ಬೆಂಗಳೂರು: ಅವತ್ತು ಎಲ್ಲರೂ ಹೊಸ ವರ್ಷವನ್ನ (New Year Celebrations) ಸ್ವಾಗತಿಸುವ ಸಂಭ್ರಮದಲ್ಲಿದ್ದರು. ಇಲ್ಲಿ ಆತನ ಬದುಕೇ ಹೊತ್ತಿ ಉರಿಯುತ್ತಿತ್ತು, ಮೊದಲಿಗೆ ಇದು ಆಕಸ್ಮಿಕ ಅವಘಡ ಎನ್ನವಾಗಿತ್ತು. ಆದರೆ ಅಸಲಿಯತ್ತೇ ಬೇರೆ. ಅಂದಹಾಗೇ ನಾವು ಹೇಳ್ತಿರೋದು ಡಿಸೆಂಬರ್ 31ರ ರಾತ್ರಿ ಬೆಂಗಳೂರಿನ (Bengaluru) ಹೊರವಲಯದ ಚಂದಾಪುರದಲ್ಲಿ (Chandapura) ನಡೆದ ಬೆಂಕಿ ಅಪಘಡ ಘಟನೆ ಕುರಿತು. ಹೌದು, 2022ರ ಡಿಸೆಂಬರ್ 31ರ ರಾತ್ರಿ 12 ಗಂಟೆ ಇಡೀ ಜಗತ್ತು ಹೊಸ ವರ್ಷದ ಸಂಭ್ರಮದಲ್ಲಿದ್ದಾಗ ಚಂದಾಪುರದಲ್ಲಿ ಮಾತ್ರ ಕಿಡಿಗೇಡಿಗಳು ಇಡೀ ಸಲೂನ್ಗೆ (Salon) ಬೆಂಕಿ ಇಟ್ಟು (Bike Accident) ವಿಕೃತ ಆನಂದ ಪಟ್ಟಿದ್ದರು.
ಬೆಂಗಳೂರು ಹೊರವಲಯದ ಚಂದಾಪುರದಲ್ಲಿದ್ದ ಸಲೂನ್ ಓನರ್ ಮತ್ತು ಪುಷ್ಪಾ ಸ್ನೇಹಿತೆಯರು. ಸಲೂನ್ ಮಾಲಕಿ ಬೇಬಿ, ತನ್ನ ಸ್ನೇಹಿತೆ ಪುಷ್ಪಾ ಬಳಿ ತನ್ನ ತಮ್ಮನಿಗೆ ಮೂರು ಲಕ್ಷ ಹಣವನ್ನ ಸಾಲವಾಗಿ ಕೊಡಿಸಿದ್ದಳಂತೆ.
ಆದರೆ ಕೊಟ್ಟ ಹಣವನ್ನ ವಾಪಸ್ ಕೊಡದೆ ಬೇಬಿ ಸತಾಯಿಸಿದ್ದೂ, ಅಲ್ಲದೆ ನೀನು ಹಣವನ್ನೇ ಕೊಟ್ಟಿಲ್ಲ ಅಂತ ಆವಾಜ್ ಹಾಕಿದ್ದಲಂತೆ. ಇದರಿಂದ ರೋಸಿ ಹೋಗಿದ್ದ ಪುಷ್ಪಾ, ಆಕ್ರೋಶಗೊಂಡ ಪುಷ್ಪಾ ಮತ್ತು ಆಕೆಯ ಪ್ರಿಯಕರ ಪ್ಲಾನ್ ಮಾಡಿ ಸಲೂನ್ ಗೆ ಬೆಂಕಿ ಹಚ್ಚಿದ್ದಾರೆ.
ಇದನ್ನೂ ಓದಿ: Bagalkot: ಹುಟ್ಟಿದ ಮೂವರು ಮಕ್ಕಳೂ ಹೆಣ್ಣು; ಮುದ್ದು ಕಂದಮ್ಮಗಳಿಗೆ ವಿಷ ಉಣಿಸಿ ಆತ್ಮಹತ್ಯೆ ಶರಣಾದ ತಾಯಿ
ಘಟನೆ ಬಳಿಕ ಶಾರ್ಟ್ ಸರ್ಕ್ಯೂಟ್ನಿಂದ ಆಗಿರಬಹುದು ಅಂತ ಶಂಕಿಸಲಾಗಿತ್ತು. ಆದರೆ ಸಿಸಿಟಿವಿ ಪರಿಶೀಲನೆ ಮಾಡಿದಾಗ ನಿಜವಾದ ಕೃತ್ಯ ಬಯಲಾಗಿದ್ದು, ಇದು ಹಣದ ವಿಚಾರಕ್ಕೆ ನಡೆದ ರಿವೇಂಜ್ ಸ್ಟೋರಿ ಅನ್ನೋದು ಬಯಲಾಗಿದೆ.
ಆನೇಕಲ್ ಪಟ್ಟಣದ ವಾಸಿ ಶಿವಕುಮಾರ್, ತಮಿಳುನಾಡು ಮೂಲದ ಉಮೇಶ್, ಹರೀಶ್ ಮಣಿ ಬಂಧಿತರು. ಡಿಸೆಂಬರ್ 31 ರಾತ್ರಿ 12 ಗಂಟೆ ಸುಮಾರಿಗೆ ವಿಶ್ ಫ್ಯಾಮಿಲಿ ಸಲೂನ್ ನಲ್ಲಿ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಪರಿಕರಗಳು ಬೆಂಕಿಗಾಹುತಿಯಾಗಿರುತ್ತವೆ. ಅಗ್ನಿಶಾಮಕ ದಳ ಬೆಂಕಿ ನಂದಿಸಿದ್ದು, ಸಲೂನ್ ಮಾಲೀಕರು ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಸೂರ್ಯನಗರ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.
ಇದನ್ನೂ ಓದಿ: Siddaramaiah: MLC + ಮಂತ್ರಿಗಿರಿ? ಶ್ರೀನಿವಾಸಗೌಡರ ಕ್ಷೇತ್ರ ತ್ಯಾಗದ ಹಿಂದಿನ ಅಸಲಿಯತ್ತು ಏನು? ಆಡಿಯೋ ವೈರಲ್
ಇನ್ನೂ ತನಿಖೆ ಆರಂಭಿಸಿದ ಸೂರ್ಯನಗರ ಪೊಲೀಸರು ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದಾಗ ಪ್ರಕರಣಕ್ಕೆ ಸ್ಪೋಟಕ ಸುಳಿವು ಲಭ್ಯವಾಗುತ್ತದೆ. ನಾಲ್ಕು ಮಂದಿ ಅಸಾಮಿಗಳು ಸುತಿಗೆಯಿಂದ ಸಲೂನ್ ಗಾಜು ಹೊಡೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿರುತ್ತದೆ. ಸಿಸಿ ಟಿವಿ ದೃಶ್ಯಗಳು ಆಧರಿಸಿ ತನಿಖೆಗಿಳಿದ ಪೊಲೀಸರಿಗೆ ಸಲೂನ್ ಪೈರ್ ಅಸಲಿ ಕಹಾನಿ ಬಯಲಾಗುತ್ತದೆ.
ಒಟ್ಟಿನಲ್ಲಿ ಬೇಬಿ ರಾಣಿ ನನಗೂ ಪುಷ್ಪಾಗೆ ಯಾವುದೇ ಹಣಕಾಸಿನ ವ್ಯವಹಾರ ಇಲ್ಲ. ತಮ್ಮನಿಗೆ ಕೊಡಿಸಿದ್ದೆ, ಜೊತೆಗೆ ನನ್ನ ಏಳಿಗೆಯನ್ನು ಸಹಿಸದೇ ಹೀಗೆ ಸಲೂನ್ ಗೆ ಬೆಂಕಿ ಹಚ್ಚಿದ್ದಾರೆ ಎನ್ನುತ್ತಿದ್ದಾಳೆ.
ಇದರ ನಡುವೆ ಆರೋಪಿ ಶಿವಕುಮಾರ್ ಬೇರೆಯದೇ ಕಥೆ ಹೇಳುತ್ತಿದ್ದಾರೆ. ಬೇಬಿ ರಾಣಿ ಸುಮಾರು 30 ಲಕ್ಷ ರೂಪಾಯಿ ಹಣ ಸಾಲ ಪಡೆದಿದ್ದು, ಇಲ್ಲಿಯವರೆಗೆ ನಯಾಪೈಸೆ ಹಿಂತಿರುಗಿಸಿಲ್ಲ. ಈಗ ನಮ್ಮಗಳ ಗೂಬೆ ಕೂರಿಸುತ್ತಿದ್ದಾಳೆ ಎನ್ನುತ್ತಿದ್ದು, ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ