• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Shivamogga: ಆಸ್ಪತ್ರೆಯಲ್ಲಿ ಕೊಟ್ಟ ಇಂಜೆಕ್ಷನ್​ನಿಂದ 14 ಮಕ್ಕಳು ದಿಢೀರ್​ ಅಸ್ವಸ್ಥ; ಸ್ಥಳಕ್ಕೆ ಶಾಸಕರ ದೌಡು

Shivamogga: ಆಸ್ಪತ್ರೆಯಲ್ಲಿ ಕೊಟ್ಟ ಇಂಜೆಕ್ಷನ್​ನಿಂದ 14 ಮಕ್ಕಳು ದಿಢೀರ್​ ಅಸ್ವಸ್ಥ; ಸ್ಥಳಕ್ಕೆ ಶಾಸಕರ ದೌಡು

ಮಕ್ಕಳು ಅಸ್ವಸ್ಥ

ಮಕ್ಕಳು ಅಸ್ವಸ್ಥ

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ಹರತಾಳು ಹಾಲಪ್ಪ, ಪೋಷಕರು ತಮ್ಮ ಮಕ್ಕಳು ಅಸ್ವಸ್ಥಗೊಂಡ ಬಗ್ಗೆ ನನಗೆ ಮಾಹಿತಿ ನೀಡಿದರು. ಶಿವಮೊಗ್ಗಕ್ಕೆ ತೆರಳುತ್ತಿರುವ ಮಕ್ಕಳಿಗೆ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ತಜ್ಞ ವೈದ್ಯರು ಮಕ್ಕಳಿಗೆ ಚಿಕಿತ್ಸೆ ನೀಡಲು ಸೂಚಿಸಿದ್ದೇನೆ ಎಂದ್ರು.

ಮುಂದೆ ಓದಿ ...
  • Share this:

ಶಿವಮೊಗ್ಗ (ಜೂ 28): ಜ್ವರ, ಕೆಮ್ಮು ಸೇರಿದಂತೆ ಮೊದಲ ಕಾರಣಗಳಿಂದ ಸಾಗರ ತಾಲೂಕಿ ಉಪವಿಭಾಗೀಯ ಆಸ್ಪತ್ರೆಯಲ್ಲಿ 14ಕ್ಕೂ ಹೆಚ್ಚು ಮಕ್ಕಳು (Children) ಚಿಕಿತ್ಸೆ ಪಡೆಯುತ್ತಿದ್ರು. ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳಿಗೆ ನಿನ್ನೆ ಆಸ್ಪತ್ರೆ ವೈದ್ಯರು ಇಂಜೆಕ್ಷನ್​ ನೀಡಿದ್ರು. ಇಂಜೆಕ್ಷನ್​ ಕೊಟ್ಟ ಕೆಲವೇ ಕ್ಷಣದಲ್ಲಿ 14 ಮಕ್ಕಳು ಅಸ್ವಸ್ಥರಾಗಿದ್ದಾರೆ.  ಅಸ್ವಸ್ಥಗೊಂಡವರಲ್ಲಿ ನಾಲ್ಕು ಮಕ್ಕಳನ್ನು ಶಿವಮೊಗ್ಗಕ್ಕೆ (Shivamogga) ಹೆಚ್ಚಿನ ಚಿಕಿತ್ಸೆಗೆ ಕಳಿಸಲಾಗಿದೆ.  ಮಾಹಿತಿ ತಿಳಿಯುತ್ತಿದ್ದಂತೆ ಶಾಸಕ, ಎಂಎಸ್ಎಐಎಲ್ ಅಧ್ಯಕ್ಷ ಎಚ್. ಹರತಾಳು ಹಾಲಪ್ಪ (Haratalu Halappa) ಅವರು ಆಸ್ಪತ್ರೆಗೆ ಭೇಟಿ ನೀಡಿದ್ರು. ವೈದ್ಯರಿಂದ ಮಾಹಿತಿ ಪಡೆದಿದ್ದಾರೆ.


ಮಕ್ಕಳಿಗೆ ಆಂಟಿಬಯೋಟಿಕ್ ಇಂಜೆಕ್ಷನ್ ನೀಡಲಾಗಿತ್ತು


ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಇಂಜೆಕ್ಷನ್​ ಕೊಡ್ತಿದ್ದಂತೆ ಮಕ್ಕಳು ಅಸ್ವಸ್ಥಗೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ವೈದ್ಯ ಡಾ. ಪ್ರಕಾಶ್ ಭೋಸ್ಥೆ, ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳು ಜ್ವರ ಸೇರಿದಂತೆ ಕೆಲ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳಿಗೆ ಆಂಟಿಬಯೋಟಿಕ್ ಇಂಜೆಕ್ಷನ್ ನೀಡಲಾಗುತ್ತಿತ್ತು. ಕೆಲವು ಮಕ್ಕಳಿಗೆ ತೀವ್ರ ಚಳಿ ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಪೋಷಕರು ಹೇಳಿದ್ದಾರೆ. ಕಾರಣವನ್ನು ಪರಿಶೀಲಿಸಿದ್ದೇವೆ. ಅಸ್ವಸ್ಥ ಮಕ್ಕಳ ಜೀವಕ್ಕೆ ಅಪಾಯವಿಲ್ಲ. ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ‘


ಮಕ್ಕಳಿಗೆ ಅಂಬ್ಯುಲೆನ್ಸ್ ವ್ಯವಸ್ಥೆ


ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ಹಾಲಪ್ಪ, ಪೋಷಕರು ತಮ್ಮ ಮಕ್ಕಳು ಅಸ್ವಸ್ಥಗೊಂಡ ಬಗ್ಗೆ ನನಗೆ ಮಾಹಿತಿ ನೀಡಿದರು. ಶಿವಮೊಗ್ಗಕ್ಕೆ ತೆರಳುತ್ತಿರುವ ಮಕ್ಕಳಿಗೆ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಅಧಿಕಾರಿ ಡಾ.ಶ್ರೀಧರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ತಜ್ಞ ವೈದ್ಯರು ಮಕ್ಕಳಿಗೆ ಚಿಕಿತ್ಸೆ ನೀಡಲು ಸೂಚಿಸಿದ್ದೇನೆ. ಇಲ್ಲಿನ ಆಸ್ಪತ್ರೆಯಲ್ಲಿರುವ ಮಕ್ಕಳಿಗೆ ಅಗತ್ಯ ನಿಗಾವಹಿಸಲು ತಿಳಿಸಲಾಗಿದ್ದು, ಮಕ್ಕಳ ವೈದ್ಯರ ಜತೆಗೆ ಉಳಿದ ಎಲ್ಲಾ ವೈದ್ಯರಿಗೂ ಕರ್ತವ್ಯಕ್ಕೆ ಬರಲು ತಿಳಿಸಿದ್ದೇನೆ ಎಂದರು.


ಇದನ್ನೂ ಓದಿ: Vijayapura: ಪ್ಲಾಸ್ಟಿಕ್, ಮದ್ಯದ ಬಾಟಲಿ ಹೆಕ್ಕಿದ ಸ್ವಾಮೀಜಿ! ವಿಡಿಯೋ ನೋಡಿ


ನಾಲ್ಕು  ಮಕ್ಕಳಿಗೆ ಪಿಡ್ಸ್​ ಕೂಡ ಬಂದಿದೆ


ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದ ಮಕ್ಕಳಿಗೆ ಇಂಜೆಕ್ಷನ್​ನಿಂದ ಅಡ್ಡಪರಿಣಾಮವಾಗಿ ಆರೋಗ್ಯ ಹದಗೆಟ್ಟು ಹೋಗಿದೆ. ನಾಲ್ಕು ಮಕ್ಕಳಲ್ಲಿ ತೀವ್ರ ಚಳಿ ಜ್ವರ ಬಂದರೇ, ಇನ್ನೂ ನಾಲ್ಕು ಮಕ್ಕಳಿಗೆ ಪೀಡ್ಸ್​​ ಸಹ ಬಂದಿದೆ. ಕೂಡಲೇ ಮೂರು ಮಕ್ಕಳಾದ ವಿನೋದ (11), ಐರಾಫ್ (10 ತಿಂಗಳು), ಆರ್ಯಗೌಡ 2 ವರ್ಷ 9 ತಿಂಗಳು ಇವರಿಗೆ ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡ್‌ಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.


ಮಕ್ಕಳ ಆರೋಗ್ಯದ ಮೇಲೆ ತೀವ್ರ ನಿಗಾ


ಇನ್ನು ನಿಶ್ಚಿತಾ ಎನ್ನುವ 8 ವರ್ಷದ ಮಗುವನ್ನು ಸರ್ಜಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 10 ಮಕ್ಕಳಿಗೆ ಸಾಗರ ಉಪವಿಭಾಗೀಯ ಆಸ್ಪತ್ರೆಯ ಮಕ್ಕಳ ವಾರ್ಡ್​ನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲಾ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಸದ್ಯ ಶಿವಮೊಗ್ಗಕ್ಕೆ ಶಿಫ್ಟ್​ ಮಾಡಿದ ಮಕ್ಕಳ ಆರೋಗ್ಯದ ಮೇಲೆ ತೀವ್ರ ನಿಗಾವನ್ನು ಮಕ್ಕಳ ವೈದ್ಯರು ವಹಿಸಿದ್ದಾರೆ.'ಮಕ್ಕಳ ವಾರ್ಡ್​ನಲ್ಲಿ 14 ಮಕ್ಕಳಿಗೆ ಸಂಜೆ ಡೋಸ್ ನೀಡಲಾಯಿತು. ಇಂಜೆಕ್ಷನ್ ನೀಡಿದ ಬಳಿಕ 14 ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.


ಇದನ್ನೂ ಓದಿ: Belagavi: ನಾಯಿ ಬರ್ತ್​ಡೇ ಆಚರಣೆ ವಿಡಿಯೋ ನೋಡಿ! 1 ಕ್ವಿಂಟಲ್ ಕೇಕ್, 5 ಸಾವಿರ ಜನರಿಗೆ ಭರ್ಜರಿ ಊಟ!

top videos


    ತೀವ್ರ ಜ್ವರದಿಂದ ಬಳಲುತ್ತಿದ್ದ ನಾಲ್ಕು ಮಕ್ಕಳಲ್ಲಿ ಒಂದು ಮಗುವಿಗೆ ಪೀಡ್ಸ್​ ಬಂದಿದೆ. ಮೂರು ಮಕ್ಕಳನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಯ ಮಕ್ಕಳ ವಾರ್ಡ್​ಗೆ ಶಿಫ್ಟ್‌ ಮಾಡಲಾಗಿದೆ. ಒಂದು ಮಗುವನ್ನು ಪೋಷಕರ ಬೇಡಿಕೆಯಂತೆ ಖಾಸಗಿ ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಾಲ್ಕು ಮಕ್ಕಳ ಆರೋಗ್ಯ ಸ್ಥಿರವಾಗಿದೆ. ಮಕ್ಕಳ ವೈದ್ಯರು 24 ಗಂಟೆ ಮಕ್ಕಳ ಮೇಲೆ ನಿಗಾವಹಿಸಲಿದ್ದಾರೆ' ಎಂದು ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ತಿಳಿಸಿದರು.

    First published: