Salam Mangalarathi: ಸಲಾಂ ಮಂಗಳಾರತಿ ಹೆಸರಲ್ಲಿ ಪೂಜೆ ನಡೆಯಲ್ಲ: ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಅರ್ಚಕರಿಂದ ಮಾಹಿತಿ

ಸಲಾಂ ಮಂಗಳರಾತಿಯ ಕುರಿತು ಕೊಲ್ಲೂರು ದೇವಾಲಯದ ಅರ್ಚಕ ಮೂಲಗಳು ನ್ಯೂಸ್ 18 ಕನ್ನಡಕ್ಕೆ ಮಾಹಿತಿ ನೀಡಿದೆ.

ಕೊಲ್ಲೂರು ದೇಗುಲ

ಕೊಲ್ಲೂರು ದೇಗುಲ

  • Share this:
ಉಡುಪಿ: ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಸಲಾಂ ಮಂಗಳಾರತಿ ಆಡುಭಾಷೆಯಲ್ಲಿ ಬಂದಿರುವ ಶಬ್ದ. ದೇವಾಲಯದಲ್ಲಿ ಸಲಾಂ ಮಂಗಳಾರತಿ ಹೆಸರಲ್ಲಿ ಪೂಜೆ ನಡೆಯುವುದಿಲ್ಲ. ದೇವಾಲಯದಲ್ಲಿ (Kollur Mookambika Temple) ನಡೆಯುವ ಪೂಜೆಗೆ ಪ್ರದೋಷ ಪೂಜೆ ಎನ್ನುತ್ತಾರೆ. ಸಲಾಂ ಮಂಗಳಾರತಿ (Salam Mangalarathi) ಎಂಬ ಶಬ್ದ ಅನಾದಿಕಾಲದಿಂದ ರೂಢಿಯಲ್ಲಿದೆ. ಎಲ್ಲಾ ದೇವಾಲಯಗಳಲ್ಲಿ ನಡೆಯುವಂತೆ ಪ್ರದೋಷ ಪೂಜೆ (Pradosh Pooja) ನಡೆಯುತ್ತದೆ. ಜನರು ಪ್ರದೋಷ ಪೂಜೆಗೆ ವಾಡಿಕೆಯಲ್ಲಿ ಸಲಾಂ ಮಂಗಳಾರತಿ ಎನ್ನುತ್ತಾರೆ ಎಂದು ಕೊಲ್ಲೂರು ಮೂಕಾಂಬಿಕಾ ದೇವಾಲಯದ (Kollur Mookambika Devi)  ಹಿರಿಯ ಅರ್ಚಕ ನರಸಿಂಹ ಅಡಿಗ ಅಧಿಕೃತ ಮಾಹಿತಿ ನೀಡಿದ್ದಾರೆ.  ತೀವ್ರ ಚರ್ಚೆಗೆ ಗ್ರಾಸವಾಗಿದ್ದ ವಿಷಯದ ಕುರಿತು ಸ್ವತಃ ದೇಗುಲದ ಅರ್ಚಕರೇ ಅಧಿಕೃತ ಮಾಹಿತಿ ನೀಡಿದ್ದಾರೆ.

ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಪ್ರದೋಷ ಕಾಲದಲ್ಲಿ ಪೂಜೆ ನಡೆಯುತ್ತದೆ. ಇದೊಂದು ಬಹಳ ಅರ್ಥಗರ್ಭಿತವಾದ ಪೂಜೆ. ಪ್ರದೋಷ  ಕಾಲ ಎಂಬುದಕ್ಕೆ ಬಹಳ ಮಹತ್ವವಿದೆ. ಪ್ರದೋಷ ಕಾಲದಲ್ಲಿ ಎಲ್ಲಾ ದೇವಿ ದೇವತೆಗಳ ಸಾನಿಧ್ಯ ಇರುತ್ತದೆ ಎಂಬ ನಂಬಿಕೆಯಿದೆ. ಪ್ರದೋಷ ಕಾಲದಲ್ಲಿ ನಡೆಯುವ ಪೂಜೆಗಳ ವೈಶಿಷ್ಟ್ಯವೇ ಬೇರೆ.

ಯಾವುದೇ ತರಹದ ದಾಖಲೆಗಳು ಇಲ್ಲ
ನಾವು ಆ ಕಾಲದಲ್ಲಿ ದೇವಿಗೆ ಪೂಜೆಯನ್ನ ನಡೆಸುತ್ತೇವೆ. ವೈಭವೋಪೇತವಾಗಿ ರಾಗೋಪಚಾರ ದೀಪಾರಾಧನೆ ಗಳನ್ನು ನಡೆಸುತ್ತೇವೆ. ಕರುಣಾ ಕರುಣಿಕೆಯಲ್ಲಿ ಕೇಳಿಬಂದ ಪ್ರಕಾರ ದೊರೆ ಟಿಪ್ಪು ಪೂಜೆಯಲ್ಲಿ ಭಾಗವಹಿಸಿದ್ದ. ಪ್ರದೋಷ ಪೂಜೆ ಸಂದರ್ಭದಲ್ಲಿ ಸಲಾಮ್ ಮಾಡಿದ್ದ ಅಂತ ಕರುಣಾ ಕರುಣಿಕ ಅರ್ಥಾತ್ ವಾಡಿಕೆಯಾಗಿ ಬಂದಿದೆ. ಇದಕ್ಕೆ ಯಾವುದೇ ತರಹದ ದಾಖಲೆಗಳು ಇಲ್ಲ. ಇದೊಂದು ಹೇಳಿಕೊಂಡು ಬಂದಿರುವಂತಹ ಆಡು ಮಾತು. ಪ್ರದೋಷ ಪೂಜೆ ಪ್ರದೋಷ ಮಂಗಳಾರತಿ ಎಂದೇ ದಾಖಲೆಯಲ್ಲಿರುವ ಧಾರ್ಮಿಕ ಪ್ರಾಧಾನ್ಯತೆ ಪೂಜೆಗೆ ಇದೆ.

ಬಹಳ ಹಿಂದಿನಿಂದಲೂ ಇದೆ
ಇದು ಹಿಂದಿನಿಂದಲೂ ಇವತ್ತಿಗೂ ನಡೆದುಕೊಂಡು ಬಂದಿರುವಂತಹ ಆಚರಣೆ. ರಾಷ್ಟ್ರದ ಯೋಗಕ್ಷೇಮಕ್ಕೋಸ್ಕರ ಪೂಜೆ ಸಂದರ್ಭದಲ್ಲಿ ಪ್ರಾರ್ಥನೆ ನಡೆಯುತ್ತದೆ. ಪೂಜೆ ಸಂದರ್ಭ ಟಿಪ್ಪು ಭಾಗವಹಿಸಿದ್ದ ಎಂದು ಹೇಳಿಕೊಂಡು ಬಂದಿದ್ದಾರೆ. ಹಾಗಾಗಿ ಈ ಹೆಸರು ಬಂದಿರಬಹುದು ಎಂದು ಕೊಲ್ಲೂರು ಮೂಕಾಂಬಿಕಾ ದೇಗುಲದ ಅರ್ಚಕರು ತಿಳಿಸಿದ್ದಾರೆ.

ಸಲಾಂ ಮಂಗಳಾರತಿ ನಡೆಸದಂತೆ ವಿಶ್ವ ಹಿಂದು ಪರಿಷತ್ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಮನವಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಲಾಂ ಮಂಗಳಾರತಿಯ ವಿಷಯ ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿತ್ತು. ಈಕುರಿತು ಕೊಲ್ಲೂರು ದೇವಾಲಯದ ಅರ್ಚಕ ಮೂಲಗಳು ನ್ಯೂಸ್ 18 ಕನ್ನಡಕ್ಕೆ ಮಾಹಿತಿ ನೀಡಿದೆ.

ಏನಿದು ಆಚರಣೆ?
ಕೊಲ್ಲೂರು ಮೂಕಾಂಬಿಕೆ ದೇಗುಲದಲ್ಲಿ ಹಲವು ವರ್ಷಗಳಿಂದ ಈ ಸಲಾಂ ಮಂಗಳಾರತಿ ನಡೆಸಿಕೊಂಡು ಬರಲಾಗುತ್ತದೆ. 1765ರ ಸುಮಾರಿಗೆ ಟಿಪ್ಪು ಸುಲ್ತಾನ ಈ ಕೊಲ್ಲೂರು ಮುಂಕಾಂಬಿಕೆ ದೇಗುಲಕ್ಕೆ ಭೇಟಿ ನೀಡಿ, ದೇವಿ ದರ್ಶನ ಪಡೆದಿದ್ದ. ಟಿಪ್ಪು ಸುಲ್ತಾನ್ ಭೇಟಿ ಬಳಿಕ ಇಂದಿನವರೆಗೂ ಆತನ ನೆನಪಿನಲ್ಲಿ ಇಲ್ಲಿ ಸಲಾಂ ಮಂಗಳಾರತಿ ನಡೆಸಿಕೊಂಡು ಬರಲಾಗಿದೆ.

ವಿಶ್ವ ಹಿಂದೂ ಪರಿಷತ್ ವಿರೋಧ ಏಕೆ?
ಪ್ರತಿ ದಿನ ರಾತ್ರಿ 8ರಿಂದ 8. 15ರ ಸಮಯದಲ್ಲಿ ಅಮ್ಮನವರ ಪೂಜೆ ಬಳಿಕ ಮಾಡುವ ಮಂಗಳಾರತಿಯನ್ನು ಸಲಾಂ ಮಂಗಳಾರತಿ ಎಂದು ಕರೆಯಲಾಗುತ್ತದೆ. ಈ ಮಂಗಳಾರತಿ ಹೆಸರಿನ ಸಲಾಂ ತೆಗೆಯುವಂತೆ ಇದೀಗ ಒತ್ತಾಯ ಕೇಳಿ ಬಂದಿದೆ.

ಜಾತ್ರೆಯಲ್ಲಿ ಮುಸ್ಲಿಂ (Muslim) ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡಿರಲಿಲ್ಲ. ಈಗ ದೇಗುಲದಲ್ಲಿ ಹಲವು ವರ್ಷಗಳಿಂ ಆಚರಿಸಿಕೊಂಡು ಬರುತ್ತಿರುವ ಸಲಾಂ ಮಂಗಳಾರತಿಯನ್ನು (Salam Mangalarati) ತೆಗೆಯುವಂತೆ ವಿಶ್ವ ಹಿಂದೂ ಪರಿಷತ್ (VHP) ನಿಂದ ದೇವಸ್ಥಾನದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Mangoes: ಮಾವು ರಕ್ಷಿಸಲು ರೈತರ ಮಾಸ್ಟರ್ ಪ್ಲ್ಯಾನ್‌! ನೀವೂ ಈ ಉಪಾಯ ಟ್ರೈ ಮಾಡಿದ್ದೀರಾ?

ಟಿಪ್ಪು ಸುಲ್ತಾನ್​ ನೆನಪಿನಲ್ಲಿ ದೇಗುಲದಲ್ಲಿ ನಡೆಯುತ್ತಿರುವ ಈ ಮಂಗಳಾರತಿ ನಿಲ್ಲಿಸುವಂತೆ ವಿಶ್ವ ಹಿಂದೂ ಪರಿಷತ್​ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಒತ್ತಾಯ ಹೇರಿದ್ದಾರೆ.

ವಿಶ್ವ ಹಿಂದೂ ಪರಿಷತ್ ಹೇಳುವುದೇನು?
ಟಿಪ್ಪು ಕ್ರೂರಿ, ಮತಾಂಧ, ಕನ್ನಡ ಮತ್ತು ಹಿಂದೂ ವಿರೋಧಿ. ಆತ ಸಾವಿರಾರು ಹಿಂದೂಗಳನ್ನು ನರಮೇಧ ನಡೆಸಿದ್ದಾನೆ. ನೂರಾರು ದೇವಸ್ಥಾನಗಳು ಟಿಪ್ಪುವಿನಿಂದ ಧ್ವಂಸಗೊಂಡಿದೆ. ದೇವಿ ಮೂಕಾಂಬಿಕೆಗೆ ಸಲಾಂ ಹೆಸರಿನಲ್ಲಿ ಮಂಗಳಾರತಿ ಯಾಗುತ್ತಿರುವುದು ಖೇದಕರ.

ಇದನ್ನೂ ಓದಿ: Bengaluru: ಯುಗಾದಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಗುಡ್ ನ್ಯೂಸ್; KSRTCಯಿಂದ 600 ಹೆಚ್ಚುವರಿ ಬಸ್ ವ್ಯವಸ್ಥೆ

ಇದರಿಂದ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ಆಗುತ್ತದೆ. ಸಲಾಂ ಹೆಸರಲ್ಲಿ ಮಂಗಳಾರತಿ ಗುಲಾಮಗಿರಿಯ ಸಂಕೇತ. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಕ್ರಮ ಕೈಗೊಳ್ಳಬೇಕು. ಸಲಾಂ ಹೆಸರನ್ನು ತೆಗೆದು ದೇವರ ಹೆಸರಲ್ಲಿ ಮಂಗಳಾರತಿ ಮಾಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಈ ಸಂಬಂಧ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಾರ್ಯನಿರ್ವಹಣಾಧಿಕಾರಿ ಹಾಗೂ ಧಾರ್ಮಿಕ ದತ್ತಿ ಸಚಿವೆ ಶಶಿಕಲಾ ಜೊಲ್ಲೆ ಗೆ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
Published by:guruganesh bhat
First published: