• Home
  • »
  • News
  • »
  • state
  • »
  • Sahitya Akademi Awards: ಮೂಡ್ನಾಕೂಡು ಚಿನ್ನಸ್ವಾಮಿ, ಪದ್ಮರಾಜ ದಂಡಾವತಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Sahitya Akademi Awards: ಮೂಡ್ನಾಕೂಡು ಚಿನ್ನಸ್ವಾಮಿ, ಪದ್ಮರಾಜ ದಂಡಾವತಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಅನುವಾದ ಪ್ರಶಸ್ತಿಗೆ 17 ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಎನ್.ನಲ್ಲತಂಬಿ ಅವರ ಯಾದ ವಶೇಂ ಮತ್ತು ವರಲಾ ಆನಂದ್ ಅವರ ಅಕುಪಚ ಕವಿತೆಗಳು ಸೇರಿವೆ.

  • Share this:

ಬೆಂಗಳೂರು: ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ (Kendra Sahitya Academi) ನೀಡುವ ಪ್ರಶಸ್ತಿಯನ್ನು ಗುರುವಾರ ಪ್ರಕಟಿಸಲಾಗಿದೆ. ಒಟ್ಟು 23 ಜನರಲ್ಲಿ ಕನ್ನಡದ ಪ್ರಮುಖ ಲೇಖಕರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ (Mudnakudu Chinnaswamy) ಮತ್ತು ಪದ್ಮರಾಜ ದಂಡಾವತಿ (Padmaraj Dandavati) ಅವರ ಕೃತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿವೆ. ಅನುವಾದ ಪ್ರಶಸ್ತಿಗೆ 17 ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಎನ್.ನಲ್ಲತಂಬಿ ಅವರ ಯಾದ ವಶೇಂ ಮತ್ತು ವರಲಾ ಆನಂದ್ ಅವರ ಅಕುಪಚ ಕವಿತೆಗಳು ಸೇರಿವೆ.


ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ಬಹುತ್ವದ ಭಾರತ ಮತ್ತು ಬೌದ್ಧ ತಾತ್ತ್ವಿಕತೆ ಕೃತಿಯು ಈ ವರ್ಷದ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ. ಪದ್ಮರಾಜ ದಂಡಾವತಿ ಅವರ ಅನುವಾದಿತ ಸೀತಾ: ರಾಮಾಯಣದ ಸಚಿತ್ರ ಮರುಕಥನ ಕೃತಿ ಸಹ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದೆ.


ಮೂಡ್ನಾಕೂಡು ಚಿನ್ನಸ್ವಾಮಿ ಅವರ ಬಹುತ್ವದ ಭಾರತ ಮತ್ತು ಬೌದ್ಧ ತಾತ್ತ್ವಿಕತೆ ಕೃತಿಯನ್ನು ಗದಗದ ಲಡಾಯಿ ಪ್ರಕಾಶನ ಪ್ರಕಟಿಸಿದೆ. ಇದೊಂದು ವಿವಿಧ ಪ್ರಬಂಧಗಳ ಸಂಕಲನವಾಗಿದೆ. ಪದ್ಮರಾಜ ದಂಡಾವತಿ ಅವರ ಸೀತಾ: ರಾಮಾಯಣದ ಸಚಿತ್ರ ಮರುಕಥನ ಕೃತಿಯನ್ನು ಧಾರವಾಡದ ಮನೋಹರ ಗ್ರಂಥಮಾಲೆ ಪ್ರಕಟಿಸಿದೆ.


ಮಾರ್ಚ್​ 2023ರಂದು ಪ್ರಶಸ್ತಿ ಸಮಾರಂಭ


ಮುಖ್ಯ ಪ್ರಶಸ್ತಿ ಒಂದು ಲಕ್ಷ ರೂಪಾಯಿ ನಗದು ಹಾಗೂ ಅನುವಾದಿತ ಕೃತಿ 50 ಸಾವಿರ ರೂಪಾಯಿ ಹಾಗೂ ಸನ್ಮಾನವನ್ನ ಹೊಂದಿರುತ್ತದೆ. 2023 ಮಾರ್ಚ್​​ನಲ್ಲಿ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಲಿದೆ. ವಿಜೇತರನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವ ಚಂದ್ರಶೇಖರ್ ಕಂಬಾರ್ ಅಭಿನಂದಿಸಿದ್ದಾರೆ.


ಆಯ್ಕೆ ಸಮಿತಿಯಲ್ಲಿ ಕನ್ನಡಿಗರು


ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ವಿಭಾಗದ ಸಂಚಾಲಕರಾಗಿರುವ ಡಾ. ಸರಜೂ ಕಾಟ್ಕರ್ ಅವರ ಉಸ್ತುವಾರಿಯಲ್ಲಿ ಈ ಪ್ರಶಸ್ತಿ ಆಯ್ಕೆ ನಡೆದಿದೆ. . ಅನುವಾದ ಆಯ್ಕೆ ಸಮಿತಿಯಲ್ಲಿ ಜ್ಯೂರಿಗಳಾಗಿ ಜಗದೀಶ್ ಕೊಪ್ಪ, ಕಮಲಾಕರ ಭಟ್ಟ ಹಾಗೂ ಮೋಹನ್ ಕುಂಟಾರ ಇದ್ದರು. ಇನ್ನು ಮುಖ್ಯ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಡಾ.ಸಿ ನಾಗಣ್ಣ, ಪದ್ಮರಾಜ ದಂಡಾವತಿ ಹಾಗೂ ಚಂದ್ರಶೇಖರ ವಸ್ತ್ರದ ಇದ್ದರು.


ಉದಯ ನಾಥ್ ಝಾ ಅವರಿಗೆ ಭಾಷಾ ಸಮ್ಮಾನ್


ತಮಿಳು ಲೇಖಕ ಎಂ. ರಾಜೇಂದ್ರನ್ , ತೆಲುಗು ಲೇಖಕ ಮಧುರಾಂತಕಂ ನರೇಂದ್ರ ಮತ್ತು ಸಂಸ್ಕೃತ ಕವಿ ಜನಾರ್ದನ್ ಪ್ರಸಾದ್ ಪಾಂಡೆ 'ಮಣಿ' ಸೇರಿದಂತೆ 23 ಸಾಹಿತಿಗಳಿಗೆ ಪ್ರಶಸ್ತಿ ಲಭಿಸಿವೆ. ಶಾಸ್ತ್ರೀಯ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಾಗಿ ಉದಯ ನಾಥ್ ಝಾ ಅವರಿಗೆ ಭಾಷಾ ಸಮ್ಮಾನ್ ನೀಡಲಾಗುತ್ತಿದೆ.


23 ಭಾಷೆಗಳಲ್ಲಿ ಪ್ರಶಸ್ತಿಗಳು ಏಳು ಕವನ ಪುಸ್ತಕಗಳು, ಆರು ಕಾದಂಬರಿಗಳು, ಎರಡು ಸಣ್ಣ ಕಥೆಗಳು, ಮೂರು ನಾಟಕಗಳು, ಎರಡು ಸಾಹಿತ್ಯ ವಿಮರ್ಶೆ ಮತ್ತು ಆತ್ಮಚರಿತ್ರೆಯ ಪ್ರಬಂಧಗಳು, ಲೇಖನಗಳ ಸಂಗ್ರಹ ಮತ್ತು ಸಾಹಿತ್ಯ ಇತಿಹಾಸವನ್ನು ಒಳಗೊಂಡಿವೆ.


ಬಾಲ ಸಾಹಿತ್ಯ ಪುರಸ್ಕಾರ ಮತ್ತು ಯುವ ಪ್ರಶಸ್ತಿ


ಗಣೇಶ್ ಮರಾಂಡಿ ಅವರ ಹಪನ್ ಮೈ ಪುಸ್ತಕಕ್ಕೆ ಸಂತಾಲಿಯಲ್ಲಿ ಬಾಲ ಸಾಹಿತ್ಯ ಪುರಸ್ಕಾರವನ್ನು ನೀಡಲಾಗಿದೆ. 35 ವರ್ಷದೊಳಗಿನವರಿಗೆ ಮೀಸಲಾಗಿರುವ 'ಯುವ ಪ್ರಶಸ್ತಿ' ಪವನ್ ನಲತ್ ಅವ ಮರಾಠಿ ಕವನ ಸಂಕಲನ ಪೋಖರತೋಯ್​ಗೆ ಸಿಕ್ಕಿದೆ.


ಇದನ್ನೂ ಓದಿ:  Chitradurga: ಇಲ್ಲದಿರೋ ಅಣ್ಣ, ಬದುಕಿರೋ ತಂದೆಯ ನಕಲಿ ಡೆತ್ ಸರ್ಟಿಫಿಕೇಟ್ ನೀಡಿ ಬೆಸ್ಕಾಂನಲ್ಲಿ ನೌಕರಿ


ಈ ಪ್ರಶಸ್ತಿ ಹಿಂದಿನ ಐದು ವರ್ಷಗಳಲ್ಲಿ (ಜನವರಿ 1, 2016 ಮತ್ತು ಡಿಸೆಂಬರ್ 31, 2020 ರ ನಡುವೆ) ಮೊದಲು ಪ್ರಕಟವಾದ ಪುಸ್ತಕಗಳಿಗೆ ನೀಡಲಾಗಿದೆ.

Published by:Mahmadrafik K
First published: