ಅಂಗನವಾಡಿಯಲ್ಲಿ ಊಟ ಬಡಿಸುವಾಗ ಅವಾಂತರ; ಬಿಸಿಸಾರು ಚೆಲ್ಲಿ ಮೂವರು ಮಕ್ಕಳಿಗೆ ಗಾಯ

ಮಕ್ಕಳಿಗೆ ಗಂಭೀರ ಗಾಯ ಹಿನ್ನೆಲೆ ಕೆಎಲ್​​ಇ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.  55 ವರ್ಷದ ಆಯಾ ಲೀಲಾವತಿಗೆ ಮುಖ, ಕೈ ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಳಗಾವಿ(ಡಿ.11): ಅಂಗನವಾಡಿಯಲ್ಲಿ ಮಧ್ಯಾಹ್ನ ಊಟ ಬಡಿಸುವಾಗ ಮಕ್ಕಳ ಮೇಲೆ  ಬಿಸಿ ಸಾರು ಚೆಲ್ಲಿದ ಪರಿಣಾಮ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಈ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರದ ಗೋಳಿಯಳ್ಳಿ ಅಂಗನವಾಡಿಯಲ್ಲಿ ನಡೆದಿದೆ.

3 ಹೆಣ್ಮಕ್ಕಳು, ಓರ್ವ ಆಯಾ ಸುಟ್ಟ ಗಾಯಗಳಿಂದ ಗಂಭೀರಗೊಂಡಿದ್ದಾರೆ.  ಇಂದು ಮಕ್ಕಳಿಗೆ ಊಟ ಬಡಿಸುವಾಗ ಘಟನೆ ನಡೆದಿದೆ. ಸಂಜನಾ, ಸಾನ್ವಿ, ಸಮೀಕ್ಷಾ ಗಂಭೀರ ಗಾಯಗೊಂಡಿರುವ ಮಕ್ಕಳು. ಎಲ್ಲರೂ 5 ವರ್ಷದ ಮಕ್ಕಳು ಎಂದು ತಿಳಿದು ಬಂದಿದೆ.

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಮಣಿದ ಸರ್ಕಾರ; ಡಿ.16ಕ್ಕೆ ಮುಖ್ಯ ಕಾರ್ಯದರ್ಶಿ ಜೊತೆ ಸಭೆ

ಮಕ್ಕಳಿಗೆ ಗಂಭೀರ ಗಾಯ ಹಿನ್ನೆಲೆ ಕೆಎಲ್​​ಇ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.  55 ವರ್ಷದ ಆಯಾ ಲೀಲಾವತಿಗೆ ಮುಖ, ಕೈ ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗಾಯಾಳು ಮಗು ಸಮೀಕ್ಷಾ ತಾಯಿ ಗೀತಾ "ವಯಸ್ಸಾದ ಅಜ್ಜಿಯನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರಿಂದ ದುರಂತ ನಡೆದಿದೆ," ಎಂದು ಆರೋಪ ಮಾಡಿದ್ದಾರೆ. ಮಗಳು ಸಮೀಕ್ಷಾ ಸ್ಥಿತಿ ನೋಡಿ ತಾಯಿ ಕಣ್ಣೀರಿಡುತ್ತಿದ್ದಾರೆ. ಗಾಯಗೊಂಡ ಮೂವರು ಮಕ್ಕಳು ಒಂದೇ ಕುಟುಂಬದವರು ಎಂದು ತಿಳಿದು ಬಂದಿದೆ.

"ವೃದ್ಧೆಯನ್ನು ಅಂಗನವಾಡಿ ಸಹಾಯಕಿಯನ್ನಾಗಿ ನೇಮಕ ಮಾಡಿಕೊಂಡಿದ್ದಾರೆ.  ಸಾಂಬಾರ ತುಂಬಿದ ಪಾತ್ರೆ ತರುವಾಗ ಕೈ ಜಾರಿ ಬಿದ್ದಿದೆ. ಹೀಗಾಗಿ ಆಯಾ, ಮೂವರು ಮಕ್ಕಳಿಗೆ ಗಂಭೀರ ಗಾಯವಾಗಿದೆ.  ಗಾಯಾಳು ಮಕ್ಕಳನ್ನು ಐಸಿಯುಗೆ ಸ್ಥಳಾಂತರಿಸುವದಾಗಿ ವೈದ್ಯರು ಹೇಳಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ," ಗಾಯಾಳು ಬಾಲಕಿ ತಾಯಿ ಆಗ್ರಹ ಮಾಡಿದ್ದಾರೆ
First published: