದಿಯಲ್ಲಿ ಮರಳುಗಾರಿಕೆಗೆ ಕೇಂದ್ರ ಸರಕಾರ ನಿಷೇಧ ಹೇರಿ ಬರೋಬ್ಬರಿ ಮೂರು ವರ್ಷ ಸಮೀಪಿಸಿದೆ. ಈ ವರ್ಷ ಕೂಡಾ ಮರಳುಗಾರಿಕೆ ನಿಷೇಧ ಮುಂದುವರೆದಿದೆ.

ಕೇಂದ್ರ ಪರಿಸರ ಸಚಿವಾಲಯ ಕಾಳಿ ನದಿ ಮರಳುಗಾರಿಕೆಗೆ ನಿಷೇಧ ಹೇರಿ ಕಾಳಿ ನದಿಯನ್ನು ಜೀವ ಸಂರಕ್ಷಣಾ ವಲಯ ಎಂದು ಗುರುತಿಸಿ ಆದೇಶ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಕಾಳಿ ನದಿಯಲ್ಲಿ ಮರಳುಗಾರಿಕೆ ಸ್ಥಗಿತ ಮಾಡಲಾಗಿದೆ. ಈ ವರ್ಷ ಇಲ್ಲಿನ ಸಾಕಷ್ಟು ಮರಳು ಉದ್ಯಮಿಗಳು ಮತ್ತು ಗುತ್ತಿಗೆದಾರರು ಸರಕಾರದ ಗಮನ ಸೆಳೆಯಲು ಹತ್ತಾರು ಬಾರಿ ಸಂಬಂಧಿಸಿದ ಸರಕಾರಿ ಕಚೇರಿ ಸುತ್ತಿ ಈ ಬಾರಿ ಹೇಗಾದ್ರು ಮಾಡಿ ಕಾಳಿ ನದಿಯ ಆಯ್ದ ಭಾಗದಲ್ಲಿ ಮರಳುಗಾರಿಕೆ ನಡೆಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಜೊತೆಗೆ ನಿಯಮ ಕೊಂಚ ಸಡಿಲಿಕೆ ಮಾಡಲು ಕೋರಿದರು,

ಆದರೆ ಸುತಾರಾಂ ಒಪ್ಪದ ಜಿಲ್ಲಾಡಳಿತ ಮನವಿಯನ್ನ ಕೇಂದ್ರ ಪರಿಸರ ಇಲಾಖೆಗೆ ಕಳಿಸಲಾಗುವುದು ಎಂದು ಹೇಳಿದೆ. ಆ ಮೂಲಕ ಪರೋಕ್ಷವಾಗಿ ಈ ಬಾರಿ ಕಾಳಿ ನದಿಯಲ್ಲಿ ಮರಳುಗಾರಿಕೆ ಆರಂಭವಾಗಲ್ಲ ಎನ್ನುವ ಸುಳಿವನ್ನು ಬಿಟ್ಟುಕೊಟ್ಟಿದೆ. ಕಾಳಿ ನದಿಯಲ್ಲಿ ಮರಳು ಉದ್ಯಮ ಆರಂಭವಾದರೆ ಸಾಕಷ್ಟು ಕಾರ್ಮಿಕರು ಉದ್ಯೋಗ ಕಂಡುಕೊಳ್ಳಲಿದ್ದಾರೆ. ಜತೆಗೆ ಬೇರೆ ಕಡೆಯಿಂದ ದುಬಾರಿ ಬೆಲೆಗೆ ಮರಳು ತರಿಸಿಕೊಳ್ಳುವ ಸಮಸ್ಯೆ ತಪ್ಪುತ್ತದೆ. ಇನ್ನು ಸರಕಾರಿ ಯೋಜನೆಯಲ್ಲಿ ಬಡವರಿಗೆ ಬಂದ ಮನೆಗಳ ನಿರ್ಮಾಣಕ್ಕೂ ಸಹಕಾರಿಯಾಗಲಿದೆ. ಇವೆಲ್ಲ ಸಮಸ್ಯೆ ಅರಿತ ಜಿಲ್ಲಾಡಳಿತ ಕಾಳಿ ನದಿಯ ಆಯ್ದ ಜಾಗದಲ್ಲಿ ಮರಳುಗಾರಿಕೆ ಆರಂಭಿಸಲು ಅವಕಾಶ ಮಾಡಿಕೊಟ್ಟರೆ ಉತ್ತಮ ಎನ್ನುವುದು ಕೆಲವರ ಮಾತು.

ಖಿನ್ನತೆಯಿಂದ ಪಾರಾಗಲು ಬೆಂಗಳೂರಿನ ಜನರಿಗೆ ಸಿಕ್ಕ ಬೆಸ್ಟ್​ ಫ್ರೆಂಡ್​ ಯಾರು ಗೊತ್ತೇ?

ಮರಳುಗಾರಿಕೆ ಆರಂಭವಾದ್ರೆ ಏನು ಅನುಕೂಲ?

ಮರಳು ಉದ್ಯಮ‌ ಕಾಳಿ ನದಿಯಲ್ಲಿ ಆರಂಭವಾದರೆ ಇಲ್ಲಿನ ನೂರಾರು ಕಾರ್ಮಿಕರ ಕುಟುಂಬಗಳು ಇದಕ್ಕೆ ಅವಲಂಬಿತವಾಗಿ ಜೀವನ ಸಾಗಿಸಲಿವೆ. ಇವತ್ತು ಕಾಳಿ ನದಿಯಲ್ಲಿ ಮರಳುಗಾರಿಕೆ ಸ್ಥಗಿತವಾಗಿ ಸಾಕಷ್ಟು ಕುಟುಂಬಗಳು ಬೀದಿ ಪಾಲಾಗಿವೆ. ಕಾಳಿ ನದಿಯಲ್ಲಿ ಮರಳುಗಾರಿಕೆ ನಿಷೇಧ ಮಾಡಿ ಇವತ್ತಿಗೆ ಎರಡು ವರ್ಷವಾಗಿದ್ದರೂ, ಅದೆಷ್ಟೋ ಕುಟುಂಬಗಳು ಮರಳುಗಾರಿಗೆ ಮತ್ತೆ ಆರಂಭವಾಗುತ್ತೇನೋ ಎನ್ನುವ ಭರವಸೆಯಲ್ಲಿ  ಛಾತಕ ಪಕ್ಷಿಯಂತೆ ಕಾದುಕುಳಿತಿವೆ. ಆದ್ರೆ ಸರಕಾರ ಮಾತ್ರ ಇದು ಜೀವ ಸಂರಕ್ಷಣ ವಲಯ ಎಂದು ಗುರುತಿಸಿದ್ದು, ಇದು ಮರಳು ಉದ್ಯಮದ ಮೇಲೆ ಕರಿನೆರಳು ಬೀರಿದೆ.

ಒಟ್ಟಾರೆ ಕಾಳಿ ನದಿಯಲ್ಲಿ ಮರಳು ಉದ್ಯಮ ಆರಂಭ ಯ್ಯಾವಾಗ ಎಂದು ಉದ್ಯಮಿಗಳು ಕಾದು ಕುಳಿತ್ತಿದ್ದಾರೆ. ಇನ್ನು ಸರಕಾರ ಮಾತ್ರ ಕಾಳಿ ನದಿಯಲ್ಲಿ ಮರಳುಗಾರಿಕೆ ನಡೆಸಲು ನಿರ್ಬಂಧಗಳನ್ನು ಇನ್ನಷ್ಟು ಕಠಿಣ ಮಾಡುತ್ತಿದೆ.

ಗುತ್ತಿಗೆದಾರರ ಪರದಾಟ

ಮರಳುಗಾರಿಕೆ ಆರಂಭವಾದ್ರೆ ಅಭಿವೃದ್ಧಿ ಕಾರ್ಯಗಳು‌ ಚುರುಕುಗೊಳ್ಳಲಿದೆ. ಆದ್ರೆ ಮರಳುಗಾರಿಕೆ ನಿಷೇಧದಿಂದ ಇವತ್ತು ಸರಕಾರಿ ಆಗಿರಬಹುದು ಅಥವಾ ಖಾಸಗಿ ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬಿದ್ದಿವೆ. ಸರಕಾರಿ ಗುತ್ತಿಗೆದಾರರು ಬೇರೆ ತಾಲೂಕಿನಿಂದ ಮರಳನ್ನ ದುಬಾರಿ ದರದಲ್ಲಿ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇವತ್ತು ಸಾಕಷ್ಟು ಸಮಸ್ಯೆ ಎದುರಾಗಿದೆ.
Published by:Latha CG
First published: